Saturday, October 1, 2022

ದೇವರ ಮೂರ್ತಿ ಮುಟ್ಟಿದ ಬಾಲಕನಿಗೆ ನೀಡಿದ ಶಿಕ್ಷೆಯನ್ನು ಧರ್ಮಗ್ರಂಥಗಳೂ ಒಪ್ಪುವುದಿಲ್ಲ-ಪೇಜಾವರ ಶ್ರೀ

ಉಡುಪಿ: ಮಾಲೂರಿನಲ್ಲಿ ಉತ್ಸವ ಮೂರ್ತಿ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ಮೂರ್ತಿ ಮುಟ್ಟಿರುವ ಕಾರಣಕ್ಕೆ 60000 ದಂಡ ಹಾಕಿದ ಘಟನೆಗೆ ಸಂಬಂಧಿಸಿ ಉಡುಪಿಯಲ್ಲಿ ಪೇಜಾವರ ಶ್ರೀ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


‘ಈ ಘಟನೆ ಅತ್ಯಂತ ಖೇದ ತಂದಿದೆ. ಇಂತಹ ಕೃತ್ಯಗಳನ್ನು ಧರ್ಮಶಾಸ್ತ್ರಗಳು ಕೂಡಾ ಒಪ್ಪುವುದಿಲ್ಲ. ಇಂತಹ ಘಟನೆಗಳು ಇನ್ನು ಮುಂದೆ ನಡೆಯಬಾರದು.

ಸಂಘಟನೆಗಳು ಯಾವ ರೀತಿ ಜಾಗೃತಿಯನ್ನು ಮೂಡಿಸುತ್ತಿದೆಯೋ ಸರ್ಕಾರ ಕೂಡಾ ತಪ್ಪು ಮಾಡಿದವರನ್ನು ಶಿಕ್ಷಿಸಬೇಕು’ ಎಂದು ಕರೆ ನೀಡಿದ್ದಾರೆ.

ಇನ್ನು ಉಗ್ರ ಸಂಘಟನೆಗಳ ಜೊತೆ ಲಿಂಕ್ ಹೊಂದಿರುವ ವ್ಯಕ್ತಿಗಳ ಬಂಧನಕ್ಕೆ ಸಂಬಂಧಿಸಿ ಮಾತನಾಡಿ ‘ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವ ವ್ಯಕ್ತಿಗಳು ಈಗಾಗಲೇ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಇರುವುದು ಪತ್ತೆಯಾಗಿದೆ. ಈ ವಿಷಯ ಅತ್ಯಂತ ಖೇದ ತಂದಿದೆ.

ಇದರಂತೆ ಇನ್ನು ಕೂಡಾ ಇರಬಾರದೇಕೆ? ಆದ್ದರಿಂದ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದು ಕೋಮುಸಂಘರ್ಷ ಅಲ್ಲ. ಉಗ್ರರಿಂದ ಯಾರಿಗೂ ಕೂಡಾ ನೆಮ್ಮದಿ ಇಲ್ಲ’ ಎಂದು ಹೇಳಿದರು.

LEAVE A REPLY

Please enter your comment!
Please enter your name here

Hot Topics

ಪ್ರವೀಣ್ ನೆಟ್ಟಾರು ಪತ್ನಿಗೆ ಒಲಿದು ಬಂತು ಸರ್ಕಾರಿ ಕೆಲಸ: ಅಧಿಕೃತ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರಿಗೆ ಸಿಎಂ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ನೆಲೆಯಲ್ಲಿ ನೇಮಕಾತಿ ಮಾಡಿ ರಾಜ್ಯ ಸರ್ಕಾರ ಆದೇಶ...

ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿ ಕುಸಿತ ಪ್ರದೇಶಕ್ಕೆ ಸಚಿವ ಅಂಗಾರ ಭೇಟಿ

ಬೈಂದೂರು: ಉಡುಪಿ ಜಿಲ್ಲೆ ಗಂಗೊಳ್ಳಿ ಮೀನುಗಾರಿಕಾ ಬಂದರಿನ ನಿರ್ಮಾಣ ಹಂತದ ಜೆಟ್ಟಿ ಕುಸಿತವಾದ ಪ್ರದೇಶಕ್ಕೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ಭೇಟಿ ನೀಡಿ ಪರಿಶೀಲಿಸಿದರು.ನಂತರ ಮಾತನಾಡಿದ ಅವರು 'ಜೆಟ್ಟಿಯ 150 ಮೀಟರಿಗೂ...

ಸಿದ್ಧರಾಮಯ್ಯನಿಗೆ ಧಮ್ ಇದ್ರೆ ಹಿಂದೂಗಳ ಓಟು ಬೇಡ ಎನ್ನಲಿ ನೋಡೋಣ-ರಾಜ್ಯಾಧ್ಯಕ್ಷ ನಳಿನ್

ಹುಬ್ಬಳ್ಳಿ: ನಮಗೆ ಪಿಎಫ್‌ಐ ಬ್ಯಾನ್ ಮಾಡುವಂತೆ ಹಾಕಿದ ಸವಾಲಿಗೆ ತಕ್ಕಂತೆ ಇಂದು ಮಾಡಿ ತೋರಿಸಿದ್ದೇವೆ. ಅಷ್ಟೊಂದು ಧಮ್ ಇದ್ರೆ ಸಿದ್ಧರಾಮಯ್ಯನವರು ಹಿಂದೂಗಳ ಓಟು ನನಗೆ ಬೇಕಾಗಿಲ್ಲ ಎಂದು ಹೇಳಲಿ ನೋಡೋಣ' ಎಂದು ಬಿಜೆಪಿ...