Connect with us

    LATEST NEWS

    ಗುಡ್ಡ ಜರಿಯುವ ಭೀತಿ: ಮೂರು ಕುಟುಂಬ ಸ್ಥಳಾಂತರ

    Published

    on

    ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಉಳ್ಳಾಲ ನಗರ ಸಭೆ ವ್ಯಾಪ್ತಿಯ ಹಳೆ ಕೋಟೆ ಎಂಬಲ್ಲಿ ಮನೆಯ ಅವರಣ ಗೋಡೆ ಮೇಲೆ ಮಣ್ಣು ಕುಸಿದು ಬಿದ್ದಿದೆ. ಇದರಿಂದ ಎರಡು ಮನೆಗಳು ಅಪಾಯದಲ್ಲಿದ್ದು, ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಅವರು ಸಂಬಂಧಿಕರ ಮನೆಗೆ ತೆರಳಿದ್ದಾರೆ.

    ಸ್ಥಳಕ್ಕೆ ಉಳ್ಳಾಲ ಪುರಸಭೆ ಅಧಿಕಾರಿಗಳು ಭೇಟಿ ನೀಡಿದ್ದು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಲಾಗಿದೆ. ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೌರಾಯುಕ್ತ ಮತಡಿ ತಿಳಿಸಿದ್ದಾರೆ.

    LATEST NEWS

    ಮೂಡುಬಿದಿರೆ : ಅಪರಿಚಿತ ವ್ಯಕ್ತಿಯ ಸಾ*ವು; ಗುರುತು ಪತ್ತೆಗೆ ಕೋರಿಕೆ

    Published

    on

    ಮೂಡುಬಿದಿರೆ: ತೋಡರ್ ಜಂಕ್ಷನ್ ಬಳಿ ಸುಮಾರು 45 ರಿಂದ 50 ವರ್ಷದ ಒಳಗಿನ ಅಪರಿಚಿತ ವ್ಯಕ್ತಿಯು ಮೃ*ತಪಟ್ಟಿರುವ ಘಟನೆ ನಡೆದಿದೆ.

    ಈ ವ್ಯಕ್ತಿ ಯಾರು ಏನು ಎಂಬುದು ಇನ್ನು ತಿಳಿದಿಲ್ಲ. ಅಲ್ಲದೇ ಇದು ಆತ್ಮ*ಹ*ತ್ಯೆಯೋ ಅಥವಾ ಕೊ*ಲೆಯೋ ಎಂದು ತಿಳಿದುಬರಬೇಕಾಗಿದೆ. ಈ ವ್ಯಕ್ತಿಯ ಗುರುತು ಗೊತ್ತಿದ್ದಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.

    Continue Reading

    DAKSHINA KANNADA

    ಮಂಗಳೂರಿನ ಪಡೀಲ್ ಬಳಿ ಆಂಬ್ಯುಲೆನ್ಸ್ ಪಲ್ಟಿ; ಹೃದ್ರೋಗಿ ದಾಸಪ್ಪ ರೈ ಮೃ*ತ್ಯು

    Published

    on

    ಪುತ್ತೂರು: ಪುತ್ತೂರಿನ ಆ್ಯಂಬುಲೆನ್ಸ್ ನಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಮಂಗಳೂರಿನಲ್ಲಿ ಪಲ್ಟಿಯಾಗಿ ಹೃದ್ರೋಗಿ ಕೃಷಿ ದಾಸಪ್ಪ ರೈ ಎಂಬವರು ಸಾವನ್ನಪ್ಪಿದ್ದಾರೆ. ಇಂದು(ಸೆ.25) ಬೆಳಿಗ್ಗೆ ನಸುಕಿನ ಜಾವ ಈ ಘಟನೆ ನಡೆದಿದೆ.

