LATEST NEWS
ಪ್ರತಿಷ್ಠಿತ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಅ*ಗ್ನಿ ಅವ*ಘಡ
Published
2 months agoon
By
NEWS DESK4ಮಂಗಳೂರು/ಬೆಂಗಳೂರು : ಬೆಂಗಳೂರಿನ ಖಾಸಗಿ ಪ್ರತಿಷ್ಠಿತ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇಂದು (ಸೆ. 19) ಮಧ್ಯಾಹ್ನ ಅ*ಗ್ನಿ ಅವಘ*ಡ ಸಂಭವಿಸಿದೆ. ಈ ವೇಳೆ ಹಲವರಿಗೆ ಗಾ*ಯಗಳಾಗಿದ್ದು, ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಮಧ್ಯಾಹ್ನ 3 ಗಂಟೆ ವೇಳೆ ಅ*ಗ್ನಿ ಅವಘ*ಡ ಸಂಭವಿಸಿದೆ ಎನ್ನಲಾಗಿದೆ. ಆಸ್ಪತ್ರೆಯ ಎರಡನೇ ಅಂತಸ್ಥಿನಲ್ಲಿರುವ ಕಾರ್ಡಿಯಕ್ ಎಸಿ ವಾರ್ಡ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಪರಿಣಾಮ ಇತರೆ ವಾರ್ಡ್‌ಗಳಿಗೆ ಬೆಂ*ಕಿಯ ಜ್ವಾಲೆ ಹರಡಿಕೊಂಡಿದೆ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ : ಕಣ್ಣಿಲ್ಲದ ದಂಪತಿಯ ಮಗುವನ್ನು 50 ಸಾವಿರಕ್ಕೆ ಮಾರಿದ ವೈದ್ಯ..!
ಬಳಿಕ ಸ್ಥಳಕ್ಕೆ ಆಗಮಮಿಸಿದ ಅ*ಗ್ನಿ ಶಾಮಕ ದಳದ ಸಿಬ್ಬಂದಿ ಬೆಂ*ಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಬೆಂ*ಕಿ, ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆ ಒಳಗಿದ್ದ ರೋಗಿಗಳು, ಅವರ ಸಂಬಂಧಿಕರು, ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ ಎಂದು ವರದಿಯಾಗಿದೆ. ಅ*ಗ್ನಿಶಾಮಕ ದಳ ಸ್ಥಳಕ್ಕೆ ಆಗಮನಿಸಿ ಬೆಂ*ಕಿ ನಂದಿಸಿದ್ದರಿಂದ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ.
You may like
Baindooru
ಕಾಸರಗೋಡು: ಮಹಿಳಾ ಪೊಲೀಸ್‌ಗೆ ಚಾಕುವಿನಿಂದ ಇರಿದು ಕೊಲೆಗೈದ ಪತಿ
Published
3 minutes agoon
22/11/2024By
NEWS DESK2ಕಾಸರಗೋಡು: ಪೋಲೀಸ್ ಉದ್ಯೋಗದಲ್ಲಿರುವ ಪತ್ನಿಯನ್ನು ಸ್ವತಃ ಪತಿಯೇ ಅಟ್ಟಾಡಿಸಿ ಕೊಚ್ಚಿ ಕೊಲೆಗೈದು, ಪತ್ನಿಯ ಅಪ್ಪನಾದ ಮಾವನನ್ನೂ ಕೊಲೆಗೆಯತ್ನಿಸಿದ ಘಟನೆ ಕಾಸರಗೋಡು ಜಿಲ್ಲೆಯ ಗಡಿಯಲ್ಲೇ ನಡೆದಿದೆ.
