Connect with us

    NATIONAL

    ಬೆಂಗಳೂರಿನಲ್ಲೂ ಫೆಂಗಲ್ ಎಪೆಕ್ಟ್; ಎಡೆಬಿಡದೇ ಸುರಿಯುತ್ತಿರುವ ಮಳೆ

    Published

    on

    ಮಂಗಳೂರು/ಬೆಂಗಳೂರು : ಫೆಂಗಲ್ ಚಂಡಮಾರುತ ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ. ನೆರೆಯ ರಾಜ್ಯಕ್ಕೆ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಬೆಂಗಳೂರಿಗೂ ತಟ್ಟಿದೆ. ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಭಾನುವಾರ (ಡಿ.1) ಇಡೀ ದಿನ ಮಳೆ ಸುರಿದಿದ್ದು, ಮಧ್ಯಾಹ್ನದ ನಂತರವಂತೂ ಬಿಡುವುಕೊಡದೇ ಮಳೆ ಸುರಿದಿದೆ. ಸೋಮವಾರ (ಡಿ.2) ಮುಂಜಾನೆಯೂ ಮಳೆಯಾಗುತ್ತಿದೆ.

    ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ :

    ಫೆಂಗಲ್ ಸೈಕ್ಲೋನ್​ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಗುತ್ತಿದೆ. ಶೀತಗಾಳಿ ಬೀಸುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೋಲಾರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಹಾಗೇ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಶಾಲೆ, ಕಾಲೇಜುಗಳಿಗೆ ಇಂದು ರಜೆ ಪ್ರಕಟಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳು ರಜೆ ಘೋಷಣೆ ಮಾಡಿಲ್ಲ. ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಪೋಷಕರು ಎಚ್ಚರಿಕೆಯಿಂದ ಮಕ್ಕಳನ್ನ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ.

    ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಡಲಬ್ಬರ :

    ಸೈಕ್ಲೋನ್​​ನಿಂದಾಗಿ ಮಂಗಳೂರು ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಪಣಂಬೂರು, ಉಳ್ಳಾಲ, ಸೋಮೇಶ್ವರ ಬೀಚ್​ಗಳಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿವೆ. ಉಡುಪಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಡಲಲ್ಲಿ ಬೃಹತ್ ಅಲೆಗಳು ಏಳುತ್ತಿದ್ದರೂ ಮಲ್ಪೆ ಬೀಚ್​​ನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಕಾಣಿಸಿದೆ. ಚಿಕ್ಕಮಗಳೂರಿನಲ್ಲಿ ಥಂಡಿ ಚಳಿಗೆ ಮಲೆನಾಡಿಗರು ಹೈರಾಣಾಗಿದ್ದಾರೆ. ಮತ್ತೊಂದೆಡೆ ಬಿಸಿಲನಾಡು ವಿಜಯಪುರದಲ್ಲೂ ಶೀತಗಾಳಿ ಬೀಸುತ್ತಿದೆ. ದ್ರಾಕ್ಷಿ ಬೆಳೆಗೆ ಕಂಟಕವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

    ಚೆನ್ನೈನಲ್ಲಿ ನೆರೆ ಪರಿಸ್ಥಿತಿ :

    ಶ್ರೀಲಂಕಾದಲ್ಲಿ ಭೀತಿ ಸೃಷ್ಟಿಸಿದ್ದ ಫೆಂಗಲ್ ಚಂಡಮಾರುತ ತಮಿಳುನಾಡನ್ನು ಬೆಚ್ಚಿಬೀಳಿಸಿದೆ. ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ಕರಾವಳಿಗೆ ಸೈಕ್ಲೋನ್ ಅಪ್ಪಳಿಸಿದೆ. ಚಂಡಮಾರುತ ಬಂದಪ್ಪಳಿಸಿದ್ದಕ್ಕೆ ಭಾರೀ ಮಳೆಯಾಗಿದ್ದು, ಮಹಾನಗರ ಚೆನ್ನೈಯಲ್ಲಿ ನೆರೆ ಸೃಷ್ಟಿಯಾಗಿದೆ.

