Connect with us

    LATEST NEWS

    ಮಗನಿಗೆ ಐ ಫೋನ್‌ 16 ಪ್ರೋ ಮ್ಯಾಕ್ಸ್‌ ಗಿಫ್ಟ್‌ ಕೊಟ್ಟ ತಂದೆ..! ಆ ತಂದೆ ಯಾರು..?

    Published

    on

    ವಾರಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಬಂದ ಐ ಫೋನ್‌ 16 ಪ್ರೋ ಮ್ಯಾಕ್ಸ್‌ ಖರೀದಿಗೆ ಜನ ಇನ್ನಿಲ್ಲದ ಆಸಕ್ತಿ ತೋರಿಸಿದ್ದಾರೆ. ಕೆಲವೊಂದು ಕಡೆಗಳಲ್ಲಿ 21 ಗಂಟೆಗಳ ಕಾಲ ಕ್ಯೂ ನಿಂತು ಜನ ಐ ಫೋನ್ 16 ಪ್ರೋ ಮ್ಯಾಕ್ಸ್ ಖರೀದಿ ಮಾಡಿದ ಸುದ್ದಿ ಕೂಡಾ ವರದಿಯಾಗಿತ್ತು. ಐ ಫೋನ್‌ ಕೈಲಿದ್ರೆ ಅದೇ ಒಂದು ದೊಡ್ಡ ಭಾಗ್ಯ ಅಂತ ಸಾಕಷ್ಟು ಜನ ಹೇಗಾದ್ರೂ ಮಾಡಿ ಐ ಫೋನ್ ಖರೀದಿ ಮಾಡ್ತಾರೆ. ಹಾಗಂತ ಈ ಫೋನ್‌ ಬಡವರು ಖರೀದಿ ಮಾಡೋದು ಕನಸಿನ ಮಾತು ಅನ್ನೋ ಅಷ್ಟು ದುಬಾರಿಯಾಗಿದೆ.

    ಆದ್ರೆ ಹೊಸದಾಗಿ ಲಾಂಚ್ ಆಗಿರೋ ಐ ಫೋನ್ 16 ಪ್ರೋ ಮ್ಯಾಕ್ಸ್ ಕುರಿತಾದ ಅಚ್ಚರಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಡ ತಂದೆಯೊಬ್ಬ ತನ್ನ ಮಗನಿಗಾಗಿ ಐ ಫೋನ್ 16 ಪ್ರೋ ಮ್ಯಾಕ್ಸ್ ಖರೀದಿಸಿ ಗಿಫ್ಟ್‌ ನೀಡಿದ್ದಾನೆ. ಈ ವೈರಲ್‌ ವಿಡಿಯೋ ಸಾಕಷ್ಟು ಜನ ಹಂಚಿಕೊಂಡಿದ್ದು, ತಂದೆಗೆ ಮೆಚ್ಚುಗೆ ಸಲಾಂ ನೀಡಿದ್ದಾರೆ.

    ರಸ್ತೆ ಬದಿಯಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಹಣ ಒಟ್ಟು ಮಾಡಿ 1.5 ಲಕ್ಷದ ಈ ಫೋನ್ ಖರೀದಿಸಿದ್ದಾನೆ. ಹರಿದ ವಸ್ತ್ರ ಧರಿಸಿದ್ದ ವ್ಯಕ್ತಿಯ ಕೈನಲ್ಲಿ ಐ ಫೋನ್ ನೋಡಿದ ಯಾರೋ ಒಬ್ಬರು ಆತನ ಪೂರ್ವಾ ಪರ ವಿಚಾರಿಸಿ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಫೋನ್ ಖರೀದಿಸಿದ ವ್ಯಕ್ತಿ ತಾನು ಚಿಂದಿ ಆಯುವ ಕೆಲಸ ಮಾಡುತ್ತಿರುವುದಾಗಿಯೂ, ತನ್ನ ಮಗನಿಗೆ ಈ ಫೋನ್ ಗಿಪ್ಟ್‌ ನೀಡುತ್ತಿರುವುದಾಗಿಯೂ ಹೇಳಿದ್ದಾರೆ. ಮಗ ಬೋರ್ಡ್‌ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಪಾಸ್ ಆಗಿದ್ದು, ಆತನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಈ ಐಫೋನ್ 16 ಪ್ರೋ ಮ್ಯಾಕ್ಸ್‌ ಗಿಫ್ಟ್‌ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಚಿಂದಿ ಆಯ್ದುಕೊಂಡು ಮಗನನ್ನು ಚೆನ್ನಾಗಿ ಓದಿಸ್ತಾ ಇರುವ ಈ ತಂದೆಯ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲೂ ಮಗನ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ತಂದೆ ನಿಜಕ್ಕೂ ಗ್ರೇಟ್ ಎಂದ ಕೆಲವರು ಕಮೆಂಟ್ ಮಾಡಿದ್ದಾರೆ.

    LATEST NEWS

    ದೇವರನ್ನು ರಾಜಕೀಯದಿಂದ ದೂರವಿಡಿ ; ಸುಪ್ರೀಂ ಕೋರ್ಟ್ ಸೂಚನೆ..!

