Connect with us

    LATEST NEWS

    56 ವರ್ಷಗಳ ಹಿಂದೆ ಪತನವಾಗಿದ್ದ ಯುದ್ಧ ವಿಮಾನ ಪತ್ತೆ

    Published

    on

    ಮಂಗಳೂರು/ ಹಿಮಾಚಲ ಪ್ರದೇಶ : 56 ವರ್ಷಗಳ ಹಿಂದೆ ಪತನಗೊಂಡ ಭಾರತೀಯ ವಾಯುಪಡೆಯ ವಿಮಾನದ ಅವಶೇಷಗಳೆಡೆಯಿಂದ ಮೂವರ ಮೃ*ತದೇಹಗಳು ಹಿಮಾಚಲ ಪ್ರದೇಶದ ರೋಹ್ಟಾಂಗ್ ಕಣಿವೆಯ ಹಿಮಾವೃತ ಪ್ರದೇಶದಲ್ಲಿ ಇದೀಗ ಪತ್ತೆಯಾಗಿದೆ. ಮೃ*ತದೇಹದ ಅಳಿದುಳಿದ ಅವಶೇಷಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲು ಸಿದ್ಧತೆಗಳು ನಡೆದಿವೆ.

    1968 ರಂದು ನಡೆದಿದ್ದ ಅವಘ*ಡ:

    ಪತ್ತೆಯಾಗಿರುವ ಮೃತ ದೇಹಗಳನ್ನು ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಳಂಥೂರ್ ಮೂಲದ ಯೋಧ ಥಾಮಸ್ ಚೆರಿಯನ್ , ಉತ್ತರಾಖಂಡ್‌ನ ಗರ್ವಾಲ್‌ನ ಚಮೋಲಿ ತೆಹಸಿಲ್‌ನ ಕೋಲ್ಪಾಡಿ ಗ್ರಾಮದ ಮಲ್ಖಾನ್ ಸಿಂಗ್ ಮತ್ತು ಸಿಪಾಯಿ ನಾರಾಯಣ್ ಸಿಂಗ್ ಅವರದ್ದೆಂದು ಗುರುತಿಸಲಾಗಿದೆ.

    1968 ರ ಫೆಬ್ರವರಿ 7 ರಂದು 102 ಜನರನ್ನು ಹೊತ್ತ ಭಾರತೀಯ ವಾಯುಪಡೆಯ ಅವಳಿ-ಎಂಜಿನ್ ಟರ್ಬೊಪ್ರಾಪ್ ಹೊಂದಿದ್ದ ಎಎನ್-12 ಸಾರಿಗೆ ವಿಮಾನವು ಚಂಡೀಗಢದಿಂದ ಲೇಹ್‌ಗೆ ಹಾರಾಟ ನಡೆಸುತ್ತಿದ್ದಾಗ ಹಿಮಾಚಲ ಪ್ರದೇಶದ ರೋಹ್ಟಾಂಗ್ ಕಣಿವೆಯಲ್ಲಿ ಪತನಗೊಂಡು ನಾಪತ್ತೆಯಾಗಿತ್ತು.

    2003 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ ಪರ್ವತಾರೋಹಿಗಳು ಮೊದಲ ಬಾರಿಗೆ ಈ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದ್ದು, ಆ ಬಳಿಕ ಕಳೆದ ಹಲವು ವರ್ಷಗಳಿಂದ  ಭಾರತೀಯ ಸೇನೆಯು ವಿಶೇಷವಾಗಿ ಡೋಗ್ರಾ ಸ್ಕೌಟ್ಸ್‌ 2005, 2006, 2013, ಮತ್ತು 2019 ರಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.