    ಪುದುಚೇರಿ ಬಹುತೇಕ ಜಲಾವೃತ: ಶಾಲಾ-ಕಾಲೇಜುಗಳಿಗೆ ರಜೆ :

    ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಂಧ್ರದಲ್ಲೂ ಚಂಡಮಾರುತವೂ ಮಳೆ ಸುರಿಸಿದೆ. ತಿರುಮಲದಲ್ಲಿ ದಟ್ಟ ಮಂಜು ಆವರಿಸಿತ್ತು. ರಾಯಲಸೀಮಾ, ಕಡಪ, ನೆಲ್ಲೂರು, ಚಿತ್ತೂರು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಫೆಂಗಲ್ ಸೈಕ್ಲೋನ್ ಎಫೆಕ್ಟ್ ಕೇರಳಕ್ಕೂ ತಟ್ಟಿದೆ. ಇವತ್ತು ವಯನಾಡು, ಮಲಪ್ಪುರಂ, ಕೋಯಿಕ್ಕೋಡ್ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಿಸಲಾಗಿದೆ

    Click to comment

    Leave a Reply

    Your email address will not be published. Required fields are marked *

    LATEST NEWS

    ಕನ್ನಡಿಗ ಅಧಿಕಾರಿಯೇ ಮಹಾಕುಂಭ ಮೇಳದ ಸಾರಥಿ !

    Published

    on

    ಮಂಗಳೂರು/ಪ್ರಯಾಗ್ ರಾಜ್ : ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ಆರಂಭಗೊಂಡಿದ್ದು, ಭಕ್ತ ಸಾಗರವೇ ಹರಿದು ಬರುತ್ತಿದೆ.

    ಈ ಬಾರಿಯ ಪ್ರಯಾಗರಾಜ್ ಮಹಾಕುಂಭ ಮೇಳ ಕನ್ನಡಿಗನ ಸಾರಥ್ಯದಲ್ಲಿ ನಡೆಯುತ್ತಿದೆ. ಮಹಾಕುಂಭ ಮೇಳದ ಮೇಲಾಧಿಕಾರಿಯಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕನ್ನಡಿಗ ಐಎಎಸ್ ಅಧಿಕಾರಿಯನ್ನೇ ನೇಮಕ ಮಾಡಿದ್ದಾರೆ. ಬೆಂಗಳೂರು ಮೂಲದ ವಿಜಯ್ ಕಿರಣ್ ಆನಂದ್ ಅವರು ಮಹಾಕುಂಭಮೇಳದ ಸಾರಥ್ಯವಹಿಸಿದ್ದಾರೆ.

    ಇದನ್ನೂ ಓದಿ: ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು ?

    ವಿಜಯ್ ಕಿರಣ್ ಆನಂದ್ ಈ ಹಿಂದೆ ಗೋರಖ್ ಪುರ ಜಿಲ್ಲಾಧಿಕಾರಿಯಾಗಿದ್ದರು. ಈ ವೇಳೆ ವಿಜಯ್ ಕಿರಣ್ ದಕ್ಷತೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ತಿರದಿಂದ ನೋಡಿದ್ದರು. ಹೀಗಾಗಿ ಈಗ ಪ್ರಯಾಗರಾಜ್ ಜಿಲ್ಲಾಧಿಕಾರಿಯಾಗಿ ಅವರನ್ನೇ ನೇಮಿಸಿ ಮಹಾಕುಂಭ ಮೇಳದ ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ. ವಿಜಯ್ ಕಿರಣ್ ಆನಂದ್ ಅವರನ್ನು ಮಹಾಕುಂಭಮೇಳದ ಮೇಲಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.