    ಗುಜರಾತ್: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿ, 7 ಮಂದಿ ಸಾ*ವು

    ರಾಮಕುಂಜ ಹಳೆನೇರೆಂಕಿ ನಿವಾಸಿ ಕೃಷಿಕ ದಾಸಪ್ಪ ರೈ  ಎಂಬವರು ಸಾವನ್ನಪ್ಪಿದವರು. ಎದೆ ನೋವು ಕಾಣಿಸಿಕೊಂಡ ದಾಸಪ್ಪ ರೈ ಅವರನ್ನು ತಡರಾತ್ರಿ ಪುತ್ತೂರು ಮಹಾವೀರ ಅಸ್ಪತ್ರೆಗೆ ಕರೆದು ಕೊಂಡು ಬಂದಾಗ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ವಠಾರದಲ್ಲಿದ್ದ ಇನ್ನೊಂದು ಆ್ಯಂಬುಲೆನ್ಸ್ ನಲ್ಲಿ – ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದು ಹೋಗುತ್ತಿರುವಾಗ ಮಂಗಳೂರು ಪಡೀಲು ಸಮೀಪ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ನಲ್ಲಿದ್ದ ಹೃದ್ರೋಗಿ ದಾಸಪ್ಪ ರೈ ಮೃತಪಟ್ಟಿದ್ದರು. ಜೊತೆಯಲ್ಲಿದ್ದ  ನಳಿನಿ ಎಂಬವರು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಸಪ್ಪ ಅವರ ಪುತ್ರ ಹರ್ಷಿತ್ ಮತ್ತು ಸಂಬಂಧಿ ಅಲ್ಪಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ.

    Continue Reading

    LATEST NEWS

    ಅಮೇರಿಕಾ ಪ್ರವಾಸದಿಂದ ತಾಯ್ನಾಡಿಗೆ ಮರಳಿದ ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ತಂಡ

    Published

    on

    “ಅಮೇರಿಕಾದಲ್ಲಿ ಯಕ್ಷಗಾನ ಕಲೆಗೆ ಸಿಕ್ಕ ಗೌರವ ಅವಿಸ್ಮರಣೀಯ” -ಪಟ್ಲ ಸತೀಶ್ ಶೆಟ್ಟಿ

    ಮಂಗಳೂರು: ಅಮೇರಿಕ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜೊತೆ ಮಂಗಳವಾರ ರಾತ್ರಿ ತಾಯ್ನಾಡಿಗೆ ಮರಳಿದ್ದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತ ಕೋರಿದರು.

    ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೇರಿಕ ದೇಶದ ಬೇರೆ ಬೇರೆ ತಾಣಗಳಲ್ಲಿ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದೆ. ಈ ವೇಳೆ ತಮ್ಮ ಅಮೇರಿಕ ಪ್ರವಾಸದ ಕಥನವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡ ಅವರು, “ವಿದೇಶಗಳಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ” ಎಂದರು.

    “ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ಅಮೇರಿಕಾ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದರು ಅವರಿಗೆ ಧನ್ಯವಾದಗಳು” ಎಂದರು.

    ಪ್ರೊ.ಎಂ.ಎಲ್. ಸಾಮಗ ಮಾತನಾಡಿ, “ಅಮೇರಿಕಾದ ಜನರು ನಮ್ಮ ಯಕ್ಷಗಾನ ತಂಡದ ಮೇಲೆ ತೋರಿಸಿದ ಪ್ರೀತಿ ಮರೆಯಲಾಗದ್ದು. ಪ್ರತೀ ಪ್ರದರ್ಶನಕ್ಕೂ 500 ಜನರಿಗಿಂತ ಕಡಿಮೆ ಜನರು ಸೇರುತ್ತಿರಲಿಲ್ಲ. ನಮ್ಮ ತಂಡದಲ್ಲಿ ಕಲಾವಿದರು ಮಿತಿಯಲ್ಲಿ ಇದ್ದುದರಿಂದ ಅದಕ್ಕೆ ಸೂಕ್ತ ಎನಿಸುವ ಪ್ರಸಂಗ ಆಡಿ ತೋರಿಸಬೇಕಿತ್ತು. ಕೆಲವರು ತಾವು ವೇಷ ಹಾಕುತ್ತೇವೆ ಎಂದು ಮುಂದೆ ಬಂದರು ಮತ್ತೂ ಕೆಲವರು ಭಾಗವತಿಕೆ ಕಲಿಯಲು ಮುಂದೆ ಬಂದರು. ಆನ್ ಲೈನ್ ಕ್ಲಾಸ್ ಬಗ್ಗೆಯೂ ವಿಚಾರಿಸಿದ್ದಾರೆ. ಮುಂದೆ ಆ ಬಗ್ಗೆ ಯೋಚನೆ ಮಾಡುತ್ತೇವೆ“ ಎಂದರು.

    ಪಟ್ಲ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.

    ಅಮೇರಿಕಾ ನಗರಗಳಲ್ಲಿ “ಪಟ್ಲ ಫೌಂಡೇಶನ್ ಡೇ”!

    ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಷನ್ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್‌ಫೀಲ್ಡ್ ನಗರದ ಮೇಯರ್ ಸ್ಟೀವನ್ ವಿ. ಪೋಂಟೊ ಅವರು ಆಗಸ್ಟ್ 18 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ. ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಅವರು ಜುಲೈ 27 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.

    Continue Reading

    LATEST NEWS

    Trending