    ಇದನ್ನೂ ಓದಿ : ಸ್ವರ್ಗವಾಸಿಗಳಿಗೆ ನರಕ ತೋರಿಸಿ ಆರಂಭದಲ್ಲೇ ನಾಮಿನೇಟ್ ಆದ ಚೈತ್ರಾ

    ಆದರೆ, ದುರಂ*ತದ ಸ್ಥಳವು ಅಪಾಯಕಾರಿ ಆಗಿದ್ದರಿಂದ ಶೋಧ ಕಾರ್ಯಕ್ಕೆ ಹಿನ್ನೆಡೆಯಾಗಿದ್ದು, 2019 ರ ವೇಳೆಗೆ ಕೇವಲ ಐದು ಮೃ*ತದೇಹಗಳನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಾಗಿತ್ತು. ಇದೀಗ ನಿನ್ನೆ(ಸೆ.30) ಡೋಗ್ರಾ ಸ್ಕೌಟ್ಸ್‌ ಮತ್ತು ತಿರಂಗಾ ಮೌಂಟೇನ್ ತಂಡಗಳು ಮತ್ತೆ ಮೂವರ ಮೃ*ತದೇಹಗಳನ್ನು ಪತ್ತೆ ಮಾಡಿದೆ.

    BIG BOSS

    BBK11: ಬಿಗ್‌ಬಾಸ್‌ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್‌ ಸುರೇಶ್‌ ಬಳಿ ಇರುವುದೇನು?

    Published

    on

    ಬೆಂಗಳೂರು: ಮೊದಲ ದಿನದಂದಲೇ ಬಿಗ್‌ ಬಾಸ್‌ ಕಾರ್ಯಕ್ರಮ ರಂಗೇರಿದೆ. ಸ್ವರ್ಗ ಹಾಗೂ ನರಕದ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ವಾಗ್ವಾದ ಶುರುವಾಗಿದೆ. ಮನೆಯೊಂದು ಬಾಗಿಲು ಎರಡು ಎಂಬಂತೆ ಸ್ವರ್ಗ–ನರಕದ ನಿವಾಸಿಗಳ ನಡುವೆ ಕಿತ್ತಾಟ ಶುರುವಾಗಿದೆ.

    ಕಳೆದ ಸೀಸನ್‌ನಲ್ಲಿ ಹುಲಿ ಉಗುರು ಪ್ರಕರಣದಿಂದ ಸದ್ದಾಗಿದ್ದ ಬಿಗ್‌ ಬಾಸ್‌ ಮನೆ ಈ ಬಾರಿಯೂ ಹುಲಿ ಉಗುರಿನ ವಿಚಾರದಿಂದ ಸುದ್ದಿ ಆಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಉತ್ತರ ಕರ್ನಾಟಕ ಮೂಲದಿಂದ ಬಂದು ಬಿಗ್‌ ಬಾಸ್‌ ಮನೆಯೊಳಗೆ ಹೋಗಿರುವ ʼಗೋಲ್ಡ್‌ ಸುರೇಶ್‌ʼ.

     

    ಬಿಗ್‌ ಬಾಸ್‌ ಈ ಬಾರಿ ಪ್ರಿಮಿಯರ್‌ ಆಗುವ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಿತ್ತು. ಅದರಲ್ಲಿ ʼಗೋಲ್ಡ್‌ ಸುರೇಶ್‌ʼ ಕೂಡ ಇದ್ದರು. ಬೆಳಗಾವಿ ಮೂಲದವರಾದ ಗೋಲ್ಡ್‌ ಸುರೇಶ್‌ ಮೈತುಂಬಾ ಚಿನ್ನಾಭರಣ ತೊಟ್ಟುಕೊಂಡೇ ಬಿಗ್‌ ಬಾಸ್‌ ಮನೆಯೊಳಗೆ ಹೋಗಿದ್ದಾರೆ. ಅವರನ್ನು ನೋಡಿ ಇವರು ವರ್ತೂರು ಸಂತೋಷ್‌ 2.0 ಎಂದು ಕಮೆಂಟ್‌ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ವರ್ತೂರು ಸಂತೋಷ್‌ ಕೂಡ ಇದೇ ರೀತಿ ಚಿನ್ನವನ್ನು ಧರಿಸಿಕೊಂಡು ದೊಡ್ಮನೆಯೊಳಗೆ ಹೋಗಿದ್ದರು.

