Connect with us

    LATEST NEWS

    ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಎಕ್ಸ್‌ಪ್ರೆಸ್‌ ರೈಲು; ಬೋಗಿಗಳಲ್ಲಿ ಬೆಂಕಿಯಬ್ಬರ !!!!

    Published

    on

    ಮಂಗಳೂರು/ತಮಿಳುನಾಡು: ಮೈಸೂರಿನಿಂದ ದರ್ಭಾಂಗಕ್ಕೆ ಹೋಗುತ್ತಿದ್ದ ಬಾಗ್ಮತಿ ಸೂಪರ್‌ ಫಾಸ್ಟ್ ಎಕ್ಸ್‌ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಘಟನೆ ನಿನ್ನೆ (ಅ.11) ರಾತ್ರಿ 8.30 ರ ಸುಮಾರಿಗೆ ತಮಿಳುನಾಡಿನ ಕವರೈಪೆಟ್ಟೈ ಎಂಬಲ್ಲಿ ನಡೆದಿದೆ.


    ಕವರೈಪೆಟ್ಟೈ ನಿಲ್ಧಾಣಕ್ಕೆ ಎಕ್ಸ್‌ಪ್ರೆಸ್ ರೈಲು ಪ್ರವೇಶಿಸುವಾಗ ಹಳಿ ಬದಲಾವಣೆಯಾಗಿ ಲೂಪ್ ಲೈನನ್‌ಗೆ ಸ್ಥಳಾಂತರಗೊಂಡಿದ್ದ ಪರಿಣಾಮದಿಂದಾಗಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
    ರೈಲಿನ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, 12-13 ಭೋಗಿಗಳು ಹಳಿತಪ್ಪಿದೆ. ಆ ಭಾಗದಲ್ಲಿ ರೈಲು ಸಂಚಾರ ಮುಚ್ಚಲಾಗಿದ್ದು , ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ.
    ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ನಿಗಾ ವಹಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಚೆನ್ನೈನ ಸರ್ಕಾರಿ ಸ್ಟಾನ್ಲಿ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಚಿವ ಅವಧಿ ನೇಸರ್ ಹಾಗೂ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


    ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರಿಗೆ ಪ್ರಯಾಣ ಮುಂದುವರೆಸಲು ಮತ್ತೊಂದು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಇಂದು (ಅ.12) ಮುಂಜಾನೆ ಚೆನ್ನೈ ಸೆಂಟ್ರಲ್ ರೈಲು ನಿಲ್ಧಾಣದಿಂದ ಬೆಳಿಗ್ಗೆ 4.45 ರ ಸುಮಾರಿಗೆ ಹೊರಟಿತು. ಪ್ರಯಾಣಿಕರಿಗೆ ಅಹಾರ ಹಾಗೂ ನೀರಿನ್ನು ಒದಗಿಸಲಾಗಿತ್ತು.
    ಎನ್‌ಡಿಆರ್‌ಎಫ್ ತಂಡ ಹಾಗೂ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    LATEST NEWS

    ಮೊಸಳೆ ದಾಳಿಯಿಂದ ಯುವ ರೈತನ ಜೀವ ಉಳಿಸಿದ ಎತ್ತು!

    Published

    on

    ಬಾಗಲಕೋಟೆ: ಎತ್ತಿನ‌ ಮೈ ತೊಳೆಯಲು ಹೋದ ಯುವ ರೈತನ ಮೇಲೆ ಮೊಸಳೆ ದಾಳಿ ಮಾಡಿದ್ದು, ಎತ್ತು ಮಾಲೀಕನ ಜೀವ ಉಳಿಸಿದ ಘಟನೆ ಬಾಗಲಕೋಟೆ ‌ಜಿಲ್ಲೆಯ ಬೀಳಗಿ ತಾಲ್ಲೂಕಿನ ಹೊನ್ಯಾಳ ಬಳಿಯ ಆಲಮಟ್ಟಿ ಜಲಾಶಯ ಹಿನ್ನೀರಲ್ಲಿ ನಡೆದಿದೆ.

