Connect with us

    LATEST NEWS

    ನಕಲಿ ವೈದ್ಯನಿಂದ ಭ್ರೂಣ ಹ*ತ್ಯೆ ..! ತನಿಖೆ ವೇಳೆ ವೈದ್ಯನ ಕರಾಳ ಮುಖ ಬಯಲು..!!

    Published

    on

    ಬೆಳಗಾವಿ/ಮಂಗಳೂರು: ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ನಕಲಿ ವೈದ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ. ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ನಕಲಿ ವೈದ್ಯನ ಮತ್ತೊಂದು ಕರಾಳ ಮುಖ ಬಯಲಿಗೆ ಬಂದಿದೆ.

    ನಕಲಿ ವೈದ್ಯ ಡಾ.ಅಬ್ದುಲ್ ಗಫಾತ್ ಸೇರಿ ಐವರನ್ನು ಜೂ. 10 ರಂದು ಮಾಳಮಾರುತಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದರು. ತನಿಖೆ ವೇಳೆ ಇವನ ಮತ್ತೊಂದು ಕರಾಳ ಮುಖ ಬಯಲಿಗೆ ಬಂದಿದೆ. ಮಕ್ಕಳ ಮಾರಾಟ ಜಾಲ ಪ್ರಕರಣವನ್ನು ಬೆನ್ನು ಹತ್ತಿದ್ದ ಬೆಳಗಾವಿ ಪೊಲೀಸರಿಗೆ ವೈದ್ಯನ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಈ ವೈದ್ಯ ಮಕ್ಕಳ ಮಾರಾಟ ಸೇರಿದಂತೆ ಭ್ರೂಣಗಳ ಹತ್ಯೆ ಮಾಡಿದ್ದಾನೆ. ಭ್ರೂಣ ಹತ್ಯೆಗೈದು ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾನೆ. ಪೊಲೀಸರ ತನಿಖೆ ವೇಳೆ ಅಬ್ದುಲ್ ಭ್ರೂಣ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಫಾರ್ಮ್‌ ಹೌಸ್‌ನಲ್ಲಿ ಶೋಧಕಾರ್ಯ ನಡೆಸಿದಾಗ ಮೂರು ಭ್ರೂಣಗಳ ಅವಶೇಷ ಪತ್ತೆಯಾಗಿದೆ. ಕಿತ್ತೂರಿನಲ್ಲಿದ್ದ ತನ್ನ ಫಾರ್ಮ್‌ ಹೌಸ್‌ನಲ್ಲಿ ಭ್ರೂಣ ಹತ್ಯೆ ಮಾಡಿ, ಫಾರ್ಮ್‌ಹೌಸ್‌ನಲ್ಲಿ ಹೂತುಹಾಕುತ್ತಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.

    Read More..; ‘ನನ್ನಿಂದ ಹೀಗೆ ಆಗೋಯ್ತಲ್ಲ’ ತಂದೆ ಶವದ ಮುಂದೆ ಕಣ್ಣೀರಿಟ್ಟ ದರ್ಶನ್ ಕೇಸ್‌ ಆರೋಪಿ..!

    ಡಿಸಿ ನಿತೇಶ ಪಾಟೀಲ್ ಸೂಚನೆ ಮೇರೆಗೆ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದ್ದು, ಪೊಲೀಸರು, ಆರೋಗ್ಯ ಇಲಾಖೆ, ಎಫ್ ಎಸ್ ಎಲ್ ತಂಡದಿಂದ ಶೋಧ ಕಾರ್ಯ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಮೂರು ಭ್ರೂಣಗಳ ಅವಶೇಷಗಳು ಪತ್ತೆಯಾಗಿದ್ದು, ಅವಶೇಷಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆರೋಪಿಗಳ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

    3 Comments

    LATEST NEWS

    ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್.. ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ!

    Published

    on

    ಬೆಂಗಳೂರು: ನಂದಿನಿ ಹಾಲಿನ ದರವನ್ನು ಕೆಎಂಎಫ್​​​ ಪ್ರತಿ ಲೀಟರ್​ಗೆ 2 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ. ಇಷ್ಟು ದಿನ ಪ್ರತಿ ಲೀಟರ್​ಗೆ 42 ರೂಪಾಯಿ ಇದ್ದ ಹಾಲಿನ ದರ ಇನ್ಮುಂದೆ 44 ರೂಪಾಯಿ ಆಗಲಿದೆ.

    ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೆಎಂಎಫ್) ಮುಖ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದೆ. ಇಷ್ಟು ದಿನ ಒಂದು ಲೀಟರ್ ಹಾಲು 42 ರೂಪಾಯಿ ಇತ್ತು. ಆದರೆ ಈ ಬೆಲೆಯಲ್ಲಿ 2 ರೂಪಾಯಿಯನ್ನು ಹೆಚ್ಚಳ ಮಾಡಲಾಗಿದ್ದು ಇನ್ಮುಂದೆ ಪ್ರತಿ ಲೀಟರ್ ಹಾಲು 44 ರೂಪಾಯಿ ಆಗಲಿದೆ. ಅದರಂತೆ ಅರ್ಧ ಲೀಟರ್ ಹಾಲು 22 ಇತ್ತು. ಇದರಲ್ಲೂ 2 ರೂಪಾಯಿಯನ್ನ ಏರಿಕೆ ಮಾಡಲಾಗಿದ್ದು 24 ರೂಪಾಯಿ ಆಗಲಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

    ಇನ್ಮುಂದೆ ಪ್ರತಿ ಪಾಕೆಟ್​ನಲ್ಲಿ 1 ಲೀಟರ್ ಹಾಲಿನ ಬದಲಿಗೆ 1050 ಎಂಎಲ್​ ಹಾಲು ಇರುತ್ತದೆ. ಅದರಂತೆ ಅರ್ಧ ಲೀಟರ್​ ಹಾಲಿನ ಪಾಕೆಟ್​ ಬದಲಿಗೆ 550 ಎಂಎಲ್​​ ಹಾಲು ಬರುತ್ತದೆ. ಪ್ರತಿ ಹಾಲಿನ ಪಾಕೆಟ್​ 50 ಎಂಎಲ್​ ಹೆಚ್ಚುವರಿ ಹಾಲನ್ನು ಹೊಂದಿರುತ್ತದೆ. ಹೀಗಾಗಿಯೇ ಹಾಲಿನ ದರದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.

    Continue Reading

    DAKSHINA KANNADA

    ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ಈ ರೀತಿ ಪೂಜೆ ಮಾಡಿದ್ರೆ ಸಂಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ..!

    Published

    on

    ಮಂಗಳೂರು: ಮಂಗಳವಾರ ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ. ಈ ದಿನ ಉಪವಾಸ ಮಾಡಿ ವ್ರತ ಆಚರಣೆ ಮಾಡಿದರೆ ಜೀವನದಲ್ಲಿರುವ ಸಮಸ್ಯೆಗಳೆಲ್ಲಾ ಮಾಯವಾಗುತ್ತೆ ಎನ್ನಲಾಗುತ್ತದೆ. ಈ ದಿನ ಗಣೇಶನ ಪೂಜೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.

    ಈ ದಿನ ಚಂದ್ರ ಹಾಗೂ ಗಣೇಶನ ಆರಾಧನೆ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಂಕಷ್ಟ ಚತುರ್ಥಿ ವ್ರತ ಚಂದ್ರ ದರ್ಶನ ಆಗದಿದ್ದರೆ ಅಪೂರ್ಣ ಎನ್ನಲಾಗುತ್ತದೆ. ಈ ಬಾರಿ ಚಂದ್ರ ರಾತ್ರಿ 10.12 ನಿಮಿಷಕ್ಕೆ ಉದಯಿಸಲಿದ್ದು, ಚಂದ್ರನ ದರ್ಶನ ಮಾಡಿ ಉಪವಾಸ ಪೂರ್ಣಗೊಳಿಸಬೇಕು. ಮಂಗಳವಾರ ಅಂದರೆ ಅಂಗಾರಕ ಸಂಕಷ್ಟಿಯ ದಿನ ಗಣೇಶನ ವ್ರತಾಚಾರಣೆ ಹಾಗೂ ಉಪವಾಸ ಮಾಡುವುದು ಇಡೀ ವರ್ಷದಲ್ಲಿ ಬರುವ ಸಂಕಷ್ಟ ಚತುರ್ಥಿ ಆಚರಣೆ ಮಾಡುವುದಕ್ಕೆ ಸಮ ಎನ್ನಲಾಗುತ್ತದೆ.

    ಅಂಗಾರಕ ಎಂದರೆ ಮಂಗಳಕರ ಎಂದು ಅರ್ಥ. ಈ ಸಂಕಷ್ಟಿ ಆಚರಣೆ ಮಾಡುವುದರಿಂದ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಹಾಗೂ ಇರುವ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ನಾವು ಮಾಡಿಕೊಂಡ ಸಂಕಲ್ಪಗಳು ಸಹ ಈಡೇರುತ್ತದೆ ಎನ್ನಲಾಗುತ್ತದೆ.

    ಪೂಜೆ ಮಾಡುವುದು ಹೇಗೆ?

    ಅಂಗಾರಕ ಸಂಕಷ್ಟಿಯ ದಿನ ಕೆಂಪು ಬಟ್ಟೆ ಮೇಲೆ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪನೆ ಮಾಡಬೇಕು. ನಂತರ ದೇವರಿಗೆ ಹೂವುಗಳನ್ನು ಅರ್ಪಣೆ ಮಾಡಿ. ಮಲ್ಲಿಗೆ ಹೂವಿನ ಅರ್ಪಣೆ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.

