Connect with us

    DAKSHINA KANNADA

    ” ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !! ” ವೈರಲ್ ಆಯಿತು ಸತ್ಯದ ಕವಿತೆ..!

    Published

    on

    ಬರಹ ಯಾರದೋ, ಕನ್ನಡದ ಗತಿ ಹೀಗಾದರೆ, ಇತರ ಪ್ರಾದೇಶಿಕ ಭಾಷೆಗಳ, ತುಳುವಿನ ಹಾಗೂ ತುಳುವನ, ಅಸ್ತಿತ್ವವೇನು?

    ಕಾಸರಗೋಡು ಕೇರಳಕ್ಕೆ ಸೇರಿಹೋಯ್ತು !
    ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು‌ !
    ಕೋಲಾರ, ಬಳ್ಳಾರಿ, ರಾಯಚೂರು ಆಂಧ್ರಕ್ಕೆ !

    ಅಲ್ಲಿಗೆ….
    ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

    ಉದಯ ಟಿವಿ ಮದ್ರಾಸ್‌ನವರದ್ದು !
    ಸುವರ್ಣ ಟಿವಿ ಕೇರಳರವರದ್ದು,
    ಕಲರ್ಸ್ ಟಿವಿ ಬಾಂಬೆ !
    ಈಟಿವಿ ಆಂಧ್ರದವರದ್ದು !
    ಜೀಟಿವಿ ಉತ್ತರ ಭಾರತರವರದ್ದು !
    ತಲಕಾವೇರಿಯಲಿ ಹುಟ್ಟುವ ಕಾವೇರಿ ತಮಿಳುನಾಡಿಗೆ !

    ಅಲ್ಲಿಗೆ….
    ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

    ಐಎಎಸ್‌ ಆಫೀಸರ್‌ಗಳೆಲ್ಲಾ ಉತ್ತರಭಾರತದವರು !
    ಐಪಿಎಸ್‌ ಆಫೀಸರ್‌ಗಳೆಲ್ಲ ಪರರಾಜ್ಯದವರು !
    ಬ್ಯಾಂಕ್ ಅಧಿಕಾರ ಗಳೆಲ್ಲಾ ಪರಭಾಷೆಯವರು !
    ಡ್ರೆೃವರ್‌ಗಳು, ಅಟೆಂಡರ್‌ಗಳು, ಸ್ವೀಪರ್‌ಗಳೆಲ್ಲ ಕನ್ನಡದವರು !

    ಅಲ್ಲಿಗೆ….
    ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

    ಚಿನ್ನದಂಗಡಿ, ಬಟ್ಟೆಯಂಗಡಿ, ಎಲ್ಲಾ ದೊಡ್ಡ ಅಂಗಡಿ ಮುಂಗಟ್ಟುಗಳು ಪರರಾಜ್ಯದವರವು !
    ಅಲ್ಲಿ ಚೌಕಾಸಿ ಮಾಡುತ್ತಾ, ಕೊಂಡುಕೊಳ್ಳಲು ಸಾಲುಗಟ್ಟುವ ಗ್ರಾಹಕರು ಕನ್ನಡದವರು !

    ಅಲ್ಲಿಗೆ…
    ಉದಯವಾಯಿತು ನಮ್ಮ ಚಲುವ ಕನ್ನಡ ನಾಡು !!

    ಸದಾಶಿವನಗರ ಸಿಂಧಿಗಳದ್ದು !
    ಬಳೇಪೇಟೆ, ಚಿಕ್ಕಪೇಟೆ ಮಾರ್ವಾಡಿಗಳದ್ದು !

    ಮಾವಳ್ಳಿ, ಗುಟ್ಟಹಳ್ಳಿ, ಸುಂಕನಹಳ್ಳಿಗಳೆಲ್ಲಾ ಕನ್ನಡಿಗರದ್ದು !

    ಅಲ್ಲಿಗೆ….
    ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

    ಹಿರೋಯಿನ್‌ಗಳು ಮುಂಬೈನವರು !
    ಡೈರೆಕ್ಟರ್‌ಗಳು ಆಂಧ್ರ -ತಮಿಳುನಾಡಿನವರು !
    ಲೈಟ್‌ಬಾಯ್ಸ್‌, ಪ್ರೊಡೆಕ್ಷನ್‌ ಬಾಯ್ಸ್‌, ಸೆಟ್‌ ಬಾಯ್ಸ್‌ಗಳೆಲ್ಲಾ
    ಕನ್ನಡದವರು !