    ಈ ಹಿಂದೆ 2021ರ ಹರಿದ್ವಾರದ ಕುಂಭ ಮೇಳಕ್ಕೆ ಮೇಲಾಧಿಕಾರಿಯಾಗಿ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಅವರನ್ನು ನೇಮಿಸಲಾಗಿತ್ತು. ಇದೀಗ ಮತ್ತೊಬ್ಬ ಕನ್ನಡಿಗರ ನೇತೃತ್ವದಲ್ಲಿ ಪ್ರಯಾಗರಾಜ್ ನ ಮಹಾ ಕುಂಭಮೇಳ ನಡೆಯುತ್ತಿದೆ.

     

    Continue Reading

    LATEST NEWS

    ಯಾರದ್ದೋ ಕೊ*ಲೆಗೆ ಸಂಚು; ಬ*ಲಿಯಾದವರು ಮತ್ಯಾರೋ!!

    Published

    on

    ಮಂಗಳೂರು/ಲಕ್ನೋ : ಪ್ರೇಯಸಿಯ ಪತಿ ಹಾಗೂ ತಂದೆಯನ್ನು ಕೊ*ಲ್ಲಲು ವ್ಯಕ್ತಿಯೊಬ್ಬ ಸು*ಪಾರಿಕೊಟ್ಟಿದ್ದು, ಲವ್ವರ್‌ನ ಪತಿ ಬದಲು ಅಮಾಯಕ ಟ್ಯಾಕ್ಸಿ ಚಾಲಕನೊಬ್ಬನನ್ನು ರೌಡಿಗಳ ಗುಂಪು ಕೊ*ಲೆಗೈದ ಘಟನೆ ಲಕ್ನೋದಲ್ಲಿ ನಡೆದಿದೆ.

    ಅನುಮಾನ ಶಂಕಿತರಾದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆ ಆರೋಪಿಗಳ ವಿಚಾರಣೆ ನಡೆಸಿದ ವೇಳೆ ಕೊ*ಲೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಡಿಸೆಂಬರ್ 30 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಮೊಹಮ್ಮದ್ ರಿಜ್ವಾನ್ ಮೃ*ತದೇಹ ಪತ್ತೆಯಾಗಿತ್ತು. ಆರಂಭಿಕ ತನಿಖೆಯಲ್ಲಿ ಏನಾಯಿತು ಎಂದು ಅರ್ಥವಾಗದೇ ಪೊಲೀಸರು ತನಿಖೆಗೆ ಮುಂದಾಗಿರುವಾಗಲೇ ಮೂವರನ್ನು ಬಂಧಿಸಿದ್ದರು.

    ಅಫ್ತಾಬ್ ಅಹ್ಮದ್, ಯಾಸಿರ್ ಹಾಗೂ ಕೃಷ್ಣಕಾಂತ್ ಬಂಧಿತರು. ಅಫ್ತಾಬ್ ಕೊ*ಲೆಯ ಮಾಸ್ಟರ್​ಮೈಂಡ್ ಎಂದು ಪೊಲೀಸರು ಹೇಳಿದ್ದಾರೆ. ಆತ ಯಾಸಿರ್​ಗೆ ಅಫ್ತಾಬ್​ ಗೆಳತಿಯ ತಂದೆ ಹಾಗೂ ಗಂಡನನ್ನು ಕೊಲ್ಲುವಂತೆ ಹೇಳಿದ್ದ, ಯಾಸಿರ್ ಸಹಾಯಕ್ಕಾಗಿ ಕೃಷ್ಣಕಾಂತ್​ಗೂ ಕರೆ ಮಾಡಿದ್ದ. ಡಿಸೆಂಬರ್ 30ರಂದು ಕೊ*ಲೆ ಮಾಡಲು ಹೋಗಿದ್ದರು, ಆದರೆ ಅವರ ಬದಲಿಗೆ ಮೊಹಮ್ಮದ್ ರಿಜ್ವಾನ್​​ನನ್ನು ಕೊ*ಲೆ ಮಾಡಿ ಪರಾರಿಯಾಗಿದ್ದರು.

    ದೇಶಿ ಬಂದೂಕು, 14 ಬುಲೆಟ್​ಗಳು, ಮೂರು ಮೊಬೈಲ್ ಫೋನ್​ಗಳು ಹಾಗೂ ಹ*ತ್ಯೆಗೆ ಬಳಸಿದ್ದ ಬೈಕ್​ನನ್ನ ವಶಪಡಿಸಿಕೊಳ್ಳಲಾಗಿದೆ. ಯಾವುದೇ ಸಾಕ್ಷ್ಯಾಧಾರಗಳನ್ನು ಬಿಡದ ರೀತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    2,700 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಝಡ್ – ಮೋರ್ಹ್ ಸುರಂಗ ಉದ್ಘಾಟಿಸಿದ ಪ್ರಧಾನಿ ಮೋದಿ

    Published

    on

    ಮಂಗಳೂರು/ಶ್ರೀನಗರ : 2,700 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಝಡ್ – ಮೋರ್ಹ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿ, ಬಳಿಕ ಹೆಲಿಕಾಪ್ಟರ್ ಮೂಲಕ ತೆರಳಿ ಸುರಂಗ ಉದ್ಘಾಟಿಸಿದರು.


    ಈ ಸಂದರ್ಭ ಕೇಂದ್ರ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮೊದಲಾದವರು ಉಪಸ್ಥಿತರಿದ್ದರು.

    ಉದ್ಘಾಟನೆ ಬಳಿಕ ಸುರಂಗದ ಒಳಗೆ ತೆರಳಿದ ಮೋದಿ, ಅಧಿಕಾರಿಗಳ ಜೊತೆ ಸುರಂಗ ನಿರ್ಮಿಸಿದ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು. ಸಮುದ್ರಮಟ್ಟದಿಂದ 8,650 ಅಡಿ ಎತ್ತರದಲ್ಲಿರುವ ಈ ಸುರಂಗ ಮಧ್ಯ ಕಾಶ್ಮೀರದ ಗಂದರ್ ಬಾಲ್ ಜಿಲ್ಲೆಯ ಗಗಾಂಗೀರ್ ಮತ್ತು ಸೋನಾಮಾರ್ಗ್ ನಡುವೆ ಲೇಹ್‌ಗೆ ಹೋಗುವ ಮಾರ್ಗದಲ್ಲಿ ಎಲ್ಲ ಋತುಮಾನದಲ್ಲೂ ಸಂಪರ್ಕ ಕಲ್ಪಿಸುತ್ತದೆ. ಗಗಾಂಗೀರ್ ಮತ್ತು ಸೋನಾಮಾರ್ಗ್ ನಡುವಿನ 6.5 ಕಿಮೀ ಉದ್ದದ ಎರಡು ಪಥದ ರಸ್ತೆ ಸುರಂಗದಲ್ಲಿ ತುರ್ತು ಪರಿಸ್ಥಿತಿಗಳಿಗಾಗಿ ಸಮಾನಾಂತರ 7.5 ಮೀಟರ್ ಎಸ್ಕೇಪ್ ಮಾರ್ಗವನ್ನು  ನಿರ್ಮಿಸಲಾಗಿದೆ.

    ಇದನ್ನೂ ಓದಿ : ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು ?

    ಇದು ಸೋನಾಮಾರ್ಗ್ ಪ್ರದೇಶವನ್ನು ಚಳಿಗಾಲದ ಕ್ರೀಡಾ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಸಹಕಾರಿಯಾಗಿದೆ. ಸೋನಾಮಾರ್ಗ್ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಅತ್ಯಾಧುನಿಕ ಐಸ್-ಸ್ಕೇಟಿಂಗ್ ರಿಂಕ್ ಚಳಿಗಾಲದ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಹೊಸ ಭರವಸೆಯನ್ನು ಹುಟ್ಟು ಹಾಕಿದೆ.

     

    Continue Reading

    LATEST NEWS

    Trending