    Published

    on

    ನವ ದೆಹಲಿ : ತಿರುಪತಿ ಲಡ್ಡು ವಿವಾದದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ. ದೇವರನ್ನು ರಾಜಕೀಯದಿಂದ ಹೊರಗೆ ಇಡಿ ಎಂದು ಕೋರ್ಟ್‌ ಹೇಳಿದೆ. ಕನಿಷ್ಟ ಪಕ್ಷ ದೇವರುಗಳನ್ನು ರಾಜಕೀಯದಿಂದ ದೂರ ಇಡಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಅವರ ಹೇಳಿಕೆಯನ್ನೇ ಪ್ರಶ್ನೆ ಮಾಡಿದೆ. ಸಿಎಂ ಮಾಡಿರುವ ಆರೋಪಕ್ಕೆ ಸಾಕ್ಷಿ ಒದಗಿಸುವಂತೆ ಕೋರ್ಟ್‌ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ ವಿಶ್ವನಾಥನ್‌ ಅವರ ಪೀಠವು ಸಿಎಂ ಚಂದ್ರಬಾಬು ನಾಯ್ಡು ಅವರು ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ.

    ಸಾಂವಿಧಾನಕವಾಗಿ ಉನ್ನತ ಹುದ್ದೆಯಲ್ಲಿ ಇರುವ ವ್ಯಕ್ತಿಯಾಗಿ ಈ ರೀತಿ ಕೋಟ್ಯಾಂತರ ಜನರ ಭಾವನೆ ಮೇಲೆ ಪರಿಣಾಮ ಬೀರುವ ಹೇಳಿಕೆ ನೀಡಬಾರದು ಎಂದು ಪೀಠ ಹೇಳಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ವಿಚಾರವಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಕೋರಿ ಸಲ್ಲಿಸಿದ ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ದೇವರನ್ನು ರಾಜಕೀಯದಿಂದ ದೂರ ಇಡಬೇಕು ಎಂದು ನಿರೀಕ್ಷಿಸುವುದಾಗಿ ಪೀಠ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಚಾಟಿ ಬೀಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3 ಕ್ಕೆ ಮುಂದೂಡಲಾಗಿದೆ.

    Continue Reading

    LATEST NEWS

    ಬಾವಿಯ ಕಾಂಪೌಂಡ್‌ ಸ್ವಚ್ಛಗೊಳಿಸುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾ*ವು

    Published

    on

    ಮಂಗಳೂರು: ಬಾವಿಯ ಕಾಂಪೌಂಡ್‌ ಸ್ವಚ್ಛಗೊಳಿಸುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾ*ವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರುನಲ್ಲಿ ಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನೆತ್ತಿಲ ಎಂಬಲ್ಲಿ ನಡೆದಿದೆ.

    ನವೀನ್ ಬೆಳ್ಳಾಡ(48) ಮೃತ ವ್ಯಕ್ತಿ. ನವೀನ್ ಅವರು ಭಾನುವಾರ ಸಂಜೆ ಮನೆಯ ಹಿಂಭಾಗದ ಬಾವಿಯ ಕಾಂಪೌಂಡ್ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಆಯ ತಪ್ಪಿ ಬಾವಿಗೆ ಬಿದ್ದು ಮೃ*ತಪಟ್ಟಿದ್ದಾರೆ. ಮನೆಯೊಳಗೆ ನವೀನ್ ಕಾಣದಾಗ ಪತ್ನಿ ಮತ್ತು ಮಕ್ಕಳು ಹುಡುಕಾಡಿ ಬಾವಿಯ ಬಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಸ್ಥಳೀಯರು ಸೇರಿ ನವೀನ್ ರನ್ನು ಬಾವಿಯಿಂದ ಮೇಲಕ್ಕೆತ್ತಿದ್ದು ಅದಾಗಲೇ ಅವರು ಮೃ*ತಪಟ್ಟಿದ್ದರು ಎನ್ನಲಾಗಿದೆ. ಸೆಂಟ್ರಿಗ್ ಕೆಲಸ ಮಾಡುತ್ತಿದ್ದ ನವೀನ್ ಅವರಿಗೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಮತ್ತು ನಾಲ್ಕನೇ ತರಗತಿ ಓದುತ್ತಿರುವ ಪುತ್ರನಿದ್ದಾನೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    Continue Reading

    DAKSHINA KANNADA

    ಕಾರ್ಕಳದಲ್ಲಿ ಭೀಕರ ಅಪಘಾತ; ತಂದೆ ಸಹಿತ ಮೂರು ಮಕ್ಕಳ ದುರ್ಮರಣ

    Published

    on

    ಕಾರ್ಕಳ : ಕಾರ್ಕಳ – ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಇಂದು (ಸೆ.30) ಭೀಕರ ಅಪಘಾತ ಸಂಭವಿಸಿದೆ. ಮಿನಿ ಲಾರಿ ಮತ್ತು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.


    ವೇಣೂರಿನಿಂದ ನಲ್ಲೂರು ಕಡೆಗೆ ಬರುತ್ತಿದ್ದ ಬೈಕ್‌ಗೆ ಕಾರ್ಕಳದಿಂದ ಗುರುವಾಯನಕೆರೆಯತ್ತ ಸಾಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.
    ಬೈಕ್ನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳಿದ್ದರು. ತಂದೆ ಸುರೇಶ್ ಆಚಾರ್ಯ (36), ಮಕ್ಕಳಾದ ಸಮಿಕ್ಷಾ (7) ಸುಶ್ಮಿತಾ (5) ಸುಶಾಂತ್ (2) ಮೃತಪಟ್ಟವರು. ತಾಯಿ ಮೀನಾಕ್ಷಿ (32) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending