Connect with us

LATEST NEWS

ಆರ್ಯ ಮುತಾಲಿಕ್ ಸಂತತಿಯಿಂದ ಶರಣ್‌ನ್ನು ಬಳಸಿ ಮಳಲಿ ವಿವಾದ ಸೃಷ್ಟಿ-ಕೆ ಅಶ್ರಫ್

Published

on

ಮಂಗಳೂರು: ‘ಮಳಲಿಯ ಅತಿ ಪುರಾತನ ಮಸೀದಿಯ ವಿಸ್ತೃತ ಕಟ್ಟಡದ ನವೀಕರಣ ಕಾಮಗಾರಿ ಆರಂಭಿಸುವಾಗ,ಪುರಾತನ ರಚನೆಯ ವಾಸ್ತು ಶಿಲ್ಪವನ್ನು ವೀಕ್ಷಿಸಿ,ದೇವಸ್ಥಾನವೆಂದು ರದ್ದಾಂತವೆಬ್ಬಿಸಿದ, ಸಂಘೀ, ಕೃಪಾ, ನಿಖೇತನಿಗಳಿಗೆ, ತಮ್ಮ ಮುಸ್ಲಿಮರ ಮೇಲಿನ ವಿದ್ವೇಶವನ್ನು ಕರಾವಳಿ ಜಿಲ್ಲೆಗಳಲ್ಲಿ ಮತ್ತಷ್ಟು ಹಬ್ಬಿಸಿ ಶತಾಯ ಗತಾಯ ಒಂದು ಬೃಹತ್ ಕೋಮು ಗಲಭೆಯನ್ನು ಸೃಷ್ಟಿಸಲು ಸಂಘ ಪರಿವಾರ ಪ್ರಯತ್ನ ನಡೆಸುತ್ತಿದೆ’ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದರು.

ಮಳಲಿ ದರ್ಗಾ ವಿವಾದ ಹಿನ್ನೆಲೆ ಮಾತನಾಡಿದ ಇವರು ‘ಆ ಮೂಲಕ ಇಲ್ಲಿನ ಹಿಂದುಳಿದ ವರ್ಗ,ದಲಿತರು,ಪರಿಶಿಷ್ಟರು,ಬುಡಕಟ್ಟು ಜನರು,ಮುಸ್ಲೀಮರ ಮದ್ಯೆ ಭಿನ್ನತೆ ಸೃಷ್ಟಿಸುವುದಾಗಿದೆ.

ಈಗಾಗಲೇ ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ, ಪಠ್ಯ ಇತ್ಯಾದಿ ವಿವಾದದಲ್ಲಿ ಸಿಲುಕಿ ಹಾಕಿಕೊಂಡು ದ.ಕ.ಜಿಲ್ಲೆಯ ಸುಮಾರು ನಾಲ್ಕು ಲಕ್ಷ ಬಿಲ್ಲವರ ದ್ವೇಷವನ್ನು ಕಟ್ಟಿಕೊಂಡ ಬೀಜೆಪಿ ಸಂಘಿಗಳಿಗೆ, ಸ್ವಘೋಷಿತ ಹಿಂದೂ ನಾಯಕ ಎಂದು ಕರೆಸಿ ಕೊಳ್ಳುತ್ತಿರುವ ಶರಣ್ ಪಂಪ್ ವೆಲ್ ನನ್ನು ಮಳಲಿ ಮಸೀದಿ ವಿವಾದದಲ್ಲಿ ಮುಂದೆ ಹಾಕಿ, ಪ್ರಚೋದಿತ ಹೇಳಿಕೆ ಕೊಡಿಸಿ ಗಲಭೆಗೆ ಪ್ರಯತ್ನಿಸಲಾಗುತ್ತಿದೆ.

ಈಗಾಗಲೇ ಹಿಂದುಳಿದ ವರ್ಗದ ಜನರಿಗೆ, ಈ ಸಂಘಿಗಳು ,ಅವರ ಆರಾಧನಾ ಹಕ್ಕುಗಳನ್ನು ಕಸಿದು,ಅವರನ್ನು ಗುಲಾಮ ಸ್ಥಿತಿಗೆ ತಂದು, ಕೈಯಲ್ಲಿ ತ್ರಿಶೂಲ, ಬಂದೂಕು ಕೊಟ್ಟು ಸಮಾಜ ಘಾತುಕ ಶಕ್ತಿಯಾಗಿ ಮಾರ್ಪಡಿಸಲು ಪ್ರಯತ್ನಿಸಿರುತ್ತಾರೆ.