    ಯುವಕ ಧರಿಯಪ್ಪ ಮೇಟಿ ಅವರ ಬಲಗೈಗೆ ಮೊಸಳೆ ಬಾಯಿ‌ ಹಾಕಿದ ಪರಿಣಾಮ ಬಲಗೈ ಕಟ್ ಆಗಿದ್ದು, ಕೂಡಲೇ ಯುವ ರೈತ ಎಡಗೈಯಿಂದ ಎತ್ತಿನ ಹಗ್ಗ ಹಿಡಿದಿದ್ದಾನೆ. ಬಳಿಕ ಮಾಲೀಕನನ್ನು ಹಿನ್ನೀರಿನಿಂದ ಎತ್ತು ಹೊರ ತಂದಿದೆ. ಇನ್ನು ಮಾಲೀಕನ‌ನ್ನು ಹಿನ್ನೀರಿನಿಂದ ಹೊರತಂದು ಬಿಟ್ಟಾಗ ಮೊಸಳೆ ಓಡಿ ಹೋಗಿದೆ. ಅಷ್ಟರಲ್ಲೇ ಬಲಗೈ ಮೊಸಳೆ ಬಾಯಿಗೆ‌‌ ಸಿಲುಕಿ ಕಟ್ ಆಗಿತ್ತು. ಎತ್ತಿನ ಹಗ್ಗದ ಆಸರೆಯಿರದಿದ್ದರೆ ಜೀವಕ್ಕೆ ಕಳೆದುಕೊಳ್ಳುವ ಸಾಧ್ಯತೆಯಿತ್ತು.

    ಗಾಯಾಳುವನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬೀಳಗಿ ಶಾಸಕ ಜೆಟಿ ಪಾಟಿಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕೂಡಲೇ ಅರಣ್ಯಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಕರೆ ಮಾಡಿ, ಸೂಕ್ತ ಪರಿಹಾರ ಕೊಡಬೇಕು ಎಂದರು.

    Continue Reading

    LATEST NEWS

    ಫೇಮಸ್ ಯೂಟ್ಯೂಬರ್ ಜೊತೆ ಸುತ್ತಾಟ; ಹಾರ್ದಿಕ್ ಮಾಜಿ ಪತ್ನಿ ಫುಲ್ ಜಾಲಿ

    Published

    on

    ಮಂಗಳೂರು/ಮುಬೈ: ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಯೂಟ್ಯೂಬರ್ ಹಾಗೂ ಬಿಗ್ ಬಾಸ್ ಒಟಿಟಿ ವಿನ್ನರ್ ಎಲ್ವಿಶ್ ಯಾದವ್ ಜೊತೆ ಸುತ್ತಾಟ ನಡೆಸಿದ್ದು, ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ.

    ನತಾಶಾ ಮೂಲತಃ ಸೈಬೀರಿಯಾದವರು. ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ಬಳಿಕ ಅವರು ಮರಳಿ ಸೈಬೀರಿಯಾಗೆ ತೆರಳಿದ್ದಾಗಿ ವರದಿಯಾಗಿತ್ತು. ಸದ್ಯ ಮರಳಿ ಮುಂಬೈಗೆ ಬಂದಿದ್ದು, ಎಲ್ವಿಶ್ ಯಾದವ್ ಜೊತೆಯಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಇಬ್ಬರ ಮಧ್ಯೆ ಏನಾದರೂ ಇದೆಯೆಂಬ ಶಂಕೆ ವ್ಯಕ್ತವಾಗಿದೆ.
    ಒಂದೇ ಹೊಡೇಲ್‌ಗೆ ಇಬ್ಬರು ತೆರಳುತ್ತಿದ್ ಚಿತ್ರ ವೈರಲ್ ಆಗಿದ್ದು, ಎಲ್ವಿಶ್ ಹಾಗೂ ನತಾಶಾ ಡೇಟಿಂಗ್ ಹೋಗಿದ್ದಾರೋ ಅಥವಾ ಇದೊಂದು ಗೆಳೆತನದ ಭೇಟಿಯೇ ಎನ್ನುವ ಪ್ರಶ್ನೆ ಮೂಡಿದೆ. ವಿಚ್ಛೇದನದ ಬಳಿಕ ಸೆಲೆಬ್ರಿಟಿಗಳು ಮತ್ತೊಬ್ಬರ ಜೊತೆ ಡೇಟ್ ಮಾಡೋದು ಹೊಸದೇನು ಅಲ್ಲ. ಇದು ಅದೇ ರೀತಿಯೇ ಇರಬಹುದು ಎಂದು ಕೆಲವರು ಊಹಿಸಿದ್ದಾರೆ.
    ಸಮಾಜದಲ್ಲಿ ಎಲ್ವಿಶ್ ಯಾದವ್​ಗೆ ಒಳ್ಳೆಯ ಹೆಸರು ಇಲ್ಲ. ಅವರು ಹಾವಿನ ವಿಷ ಸಂಗ್ರಹಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಅಲ್ಲದೆ, ಅವರ ಮೇಲೆ ಹಲ್ಲೆ ಮಾಡಿದ ಆರೋಪವೂ ಇದೆ ಎಂಬುವುದಾಗಿ ಹಾರ್ದಿಕ್ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

