Connect with us

DAKSHINA KANNADA

ಜೆರೋಸಾ ಶಾಲೆ ವಿರುದ್ಧ ಪ್ರತಿಭಟನೆ‌ ನಡೆಸಿದವರ ಮೇಲೆ ಎಫ್ಐಆರ್

Published

on

ಮಂಗಳೂರು: ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಮುಂದೆ ಪ್ರತಿಭಟನೆ ನಡೆಸಿದ ಶಾಸಕ ವೇದವ್ಯಾಸ್ ಕಾಮತ್ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಲವರ ವಿರುದ್ಧ ಮಂಗಳೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಅನಿಲ್ ಜೆರಾಲ್ಡ್ ಲೋಬೋ ಎಂಬವರು ಈ ದೂರು ದಾಖಲಿಸಿದ್ದಾರೆ. ಜೆರೋಸಾ ಶಾಲೆಯಲ್ಲಿ ಶಿಕ್ಷಕಿ ಪ್ರಭಾ ಅವರು ಪಾಠದ ವೇಳೆ ಯಾವುದೇ ಧರ್ಮಕ್ಕೆ ಅವಮಾನ ಮಾಡಿಲ್ಲ. ಈ ಬಗ್ಗೆ‌ ಹರಿದಾಡಿದ ವ್ಯಾಟ್ಸಾಪ್ ಸಂದೇಶ ವೈರಲ್ ಆಗಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಿದ್ದಾರೆ. ಈ ವಿಚಾರವನ್ನು ಶಾಲಾ ಆಡಳಿತ ಮಂಡಳಿ ಜತೆ ವಿಚಾರಿಸದೆ ಪ್ರತಿಭಟನೆ ನಡೆಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಶರಣ್ ಪಂಪ್ವೆಲ್ , ಕಾರ್ಪೊರೇಟರ್ ಸಂದೀಪ್ ಗರೋಡಿ, ಕಾರ್ಪೊರೇಟರ್ ಭರತ್ ಕುಮಾರ್ ಹಾಗೂ ಇತರರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ವಿರುದ್ಧ ಎತ್ತಿಕಟ್ಟಿದ್ದಾರೆ ಎಂದು ದೂರು ನೀಡಲಾಗಿದೆ. ಧರ್ಮಗಳ ನಡುವೆ ವಿಷ ಬೀಜ ಬಿತ್ತಿ‌ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು . IPC 143, 153 A, 295A, 505(2), 506, 149 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದು, ಸಿಆರ್ ಪಿಸಿ 157 ರ ಪ್ರಕಾರ ಎಫ್ಐಆರ್ ದಾಖಲಿಸಿ ದೂರಿನ ಬಗ್ಗೆ ಎರಡನೇ ಜೆಎಂಎಫ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಪ್ರಮುಖವಾಗಿ ವ್ಯಾಟ್ಸಾಪ್ ಸಂದೇಶ ಹರಿಯ ಬಿಟ್ಟವರು, ಹಾಗೂ ಈ ಪ್ರತಿಭಟನೆಯ ಹಿಂದಿನ ಸಂಚಿನ ತನಿಖೆಗೆ ಒತ್ತಾಯಿಸಲಾಗಿದೆ. ಜೆರೋಸಾ ಶಿಕ್ಷಣ ಸಂಸ್ಥೆಯ ಪ್ರಮುಖರು, ಮಾಜಿ ಪರಿಷತ್ ಸದಸ್ಯ ಐವನ್ ಡಿಸೋಜಾ, ವಿನಯರಾಜ್, ಸೇರಿದಂತೆ ಹಲವರು ಠಾಣೆಗೆ ತೆರಳಿ ಈ ದೂರು ನೀಡಿದ್ದಾರೆ.

DAKSHINA KANNADA

‘ಅಡ್ಡಣ ಪೆಟ್ಟು’ ದೈವಾರಾಧನೆಯ ವಿಶೇಷ ಆಚರಣೆ…! ಇದು ಸೌಹಾರ್ದತೆ ಬಯಸೋ ದೈವ..!