ಆರ್ಯ ಸಂತತಿಯ ಮುತಾಲಿಕ ಈಗಾಗಲೇ ಉತ್ತರ ಕರ್ನಾಟಕದಲ್ಲಿ ಜನರ ಜೀವನಕ್ಕೆ ಕೊಳ್ಳಿ ಇಡಲು ಪ್ರಯತ್ನಿಸಿ ಗಲಭೆ ನಡೆಸಲು ವಿಫಲವಾಗಿ ದ.ಕ.ಜಿಲ್ಲೆಗೆ ವಕ್ಕರಿಸಿ ಈ ಹಿಂದುಳಿದ ವರ್ಗದ, ವಿಶ್ವ ಹಿಂದೂ ಪರಿಷತ್ ನಿಯಂತ್ರಿತ ಶರಣ್ ಪಂಪ್ ವೆಲ್ ನನ್ನು ಇಲ್ಲಿನ ಮುಸ್ಲಿಮರ ವಿರುದ್ದ ಇಳಿಸಿದ್ದಾನೆ.

ಹಿಂದುಳಿದ ವರ್ಗದ ಶರಣ್ ಏನಾದರೂ ಅಂದು ಮಳಲಿ ಮಸೀದಿಗೆ ಪರಿಶೀಲನೆಗೆ ಪ್ರವೇಶಿಸಿದಂತೆ ಯಾವುದಾದರೂ ಆರ್ಯರ ಧಾರ್ಮಿಕ ಕೇಂದ್ರ ಪ್ರವೇಶಿಸಿದ್ದರೆ ಅಂದೇ ಅಂತಹ ಧಾರ್ಮಿಕ ಕೇಂದ್ರದಿಂದ ಇದೇ ಶರಣನನ್ನು ಬಹಿಷ್ಕಾರ ಮಾಡುತ್ತಿದ್ದರು.

ಇದು ಸಂಘೀ ಮನಸ್ಥಿತಿ. ಬಹುಶ ಹಿಂದುಳಿದ ವರ್ಗದ ಶರಣ್ ತನ್ನ ಪರಿವಾರದಲ್ಲಿ ಆರಾಧನಾ ಹಕ್ಕಿನಿಂದ ವಂಚಿತನಾಗಿದ್ದಾನೆ. ಆದುದರಿಂದಲೇ ಇತರ ಧರ್ಮದ ಆರಾಧನಾ ಕೇಂದ್ರ ಗಳತ್ತ ಆಕರ್ಷಿತನಾಗಿ ಈ ರೀತಿಯ ವಿವಾದ ಸೃಷ್ಟಿಸುತ್ತಿದ್ದಾನೆ.

ಶರಣ್ ಸಂಘೀಗಳ ಆಳು ಆಗಿರಬಹುದು,ಆದರೆ ಇತರ ಧರ್ಮದ ಆರಾಧನಾಲಯದ ವಿಷಯದಲ್ಲಿ ಕಾನೂನು ಪ್ರಕ್ರಿಯೆಯಿಂದ ಹೆಚ್ಚಿನ ಕೃತ್ಯ ನಡೆಸಿದರೆ, ಶರಣ್ ಅಂತಹ ಪ್ರಯತ್ನಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಮುಸ್ಲಿಮ್ ಧಾರ್ಮಿಕ ಸಂಕೇತಗಳನ್ನು,ಭೀಕರವಾಗಿ ಬಿಂಬಿಸಿ,ಇತರರಲ್ಲಿ ಭಯ ಹುಟ್ಟಿಸಿ,ಹಿಂದೂ ಧರ್ಮಕ್ಕೆ ಅಪಾಯವಿದೆ,ಇತ್ಯಾದಿಯಾಗಿ ಸರ್ವ ಪ್ರಯತ್ನದ ಮೂಲಕ ಕರಾವಳಿಯಲ್ಲಿ ಮುಸ್ಲಿಮ್ ವಿರೋಧಿ ಗಲಭೆ ನಡೆಸಲು ವಿಫಲವಾದಾಗ,ಇನ್ನೂ ಯಾವುದೇ ಮುಸ್ಲಿಮ್ ಧಾರ್ಮಿಕ ಸಂಕೇತಗಳು,