     

    Continue Reading

    LATEST NEWS

    ಜೈಲಿನ ಕಂಬಿ ಮುರಿದು 20 ಅಡಿ ಕಾಂಪೌಂಡ್‌ ಹಾರಿ ಪರಾರಿಯಾದ ಕೈದಿಗಳು!

    Published

    on

    ದಿಸ್ಪುರ್‌: ಐವರು ವಿಚಾರಣಾಧೀನ ಕೈದಿಗಳು ಸೇರಿ ಜೈಲಿನ ಕಂಬಿಗಳನ್ನು ಮುರಿದು, ಬೆಡ್‌ಶೀಟ್‌ಗಳು ಮತ್ತು ಲುಂಗಿಗಳನ್ನು ಬಳಸಿ 20 ಅಡಿ ಕಾಂಪೌಂಡ್‌ನ್ನು ಇಳಿದು ಪರಾರಿಯಾದ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಜೈಲಿಂದ ತಪ್ಪಿಸಿಕೊಂಡ ಕೈದಿಗಳನ್ನು ಸೈಫುದ್ದೀನ್, ಜಿಯಾರುಲ್ ಇಸ್ಲಾಂ, ನೂರ್ ಇಸ್ಲಾಂ, ಮಫಿದುಲ್ ಮತ್ತು ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ 1 ರಿಂದ 2 ಗಂಟೆಯ ವೇಲೆ ಮೋರಿಗಾಂವ್ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾರೆ. ಬ್ಯಾರಕ್‌ಗಳ ರಾಡ್‌ಗಳನ್ನು ಮುರಿದು ಬಳಿಕ 20 ಅಡಿ ಕಾಂಪೌಂಡ್ ಇಳಿಯಲು ಕಂಬಳಿ, ಲುಂಗಿ ಮತ್ತು ಬೆಡ್‌ಶೀಟ್‌ಗಳನ್ನು ಬಳಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಐವರು ಪೋಕ್ಸೊ (POCSO) ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದರು. ಪರಾರಿಯಾದವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಬಗ್ಗೆ ಕೆಲವು ಜೈಲಲ್ಲಿರುವ ಕೈದಿಗಳನ್ನು ವಿಚಾರಣೆ ಮಾಡುತ್ತೇವೆ. ತನಿಖೆಯಲ್ಲಿ ಎಲ್ಲವೂ ಹೊರಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೈದಿಗಳು ಸೋನಿತ್‌ಪುರ ಜಿಲ್ಲೆಯ ತೇಜ್‌ಪುರ ಮತ್ತು ಮೊರಿಗಾಂವ್ ಜಿಲ್ಲೆಯ ಲಾಹೋರಿಘಾಟ್ ಮತ್ತು ಮೊಯಿರಾಬರಿ ನಿವಾಸಿಗಳು ಎಂದು ಮೊರಿಗಾಂವ್ ಜಿಲ್ಲಾಧಿಕಾರಿ ದೇವಾಶಿಸ್ ಶರ್ಮಾ ತಿಳಿಸಿದ್ದಾರೆ. ಸಂಬಂಧ ಜೈಲರ್ ಪ್ರಶಾಂತ ಸೈಕಿಯಾ ಅವರನ್ನು ಅಮಾನತುಗೊಳಿಸಲಾಗಿದೆ. ಗುವಾಹಟಿಯ ಇಬ್ಬರು ಸಹಾಯಕ ಜೈಲರ್‌ಗಳನ್ನು ಜೈಲಿನ ನಿರ್ವಹಣೆಗೆ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ.

    Continue Reading

    LATEST NEWS

    Trending