Connect with us

    LATEST NEWS

    ಹಾರ್ಟ್​ ಅಟ್ಯಾಕ್​; ಭಾರತದ ಯುವ ಮಹಿಳಾ ಉದ್ಯಮಿ ಪಂಖೂರಿ ಶ್ರೀವಾಸ್ತವ ಇನ್ನಿಲ್ಲ..!

    Published

    on

    ಮುಂಬೈ : ಭಾರತದ ಉದಯೋನ್ಮಖ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 32 ವರ್ಷದ ಅವರ ಸಾವಿಗೆ ಉದ್ಯಮ ಜಗತ್ತು ಸಂತಾಪ ವ್ಯಕ್ತಪಡಿಸಿದೆ.

    ಸಾಮಾಜಿಕ ಉದ್ಯಮ ‘ಪಂಖೂರಿ’ ಮತ್ತು ಮನೆ ಬಾಡಿಗೆ ಸ್ಟಾರ್ಟ್‌ಅಪ್ ಗ್ರಾಬ್‌ಹೌಸ್‌ನ ಸಂಸ್ಥಾಪಕಿ ಆಗಿ ಪಂಖೂರಿ ಹೆಸರು ಮಾಡಿದ್ದರು. ಅವರಿಗೆ ಇಂದು ಹಠಾತ್​ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕಂಪನಿ ಟ್ವೀಟ್​ ಮೂಲಕ ತಿಳಿಸಿದೆ.

    ಪಂಖೂರಿ ತಮ್ಮ ಹೆಸರಿನಲ್ಲಿಯೇ ಉದ್ಯಮವನ್ನು ಸ್ಥಾಪಿಸಿದ್ದರು. ಪಂಖುರಿ ಭಾರತದಲ್ಲಿ ಲೈವ್ ಸ್ಟ್ರೀಮಿಂಗ್, ಚಾಟ್ ಮತ್ತು ಮೈಕ್ರೋ-ಕೋರ್ಸ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಸಿಕ್ವೊಯಾ ಕ್ಯಾಪಿಟಲ್-ಬೆಂಬಲಿತ ಸಾಮಾಜಿಕ ಸಮುದಾಯ ವೇದಿಕೆಯಾಗಿದೆ.

    ಇದಕ್ಕೆ ಮೊದಲು ಪಂಖೂರಿ ಶ್ರೀವಾಸ್ತವ ಅವರು 2012 ರಲ್ಲಿ ‘ಗ್ರಾಬ್‌ಹೌಸ್’ ಎಂಬ ಮನೆ-ಬಾಡಿಗೆ ಸ್ಟಾರ್ಟ್ಅಪ್ ಅನ್ನು ಸ್ಥಾಪಿಸಿದ್ದರು. ನಂತರ 2016 ರಲ್ಲಿ ಆನ್‌ಲೈನ್ ಮಾರುಕಟ್ಟೆ ಕ್ವಿಕರ್‌ಗೆ ಮಾರಾಟವಾದ ಗ್ರಾಬ್‌ಹೌಸ್ ಅನ್ನು ಸಿಕ್ವೊಯಾ ಕ್ಯಾಪಿಟಲ್, ಕಲಾರಿ ಕ್ಯಾಪಿಟಲ್ ಮತ್ತು ಇಂಡಿಯಾ ಕ್ವಾಟಿಯೆಂಟ್ ಬೆಂಬಲಿಸಿತು.

    ಪಂಖೂರಿ ಹಠಾತ್ ಸಾವು ಅನೇಕರಿಗೆ ದಿಗ್ಭ್ರಮೆ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಹೆಚ್ಚಿನ ಹೃದಯ ಸ್ತಂಭನ ಪ್ರಕರಣ ವರದಿಯಾಗುತ್ತಿದೆ. ಯುವಜನತೆಯಲ್ಲಿ ಯಾವ ಕಾರಣದಿಂದಾಗಿ ಈ ಹೃದಯಾಘಾತ ಹೆಚ್ಚುತ್ತಿದೆ ಎಂಬ ಕುರಿತು ವೈದ್ಯರು ಕೂಡ ಅನೇಕ ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ.

    ಇದರ ಜೊತೆಗೆ ಅನೇಕ ಸಲಹೆಗಳು ಕೂಡ ಕೇಳಿ ಬರುತ್ತಿದೆ. ಕೋವಿಡ್​ 19 ಸಮಯದಲ್ಲಿ ಬಂದ್​ ಆಗಿದ್ದ ಜಿಮ್​ಗಳು ಮತ್ತೆ ತೆರೆದಾಗ ಹೆಚ್ಚಿನ ಜನರು ವಿಶ್ರಾಂತಿಯಲ್ಲಿದ್ದ ಜನರು ತಕ್ಷಣಕ್ಕೆ ವ್ಯಾಯಾಮಗಳ ಮೊರೆ ಹೋದಾಗ ಹೆಚ್ಚಿನ ಒತ್ತಡಕ್ಕೆ ಸಿಲುಕಿ ಈ ರೀತಿಯ ಸಬ್​ ಕ್ಲಿನಿಕಲ್​ ಮಯೋ ಕಾರ್ಡಿಯೆಟಿಸ್ಟ್​ ಆಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ.

