Monday, July 4, 2022

ಮನೆಯಿಂದ ಹೊರಕರೆದು ಮಾಜಿ ಕಾರ್ಪೋರೇಟರ್‌ನ ಬರ್ಬರ ಹತ್ಯೆ

ಬೆಂಗಳೂರು: ಮುಂಜಾನೆ ಮನೆಯಿಂದ ಹೊರಗೆ ಕರೆಸಿ ಮಾಜಿ ಕಾರ್ಪೋರೇಟರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹತ್ಯೆಯಾದ ಮಾಜಿ ಕಾರ್ಪೋರೇಟರನ್ನು ರೇಖಾ ಕದಿರೇಶ್‌ ಎಂದು ಗುರುತಿಸಲಾಗಿದೆ.

ನಗರದ ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದೀರೇಶ್ ಅವರನ್ನು ಪ್ಲವರ್ ಗಾರ್ಡನ್ ಬಳಿ ದುಷ್ಕರ್ಮಿಗಳು ಮನೆಯಿಂದ ಹೊರಗೆ ಕರೆದು ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ತಕ್ಷಣವೇ ಗಾಯಾಳು ರೇಖಾ ಕದೀರೇಶ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಛಲವಾದಿ ಪಾಳ್ಯದ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ರೇಖಾ ಅವರ ಪತಿ ಕದಿರೇಶ್ ಅವರನ್ನು 2018ರಲ್ಲಿ ಹಾಡಹಗಲೇ ಕಾಟನ್‍ಪೇಟೆಯ ಅಂಜಿನಪ್ಪ ಗಾರ್ಡನ್ ನಲ್ಲಿ ಕೊಲೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here

Hot Topics

ಉಡುಪಿಯ ಸಿನಿ ಶೆಟ್ಟಿಗೆ ಒಲಿದ ‘2022 ನೇ ಮಿಸ್ ಇಂಡಿಯಾ’ ಕಿರೀಟ

ಮುಂಬೈ: 2022ನೇ ಸಾಲಿನ ಮಿಸ್ ಇಂಡಿಯಾ ಸ್ಪರ್ಧೆಯ ವಿಜೇತರನ್ನು ಘೋಷಣೆ ಮಾಡಲಾಗಿದ್ದು, ಉಡುಪಿಯ ಮೂಲದ ಇನ್ನಂಜೆಯ ನಿವಾಸಿಯಾಗಿರುವ ಸಿನಿ ಶೆಟ್ಟಿಯವರು ಮಿಸ್ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಈ ಕಾರ್ಯಕ್ರಮವು ನಿನ್ನೆ ಸಂಜೆ ಮುಂಬೈನ...

ಸುಳ್ಯ: ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿ-ಸಹಸವಾರೆಗೆ ಗಾಯ

ಸುಳ್ಯ: ಎರಡು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಎರಡು ವಾಹನಗಳ ಸವಾರರು ಅಪಾಯದಿಂದ ಪಾರಾದಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಜಟ್ಟಿಪಳ್ಳ ಎಂಬಲ್ಲಿನ ಮುಖ್ಯ ರಸ್ತೆಯಲ್ಲಿ ನಡೆದಿದೆ.ಸುಳ್ಯದ ಮಾಧ್ಯಮವೊಂದರ...

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ರಾಜ್ಯದಲ್ಲೇ ಮೊದಲ ಬಾರಿಗೆ ಎಡಿಜಿಪಿ ಬಂಧನ

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು, ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಕರೆತಂದಿದ್ದಾರೆ.ಪೊಲೀಸ್ ನೇಮಕಾತಿ...