    ಆದರೆ ಕೆಲ ಸಮಯದ ಬಳಿಕ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ ಕಾರಣಕ್ಕೆ ಅರಣ್ಯ ಇಲಾಖೆಗೆ ಅಧಿಕಾರಿಗಳ ಅವರ ವಿರುದ್ಧ ದೂರು ದಾಖಲಿಸಿಕೊಂಡು, ಬಿಗ್‌ ಬಾಸ್‌ ಮನೆಯಿಂದಲೇ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈ ವಿಚಾರ ಎಲ್ಲೆಡೆ ಸುದ್ದಿ ಆಗಿತ್ತು. ವಿಚಾರಣೆ ಎದುರಿಸಿ ವರ್ತೂರು ಸಂತೋಷ್‌ ಮತ್ತೆ ಬಿಗ್‌ ಬಾಸ್‌ ಮನೆಯೊಳಗೆ ಬಂದಿದ್ದರು.

     

    ಆದರೆ ಇದೀಗ ಬಿಗ್‌ ಬಾಸ್‌ ಕನ್ನಡ -11ನಲ್ಲಿ ಸ್ಪರ್ಧಿ ಆಗಿರುವ ʼಗೋಲ್ಡ್‌ ಸುರೇಶ್‌ʼ ಕೂಡ ಚಿನ್ನಾಭರಣಗಳ ಜತೆ ಹುಲಿ ಉಗುರಿನ ಪೆಂಡೆಂಟ್‌ ವೊಂದನ್ನು ಧರಿಸಿದ್ದಾರೆ. ಅವರ ವಿಟಿಯಲ್ಲಿ ಇದನ್ನು ತೋರಿಸಲಾಗಿದೆ. ಇದು ಅಸಲಿಯೂ ಅಥವಾ ನಕಲಿಯೂ ಅಥವಾ ಫೈಬರ್‌ ನದ್ದೂ ಎನ್ನುವ ಪ್ರಶ್ನೆ ಕಾಡಿದೆ.

    ವಿಟಿಯಲ್ಲಿ ಹುಲಿ ಉಗುರಿನ ಪೆಂಡೆಂಟ್‌ ತೋರಿಸಲಾಗಿದ್ದು, ಇದನ್ನು ಅವರು ಬಿಗ್‌ ಬಾಸ್‌ ಮನೆಯೊಳಗೆ ತೆಗೆದುಕೊಂಡು ಹೋಗಿದ್ದಾರಾ ಅಥವಾ ತೆಗೆದಿಟ್ಟಿದ್ದಾರಾ ಎನ್ನುವುದನ್ನು ಸ್ಪಷ್ಟ ಪಡಿಸಿಕೊಳ್ಳಲು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬಿಗ್‌ ಬಾಸ್‌ ಮನೆಯೊಳಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಇದು ಅಸಲಿ ಹುಲಿ ಉಗುರಿನ ಪೆಂಡೆಂಟ್ ವೋ ಅಥವಾ ಪೈಬರ್‌ ರೂಪದಲ್ಲಿರುವ ಪೆಂಡೆಂಟ್‌ ವೋ ಎನ್ನುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ. ವೈಲ್ಡ್‌ ಲೈಫ್ ಕಾನೂನು ಪ್ರಕಾರ ಹುಲಿ ಉಗುರು ಧರಿಸುವುದು ಅಪರಾಧವಾಗಿದೆ.

    ಯಾರು ಈ ಗೋಲ್ಡ್‌ ಸುರೇಶ್?

    ಇವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಮೊದಲಿನಿಂದಲೂ ಚಿನ್ನಾಭರಣದ ಮೇಲೆ ವ್ಯಾಮೋಹ ಇಟ್ಟುಕೊಂಡಿರುವ ಅದನ್ನು ಸದಾ ಮೈಯಲ್ಲಿ ಧರಿಸಿರುತ್ತಾರೆ. ಆರ್ ಎಸ್‌ ಎಸ್‌ ಪೂರ್ಣವಧಿ ಕಾರ್ಯಕರ್ತನಾಗಿದ್ದ ಸುರೇಶ್‌, ಬಡತನದ ಹಿನ್ನೆಲೆಯಿಂದಲೇ ಬಂದವರು. ನಿರ್ಮಾಣ ಸಂಸ್ಥೆಯನ್ನು ಮುನ್ನಡಿಸಿ ದೊಡ್ಡಮಟ್ಟದ ಯಶಸ್ಸು ಕಂಡವರು. ವಿವಾಹಿತ ಆಗಿರುವ ಇವರು ಒಂದು ಮಗುವಿನ ತಂದೆ ಆಗಿದ್ದಾರೆ.

