NATIONAL
ಬೆಂಗಳೂರಿನಲ್ಲೂ ಫೆಂಗಲ್ ಎಪೆಕ್ಟ್; ಎಡೆಬಿಡದೇ ಸುರಿಯುತ್ತಿರುವ ಮಳೆ
Published
3 weeks agoon
ಮಂಗಳೂರು/ಬೆಂಗಳೂರು : ಫೆಂಗಲ್ ಚಂಡಮಾರುತ ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ. ನೆರೆಯ ರಾಜ್ಯಕ್ಕೆ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಬೆಂಗಳೂರಿಗೂ ತಟ್ಟಿದೆ. ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಭಾನುವಾರ (ಡಿ.1) ಇಡೀ ದಿನ ಮಳೆ ಸುರಿದಿದ್ದು, ಮಧ್ಯಾಹ್ನದ ನಂತರವಂತೂ ಬಿಡುವುಕೊಡದೇ ಮಳೆ ಸುರಿದಿದೆ. ಸೋಮವಾರ (ಡಿ.2) ಮುಂಜಾನೆಯೂ ಮಳೆಯಾಗುತ್ತಿದೆ.
ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ :
ಫೆಂಗಲ್ ಸೈಕ್ಲೋನ್ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಗುತ್ತಿದೆ. ಶೀತಗಾಳಿ ಬೀಸುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೋಲಾರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಹಾಗೇ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಶಾಲೆ, ಕಾಲೇಜುಗಳಿಗೆ ಇಂದು ರಜೆ ಪ್ರಕಟಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳು ರಜೆ ಘೋಷಣೆ ಮಾಡಿಲ್ಲ. ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಪೋಷಕರು ಎಚ್ಚರಿಕೆಯಿಂದ ಮಕ್ಕಳನ್ನ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಡಲಬ್ಬರ :
ಸೈಕ್ಲೋನ್ನಿಂದಾಗಿ ಮಂಗಳೂರು ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಪಣಂಬೂರು, ಉಳ್ಳಾಲ, ಸೋಮೇಶ್ವರ ಬೀಚ್ಗಳಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿವೆ. ಉಡುಪಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಡಲಲ್ಲಿ ಬೃಹತ್ ಅಲೆಗಳು ಏಳುತ್ತಿದ್ದರೂ ಮಲ್ಪೆ ಬೀಚ್ನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಕಾಣಿಸಿದೆ. ಚಿಕ್ಕಮಗಳೂರಿನಲ್ಲಿ ಥಂಡಿ ಚಳಿಗೆ ಮಲೆನಾಡಿಗರು ಹೈರಾಣಾಗಿದ್ದಾರೆ. ಮತ್ತೊಂದೆಡೆ ಬಿಸಿಲನಾಡು ವಿಜಯಪುರದಲ್ಲೂ ಶೀತಗಾಳಿ ಬೀಸುತ್ತಿದೆ. ದ್ರಾಕ್ಷಿ ಬೆಳೆಗೆ ಕಂಟಕವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ನೆರೆ ಪರಿಸ್ಥಿತಿ :
ಶ್ರೀಲಂಕಾದಲ್ಲಿ ಭೀತಿ ಸೃಷ್ಟಿಸಿದ್ದ ಫೆಂಗಲ್ ಚಂಡಮಾರುತ ತಮಿಳುನಾಡನ್ನು ಬೆಚ್ಚಿಬೀಳಿಸಿದೆ. ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ಕರಾವಳಿಗೆ ಸೈಕ್ಲೋನ್ ಅಪ್ಪಳಿಸಿದೆ. ಚಂಡಮಾರುತ ಬಂದಪ್ಪಳಿಸಿದ್ದಕ್ಕೆ ಭಾರೀ ಮಳೆಯಾಗಿದ್ದು, ಮಹಾನಗರ ಚೆನ್ನೈಯಲ್ಲಿ ನೆರೆ ಸೃಷ್ಟಿಯಾಗಿದೆ.
ಪುದುಚೇರಿ ಬಹುತೇಕ ಜಲಾವೃತ: ಶಾಲಾ-ಕಾಲೇಜುಗಳಿಗೆ ರಜೆ :
ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಂಧ್ರದಲ್ಲೂ ಚಂಡಮಾರುತವೂ ಮಳೆ ಸುರಿಸಿದೆ. ತಿರುಮಲದಲ್ಲಿ ದಟ್ಟ ಮಂಜು ಆವರಿಸಿತ್ತು. ರಾಯಲಸೀಮಾ, ಕಡಪ, ನೆಲ್ಲೂರು, ಚಿತ್ತೂರು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಫೆಂಗಲ್ ಸೈಕ್ಲೋನ್ ಎಫೆಕ್ಟ್ ಕೇರಳಕ್ಕೂ ತಟ್ಟಿದೆ. ಇವತ್ತು ವಯನಾಡು, ಮಲಪ್ಪುರಂ, ಕೋಯಿಕ್ಕೋಡ್ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ
LATEST NEWS
ಪೂಜಾ ಖೇಡ್ಕರ್ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ !
Published
11 hours agoon
23/12/2024By
NEWS DESK3ಮಂಗಳೂರು/ನವದೆಹಲಿ: ನೇಮಕಾತಿ ರದ್ದಾಗಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಇಂದು (ಸೋಮವಾರ) ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂಗವೈಕಲ್ಯತೆ ಸಮಸ್ಯೆಯಿಂದ ಬಳಲುತ್ತಿರುವಂತೆ ನಕಲಿ ದಾಖಲೆಗಳನ್ನು ನೀಡಿ ಮೀಸಲಾತಿಯ ದುರುಪಯೋಗಪಡಿಸಿಕೊಂಡಿರುವ ಆರೋಪ ಪೂಜಾ ಮೇಲಿದೆ.
ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಇವರು 50 ವರ್ಷಗಳಿಂದ ಅಂಗಿ ಹಾಕಿಲ್ಲ; ಕಾರಣ ಏನು ಗೊತ್ತಾ ?
ಪೂಜಾ ಖೇಡ್ಕರ್ ಅವರ ವಿರುದ್ದ ಪ್ರಬಲವಾದ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಾದರೆ ಸೂಕ್ತ ತನಿಖೆಯ ಅಗತ್ಯವಿದೆ. ಹಾಗಾಗಿ ಪೂಜಾ ಅವರು ತನಿಖೆಗೆ ಸಹಕರಿಸಬೇಕು’ ಎಂದೂ ನ್ಯಾಯಮೂರ್ತಿ ಸಿಂಗ್ ತಿಳಿಸಿದ್ದಾರೆ.
ಯುಪಿಎಸ್ ಸಿ ಪರ ಹಿರಿಯ ವಕೀಲ ನರೇಶ್ ಕೌಶಿಕ್ ಮತ್ತು ವಕೀಲ ವರ್ಧಮಾನ್ ಕೌಶಿಕ್ ವಾದ ಮಂಡಿಸಿದ್ದರು.
ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದೆ ಪೂಜಾ ಖೇಡ್ಕರ್ ವಿರುದ್ದ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ವಿಕಲಚೇತನರ ಹಕ್ಕು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದರು.
LIFE STYLE AND FASHION
ಇವರು 50 ವರ್ಷಗಳಿಂದ ಅಂಗಿ ಹಾಕಿಲ್ಲ; ಕಾರಣ ಏನು ಗೊತ್ತಾ ?
Published
12 hours agoon
23/12/2024By
NEWS DESK3ಮಂಗಳೂರು/ತೆಲಂಗಾಣ: ಈ ವ್ಯಕ್ತಿ 50 ವರ್ಷಗಳಿಂದ ಅಂಗಿ ಧರಿಸಿಯೇ ಇಲ್ಲ. ಅದು ಮಳೆ, ಚಳಿ ಅಷ್ಟೇ ಅಲ್ಲದೇ ಯಾವುದೇ ಕಾರ್ಯಕ್ರಮ ಇದ್ದರು ಅಷ್ಟೇ ಇವರು ಬಟ್ಟೆ ಹಾಕುವುದಿಲ್ಲ. ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ.
ಜಗಿತ್ಯಾಲ ಜಿಲ್ಲೆಯ ಕೋರುಟ್ಲ ಮಂಡಲದ ಐಲಾಪುರ ಗ್ರಾಮದ ನಿವಾಸಿಯಾಗಿರುವ ಮುಕ್ಕೇರ ಬಕ್ಕಯ್ಯ ಅವರನ್ನು ಹಳ್ಳಿಯ ಜನರು ಗಾಂಧಿ ಎಂದು ಕರೆಯುತ್ತಿದ್ದರು. ಕಾರಣ ಅವರು ಅಂಗಿ ಹಾಕಿಲ್ಲ. ಇವರು ಸರಿಸುಮಾರೂ 50 ವರ್ಷದಿಂದ ಅಂಗಿಯನ್ನೇ ಹಾಕಿಲ್ಲ.