    ಅಲ್ಲಿಗೆ….
    ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

    ಪರಭಾಷೆಯ ಸಿನಿಮಾ, ಕಾರ್ಯಕ್ರಮ ನಮ್ಮ ಮಾತೃಭಾಷೆಗೆ ಅನುವಾದವಾಗಲೀ ಎಂದರೇ
    ತಮ್ಮ ಸ್ವಾರ್ಥ ಕ್ಕಾಗಿ ನಮ್ಮಂವರಿಂದಲೇ ಪ್ರತಿಭಟನೆ

    ಪರಭಾಷೆಯ ಸಿನಿಮಾ ಕೋಟಿ, ಕೋಟಿ ಗಳಿಸಿವಾಗ ಎಲ್ಲರೂ ‘ಮೂಕಪ್ರೇಕ್ಷಕರು’ !

    ಅಲ್ಲಿಗೆ…
    ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ !
    ತುಳುನಾಡು ಪ್ರತ್ಯೇಕ ರಾಜ್ಯ !
    ಬೆಂಗಳೂರು ಕೇಂದ್ರಾಡಳಿತ ಪ್ರದೇಶ !

    ಅಲ್ಲಿಗೆ
    ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು !!

    ಕನ್ನಡಿಗರೇ, ಸ್ವಾಭಿಮಾನಿಗಳಾಗಿ, ಗುಲಾಮ ಸಂಸ್ಕೃತಿ, ಹಿಂದಿ ಹೇರಿಕೆ,
    ಉತ್ತರ ಭಾರತೀಯರ ಕುತಂತ್ರ.
    ವಲಸಿಗರ ಪುಂಡಾಟಕ್ಕೆ ಉತ್ತರ…
    ನಮ್ಮ ತನದ ಉಳಿವಿಗೆ ಹೋರಾಡುವುದು !!

    ರಾಯಣ್ಣ, ಅಬ್ಬಕ್ಕ, ಕುವೆಂಪು, ಬಸವಣ್ಣ, ಪುಲಿಕೇಶಿ, ರಾಜಣ್ಣ ಕನ್ನಡಿಗರ ಗುರುತಾಗಲಿ….

    ಕರ್ನಾಟಕ, ಕನ್ನಡದ ಬಗ್ಗೆ ನಮಗೇ ಅಭಿಮಾನವಿಲ್ಲದಿದ್ದಲ್ಲಿ ಮುಂದೊಂದು ದಿನ
    ಕರ್ನಾಟಕವನ್ನು ಉತ್ತರ ಭಾರತದವರಿಗೆ ಮತ್ತು ವಲಸಿಗರಿಗೇ ಮಾರಿ, ಕನ್ನಡಿಗರು ಭಿಕ್ಷೆ ಬೇಡುವ ಪರಿಸ್ಥಿತಿ ಆಗೋದು ಖಚಿತ !!

    ಕನ್ನಡಿಗರೇ ಎಚ್ಚೆತ್ತುಕೊಳ್ಳಿ ಕರ್ನಾಟಕ ಮತ್ತು ಕನ್ನಡವನ್ನು ಕಾಪಾಡಿಕೊಳ್ಳಿ…

    ನಾಲ್ಕು ಇಂಗ್ಲಿಷ್ ಅಕ್ಷರ ಬರೆದೊಡನೆ,
    ನಾಲ್ಕು ಹಿಂದಿ ಪದ, ಮಾತಾಡಿದೊಡನೇ
    ನೀವೇನೋ ದೊಡ್ಡ ಸಾಧನೆ ಮಾಡಿದಂತಾಗುವುದಿಲ್ಲ !

    ಕನ್ನಡ ಬಳಸಿ ಕೊನೆಪಕ್ಷ ಮುಂದಿನ ನಮ್ಮ ತಲೆಮಾರಿಗೆ ನಮ್ಮ ಮಾತೃಭಾಷೆಯನ್ನು ಉಳಿಸಿಕೊಟ್ಟ, ಬೆಳಸಿಕೊಟ್ಟ ಆತ್ಮತೃಪ್ತಿಯಾದರೂ ದೊರೆಯುತ್ತದೆ !!

    ಜೈ ಹಿಂದ್,
    ಜೈ ಕರ್ನಾಟಕ ಮಾತೆ !!!

    ಜೈ ತುಳುನಾಡು..

    (ಬರಹ ಯಾರದೋ, ಕನ್ನಡದ ಗತಿ ಹೀಗಾದರೆ, ಇತರ ಪ್ರಾದೇಶಿಕ ಭಾಷೆಗಳ, ತುಳುವಿನ ಹಾಗೂ ತುಳುವನ, ಅಸ್ತಿತ್ವವೇನು?)

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    DAKSHINA KANNADA

    ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು

    Published

    on

    ಮಂಗಳೂರು: ಗುಜರಾತ್‌ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.

     

     

    ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್‌ ಗಾರ್ಡ್‌ ತಂಡ ಹೆಲಿಕಾಪ್ಟರ್‌ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್‌ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್‌ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.

    ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್‌ ಗಾರ್ಡ್‌ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

    Continue Reading

    DAKSHINA KANNADA

    ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!

    Published

    on

    ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.

    ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.

    ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.

    ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.

    ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.

    Continue Reading

    LATEST NEWS

    Trending