    LATEST NEWS

    ಹುಲ್ಲು ತರಲು ಗುಡ್ಡಕ್ಕೆ ತೆರಳಿದ್ದ ವೃದ್ಧೆ ಶ*ವವಾಗಿ ಪತ್ತೆ; ಚಿರತೆ ದಾ*ಳಿ ಶಂಕೆ

    Published

    on

    ಉಡುಪಿ : ಹಸುಗಳಿಗೆ ಹುಲ್ಲು ತರಲೆಂದು ಗುಡ್ಡಕ್ಕೆ ತೆರಳಿದ್ದ ವೃದ್ಧೆಯೋರ್ವರು ಮನೆಯ ಎದುರಿನ ಗುಡ್ಡದಲ್ಲಿ ಶ*ವವಾಗಿ ಪತ್ತೆಯಾಗಿರುವ ಘಟನೆ ಮಣಿಪಾಲ ಸರಳೇಬೆಟ್ಟುವಿನ ನೆಹರು ನಗರದಲ್ಲಿ  ನಡೆದಿದೆ‌. ಅವರ ಮೃತದೇಹ ಮೇಲೆ ಗಾಯದ ಕುರುಹುಗಳಿದ್ದು, ಚಿರತೆ ದಾ*ಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

    ಸರಳೇಬೆಟ್ಟುವಿನ ನೆಹರು ನಗರ ನಿವಾಸಿ ಪುಷ್ಪಾ ನಾಯ್ಕ್ (66) ಮೃ*ತಪಟ್ಟವರು. ಅವರು‌ ಗುರುವಾರ(ನ.28) ಸಂಜೆ ಹಸುಗಳಿಗೆ ಹುಲ್ಲು ತರಲು ಮನೆಯ ಎದುರಿನ ಗುಡ್ಡಕ್ಕೆ ತೆರಳಿದ್ದರು. ಬಳಿಕ ಎಷ್ಟೇ ಹೊತ್ತಾದರೂ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಇದನ್ನು ಗಮನಿಸಿದ ಮನೆಯವರು ನೆರೆಮನೆಯವರ ಜೊತೆಗೂಡಿ ಗುಡ್ಡದಲ್ಲಿ ಹುಡುಕಾಡಿದ್ದಾರೆ. ಆದರೆ ಪುಷ್ಪ ನಾಯ್ಕ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಶುಕ್ರವಾರ(ನ.29) ಬೆಳಿಗ್ಗೆ ಮನೆ ಎದುರು ಗುಡ್ಡೆಯಲ್ಲಿ ಪುಷ್ಪಾ ನಾಯ್ಕ್ ಶ*ವ ಪತ್ತೆಯಾಗಿದೆ.‌ ಅವರ ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿದ್ದು, ಕೈಗಳಿಗೂ ಪರಚಿದ ಗಾ*ಯಗಳಾಗಿವೆ ಎಂದು ಪುತ್ರ ಗಣೇಶ್ ನಾಯ್ಕ್ ತಿಳಿಸಿದ್ದಾರೆ.

    ಇದನ್ನೂ ಓದಿ : ಆರ್‌ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !

    ಈ ಭಾಗದಲ್ಲಿ ಚಿರತೆ ಹಾ*ವಳಿ ಕೂಡ ಹೆಚ್ಚಾಗಿದೆ. ಹೀಗಾಗಿ ಚಿರತೆ ದಾ*ಳಿಯಿಂದ ಮೃ*ತಪಟ್ಟಿದ್ದಾರೆಯೋ‌ ಅಥವಾ ಇನ್ಯಾವುದೋ ಕಾರಣದಿಂದ ಮೃ*ತಪಟ್ಟಿದ್ದಾರೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

     

    Continue Reading

    LATEST NEWS

    ಆರ್‌ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !

    Published

    on

    ಮಂಗಳೂರು/ಬೆಂಗಳೂರು: ಆರ್‌ಸಿಬಿ ಎಂದರೆ ಸಾಕು ಕನ್ನಡಿಗರಿಗೆ ಎಲ್ಲಿಲ್ಲದ ವ್ಯಾಮೋಹ. ಆದರೆ ಅಭಿಮಾನಿಗಳ ಪ್ರಿತೀಯನ್ನು ಆರ್‌ಸಿಬಿ ಬಂಡಾವಾಳವನ್ನಾಗಿ ಪರಿವರ್ತಿಸುತ್ತಿರುವುದೇ ಬೇಸರದ ಸಂಗತಿ
    ಆರ್‌ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹಿಂದಿ ಪೇಜ್ ಪ್ರಾರಂಭಿಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ವಿವಾದಕ್ಕೆ ಈಗ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಿದ್ದು ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದೆ.