Published

on

ಮಂಗಳೂರು : ತುಳುನಾಡಿನ ದೈವಾರಾಧನೆಯಲ್ಲಿ ಒಂದಕ್ಕಿಂತ ಒಂದು ವಿಶೇಷವಾದ ಆಚರಣೆ ಹಾಗೂ ನಂಬಿಕೆಗಳು ಇದೆ. ಅದು ಪ್ರದೇಶದಿಂದ ಪ್ರದೇಶಕ್ಕೆ ಒಂದಷ್ಟು ಬದಲಾವಣೆಯೊಂದಿಗೆ ನಡೆಯುತ್ತದೆ ಕೂಡಾ. ಕೇರಳದ ಗಡಿಗೆ ಹೊಂದಿಕೊಂಡಿರುವ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ನಡೆಯೋ ದೈವಾರಾಧನೆ ಕೂಡಾ ಅದೇ ರೀತಿಯಾದ ವಿಶೇಷ ಆಚರಣೆಯೊಂದಕ್ಕೆ ಹೆಸರಾಗಿದೆ. ಇಲ್ಲಿನ ಶ್ರೀ ಮಹಾವಿಷ್ಣುಮೂರ್ತಿ ದೇವರ ಜಾತ್ರೆಯ ಬಳಿಕ ನಡೆಯುವ ದೈವದ ನೇಮದಲ್ಲಿ ‘ಅಡ್ಡಣ ಪೆಟ್ಟು’ ಅನ್ನೋ ಸಂಪ್ರದಾಯವಿದೆ. ಗ್ರಾಮದ ಜಾತ್ರೆಯ ಪ್ರಮುಖ ಆಕರ್ಷಣೆ ಕೂಡಾ ಇದೇ ಆಗಿದ್ದು, ಇದನ್ನು ನೋಡಲೆಂದೆ ಸಾವಿರಾರು ಜನ ಬರ್ತಾರೆ.


ನಾಲ್ಕು ಮನೆತನಗಳ ನಡುವೆ ಹೊಡೆದಾಟ…!

‘ಅಡ್ಡಣ ಪೆಟ್ಟು’ ಇದು ಮಂಡೆಕೋಲು ಗ್ರಾಮದ ಜಾತ್ರೆ ಮುಗಿದ ಬಳಿಕ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದಲ್ಲಿ ಕಾಣುವ ದೃಶ್ಯ. ನಾಲ್ಕು ಗೌಡ ಮನೆತನದವರು ಬೆತ್ತದ ಗುರಾಣಿ ಹಿಡಿದು ಕೋಲಿನಿಂದ ಹೊಡೆದಾಡುವುದೇ ಈ ‘ಅಡ್ಡಣ ಪೆಟ್ಟು’ ಅನ್ನೋ ವಿಶಿಷ್ಠ ಆಚರಣೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಕೇನಾಜೆ- ಮಾವಜಿ, ಮುರೂರು- ಬೊಳುಗಲ್ಲು ಎಂಬ ನಾಲ್ಕು ಗೌಡ ಮನೆತನಗಳು ಈ ರೀತಿ ಹೊಡೆದಾಟ ನಡೆಸ್ತಾರೆ. ಈ ವೇಳೆ ಉಳ್ಳಾಕುಲು ದೈವ ಮದ್ಯಪ್ರವೇಶ ಮಾಡಿ ಜಗಳ ಬಿಡಿಸುತ್ತದೆ. ಇದು ನೋಡಲು ಕೂಡಾ ಸಾಕಷ್ಟು ಕುತೂಹಲವಾಗಿದ್ದು, ಇದರ ಜೊತೆ ದೈವದ ಸಂದೇಶ ಕೂಡಾ ಇದೆ.


‘ಅಡ್ಡಣ ಪೆಟ್ಟು’ವಿನ ಹಿಂದೆ ಇದೆ ದೈವದ ಸಂದೇಶ..!