ಕಾಸರಗೋಡು ಜಿಲ್ಲೆಯ ಚಂದೇರ ಪೋಲೀಸ್ ಠಾಣಾ ಸಿಪಿಒ ಉದ್ಯೋಗಿ ದಿವ್ಯಶ್ರೀ ಎಂಬಾಕೆ ತನ್ನ ಪತಿಯಿಂದಲೇ ಕೊಲೆಗೀಡಾದ ಮಹಿಳೆ. ಈಕೆ ಕೊಲೆ ನಡೆಯುವಾಗ ತಡೆಯಲು ಬಂದ ಆಕೆಯ ತಂದೆ ವಾಸು ಎಂಬವರ ಕೊರಳು, ಹೊಟ್ಟೆಗೆ ಕತ್ತಿ ಇರಿತ, ಕಡಿತಗಳ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗುರುವಾರ (ನ.21) ಮುಸ್ಸಂಜೆ ಈ ದುಷ್ಕೃತ್ಯ ನಡೆದಿದ್ದು, ಆರೋಪಿ ರಾಜೇಶ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಪತಿ-ಪತ್ನಿಯರಾದ ರಾಜೇಶ ಮತ್ತು ದಿವ್ಯಶ್ರೀ ಕಳೆದ ಕೆಲ ಸಮಯಗಳಿಂದ ಒಟ್ಟಿಗೆ ಬದುಕುತ್ತಿರಲಿಲ್ಲ. ಅವರ ದಾಂಪತ್ಯದಲ್ಲಿ ಸಮಸ್ಯೆಗಳಿದ್ದ ಕಾರಣ ಈರ್ವರೂ ಬೇರೆಯೇ ವಾಸಿಸುತ್ತಿದ್ದರು. ಗುರುವಾರ ಸಂಜೆ ಪತ್ನಿ ಮನೆಯಲ್ಲಿದ್ದಾಳೆಂದು ತಿಳಿದೇ ಬಂದ ಆರೋಪಿ ಆಕೆಯನ್ನು ಆಕ್ರಮಿಸಿ, ಓಡಿಸಿ ಕೊಲೆಗೈದನೆಂದೂ, ಈ ವೇಳೆ ತಡೆಯಲು ಬಂದ ಮಾವನನ್ನೂ ಆಕ್ರಮಿಸಿ ಕೊಲೆಗೆತ್ನಿಸಿದನೆಂದೂ ಮಾಹಿತಿ ಲಭಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೃತ ಪೋಲೀಸ್ ಉದ್ಯೋಗಿ ದಿವ್ಯಶ್ರೀಯ ಪತಿ ರಾಜೇಶನನ್ನು ಪೋಲೀಸರು ಬಂಧಿಸಿದ್ದಾರೆ.
Baindooru
ವಾಟ್ಸಾಪ್ ಗ್ರೂಪ್ ನೋಡಿ ಮನೆಯಲ್ಲೇ ಹೆರಿಗೆ ಮಾಡಿಸಿದ ದಂಪತಿ
Published
22 minutes agoon
22/11/2024By
NEWS DESK2ಚೆನ್ನೈ: ವಾಟ್ಸಪ್ ಗ್ರೂಪ್‌ನ ಸಹಾಯದಿಂದ ದಂಪತಿಗಳು ಮನೆಯಲ್ಲಿಯೇ ಹೆರಿಗೆ ನಡೆಸಿರುವಂತಹ ಘಟನೆ ತಮಿಳುನಾಡಿನ ಕುಂದ್ರತ್ತೂರಿನಲ್ಲಿ ನಡೆದಿದೆ.
ನವೆಂಬರ್ 17 ರಂದು ಸುಕನ್ಯಾಗೆ ಮನೆಯಲ್ಲಿ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣದ ವೈದ್ಯಕೀಯ ಸಹಾಯವನ್ನು ಪಡೆಯುವ ಬದಲು ಮನೋಹರನ್ ತಾನೇ ಹೆರಿಗೆ ನಡೆಸಲು ಮುಂದಾಗಿದ್ದಾರೆ. ಅವರು ವಾಟ್ಸಪ್ ಗ್ರೂಪ್‌ನಲ್ಲಿ ಬಂದ ಹಂತ-ಹಂತದ ಮಾರ್ಗದರ್ಶನವನ್ನು ಅನುಸರಿಸಿದ್ದಾರೆ. ಹೆರಿಗೆ ಪ್ರಕ್ರಿಯೆಯಲ್ಲಿ ಅವರ ಪತ್ನಿಗೆ ಸಹಾಯ ಮಾಡಲು ಗುಂಪಿನ ಸದಸ್ಯರು ಒದಗಿಸಿದ ಸೂಚನೆಗಳು ಮತ್ತು ವಿವರಣೆಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.