ಲಭ್ಯವಿಲ್ಲದ ಕಾರಣ ಮಳಲಿ ಮಸೀದಿಯ ವಾಸ್ತುಶಿಲ್ಪಕ್ಕೆ ಹಸ್ತ ಕ್ಷೇಪ ನಡೆಸಿ, ಅದು ಇತರ ಧರ್ಮದ ಧಾರ್ಮಿಕ ಕೇಂದ್ರ ಎಂಬಿತ್ಯಾದಿಯಾಗಿ ಇಲ್ಲದ ಸಮಸ್ಯೆಯನ್ನು ಹುಟ್ಟು ಹಾಕಿ, ಜಿಲ್ಲೆಯಲ್ಲಿ ತಾಂಬೂಲ ಪ್ರಶ್ನೆ ಎಂಬ ಅವೈಜಾನಿಕ ಪದ್ಧತಿಗಳು ಇತ್ಯಾದಿ ಮೂಲಕ,ಪ್ರದೇಶದ ಶಾಂತಿ ಸುವ್ಯವಸ್ಥೆಯನ್ನು ಹಾನಿ ಗೊಳಿಸಿ ,ಗಲಭೆ ನಡೆಸಿ ಸಾಮಾನ್ಯ ಜನರ ಜೀವ,ಆಸ್ತಿ ಗಳನ್ನು ನಷ್ಟ ಮಾಡಲು ಮುಂದಾದ ದುಷ್ಕರ್ಮಿ ಗಳಾದ ಪ್ರಮೋದ್ ಮುತಾಲಿಕ್ ಮತ್ತು ಶರಣ್ ಪಂಪ್ವೆಲ್ ನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.

ದ.ಕ.ಜಿಲ್ಲೆಯ ಜನರ ನೆಮ್ಮದಿಯ ಬಗ್ಗೆ ಮತ್ತು ಪೊಲೀಸ್ ಪರಿಕಲ್ಪನೆ ಜಿಲ್ಲೆಯಲ್ಲಿ ಜೀವಂತ ಇದೆ ಎಂದಿದ್ದರೆ ಪೊಲೀಸರು ಎಂದು ಹೇಳಿಸಿ ಕೊಳ್ಳುವವರು ತಕ್ಷಣ ಈ ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೊಂಡು ಪೊಲೀಸು ಪರಿಕಲ್ಪನೆಯ ಶುದ್ಧತೆಯನ್ನು ಪಾಲಿಸಲಿ.

 

 

DAKSHINA KANNADA

ಯುವರಾಜ್ ಸಿಂಗ್ ಹಳೇ ಸೀಕ್ರೆಟ್ ಬಯಲು..! ರೋಹಿತ್ ಶರ್ಮಾ ಹೇಳಿದ ಕಥೆ..!

Published

on

ಮಂಗಳೂರು ( ಮುಂಬೈ ) : ಕಪಿಲ್ ಶರ್ಮಾ ಅವರ ಸ್ಟ್ಯಾಂಡ್‌ ಅಪ್ ಕಾಮಿಡಿ ಶೋದಲ್ಲಿ ಕಟ್ ಮಾಡಿದ್ದ ಸೀನ್‌ ಒಂದು ಈಗ ರಿಲೀಸ್ ಆಗಿದೆ. ಎರಡು ವಾರಗಳ ಹಿಂದೆ ಕ್ರಿಕೆಟರ್ ರೋಹಿತ್‌ ಶರ್ಮಾ ಮತ್ತು ಶ್ರೇಯಸ್ಸ ಐಯ್ಯರ್ ಜೊತೆ ಕಪಿಲ್ ಶರ್ಮಾ ಶೋದಲ್ಲಿ ಭಾಗವಹಿಸಿದ್ದರು. ಆದ್ರೆ ಶೋದಲ್ಲಿ ಟೆಲಿಕಾಸ್ಟ್‌ ಆಗದೇ ಇದ್ದ ಕೆಲವೊಂದು ಸೀಕ್ರೆಟ್ ಈಗ ಬಯಲಾಗಿದೆ.

ಐಪಿಎಲ್‌ ಪಂದ್ಯಾಟದ ನಡುವೆಯೂ ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಕೆಕೆಆರ್‌ ಕ್ಯಾಪ್ಟನ್‌ ಶ್ರೇಯಸ್ ಐಯ್ಯಾರ್ ಕಾಮಿಡಿ ಶೋದಲ್ಲಿ ಭಾಗವಹಿಸಿದ್ದಾರೆ. ಇನ್ನು 2024 ರ ಅಂತ್ಯದಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡ ತೊರೆಯುವ ಸಾಧ್ಯತೆ ಇದೆ ಅಂತ ಚರ್ಚೆಗಳು ನಡಿತಾ ಇದೆ. ಹಾರ್ದಿಕ್ ಪಾಂಡ್ಯ ಜೊತೆಗಿನ ಭಿನ್ನಾಭಿಪ್ರಾಯದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ. ಇಷ್ಟೆಲ್ಲಾ ಇರುವಾಗಲೇ ರೋಹಿತ್ ಶರ್ಮಾ ಕಾಮಿಡಿ ಶೋದಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗಳಿಗೆ ಖುಷಿ ನೀಡಿದ್ದಾರೆ.