    Continue Reading

    LATEST NEWS

    Watch Video: ಕೋಚಿಂಗ್‌ ಸೆಂಟರ್‌ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್

    Published

    on

    ಉತ್ತರ ಪ್ರದೇಶ: ಶಿಕ್ಷಕರು ವಿದ್ಯಾರ್ಥಿಗಳಿಗೆ ಬೆಳಕು ತೋರುವ ದೀವಿಗೆ ಇದ್ದಂತೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಬೇಕಿದ್ದ ಶಿಕ್ಷಕನೇ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಹೌದು ನೀಟ್‌ ಕೋಚಿಂಗ್‌ ಸೆಂಟರ್‌ನ ಬಯಾಲಜಿ ಟೀಚರ್‌ ತಾನೊಬ್ಬ ಶಿಕ್ಷಕನೆಂಬುದನ್ನೂ ಮರೆತು ವಿದ್ಯಾರ್ಥಿನಿಯೊಬ್ಬಳನ್ನು ತಬ್ಬಿ ಮುತ್ತಿಟ್ಟಿದ್ದಾನೆ. ಮಾತ್ರವಲ್ಲದೆ ಆಕೆಯನ್ನು ಶೌಚಗೃಹಕ್ಕೆ ಕರೆದುಕೊಂಡು ಹೋಗಿ ಅನುಚಿತ ವರ್ತನೆಯನ್ನು ತೋರಿದ್ದಾನೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

    ಈ ಘಟನೆ ಉತ್ತರ ಪ್ರದೇಶದ ಕಾನ್ಪುರದ ಪ್ರತಿಷ್ಠಿತ ಕಾಕದೇವ್‌ ನೀಟ್‌ ಕೋಚಿಂಗ್‌ ಸೆಂಟರ್‌ನಲ್ಲಿ ನಡೆದಿದ್ದು, ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ತಬ್ಬಿ ಮುತ್ತಿಟ್ಟು ಅನುಚಿತವಾಗಿ ವರ್ತಿಸಿದ್ದಾನೆ. ಬಯಾಲಜಿ ಶಿಕ್ಷಕನಾಗಿರುವ ಸಾಹಿಲ್‌ ಸಿದ್ದಿಕಿ ಈ ಅಸಹ್ಯ ಕೃತ್ಯವನ್ನು ಎಸಗಿದ್ದು, ಈ ದೃಶ್ಯಗಳು ಕೋಚಿಂಗ್‌ ಸೆಂಟರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನ ಅಶ್ಲೀಲ ಕೃತ್ಯಗಳು ವೈರಲ್‌ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಈ ಬಗ್ಗೆ ಕೋಚಿಂಗ್‌ ಸೆಂಟರ್‌ನ ಡೈರೆಕ್ಟರ್‌ ಆಶಿಶ್‌ ಶ್ರೀವಾಸ್ತವ ಮಾತನಾಡಿದ್ದು, ʼಈ ಹಿಂದೆಯೂ ಸಹ ಕೋಚಿಂಗ್‌ ಸೆಂಟರ್‌ನ ಅನೇಕ ವಿದ್ಯಾರ್ಥಿನಿಯರು ಸಾಹಿಲ್‌ ನಡವಳಿಕೆ ಸರಿಯಿಲ್ಲ ಎಂಬ ಬಗ್ಗೆ ದೂರನ್ನು ನೀಡಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಅತನ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರೀ ಸರಿಯಾದ ಸಾಕ್ಷಿ ಸಿಕ್ಕಿದ್ದು, ಈ ಬಗ್ಗೆ ದೂರು ನೀಡಿದ ಬಳಿಕ ಅತನನ್ನು ಪೊಲೀಸರು ಬಂಧಿಸಿದ್ದಾರೆʼ ಎಂದು ಹೇಳಿದ್ದಾರೆ.

    ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಶಿಕ್ಷಕ ಸಾಹಿಲ್‌ ಸಿದ್ದಿಕಿ ತನ್ನ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಆಕೆಗೆ ಮುತ್ತಿಡುವ ಅಹಸ್ಯಕರ ದೃಶ್ಯವನ್ನು ಕಾಣಬಹುದು.

    Watch Video:

    Continue Reading

    LATEST NEWS

    ಕುಂದಾಪುರ : ಕಾರು ಚಾಲಕ ಮಾಡಿದ ಎಡವಟ್ಟಿಗೆ ಟಿಪ್ಪರ್ ಅಪಘಾತ; ವಿದ್ಯಾರ್ಥಿ ಬಲಿ

    Published

    on

    ಕುಂದಾಪುರ : ಕಾರೊಂದು ಬಲಕ್ಕೆ ತಿರುಗಿಸುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ನಿಯಂತ್ರಣ ಕಳೆದುಕೊಂಡು ಅಪಘಾ*ತ ಸಂಭವಿಸಿದೆ. ಕುಂದಾಪುರದ ಕೋಟೇಶ್ವರದಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃ*ತಪಟ್ಟಿದ್ದಾನೆ.

    ಇಲ್ಲಿನ ಕಾಗೇರಿಯ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್‌ಸಿ ವಿದ್ಯಾರ್ಥಿ ಧನುಷ್ ಮೃ*ತ ದುರ್ದೈವಿ. ಇಂದು ಮಧ್ಯಾಹ್ನ(ಅ.1) ಕಾಲೇಜು ಮುಗಿಸಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಡಿ*ಕ್ಕಿಯಾಗಿದೆ. ಮೂವರು ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಿದ್ದ ವೇಳೆ ಅಪಘಾ*ತ ನಡೆದಿದ್ದು, ಅಡ್ಡ ಬಂದ ಕಾರೊಂದನ್ನು ತಪ್ಪಿಸುವ ಯತ್ನದಲ್ಲಿ ಟಿಪ್ಪರ್ ವಿದ್ಯಾರ್ಥಿಗಳ ಮೇಲೆ ಹರಿದಿದೆ.

    ಅದೃಷ್ಟವಶಾತ್, ಇಬ್ಬರು ವಿದ್ಯಾರ್ಥಿಗಳು ಕೂದಲೆಳೆಯಲ್ಲಿ ಓಡಿ ಪಾರಾದರಾದ್ರೂ ಧನುಷ್‌ ಗೆ ಗುದ್ದಿದ ಟಿಪ್ಪರ್ ಚಕ್ರ ಆತನ ಮೇಲೆ ಹರಿದು ಆತ ಸ್ಥಳದಲ್ಲೇ ಅಸುನೀಗಿದ್ದಾನೆ. ಅಪಘಾ*ತಕ್ಕೆ ಕಾರಣವಾಗಿದ್ದ ಕಾರು ಚಾಲಕ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾನೆ.

    ಇದನ್ನೂ ಓದಿ : 56 ವರ್ಷಗಳ ಹಿಂದೆ ಪತನವಾಗಿದ್ದ ಯುದ್ಧ ವಿಮಾನ ಪತ್ತೆ

    ಈ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರು ಚಾಲಕನ ನಿರ್ಲಕ್ಷ್ಯ ಹಾಗೂ ಟಿಪ್ಪರ್ ಚಾಲಕನ ವೇಗದ ಚಾಲನೆ ಎರಡೂ ಕೂಡ ಘಟನೆಗೆ ಕಾರಣ ಅನ್ನೋದು ಸ್ಪಷ್ಟವಾಗಿದೆ.

    Continue Reading

    LATEST NEWS

    Trending