ದಂಪತಿ ವಾಟ್ಸಪ್‌ನ “ಹೋಮ್ ಬರ್ತ್ ಎಕ್ಸ್ ಪೀರಿಯನ್ಸ್” ಎಂಬ ಗುಂಪಿನಲ್ಲಿ ಹಂಚಿಕೊಂಡ ಸಲಹೆಯನ್ನು ಅವಲಂಬಿಸಿ ಹೆರಿಗೆಯನ್ನು ನಡೆಸಿದ್ದಾರೆ. ಯಾವುದೇ ವೈದ್ಯಕೀಯ ಪರಿಶೀಲನೆ ಇಲ್ಲದೇ ಅಪಾಯಕಾರಿಯಾಗಿ ಹೆರಿಗೆ ನಡೆಸಿರುವ ಬಗ್ಗೆ ಅಧಿಕಾರಿಗಳು ಈಗ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಹೆರಿಗೆ
ಯ ನಂತರ, ಸುರಕ್ಷತೆಯ ಉಲ್ಲಂಘನೆಯನ್ನು ಉಲ್ಲೇಖಿಸಿ ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಯಿಂದ ದೂರು ದಾಖಲಿಸಲಾಗಿದೆ.
ಮಗುವಿನ ಜನನದ ಬಳಿಕ ದಂಪತಿಗಳು ನವಜಾತ ಶಿಶುವಿನೊಂದಿಗೆ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ವಿಚಾರ ಬೆಳಕಿಗೆ ಬಂದಿದ್ದು, ಇದು ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನ ಸೆಳೆಯಿತು. ಇದೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
LATEST NEWS
ಎಚ್ಚರ!! ಪ್ರೀತಿ ಪಾತ್ರರ ಸಾವೇ ಟಾರ್ಗೆಟ್; ಸೈಬರ್ ಕ್ರೈಂನಲ್ಲಿ ಅಂತ್ಯಸಂಸ್ಕಾರ
Published
53 minutes agoon
22/11/2024ಮಂಗಳೂರು/ನವದೆಹಲಿ: ಭಾವನೆ, ನೋವು, ದುಃಖಗಳನ್ನೇ ಟಾರ್ಗೆಟ್ ಮಾಡಿ ವಂಚಕರು ನಡೆಸುವ ಹೊಸ ಸೈಬರ್ ಕ್ರೈಂ ಈ ಅಂತ್ಯಸಂಸ್ಕಾರ ಸೈಬರ್ ಕ್ರೈಂ ಹೆಚ್ಚಾಗಿ ಪಟ್ಟಣ ಪ್ರದೇಶಗಳಲ್ಲೇ ಈ ಸೈಬರ್ ಕ್ರೈಂ ನಡೆಯುತ್ತದೆ. ನಗರ ಪ್ರದೇಶಗಳಲ್ಲಿನ ಬದುಕಿಗೆ ಸಮಯವಿಲ್ಲ. ಎಲ್ಲವನ್ನೂ ನಿಭಾಯಿಸಲು, ನಿರ್ವಹಿಸಲು ಆಪ್ತರು, ನೆರಮನೆಯವರ ಸಹಾಯವಿರುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೆಲ ಹೊಣೆಗಾರಿಕೆಯನ್ನು ಎಜೆನ್ಸಿಗಳ ಕೈಗೆ ವಹಿಸಲಾಗತ್ತವೆ. ಈ ಪೈಕಿ ಅಂತ್ಯಸಂಸ್ಕಾರ ನಡೆಸಲು ನಗರ ಪ್ರದೇಶದಲ್ಲಿ ಖಾಸಗಿ ಎಜೆನ್ಸಿಗಳಿವೆ. ಈ ಎಜೆನ್ಸಿಗಳು ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಸುತ್ತದೆ. ಅಂತಿಮ ವಿಧಿ ವಿಧಾನಗಳು, ಪೂಜಾ ಕೈಂಕರ್ಯ, ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ.
ಈ ಸೈಬರ್ ಕ್ರೈಂ ಹೇಗೆ ನಡೆಯುತ್ತವೆ ?
ಸೈಬರ್ ಕ್ರೈಂ ಭೂತ ಯಾವ ರೂಪದಲ್ಲಿ ವಕ್ಕರಿಸಲಿದೆ ಅನ್ನೋದೇ ತಿಳಿಯಲ್ಲ. ಮೋಸ ಹೋದ ಬಳಿಕವಷ್ಟೇ ಇದೊಂದು ಸೈಬರ್ ಕ್ರೈಂ ಆಗಿತ್ತು ಅನ್ನೋದು ಅಂದಾಜಾಗುವುದು. ಪ್ರತಿ ಗಂಟೆಯಲ್ಲಿ ಲಕ್ಷಾಂತರ ಸೈಬರ್ ಕ್ರೈಂ ಪ್ರಕರಣಗಳು ಪತ್ತೆಯಾಗಿ, ದೂರು ದಾಖಲಾಗುತ್ತಿದೆ. ಹೊಸ ಹೊಸ ವಿಧಾನದಲ್ಲಿ ವಂಚಕರು ಮೋಸ ಮಾಡುತ್ತಿದ್ದಾರೆ. ಅಮಾಯಕರು, ಎಚ್ಚರವಹಿಸಿ ಹೆಜ್ಜೆ ಇಟ್ಟರೂ ಹೇಗೋ ಬಲಿಯಾಗುತ್ತಿದ್ದಾರೆ.