ಕಪಿಲ್ ಶರ್ಮಾರ ಸ್ಟ್ಯಾಂಡ್ ಅಪ್ ಕಾಮಿಡಿ ಶೋದಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೆಯಸ್ ಅಯ್ಯಾರ್ ಭಾಗವಹಿಸಿದ್ದಾರೆ. ಈಗಾಗಲೇ ಇದರ ಎಪಿಸೋಡ್ ಪ್ರಸಾರವಾಗಿದ್ದು, ಅದರಲ್ಲಿ ಪ್ರಸಾರ ಆಗದೇ ಇದ್ದ ಕೆಲವೊಂದು ವಿಚಾರವನ್ನು ಕಪಿಲ್ ಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಅನ್‌ ಎಡಿಟೆಡ್ ಎಪಿಸೋಡ್ ಶನಿವಾರ ಪ್ರಸಾರ ಮಾಡೋದಾಗಿ ಹೇಳಿದ್ದಾರೆ.

ಕಪಿಲ್ ಶರ್ಮಾ ಹಂಚಿಕೊಂಡಿರುವ ವಿಡಿಯೋದಲ್ಲಿ ರೋಹಿತ್ ಶರ್ಮಾ ಯುವರಾಜ್ ಸಿಂಗ್ ಅವರ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾ ಸೇರಿದಾಗ ಯುವರಾಜ್ ಸಿಂಗ್ ತನ್ನ ಜೊತೆ ಹೇಗೆ ವರ್ತಿಸಿದ್ರು ಅಂತ ಹೇಳಿಕೊಂಡಿದ್ದಾರೆ. ಯುವರಾಜ್ ಸಿಂಗ್ ಸೀನಿಯರ್ ಆಟಗಾರರಂತೆ ಪೋಸ್ ನೀಡಿ ಜ್ಯೂನಿಯರ್ ಆಟಗಾರರ ಮುಂದೆ ಬಿಲ್ಡಪ್ ಕೊಡ್ತಾ ಇದ್ರು ಅಂದಿದ್ದಾರೆ. ಆಟಗಾರರ ಬಸ್‌ ನಲ್ಲಿ ಯುವರಾಜ್ ಅವರ ಸೀಟಿನಲ್ಲಿ ಕುಳಿತ ನನ್ನನ್ನು ಬರೇ ಕಣ್ ಸನ್ನೆಯಿಂದಲೇ ಸೀಟ್‌ನಿಂದ ಎಬ್ಬಿಸಿದ ಘಟನೆಯನ್ನು ವಿವರಿಸಿದ್ದಾರೆ. ಈ ಎಪಿಸೋಡ್ ಬಹಳಷ್ಟು ಕುತೂಹಲ ಕೆರಳಿಸಿದ್ದು , ರೋಹಿತ್ ಶರ್ಮಾ ಫ್ಯಾನ್ಸ್‌ ಎಪಿಸೋಡ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Continue Reading

LATEST NEWS

Watch Video..ಓಪನ್ ಆಗಿ ಡ್ರೆಸ್ ಕಳಚಿದ ಹುಡುಗಿ..! ಅಂಗಡಿಯವನಿಗೆ ಶಾಕ್‌..!

Published

on

ಮಂಗಳೂರು/ದೆಹಲಿ: ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿಯೇ ಇದೆ. ಮೆಟ್ರೋ, ರೈಲ್ವೇ ಸ್ಟೇಷನ್​​​​​ ಎಲ್ಲೆಂದರಲ್ಲಿ ರೀಲ್ಸ್ ಮಾಡಿ ಸಾರ್ವಜನಿಕರನ್ನು ಮುಜುಗರಕ್ಕೀಡು ಮಾಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ನಗುತ್ತರಿಸುತ್ತವೆ. ಕೆಲವು ದುಃಖಕ್ಕೀಡು ಮಾಡುತ್ತವೆ. ಇನ್ನೂ ಕೆಲವುಗಳಂತೂ ಅಸಭ್ಯವಾಗಿರುತ್ತವೆ.ಇದೀಗಾ ಅಂತದ್ದೇ ವಿಲಕ್ಷಣ ಘಟನೆಯೊಂದು ದೆಹಲಿಯ ಪಾಲಿಕಾ ಬಜಾರ್‌ನಲ್ಲಿ ನಡೆದಿದೆ.