    ನಂತರ ಗರಿಕೆಯನ್ನು ಅರ್ಪಣೆ ಮಾಡಬೇಕು. ನೈವೇದ್ಯಕ್ಕೆ ಲಡ್ಡು ಅಥವಾ ಮೋದಕ ಇದ್ದರೆ ಬಹಳ ಉತ್ತಮ. ಈ ಎರಡು ವಸ್ತುಗಳು ಗಣೇಶನಿಗೆ ಇಷ್ಟ. ಹಾಗೆಯೇ ದೇವರಿಗೆ ತುಪ್ಪದ ದೀಪ ಹಚ್ಚಿ, ಗಣೇಶ ಸ್ತುತಿ ಪಠಿಸಿ ಆರತಿ ಮಾಡಿ. ಅಲ್ಲದೇ ಈ ದಿನ ಪೂರ್ತಿ ಉಪವಾಸ ಇದ್ದು, ರಾತ್ರಿ ಚಂದ್ರ ದರ್ಶನ ಮಾಡಿ ಆಹಾರ ಸೇವಿಸಿ.

    Continue Reading

    DAKSHINA KANNADA

    ಮಂಗಳೂರು : ಕುಮಾರಸ್ವಾಮಿ‌ ಚನ್ನಪಟ್ಟಣ ನೋಡುವ ಮೊದಲು ನಾನು‌ ನೋಡಿದ್ದೇನೆ : ಡಿಕೆಶಿ

    Published

    on

    ಮಂಗಳೂರು : ನಿನ್ನೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ದಕ್ಷಿಣ ಕನ್ನಡ ಜಿಲ್ಲೆಯ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬಿಎಸ್‌ವೈ ತುಲಾಭಾರ ಸೇವೆ ಕೂಡಾ ನಡೆಸಿದ್ದರು. ಇದೀಗ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಇಂದು(ಜೂ.25) ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಅವರು ನೇರವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ.


    ಸಂಜೆಯ ವರೆಗೂ ಕುಕ್ಕೆ ಕ್ಷೇತ್ರದಲ್ಲಿ ಇದ್ದು ನೇರವಾಗಿ ಮಂಗಳೂರು ವಿಮಾನ ನಿಲ್ದಾಣದ ಮೂಲಕವಾಗಿ ಬೆಂಗಳೂರಿಗೆ ವಾಪಾಸಾಗಲಿದ್ದಾರೆ. ಕುಟುಂಬ ಸಮೇತರಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಡಿ.ಕೆ.ಶಿವಕುಮಾರ್ ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

    ಚೆನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವನ್ನು ಖಚಿತ ಪಡಿಸಿದ ಡಿಕೆಶಿ, ಸುರೇಶ್‌ಗೆ ಆಸಕ್ತಿ ಇಲ್ಲ. ಹೀಗಾಗಿ ಚೆನ್ನಪಟ್ಟಣದ ಸೇವೆ ಮಾಡಲು ತೀರ್ಮಾನಿಸಿದ್ದೇನೆ. ಅಲ್ಲಿನ ಜನರು ಕುಮಾರಸ್ವಾಮಿಯನ್ನು ನೋಡುವ ಮೊದಲು ನನ್ನನ್ನು ನೋಡಿದ್ದಾರೆ. ಹೀಗಾಗಿ ಅಲ್ಲಿ ಒಂದಷ್ಟು ಅಳಿಲು ಸೇವೆ ಮಾಡಬೇಕು ಇದ್ದೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ : ಮೊದಲ ಮಳೆಗೆ ಸೋರುತ್ತಿದೆ ರಾಮ ಮಂದಿರದ ಗರ್ಭಗೃಹ!

    ಇನ್ನು ಸರ್ಕಾರದಲ್ಲಿ ಡಿಸಿಎಂ ಹುದ್ದೆಯ ವಿಚಾರವಾಗಿ ಮಾತನಾಡಿದ ಡಿಕೆಶಿ, ಟಿವಿ ನ್ಯೂಸ್ ನೋಡಿ ಕೆಲವರು ಖಷಿ ಪಡ್ತಾ ಇದ್ದಾರೆ. ಆದರೆ ಯಾರು ಏನ್ ಬೇಡಿಕೆ ಇಟ್ರೂ ಪಾರ್ಟಿ ಯಾರಿಗೆ ಏನು ಕೊಡಬೇಕೋ ಅದನ್ನು ಕೊಡುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಬಳ್ಳಾರಿಯಲ್ಲಿ ಮೈನಿಂಗ್ ಗೆ ಕುಮಾರಸ್ವಾಮಿ ಅನುಮತಿ ನೀಡಿದ ಬಗ್ಗೆ ಮಾತನಾಡಿ ಅವರಿಗೆ ಎಷ್ಟು ನಾಲೇಜ್ ಇದೆ ಗೊತ್ತಿಲ್ಲ. ನನಗಂತೂ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

    Continue Reading

    LATEST NEWS

    Trending