ಮಂಡೆಕೋಲು ನೇಮದಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ಬೇರೆ ಬೇರೆ ಐಹಿತ್ಯವಿದೆ. ಅಡ್ಡಣಪೆಟ್ಟು ನಡೆದರೆ ಊರಲ್ಲಿ ಮುಂದೆ ಗಲಾಟೆ, ಹೊಡೆದಾಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಊರಿನ ಭಕ್ತ ಜನರಲ್ಲಿದೆ. ನಾಲ್ಕೂರಿನ ಜಗಳವನ್ನು ದೈವ ಬಿಡಿಸುವುದು, ಗಲಾಟೆ ಮಾಡದೆ ಸೌಹಾರ್ದದಿಂದ ಬಾಳಿ ಎನ್ನುವ ಸಂದೇಶವೂ ಈ ಆಚರಣೆಯಲ್ಲಿದೆ. ಪುರಾತನ ಕಾಲದಲ್ಲಿ ಯಾವುದೋ ಗಲಾಟೆ ನಡೆದ ಸಂದರ್ಭ ಉಳ್ಳಾಕುಲು ದೈವ ಬಂದು ಗಲಾಟೆ ಬಿಡಿಸಿ ಪರಸ್ಪರ ಸಂದಾನ ನಡೆಸಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣದಿಂದ ಪ್ರತಿ ವರ್ಷ ಉಳ್ಳಾಕುಲು ನೇಮದ ಸಂದರ್ಭ “ಅಡ್ಡಣ ಪೆಟ್ಟು” ಒಂದು ಸಂಪ್ರದಾಯವಾಗಿ ನಡೆದು ಬರುತ್ತಿದೆ.

‘ಅಡ್ಡಣ ಪೆಟ್ಟು’ವಿನ ಆಚರಣೆ ಹೇಗೆ ?

ನೇಮೋತ್ಸವ ದಿನದಂದು ಉಳ್ಳಾಕುಲು ದೈವದ ಭಂಡಾರ ತೆಗೆದ ಬಳಿಕ ದೈವ ಸಹಿತ ನಾಲ್ಕೂರಿನ ಪ್ರತಿನಿಧಿಗಳು, ದೈವರ ಪರಿಚಾರಕರು ದೇವಸ್ಥಾನದ ಸಮೀಪದ ಗದ್ದೆಯಲ್ಲಿರುವ ಕಟ್ಟೆಗೆ ತೆರಳುತ್ತಾರೆ. ಕೇನಾಜೆ- ಮಾವಜಿ, ಮುರೂರು-ಬೊಳುಗಲ್ಲು ಮನೆತನಕ್ಕೆ ಸೇರಿದ ನಾಲ್ವರು ಪ್ರತಿನಿಧಿಗಳು ಸಮವಸ್ತ್ರ ಧರಿಸಿ ದಂಡ ಮತ್ತು ಗುರಾಣಿ (ಅಡ್ಡಣ) ಹಿಡಿದು ದೈವದ ಜತೆಯಲ್ಲಿ ತೆರಳುತ್ತಾರೆ. ಕಟ್ಟೆಯ ಬಳಿ ತೆರಳಿದ ಬಳಿಕ ಕೆಲವೊಂದು ಸಂಪ್ರದಾಯ ಆಚರಣೆಗಳು ನಡೆದು ಅಡ್ಡಣ ಹಿಡಿದ ಯುವಕರು ಅಡ್ಡಣವನ್ನು ನೆಲದಲ್ಲಿ ಎದುರು ಬದುರಾಗಿ ಇಡುತ್ತಾರೆ. ಲಾಠಿ ಮಾದರಿಯ ಹೊಡೆಯುವ ದಂಡವನ್ನು ಕೈಯಲ್ಲಿ ಹಿಡಿದಿರುತ್ತಾರೆ. ಇತ್ತ ಅಡ್ಡಣ ಹೊಡೆತದಲ್ಲಿ ಭಾಗವಹಿಸುವ ನಾಲ್ವರು ಯುವಕರಿಗೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವಕ್ಕೆ ಅಣಿಯನ್ನು ಕೂರಿಸಲಾಗುತ್ತದೆ. ಅಣಿ ಇಟ್ಟ ಬಳಿಕ ತುಳು ನುಡಿಗಟ್ಟೊಂದನ್ನು ಹೇಳಲಾಗುತ್ತದೆ. ಈ ನುಡಿಗಟ್ಟು ಮುಗಿಯುತ್ತಿದ್ದಂತೆ ದೈವದ ಪರಿಚಾರಕರೊಬ್ಬರು ಅಡ್ಡಣ ಹೊಡೆತಕ್ಕೆ ಅಣಿಯಾಗಿ ನಿಂತಿರುವ ಯುವಕರತ್ತ ಕಲಶದ ನೀರಿನಿಂದ ಪ್ರೋಕ್ಷಣೆ ಮಾಡುತ್ತಾರೆ. ಕಲಶ ಪ್ರೋಕ್ಷಣೆ ಆಗುತ್ತಿದ್ದಂತೆ ಎದುರು ಬದುರಾಗಿ ನಿಂತಿರುವ ಯುವಕರು ನೆಲದಲ್ಲಿಟ್ಟ ಅಡ್ಡಣವನ್ನು ಕೈಗೆ ಎತ್ತಿಕೊಂಡು ಅದನ್ನು ಗುರಾಣಿಯಂತೆ ಹಿಡಿದು ಎದುರುಬದುರಾಗಿ ಹೊಡೆದಾಟ ಆರಂಭಿಸುತ್ತಾರೆ. ಪ್ರತಿಯೊಬ್ಬರೂ ಎದುರು ಪ್ರತಿನಿಧಿಯ ಕೈಯಲ್ಲಿ ಹಿಡಿದಿರುವ ಅಡ್ಡಣಕ್ಕೆ ಹೊಡೆಯಬೇಕೆಂಬ ನಿಯಮವೂ ಇದೆ. ಹೊಡೆದಾಟ ಜೋರಾಗುತ್ತಿದ್ದಂತೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವ ಬಂದು ಹೊಡೆದಾಟವನ್ನು ಬಿಡಿಸುತ್ತದೆ.