ಸದ್ಯ ಈ ಮಹಿಳೆಯ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ಈ ನಡತೆಗೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಮಹಿಳೆಯೊಬ್ಬಳು ಪಾಲಿಕಾ ಬಜಾರ್‌ನ ಬಟ್ಟೆ ಅಂಗಡಿಗೆ ಹೋಗಿ ಹೊಸ ಬಟ್ಟೆಯನ್ನು ಖರೀದಿಸಿ ಟ್ರಯಲ್ ನೋಡಲೆಂದು ಟ್ರಯಲ್‌ ರೂಮ್‌ಗೆ ಹೋಗುವ ಬದಲು ಬಟ್ಟೆ ಅಂಗಡಿಯ ಪುರುಷ ಸಿಬ್ಬಂದಿಗಳ ಮುಂದೆಯೇ ಬಟ್ಟೆ ಬಿಚ್ಚಿ ಹೊಸ ಬಟ್ಟೆ ತೊಟ್ಟು ಟ್ರಯಲ್ ಮಾಡಿದ್ದಾಳೆ.

ಇಷ್ಟೇ ಅಲ್ಲದೇ ಬಟ್ಟೆ ಬಿಚ್ಚಿರುವುದನ್ನು ವಿಡಿಯೋ ರೆಕಾರ್ಡ್​​ ಕೂಡ ಮಾಡಿದ್ದಾಳೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​ ಆಗಿದ್ದು, ಮಹಿಳೆಯ ರೀಲ್ಸ್​​​ ಹುಚ್ಚಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

FILM

45 ಕೋಟಿ ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ

Published

on

ಮಂಗಳೂರು(ಮುಂಬೈ): ಮಂಗಳೂರಿನ ಚೆಲುವೆ ಪೂಜಾ ಹೆಗ್ಡೆ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮುಂಬೈನಲ್ಲಿ ನಟಿ ಲಕ್ಷುರಿ ಮನೆಯೊಂದನ್ನು ಖರೀದಿಸಿದ್ದಾರೆ. ಐಷಾರಾಮಿ ಮನೆ ಖರೀದಿ ಮಾಡಿರುವ ನಟಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಮುಂಬೈನ ಬಾಂದ್ರಾದಲ್ಲಿ 45 ಕೋಟಿ ರೂ. ಮೌಲ್ಯದ ಮನೆ ಖರೀದಿ ಮಾಡಿದ್ದಾರೆ. ಮನೆಯ ವಿಸ್ತೀರ್ಣ 4000 ಚದರ ಅಡಿ ಎಂದು ಹೇಳಲಾಗ್ತಿದೆ. ಬಾಲಿವುಡ್ ಸ್ಟಾರ್ ನಟಿ- ನಟಿಯರು ವಾಸಿಸುವ ಏರಿಯಾದಲ್ಲಿಯೇ ಮನೆ ಖರೀದಿ ಮಾಡಿದ್ದಾರೆ.

ಟಾಲಿವುಡ್‌ನಲ್ಲಿ ರಶ್ಮಿಕಾ, ಶ್ರೀಲೀಲಾ ಹವಾ ಜಾಸ್ತಿ ಆದ್ಮೇಲೆ ಬಾಲಿವುಡ್‌ನತ್ತ ನಟಿ ಮುಖ ಮಾಡಿದ್ದರು. ಹಿಂದಿ ಸಿನಿಮಾಗಳಲ್ಲಿ ಅವಕಾಶಗಳು ಅರಸಿ ಬರುತ್ತಿದ್ದಂತೆ ಈಗ ತೆಲುಗಿನಲ್ಲಿಯೂ ನಟಿಗೆ ಕರೆ ಬರುತ್ತಿದೆ.

ಶಾಹಿದ್ ಕಪೂರ್ ಜೊತೆ ಹೊಸ ಸಿನಿಮಾ, ಸುನೀಲ್ ಶೆಟ್ಟಿ ಪುತ್ರನಿಗೆ ನಾಯಕಿಯಾಗಿ ಹೊಸ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ನಾಗಚೈತನ್ಯ ಮುಂಬರುವ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ನಾನಿ ಜೊತೆ ನಟಿಸುವ ಅವಕಾಶ ಕೂಡ ಸಿಕ್ಕಿದೆ.

Continue Reading

LATEST NEWS

Trending