ಈ ಬಗ್ಗೆ ಬಕ್ಕಯ್ಯ, ನನ್ನ ತಂದೆ-ತಾಯಿಯ ಆರ್ಥಿಕ ಪರಿಸ್ಥಿತಿಯಿಂದಾಗಿ ನಾನು ಚಿಕ್ಕವನಿದ್ದಾಗ ಅಂಗಿ ಕೊಡಿಸಿರಲಿಲ್ಲ. ಇದೇ ನನ್ನ ಅಭ್ಯಾಸವಾಯಿತು. ನಾನು ಹುಟ್ಟಿದಾಗಿನಿಂದ ಅಂಗಿ ಹಾಕಿಕೊಂಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು
ಬಕ್ಕಯ್ಯನ ಮದುವೆಯ ಸಂದರ್ಭದಲ್ಲೂ ಅಂಗಿ ಧರಿಸಿರಲಿಲ್ಲ. ಹೆಂಡತಿ ಎಷ್ಟೇ ಕೇಳಿಕೊಂಡರೂ ಬಕ್ಕಯ್ಯ ಮಾತ್ರ, ತನಗೆ ಅಂಗಿ ಇಷ್ಟವಿಲ್ಲ ಎಂದು ಹೇಳುತ್ತಿದ್ದರಂತೆ. ಈ ಮಾತಿನಿಂದ ಬೇಸತ್ತ ಪತ್ನಿ ನಾನು ನಿಮ್ಮ ಜೊತೆ ಇರಬೇಕಾದರೆ ಅಂಗಿ ಹಾಕಿಕೊಳ್ಳಬೇಕು, ಇಲ್ಲವಾದಲ್ಲಿ ಹೋಗುತ್ತೇನೆ ಎಂದು ಹೇಳಿದ್ದಳು. ಬಕ್ಕಯ್ಯ ನೀನು ಹೋದರೂ ಪರವಾಗಿಲ್ಲ, ಆದರೆ ನಾನು ಅಂಗಿ ಹಾಕಿಕೊಳ್ಳುವುದಿಲ್ಲ ಎಂದು ನಿರ್ಧರಿಸಿರುವುದಾಗಿ ಆಕೆಗೆ ಹೇಳಿದ್ದನು ಎನ್ನಲಾಗಿದೆ.
ಎಲ್ಲೆಂದರಲ್ಲಿ ಅಂಗಿ ಹಾಕದೆ ಹೋಗುವ ಬಕ್ಕಯ್ಯ ಈ ಹಿಂದೆ ವಾರ್ಡ್ ಸದಸ್ಯರಾಗಿ ಕೆಲಸ ಮಾಡಿದ್ದರು. ಮೈಮೇಲೆ ಅಂಗಿ ಹಾಕಿಕೊಂಡರೆ ಬೆವರು ಬರುತ್ತೆ. ಅದಕ್ಕೆ 50 ವರ್ಷಗಳಿಂದ ಅಂಗಿ ಹಾಕಿಲ್ಲ ಎಂದು ಸಭೆ, ಸಮಾರಂಭಗಳಿಗೆ ಅಂಗಿ ಹಾಕದೆ ಹೋಗುತ್ತಿದ್ದಾರೆ.
ಆದರೆ ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ ಎಂದರೂ ಅಂಗಿ ಹಾಕದಿರುವುದು ನಿಜಕ್ಕೂ ವಿಚಿತ್ರ ಎನ್ನುತ್ತಾರೆ ಇವರ ಕುಟುಂಬಸ್ಥರು ಹಾಗೂ ಸ್ಥಳೀಯರು.
LATEST NEWS
ಎನ್‌ಕೌಂಟರ್‌ನಲ್ಲಿ ಮೂವರು ಖಲಿಸ್ತಾನಿ ಭ*ಯೋತ್ಪಾದಕರ ಹ*ತ್ಯೆ
Published
13 hours agoon
23/12/2024By
NEWS DESK4ಮಂಗಳೂರು/ಲಖನೌ : ಪಂಜಾಬ್‌ನ ಗುರುದಾಸ್‌ಪುರದ ಪೊಲೀಸ್ ಔಟ್ ಪೋಸ್ಟ್ ಮೇಲೆ ದಾ*ಳಿ ನಡೆಸಿದ ಮೂವರು ಖಲಿಸ್ತಾನಿ ಭ*ಯೋತ್ಪಾದಕರನ್ನು ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರ ತಂಡ ಹ*ತ್ಯೆಗೈದಿದೆ. ಪಿಲಿಭಿತ್ ಜಿಲ್ಲೆಯಲ್ಲಿ ಈ ಎ*ನ್‌ಕೌಂಟರ್ ನಡೆದಿದೆ.