Continue Reading

DAKSHINA KANNADA

ನಾಲ್ಕು ತಿಂಗಳ ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ..! ಅಜ್ಜಿ ಮಾಡಿದ ಎಡವಟ್ಟಿಗೆ ಕೋಮಾಗೆ ಜಾರಿದ ಮಗು !!

Published

on

ಮಂಗಳೂರು/ಇಟಲಿ: ಇಟಲಿಯಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಅಜ್ಜಿಯೊಬ್ಬರು ನಾಲ್ಕು ತಿಂಗಳ ಮಗುವಿಗೆ ಕುಡಿಯುವ ಹಾಲಿನಲ್ಲಿ ಆಲ್ಕೋಹಾಲ್‌ ಬೆರೆಸಿರುವ ಘಟನೆ ನಡೆದಿದೆ.

feed

ಮೊಮ್ಮಗು ಕುಡಿಯುವ ಹಾಲಿಗೆ ಅಜ್ಜಿ ತಪ್ಪಾಗಿ ಆಲ್ಕೋಹಲ್ ಬೆರೆಸಿದ್ದಾರೆ. ಮಗು ಅರ್ಧ ಹಾಲು ಕುಡಿದ ಬಳಿಕ ಮಗು ಅಳಲು ಆರಂಭಿಸಿದೆ. ಅಜ್ಜಿಗೆ ಅನುಮಾನ ಬಂದು ತಾನು ಕುಡಿಸಿದ ಹಾಲಿನ ವಾಸನೆಯನ್ನು ತೆಗೆದು ಪರಿಶೀಲನೆ ಮಾಡಿದಾಗ ಅದರಲ್ಲಿ ಆಲ್ಕೋಹಾಲ್‌ ಮಿಶ್ರಣ ಹಾಕಿರುವುದು ಬೆಳಕಿಗೆ ಬಂದಿದೆ.  ಇದರಿಂದ ಆಘಾತಕ್ಕೊಳಗಾದ ವೃದ್ಧೆ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮುಂದೆ ಓದಿ..; ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

ಕೋಮಾಗೆ ಜಾರಿದ ಮಗು:

ಅದಾಗಲೇ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೋಮ ಸ್ಥಿತಿಗೆ ಜಾರಿತ್ತು. ಬಳಿಕ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿನ ಆರೋಗ್ಯವನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ ಅಜ್ಜಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

 

Continue Reading

DAKSHINA KANNADA

ಚಲಿಸುತ್ತಿದ್ದಾಗ ಒಡೆದ ಬಸ್ಸಿನ ಗಾಜು; ಇಬ್ಬರು ಮಕ್ಕಳು, ಚಾಲಕನಿಗೆ ಗಾ*ಯ

Published

on

ವಿಟ್ಲ : ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.

ಇದನ್ನೂ ಓದಿ : ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ

ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟವಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

 

Continue Reading

LATEST NEWS

Trending