    ಈ ಬಗ್ಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ. ಆರ್‌ಸಿಬಿಯ ಎಲ್ಲಾ ಅಪ್ಡೇಟ್ಸ್ ಗಳನ್ನು ನಾವು ಮೀಡಿಯಾದಲ್ಲಿ ಗಮನಿಸುತ್ತಿದ್ದೇವೆ. ಆರ್‌ಸಿಬಿಯನ್ನು ನಾವು ಬಹಳ ಗೌರವಿಸುತ್ತೇವೆ. ಕನ್ನಡಿಗರಿಗೆ ಯಾವುದೇ ಕಾರಣಕ್ಕೂ ನೋವು ಮಾಡಬೇಡಿ ಎಂದು ಹೇಳಲಾಗಿದೆ. ಆರ್‌ಸಿಬಿ ಅವರು ಬದಲಾವಣೆ ಮಾಡಿಕೊಳ್ಳಬಹುದು ಎಂದು ಅಂದುಕೊಂಡಿದ್ದೇನೆ. ಇಲ್ಲವಾದರೆ ನಾವು ಕಾರ್ಯದರ್ಶಿ ಗೆ ನೋಟಿಸ್ ಜಾರಿ ಮಾಡ್ತೀವಿ.

    ಇದನ್ನೂ ಓದಿ: ಭಾರತೀಯ ಕೋಸ್ಟ್ ಗಾರ್ಡ್‌ನ ಗೌಪ್ಯ ಮಾಹಿತಿ ಪಾಕ್‌ಗೆ ರವಾನೆ; ಆರೋಪಿ ಅರೆಸ್ಟ್

    ಆರ್‌ಸಿಬಿ ಎಷ್ಟೇ ಬಾರಿ ಸೋತರೂ ನಾವು ಆ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದೇವೆ. ಅದಕ್ಕೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವುದು ಕನ್ನಡಿಗರು ಹಾಗೂ ಕರ್ನಾಟಕದಲ್ಲಿ ಎಂದು ಹೇಳಿದ್ದಾರೆ.
    ಆರ್‌ಸಿಬಿ ಹಿಂದಿಯಲ್ಲಿ ಮಾತ್ರವಲ್ಲದೇ ಇನ್ನೂ ಬೇರೆ ಬೇರೆ ಭಾಷೆಯಲ್ಲೂ ಪೇಜ್ ತೆಗೆಯುತ್ತೇವೆ ಎಂದು ಹೇಳಿರುವುದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ.

    Continue Reading

    LATEST NEWS

    ಕಟಪಾಡಿ: ಪತ್ನಿ ನಿ*ಧನದ ಬೆನ್ನಲ್ಲೇ ಆಘಾತದಿಂದ ಪತಿ ಸಾ*ವು

    Published

    on

    ಕಟಪಾಡಿ: ಪತ್ನಿ ಮೃ*ತಪಟ್ಟ ಒಂದು ದಿನದಲ್ಲೇ  ಪತಿ ಕೂಡ ಆಘಾತಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ.

    ಕಾರ್ಕಳ ತಾಲೂಕು ಬೈಲೂರು ಮೈನ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜೂಲಿಯಾನಾ ಹೆಲೆನ್‌ ರೆಬೆಲ್ಲೋ (56)ಅವರು ನ.28ರಂದು ನಿ*ಧನ ಹೊಂದಿದ್ದರು. ಇವರ ಪತಿ ಉದ್ಯಾವರ ಗ್ರಾ.ಪಂ. ಹಾಲಿ ಸದಸ್ಯ ಲಾರೆನ್ಸ್‌ ಡೇಸ (62)ಅವರು ಅಸೌಖ್ಯದಿಂದ ನ.29ರಂದು ನಿ*ಧನ ಹೊಂದಿದರು.

    ಉದ್ಯಾವರ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ದೇವಾಲಯದ ಪಾಲನ ಮಂಡಳಿಯಲ್ಲಿ ಮೂರು ಬಾರಿ ಉಪಾಧ್ಯಕ್ಷ, ವಾರ್ಡ್‌ನ ಗುರಿಕಾರರಾಗಿದ್ದ ಮೃತರು ಉದ್ಯಾವರ ಬೋಳಾರಗುಡ್ಡೆ ಕಲಾಯಿಬೈಲ್‌ ನಿವಾಸಿ. ಉದ್ಯಾವರ ಮಂಡಲ ಪಂಚಾಯತ್‌ ಸದಸ್ಯರಾಗಿ, ಒಂದು ಅವಧಿಯಲ್ಲಿ ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷರಾಗಿ ಸುದೀರ್ಘ‌ ಸುಮಾರು ಮೂರು ದಶಕಗಳ ಕಾಲ ಗ್ರಾ.ಪಂ. ಸದಸ್ಯರಾಗಿ ಸಮಾಜಮುಖೀ ಸೇವೆಯನ್ನು ಸಲ್ಲಿಸಿದ್ದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಉದ್ಯಾವರ ಕೆಥೋಲಿಕ್‌ ಸಭಾ, ಲಯನ್ಸ್‌ ಕ್ಲಬ್‌, ಉದ್ಯಾವರ ಫ್ರೆಂಡ್ಸ್‌ ಸರ್ಕಲ್‌ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ ಹಾಗೂ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

    Continue Reading

    LATEST NEWS

    Trending