ಪುರನ್‌ಪುರ ಪ್ರದೇಶದ ಹರ್ದೋಯಿ ಶಾಖಾ ಕಾಲುವೆ ಬಳಿ ಬೆಳಗಿನ ಜಾವ ನಡೆದ ಈ ಎನ್‌ಕೌಂಟರ್‌ನಲ್ಲಿ ಪ್ರತಾಪ್ ಸಿಂಗ್, ವೀರೇಂದ್ರ ಸಿಂಗ್, ಗುರ್ವಿಂದರ್ ಸಿಂಗ್ ಎಂಬ ಮೂವರು ಉ*ಗ್ರರು ಹ*ತರಾಗಿದ್ದಾರೆ. ಅವರ ಬಳಿಯಿದ್ದ ಎರಡು ಎಕೆ-47 ರೈಫಲ್‌ಗಳು, ಎರಡು ಪಿಸ್ತೂಲ್‌ಗಳು ಮತ್ತು ಅಪಾರ ಪ್ರಮಾಣದ ಮದ್ದು ಗುಂ*ಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಖಲಿಸ್ತಾನ್ ಕಮಾಂಡೋ ಫೋರ್ಸ್‌ಗೆ ಸೇರಿದ ಮೂವರು ಭ*ಯೋತ್ಪಾದಕರು ಪುರನ್‌ಪುರ ಪ್ರದೇಶದಲ್ಲಿ ಅಡಗಿರುವ ಮಾಹಿತಿ ಸಿಕ್ಕ ಹಿನ್ನೆಲೆ ಉಭಯ ರಾಜ್ಯಗಳ ಪೊಲೀಸ್ ತಂಡವು ಅಡ್ಡಗಟ್ಟಿ ಎನ್‌ಕೌಂಟರ್ ನಡೆಸಿದ್ದು, ಭ*ಯೋತ್ಪಾರು ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃ*ತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : 18ರ ಯುವಕನ ಜೊತೆ 51ರ ಮಹಿಳೆಯ ಲವ್; 4 ಮಕ್ಕಳನ್ನು ತೊರೆದು ಆಂಟಿ ಪರಾರಿ
ಎ*ನ್‌ಕೌಂಟರ್‌ನಲ್ಲಿ ಉತ್ತರಪ್ರದೇಶದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಸ್ ಗಾ*ಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
LATEST NEWS
ಎಲಿಮಿನೇಷನ್ ಹೈಡ್ರಾಮಾ: ಬಿಗ್ ಬಾಸ್ನಿಂದ ಹೊರಬಂದ ತ್ರಿವಿಕ್ರಮ್!
ಕುಂದಾಪುರ: ಗಾಳಿ ತುಂಬಿಸುತ್ತಿದ್ದ ವೇಳೆ ಟೈರ್ ಸ್ಫೋಟ: ಯುವಕನಿಗೆ ಗಂಭೀರ ಗಾಯ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು
ಎನ್‌ಕೌಂಟರ್‌ನಲ್ಲಿ ಮೂವರು ಖಲಿಸ್ತಾನಿ ಭ*ಯೋತ್ಪಾದಕರ ಹ*ತ್ಯೆ
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಪ್ರಯಾಣಿಕರು ಅಪಾಯದಿಂದ ಪಾರು
ಖಾಸಗಿ ವಿಮಾನ ಪತನ; 10 ಜನ ಸಾವು, ಹಲವರಿಗೆ ಗಾಯ !
Trending
- LATEST NEWS5 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
- BIG BOSS4 days ago
ಚೈತ್ರಾ ಕುಂದಾಪುರಗೆ ಮತ್ತೆ ಜೈಲು.. ಮುಂದಿನ ವಾರಕ್ಕೆ ಕ್ಯಾಪ್ಟನ್ ಯಾರೆಂದು ರಿವೀಲ್..!
- DAKSHINA KANNADA6 days ago
ಸಾವಿರ ಕಂಬದ ಬಸದಿಗೆ ಜಪಾನ್ನಿಂದ ಬಂದ ಅತಿಥಿಗಳು
- BIG BOSS4 days ago
ಬಿಗ್ಬಾಸ್ನಲ್ಲಿ ಶಾಕಿಂಗ್ ಟ್ವಿಸ್ಟ್; ಮನೆಯಿಂದ ಆಚೆ ಹೋಗಲು ಸ್ಟ್ರಾಂಗ್ ಸ್ಪರ್ಧಿಗಳು ನಾಮಿನೇಟ್