ಅಂತ್ಯಸಂಸ್ಕಾರ ಸೈಬರ್ ಕ್ರೈಂ ಎಂದರೇನು?
ಅಂತ್ಯಸಂಸ್ಕಾರ ನಡೆಸುವ ಹಲವು ಎಜೆನ್ಸಿಗಳ ಜಾಹೀರಾತು, ನಂಬರ್ ಸುಲಭವಾಗಿ ಸಿಗುತ್ತದೆ. ನಾವು ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ಎಜೆನ್ಸಿಗೆ ಕರೆ ಮಾಡಿ ಅಂತ್ಯಸಂಸ್ಕಾರ ನಡೆಸಬೇಕು ಎಂದು ಕೇಳಿಕೊಂಡ ತಕ್ಷಣವೇ ಮಾಹಿತಿ ಪಡೆದು ಲಿಂಕ್ ಕಳುಹಿಸಿದ್ದಾರೆ. ಅದರಲ್ಲಿ ನಾವು ಹೆಸರು, ವಿಳಾಸ, ಮೃತಪಟ್ಟವರ ಹೆಸರು, ಧರ್ಮ, ಗೋತ್ರ, ಅಂತ್ಯಸಂಸ್ಕಾರ ಸಂಪ್ರದಾಯದ ಬಗ್ಗೆ ಮಾಹಿತಿ ನೀಡಿರುತ್ತೇವೆ. ನಂತರ 5,000 ರೂಪಾಯಿ ಅಥವಾ ಅಡ್ವಾನ್ಸ್ ಮೊತ್ತವನ್ನು ಪಾವತಿಸಿದಾಗ ಒಂದು ಮೆಸೇಜ್ ಬರಲಿದೆ. ಅಂತ್ಯಸಂಸ್ಕಾರ ನಡೆಸುವ ಪೂಜಾರಿ ಹೆಸರು, ಘಳಿಗೆ ಸೇರಿದಂತೆ ಎಲ್ಲದರ ಮೆಸೇಜ್ ಬರುತ್ತವೆ. ಇದೇ ವೇಳೆ ಬಂದ ಒಟಿಪಿ ಒಟಿಪಿಯನ್ನು ಎಜೆನ್ಸಿ ಮಂದಿ ಕೇಳುತ್ತಾರೆ. ಇದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.
ಅಂತ್ಯಸಂಸ್ಕಾರವನ್ನೇ ಟಾರ್ಗೆಟ್ ಮಾಡಿ ಹಲವು ಸೈಬರ್ ಕ್ರೈಂ ದಾಖಲಾಗಿದೆ. ಈ ಕುರಿತು ಎಚ್ಚರಿಕೆ ಸಂದೇಶ ನೀಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿ ವ್ಯವಹಾರಕ್ಕೂ ಮುನ್ನ ಯೋಚಿಸಿ, ತಾಳ್ಮೆ ವಹಿಸಿ ಮುನ್ನಡೆಯಬೇಕು ಯಾವುದೇ ಕಾರಣಕ್ಕೂ ಅನಾಮಿಕರು ಕಳುಹಿಸುವ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಒಟಿಪಿ ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು.
LATEST NEWS
ಮಾರ್ಚ್ 14 ರಿಂದ ಐಪಿಎಲ್ ಆರಂಭ
ಮಂಗಳೂರು: ಟ್ರಾಯ್ನಿಂದ ಕರೆ; 1.71 ಕೋ.ರೂ ವಂಚನೆ
ಭಜನಾ ಗುರು ಅಶೋಕ್ ನಾಯ್ಕ್ ಕಳಸಬೈಲ್ ಗೆ ‘ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ’
ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?
ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ
ಪ್ರತಿವರ್ಷ ಅಯ್ಯಪ್ಪ ಮಾಲೆ ಹಾಕುವ ಸ್ವಾಮಿಗಳ ಹೆಸರು ಯಾವುದು ಗೊತ್ತಾ ??
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