Connect with us

    LATEST NEWS

    ಸ್ನೇಹಿತರ ನಡುವೆ ವೈಮನಸ್ಸು..! ಸ್ಕೆಚ್‌ ಹಾಕಿದ್ದು ಸ್ನೇಹಿತನಿಗೆ, ಬಲಿಯಾಗಿದ್ದು ತಂದೆ.. !

    Published

    on

    ರಾಮನಗರ : ಸ್ನೇಹಿತರಾಗಿದ್ದವರು ಶತ್ರುಗಳಾಗಲು ಈಗಿನ ಕಾಲದಲ್ಲಿ ಹೆಚ್ಚು ಸಮಯ ಬೇಕಾಗಿಲ್ಲ. ಇವತ್ತು ಹೆಗಲ ಮೇಲೆ ಕೈ ಹಾಕಿಕೊಂಡು ಹೋಗುವವರು ನಾಳೆ ಪರಸ್ಪರ ಹಲ್ಲು ಮಸೆಯುವುದನ್ನು ಕಾಣುತ್ತೇವ. ಇಲ್ಲಿ ಆಗಿದ್ದೂ ಅದೇ. ಅವರೆಲ್ಲಾ ಒಂದು ಸಮಯದಲ್ಲಿ ಸ್ನೇಹಿತರಾಗಿದ್ದರು. ಆ ಒಂದು ಬರ್ತ್ ಡೇ ಪಾರ್ಟಿ ಅವರ ನಡುವೆ ವೈಷಮ್ಯ ಹುಟ್ಟು ಹಾಕಿತ್ತು. ಈ ವೈಷಮ್ಯಕ್ಕೆ ಈಗ ಜೀವವೊಂದು ಬ*ಲಿಯಾಗಿದೆ.


    ಸ್ನೇಹಿತರ ತಂಡದಲ್ಲಿ ಬರ್ತ್ ಡೇ ವಿಚಾರಕ್ಕೆ ಜಗಳ ನಡೆದಿತ್ತು. ಒಬ್ಬ ಜೈಲೂ ಸೇರಿದ್ದ. ಜೈಲಿನಿಂದ ಬಿಡುಗಡೆ ಆಗಿದ್ದೇ ತಡ ಆತನನ್ನು ಮುಗಿಸಿಯೇ ಬಿಡೋಣ ಎಂದು ಆ ಗ್ಯಾಂಗ್ ಹೊರಟಿತ್ತು. ಆದರೆ, ಅವರು ಮುಗಿಸಿದ್ದು ಆತನ ತಂದೆಯನ್ನು. ಈ ಘಟನೆ ನಡೆದಿರೋದು ರಾಮನಗರ ಜಿಲ್ಲೆಯ ಕನಕಪುರದ ಕುರುಪೇಟೆಯ ಮಾಧವನಗರದಲ್ಲಿ.

    ಕನಕಪುರ ಪಟ್ಟಣದ ಗುಂಡಯ್ಯ ಕೊ*ಲೆಯಾದ ವ್ಯಕ್ತಿ. ತನ್ನ ಮಗನನ್ನು ಕೊ*ಲ್ಲಲು ಬಂದ ಗ್ಯಾಂಗ್ ಎದುರು ಮಗನ ಪರ ಮಾತನಾಡಿದ್ದಕ್ಕೆ ಅರುಣ್ ಎಂಬ ವ್ಯಕ್ತಿ ರಾಡಿನಿಂದ ಹ*ಲ್ಲೆ ಮಾಡಿದ್ದಾನೆ. ಪರಿಣಾಮ ತಲೆಗೆ ಬಲವಾದ ಏಟು ಬಿದ್ದು ಗುಂಡ್ಯಯ್ಯ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಬಳಿಕ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ.

    ಇದನ್ನೂ ಓದಿ : ಸತ್ಯವಾದ ದೈವದ ನುಡಿ… ನ್ಯಾಯಾಲಯಕ್ಕೆ ಶರಣಾದ ಕೊಲೆ ಆರೋಪಿ

    ಘಟನೆ ಹಿನ್ನೆಲೆ :

