ಬೆಂಗಳೂರು: ನಂಜನಗೂಡಿನಲ್ಲಿ ಹಿಂದೂ ದೇವಸ್ಥಾನವನ್ನು ನೆಲಸಮ ಮಾಡಿದ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆನಪಾಗಲಿಲ್ಲವೇ? ಎಂದು ಟ್ವಿಟ್ಟರ್‌ನಲ್ಲಿ ವೀಡಿಯೋ ಹಾಕಿ ಪ್ರತಿಕ್ರಿಯಿಸಿದ್ದಾರೆ.
ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ @BJP4Karnataka ಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆನಪಾಗಲಿಲ್ಲವೇ?
3/5 pic.twitter.com/91pFoEykPj— Siddaramaiah (@siddaramaiah) September 11, 2021
ಇಂದು ಸಭೆ
ಇತ್ತ ಹಿಂದೂ ದೇವಾಲಯಗಳ ತೆರವಿಗೆ ಆದೇಶ ಹಿನ್ನೆಲೆ ಇಂದು ಸಂಜೆ ಆರ್‌ಎಸ್‌ಎಸ್ ತುರ್ತು ಸಭೆ ಕರೆದಿದೆ. ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರಂತೆ.
ಸೆಪ್ಪೆಂಬರ್ 16 ರಂದು ಬೃಹತ್ ಹೋರಾಟ ಕುರಿತಂತೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ. ದೇವಾಲಯ ತೆರವಿಗೆ ಕಾರಣರಾದ ಅಧಿಕಾರಿಗಳ ತಲೆದಂಡ, ಸ್ಥಳೀಯ ಬಿಜೆಪಿ ಶಾಸಕರು, ಸಂಸದರ ನಿರ್ಲಕ್ಷ ಕುರಿತಂತೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಮೈಸೂರಿನ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಈ ಕ್ಲೋಸ್ ಡೋರ್ ಮೀಟಿಂಗ್ಗೆ ಮೈಸೂರು ವಿಭಾಗದ ಎಲ್ಲಾ ಸಂಘ ಪರಿವಾರದ ನಾಯಕರಿಗೆ ಆಹ್ವಾನ ನೀಡಲಾಗಿದೆಯಂತೆ. ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ, ಸರ್ಕಾರದ ನಿರ್ಲಕ್ಷ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.