Connect with us

chikkamagaluru

ಹೇಗಿರಲಿದೆ ಉಡುಪಿ – ಚಿಕ್ಕಮಗಳೂರು ಫೈಟ್…?

Published

on

ಮಂಗಳೂರು : ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದೆ. ಆದ್ರೆ ಈ ಬಾರಿ ಈ ಕ್ಷೇತ್ರದಲ್ಲಿ ಕೈ ಮತ್ತು ಬಿಜೆಪಿ ನಡುವೆ ಬಿಗ್ ಫೈಟ್ ನಡೆಯೋ ಎಲ್ಲಾ ಸಾದ್ಯತೆಗಳನ್ನು ಅಂದಾಜಿಸಲಾಗಿದೆ. ಸರಿ ಸುಮಾರು 14 ಲಕ್ಷ ಮತದಾರರಿರುವ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ 2019 ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಭಾರಿ ಅಂತರದಲ್ಲಿ ಪ್ರಮೋದ್ ಮದ್ವರಾಜ್ ಅವರನ್ನು ಸೋಲಿಸಿದ್ದರು.  ಸರಿ ಸುಮಾರು 3 ಲಕ್ಷದ 40 ಸಾವಿರ ಮತಗಳ ಅಂತರದಲ್ಲಿ ಶೋಭಾ ಜಯಗಳಿಸಿದ್ರು. ಈ ಗೆಲುವಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮತದಾರರ ದೊಡ್ಡ ಪಾಲಿತ್ತು ಅನ್ನೋದು ಇಲ್ಲಿ ಪ್ರಮುಖ ಅಂಶ.

ಉಡುಪಿ - ಚಿಕ್ಕಮಗಳೂರು ಕ್ಷೇತ್ರ

ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರ ಅಸಮಾದಾನ…!

ಟಿಕೆಟ್ ಹಂಚಿಕೆ ಮೊದಲೇ ಸಾಕಷ್ಟು ಚರ್ಚಗೆ ಗ್ರಾಸವಾಗಿದ್ದ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಯ ಘೋಷಣೆ ಆಗಿದೆ. ಕಾರ್ಯಕರ್ತರು ನಡೆಸಿದ “ಗೋ ಬ್ಯಾಕ್‌” ಅಭಿಯಾನಕ್ಕೆ ತಲೆಬಾಗಿದ ಹೈಕಮಾಂಡ್ ಸಂಸದೆ ಶೋಭಾ ಅವರಿಗೆ ಬೆಂಗಳೂರು ಉತ್ತರದ ದಾರಿ ತೋರಿಸಿದ್ದಾರೆ. “ಗೋ ಬ್ಯಾಕ್ ಶೋಭಾ” ಅಭಿಯಾನದಿಂದ ಶೋಭಾ ಕರಂದ್ಲಾಜೆ ಅವರೇನೋ ಉಡುಪಿಯಿಂದ ಬೆಂಗಳೂರಿಗೆ ಹೋಗಿದ್ದಾರೆ. ಆದ್ರೆ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರ ಮತ್ತೊಂದು ಬೇಡಿಕೆಯಾಗಿದ್ದ ಚಿಕ್ಕಮಗಳೂರಿಗೆ ಟಿಕೇಟ್ ಕೊಡಿ ಅನ್ನೋ ಬೇಡಿಕೆ ಕಮರಿ ಹೋಗಿದೆ. ಸರಳ ಸಜ್ಜನ ರಾಜಕಾರಣಿ ಅಂತ ಕರೆಯಿಸಿಕೊಳ್ಳುತ್ತಿರುವ ಉಡುಪಿ ಜಿಲ್ಲೆಯವರೇ ಆಗಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ – ಚಿಕ್ಕಮಗಳೂರು ಟಿಕೇಟ್ ನೀಡಲಾಗಿದೆ. ಇದು ಚಿಕ್ಕಮಗಳೂರು ಬಿಜೆಪಿ ವಲಯದಲ್ಲಿ ಕೊಂಚ ಅಸಮಾದಾನ ಮೂಡಿಸಿರೋದು ಸುಳ್ಳಲ್ಲ.

ನಾಲ್ಕೂ ವಿಧಾನಸಭಾ ಕ್ಷೇತ್ರ ಕಳೆದುಕೊಂಡಿರುವ ಬಿಜೆಪಿ..!

ಚಿಕ್ಕಮಗಳೂರಿನ ಐದು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿರೋದು ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಪಾಯಿಂಟ್. ಕಾಂಗ್ರೆಸ್ ನೀಡಿದ್ದ ಗ್ಯಾರೆಂಟಿಯನ್ನು ಉಡುಪಿಯ ಜನ ಒಪ್ಪಿಕೊಳ್ಳದೇ ಇದ್ರೂ ಚಿಕ್ಕಮಗಳೂರಿನ ಜನರು ಒಪ್ಪಿ ಕೈ ಗೆಲುವಿಗೆ ಕಾರಣವಾಗಿದ್ರು. ಇದೀಗ ಲೋಕಸಭಾ ಚುನಾವಣೆಯಲ್ಲೂ ಐದು ಗ್ಯಾರೆಂಟಿ ನೀಡಿರುವ ಕಾಂಗ್ರೆಸ್ ಮಹಿಳಾ ಮತದಾರರನ್ನು ಓಲೈಕೆ ಮಾಡಿದೆ. ಹೀಗಾಗಿ ಕೇಂದ್ರದ ಹೊಸ ಗ್ಯಾರೆಂಟಿ ಮುಂದೆ  ಚಿಕ್ಕಮಗಳೂರಿನ ಮತದಾರರು ಬಿಜೆಪಿ ಕೈ ಹಿಡಿತಾರೆ ಅನ್ನೋ ಗ್ಯಾರೆಂಟಿ ಇಲ್ಲ .

ಉಡುಪಿಯಲ್ಲಿ ಬಿಜೆಪಿಗೆ ಮೀನುಗಾರರ ಸವಾಲು ಎದುರಾಗುವ ಸಾದ್ಯತೆ..!

ಕಳೆದ ಬಾರಿ ಜೆಡಿಎಸ್‌ನಲಿದ್ದು, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಒಲವು ತೋರಿದ್ದರೂ ಕಾನೂನು ರೀತಿಯಾಗಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಮೀನುಗಾರ ಮುಖಂಡ ಪ್ರಮೋದ್ ಮದ್ವರಾಜ್‌, ಈ ಬಾರಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿ ಶೋಭಾ ಅವರಿಗೆ ಪ್ರಭಲ ಪೈಪೋಟಿ ನೀಡಿದ್ದರು. ಈ ಬಾರಿ ಮೀನುಗಾರ ಸಮೂದಾಯವನ್ನು ಗಮನಿಸಿ ನನಗೇ ಟಕೆಟ್ ಕೊಡಬೇಕು ಅಂತ ಪ್ರಮೋದ್ ಮದ್ವರಾಜ್ ಬಹಿರಂಗವಾಗಿಯೇ ಹೈಕಮಾಂಡ್‌ಗೆ ಒತ್ತಾಯಿಸಿದ್ದರು. ಇನ್ನು ಟಿಕೇಟ್ ಪಡೆಯಲು ಪ್ರಮೋದ್ ಅವರೇ “ಗೋ ಬ್ಯಾಕ್” ಅಭಿಯಾನ ಮಾಡಿಸಿದ್ರು ಅಂತ ಶೋಭಾ ಕರಂದ್ಲಾಜೆ ಕೂಡಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಉಡುಪಿಗೆ ಸಂಸದೆ ಶೋಭಾ ಭೇಟಿಯ ವೇಳೆ ಮೀನುಗಾರ ಮುಖಂಡರನ್ನು ಅವರೇ ಛೂ ಬಿಟ್ಟಿದ್ದರು ಎಂದು ಸಣ್ಣದೊಂದು ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರಕ್ಕೆ ಶಿಫ್ಟ್ ಆಗಿದ್ರೂ ಮೀನುಗಾರ ಮುಖಂಡನಿಗೆ ಟಿಕೆಟ್ ಸಿಕ್ಕಿಲ್ಲ ಅನ್ನೋ ಅಸಮಾದಾನ ಮೀನುಗಾರರಲ್ಲೂ ಇದೆ. ಹೀಗಾಗಿ ಮೀನುಗಾರ ಸಮೂದಾಯ ಮತ್ತು ಪ್ರಮೋದ್ ಮದ್ವರಾಜ್ ಬೆಂಬಲಿಗರ ನಡೆಯೂ ಕೂಡಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ.

ಕಾಂಗ್ರೆಸ್‌ಗೂ ಕಬ್ಬಿಣದ ಕಡಲೆಯಾದ ಕ್ಷೇತ್ರ..!

ಕಾಂಗ್ರೆಸ್‌ ಪಕ್ಷದಲ್ಲೂ ನಡೆದಿದ್ದ “ಗೋ ಬ್ಯಾಕ್‌ ಜೆ.ಪಿ.ಹೆಗ್ಡೆ” ಅಭಿಯಾನ ಸದ್ಯಕ್ಕೆ ಯಾವುದೇ ಫಲ ನೀಡಿಲ್ಲ ಅನ್ನೋದು ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರುಳ್ಳಿ ಅವರಿಗೆ ಟಿಕೇಟ್ ನೀಡಿ ಎಂಬ ಕೈ ಕಾರ್ಯಕರ್ತರ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. 2017 ಕ್ಕೆ ಬಿಜೆಪಿ ಸೇರಿ ಇದೀಗ ಮತ್ತೆ ‘ಕೈ’ ಹಿಡಿದಿರುವ ಕುಂದಾಪುರದ ಜಯಪ್ರಕಾಶ್ ಹೆಗ್ಡೆ ಅವರಿಗೆ ಕಾಂಗ್ರೆಸ್ ಮಣೆ ಹಾಕೋದು ಖಚಿತವಾಗಿದೆ. ಆದ್ರೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯ ಪ್ರಾಭಲ್ಯ ಹಾಗೂ ಕೇಂದ್ರದ ಮೋದಿ ವರ್ಚಸ್ಸನ್ನು ಕುಗ್ಗಿಸಿ ಮುಂದೆ ಸಾಗೋದು ಅಷ್ಟು ಸುಲಭದ ಮಾತಲ್ಲ. ಚಿಕ್ಕಮಗಳೂರಿನ ಕೈ ಕಾರ್ಯಕರ್ತರ ಅಸಮಾದಾನ, ಹಾಗೂ ಉಡುಪಿ ಜಿಲ್ಲೆಯ ಮೋದಿ ಹವಾ ಎರಡನ್ನೂ ಎದುರಿಸಿ ಜಯಪ್ರಕಾಶ್ ಹೆಗ್ಡೆ ಪೈಪೋಟಿ ನೀಡಬೇಕಿದೆ.

ಕಾಂಗ್ರೆಸ್ ಕೈ ಹಿಡಿಯಲಿದೆಯಾ ಪಂಚ ಗ್ಯಾರೆಂಟಿ..?

ಹಾಗಂತ ಲೋಕಸಭೆಯಲ್ಲಿ ಬಿಜೆಪಿ ಗೆಲವಿನ ಅಂತರ ಎಷ್ಟೇ ಜಾಸ್ತಿಯಾಗಿದ್ದರೂ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ಹಂಚಿ ಹೋಗಿಲ್ಲ. ಹೊಸ ಯುವ ಮತದಾರರು ಮೋದಿ ಅವರಿಗೆ ಮತ ಚಲಾಯಿಸಿದ್ದಾರೆಯೇ ಹೊರತು ಕ್ಷೇತ್ರದ ಅಭ್ಯರ್ಥಿಗೆ ಅಲ್ಲ ಅನ್ನೋದು ಸ್ಪಷ್ಟ. ಇನ್ನು ರಾಜ್ಯ ಸರ್ಕಾರದ ಗ್ಯಾರೆಂಟಿ ನಮಗೆ ಬೇಡ ಅಂದಿದ್ದ ಬಹುತೇಕ ಬಿಜೆಪಿ ಬೆಂಬಲಿಗರು ಗ್ಯಾರೆಂಟಿಯನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದಿರುವ ಗ್ಯಾರೆಂಟಿ ಸಮಾವೇಶದಲ್ಲಿ ಬಿಜೆಪಿಗೆ ಮತ ಚಲಾಯಿಸಿದ ಮಹಿಳೆಯರೂ ಕೂಡಾ ಗ್ಯಾರೆಂಟಿ ಫಲಾನುಭವಿಗಳಾಗಿರೊದು ಬಹಿರಂಗವಾಗಿದೆ. ಇದೀಗ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರೆಂಟಿಗಳು ಮಹಿಳಾ ಮತದಾರರನ್ನೇ ಟಾರ್ಗೆಟ್ ಮಾಡಿದೆ. ನಾರಿ ನ್ಯಾಯ್‌ ಅನ್ನೋ ಹೆಸರಿನಲ್ಲಿ ಮಹಿಳೆಯರಿಗೆ ಕೊಡುಗೆಯ ಘೋಷಣೆ ಜೊತೆಗೆ ರೈತರ ಸಾಲ ಮನ್ನಾ ಮೊದಲಾದ ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದೆ. ಇದೇ ಲೆಕ್ಕಾಚಾರದಲ್ಲಿರುವ ಕೈ ನಾಯಕರು ಉಡುಪಿ – ಚಿಕ್ಕಮಗಳೂರು ಕ್ಷೇತ್ರವನ್ನು ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿರುವುದಂತು ಸುಳ್ಳಲ್ಲ. ಹೀಗಾಗಿ ಈ ಬಾರಿ ಮೋದಿ ಅಲೆಯ ನಡುವೆ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಗ್ ಫೈಟ್ ನಡೆಯೋ ಎಲ್ಲಾ ನಿರೀಕ್ಷೆ ಇದೆ.

 

chikkamagaluru

ಎಟಿಎಂ ಮೆಷಿನ್‌ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!

Published

on

ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಟಿಎಂ ಮೆಷಿನ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಸುಟ್ಟು ಕರಕಲಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.  ನಗರದ ಐ.ಜಿ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ನ ಎಟಿಎಂ ಗೆ ಭಾನುವಾರ(ಎ.21) ಮಧ್ಯರಾತ್ರಿ ಬೆಂಕಿ ತಗುಲಿದೆ.

ಎಟಿಎಂ ಕೊಠಡಿಯಲ್ಲಿ ಅಳವಡಿಸಿದ್ದ ಎಸಿಯಲಲ್ಲಿ ವಿದ್ಯುತ್ ಸರ್ಕ್ಯೂಟ್‌ ಸಂಭವಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ.  ಇದರಿಂದ ಎಟಿಎಂ ಮೆಷಿನ್ ಹಾಗೂ ಹಣ ತುಂಬಿಸುವ ಮೆಷಿನ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಮೆಷಿನ್‌ನಲ್ಲಿದ್ದ 5.ಲಕ್ಷ ರೂಪಾಯಿ ಸುಟ್ಟು ಕರಕಲಾಗಿ  ಹೋಗಿದೆ. ಎಟಿಎಂ ಮೆಷಿನ್ ಮೇಲಿನ ಭಾಗದಲ್ಲಿ ಕರ್ನಾಟಕ ಬ್ಯಾಂಕ್ ಇದ್ದು ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿದಂತಾಗಿದೆ.

READ MORE..; ಮಲ್ಪೆ ಬೀಚ್‌ನಲ್ಲಿ ಮುಳುಗಿ ಯುವಕ ಮೃತ್ಯು.. ಮಂಡ್ಯ ಯುವಕನ ದುರಂತ ಅಂತ್ಯ..!

ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್​ ಅಗ್ನಿಶಾಮಕ ದಳಕ್ಕೆ ತಿಳಿಸಿದೆ. ಮಾಹಿತಿ ಬಂದ ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Continue Reading

chikkamagaluru

ರಾಜ್ಯದ ಹಲವೆಡೆ ಮಳೆಯ ಸಿಂಚನ.. ಸಿಡಿಲಿನ ಅಬ್ಬರಕ್ಕೆ ಇಬ್ಬರ ಬ*ಲಿ..!!

Published

on

ಮಂಗಳೂರು : ಬಿಸಿಲಿನ ಬೇಗೆಯಿಂದ ಭೂಮಿಯೇ ಬಾಯಿಬಿಟ್ಟಂತಾಗಿದ್ದು, ನೀರಿಗಾಗಿ ಜನರ ಹಾಹಾಕಾರ ಮುಗಿಲು ಮುಟ್ಟಿತ್ತು. ಜಾನುವಾರುಗಳು ಪ್ರಾಣಿ ಪಕ್ಷಿಗಳದ್ದಂತು ಹೇಳ ತೀರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದೊಂದು ವಾರದಿಂದ ಇದಕ್ಕೆ ಬ್ರೇಕ್ ನೀಡಿ ವರುಣನ ಸಿಂಚನದಿಂದ ಕೆಲವೊಂದೆಡೆ ಜನರು ನೆಮ್ಮದಿ ಕಂಡಿದ್ರು. ಆದ್ರೆ ಗುರುವಾರ (ಎ.11) ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ವಿಜಯಪುರ, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಿದೆ.

rain

ಸು*ಟ್ಟು ಕರಕಲಾಗುವಂತ ಪರಿಸ್ಥಿತಿಯಲ್ಲಿದ್ದ ಕಲಬುರಗಿಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ ಇನ್ನು ವಿಜಯಪುರ ತಾಲೂಕಿನಲ್ಲೂ ಧಾರಕಾರ ಮಳೆ ಸುರಿದಿದ್ದು, ಒಂದೇ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಸಿಡಿಲಿನ ಅರ್ಭಟಕ್ಕೆ ಜನ ಮನೆಯಿಂದ ಹೊರ ಬಾರದೆ ಮನೆಯಲ್ಲೇ ಆಶ್ರಯ ಪಡೆದುಕೊಂಡಿದ್ದಾರೆ. ಆದ್ರೂ 16 ವರ್ಷ ಬಾಲಕ ಹಾಗೂ ಇಂಡಿ ತಾಲೂಕಿನ ಮಸಳಿ ಗ್ರಾಮದಲ್ಲಿ ಜಮೀನು ಕೆಲಸ ಮಾಡುತ್ತಿದ್ದ 45 ವರ್ಷದ ರೈತ ಸೋಮಶೇಖರ್ ಪಟ್ಟಣಶೆಟ್ಟಿ ಸಿಡಿಲು ಬಡಿದು ಮೃ*ತಪಟ್ಟಿದ್ದಾರೆ.

ಇದನ್ನೂ ಓದಿ..; ‘ಬಿಗ್ ಬಾಸ್‌’ ಮತ್ತೆ ಆರಂಭ.. ಇಲ್ಲಿದೆ ಸ್ಪರ್ಧಿಗಳ ಲಿಸ್ಟ್‌..!

ಇನ್ನು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಜಿಲ್ಲೆಯ ಕೆರಮಕ್ಕಿ, ಬೈಗೂರು,ಹಂರವಳ್ಳಿ, ಆವುತಿ ಪರಿಸರದಲ್ಲಿ ಭಾರಿ ಮಳೆಯಾಗಿದೆ. ಮಳೆಯಿಂದ ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ.

Continue Reading

chikkamagaluru

ಉಡುಪಿ-ದ.ಕ ಜಿಲ್ಲೆಯಲ್ಲಿ ಸಂಭ್ರಮದ ರಂಜಾನ್ ಆಚರಣೆ: ಇಂದೇ ಸರ್ಕಾರಿ ರಜೆ ಘೋಷಸಿದ ಜಿಲ್ಲಾಡಳಿತ

Published

on

ಮಂಗಳೂರು: ಕೇರಳದ ಪೊನ್ನಾನಿಯಲ್ಲಿ ನಿನ್ನೆ(ಎ.9)  ಚಂದ್ರದರ್ಶನವಾಗಿದ್ದ ಹಿನ್ನಲೆಯಲ್ಲಿ ದ.ಕ.ಜಿಲ್ಲೆ, ಉಡುಪಿ ಸೇರಿದಂತೆ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎ.10ರಂದು ರಮ್ಜಾನ್ ಆಚರಿಸಲು ದ.ಕ ಜಿಲ್ಲಾ ಖಾಝಿ ಹಾಗೂ ಹಾಸನ ಚಿಕ್ಕಮಗಳೂರು ಜಿಲ್ಲೆಯ ಸಂಯುಕ್ತ ಖಾಘಿ ಅವರು ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಇಂದು ಈ ಜಿಲ್ಲೆಗಳಲ್ಲಿ ರಮ್ಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಮಂಗಳೂರಿನ ಬಾವುಟ ಗುಡ್ಡದ ಈದ್ಗಾದಲ್ಲಿ ಸಾಮೂಹಿಕ ನಮಾಜ್ ಮಾಡುವ ಮೂಲಕ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಹಲವಾರು ಪ್ರಮುಖರು ಈದ್ಗಾದ ನಮಾಜ್‌ನಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಸ್ಪೀಕರ್ ಖಾದರ್ ಅವರು ಎಲ್ಲಾ ಜನತೆಗೆ ರಮ್ಜಾನ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಶೇಷವಾಗಿ ಈಸ್ಟರ್‌, ಯುಗಾದಿ ಹಾಗೂ ರಮ್ಜಾನ್ ಮೂರು ಹಬ್ಬಗಳು ಒಟ್ಟೊಟ್ಟಿಗೆ ಬಂದಿರುವ ಕಾರಣ ಇದೊಂದು ವಿಶೇಷ ಸನ್ನಿವೇಶವಾಗಿ ಅವರು ಪರಿಗಣಿಸಿದ್ದಾರೆ. ಎಲ್ಲಾ ಹಬ್ಬಗಳ ಸಂದೇಶ ಸಾಮರಸ್ಯವನ್ನು ಸಾರಿದ್ದು, ನಮ್ಮ ಜಿಲ್ಲೆಯಿಂದ ಅಂತಹ ಸಾಮರಸ್ಯ ಇಡೀ ದೇಶಕ್ಕೆ ಸಾರುವಂತಾಗಲಿ ಎಂದು ಹೇಳಿದ್ದಾರೆ.

ಇನ್ನು ಅಧಿಕೃತವಾಗಿ ರಮ್ಜಾನ್ ಹಬ್ಬದ ಸರ್ಕಾರಿ ರಜೆ ನಾಳೆ ಇದ್ದು , ಇಂದು ಹಬ್ಬ ಆಚರಿಸುತ್ತಿರುವ ಕಡೆಗಳಲ್ಲಿ ಇಂದೇ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಸ್ಪೀಕರ್ ಖಾದರ್ ಅವರ ಮನವಿ ಪುರಸ್ಕರಿಸಿ ಈ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಇಂದು ಹಬ್ಬ ಆಚರಿಸುತ್ತಿರುವ ಜಿಲ್ಲೆಗಳಲ್ಲಿ ಸರ್ಕಾರಿ ರಜೆ ಇರಲಿದೆ.

Continue Reading

LATEST NEWS

Trending