    ಏಪ್ರಿಲ್ ತಿಂಗಳಲ್ಲಿ ಅರುಣ್ ಬರ್ತ್ ಡೇ ಇತ್ತು. ಈ ವಿಚಾರವಾಗಿ ಅರುಣ್ ಹಾಗೂ ಹ*ತ್ಯೆಯಾದ ಗುಂಡಯ್ಯನ ಹಿರಿಯ ಮಗ ರುದ್ರೇಶ್ ನಡುವೆ ಕಿರಿಕ್ ಉಂಟಾಗಿತ್ತು. ಈ ವೇಳೆ ಅರುಣ್ ಮೇಲೆ ಹ*ಲ್ಲೆ ನಡೆಸಿ, ಚಾಕು ಇರಿ*ದು ರುದ್ರೇಶ ಜೈಲು ಪಾಲಾಗಿದ್ದ. ಕಳೆದ ಶನಿವಾರವಷ್ಟೇ ಜಾಮೀನು ಪಡೆದು ರುದ್ರೇಶ್ ಹೊರ ಬಂದಿದ್ದ. ರುದ್ರೇಶ್ ಮೇಲೆ ಸೇಡು ತೀರಿಸಿಕೊಳ್ಳಲು ಅರುಣ್ ಮತ್ತು ಟೀಂ ಸ್ಕೆಚ್ ಹಾಕಿದೆ. ಸೋಮವಾರ ರಾತ್ರಿ ಮನೆಗೆ ತೆರಳಿದ್ದ ಅರುಣ್ ಮತ್ತು ಇಬ್ಬರು, ರುದ್ರೇಶ ಇಲ್ಲದ ಕಾರಣ ತಂದೆಯನ್ನೇ ಕೊ*ಲೆಗೈದಿದೆ.

    ಸದ್ಯ ಪ್ರಮುಖ ಆರೋಪಿ ಅರುಣ್ ಹಾಗೂ ಇಬ್ಬರನ್ನು ಕನಕಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌ ರುದ್ರೇಶ ಕೂಡ ತನಗೆ ಜೀ*ವ ಭಯ ಇದ್ದು ರಕ್ಷಣೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾನೆ.‌

    DAKSHINA KANNADA

    ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಭೇಟಿ ಮಾಡಿದ ಸಂಸದ ಚೌಟ

    Published

    on

    ಮಂಗಳೂರು : ಕರಾವಳಿ ಕಂಡ ಹಿರಿಯ ಮುತ್ಸದ್ದಿ, ನೇರ ನುಡಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ತೆರಳಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಶೀರ್ವಾದ ಪಡೆದು ಪಡೆದು ವಿದ್ಯಮಾನಗಳ ಕುರಿತು ಮಾತನಾಡಿದರು.

    ಬಂಟ್ವಾಳ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಗೋವಿಂದ ಪ್ರಭು, ಜಿಲ್ಲಾ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

    Continue Reading

    LATEST NEWS

    ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತೃ ವಿಯೋಗ

    Published

    on

    ಕೋಟ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿ ವಯೋಸಹಜ ಅಸೌಖ್ಯದಿಂದ ನಿನ್ನೆ(ಜೂ.30) ನಿಧ*ನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.

    ಮೃ*ತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧ*ನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಇದನ್ನೂ ಓದಿ : ‘ಎಲ್ಲಾ ಹಣೆಬರಹ..ನಾವೇನು ಮಾಡೋಕ್ಕಾಗಲ್ಲ…’ ದರ್ಶನ್ ಕೊಲೆ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    Continue Reading

    bangalore

    ಈ ಪುಣ್ಯಕ್ಷೇತ್ರಕ್ಕೆ ಹೋಗಲು ರಾಜ್ಯ ಸರ್ಕಾರದಿಂದ ಸಹಾಯಧನ ಸಿಗಲಿದೆ..!

    Published

    on

    ಬೆಂಗಳೂರು : ಕರ್ನಾಟಕ ರಾಜ್ಯದಿಂದ ಕೈಲಾಸ ಮಾನಸ ಸರೋವರ ಹಾಘೂ ಚಾರ್‌ಧಾಮ್‌ ಯಾತ್ರಿಗಳಿಗೆ ಅನುದಾನ ನೀಡುವ ಕುರಿತು ಮುಜರಾಯಿ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮಾನಸ ಸರೋವರ ಯಾತ್ರಿಗಳಿಗೆ ರೂ.30 ಸಾವಿರ, ಚಾರ್‌ಧಾಮ್‌ ಯಾತ್ರಿಗಳಿಗೆ ರೂ.20 ಸಾವಿರ , ಹಾಗೂ ಈಗಾಗಲೇ ಕಾಶಿ ಯಾತ್ರೆ ಕೈಗೊಂಡ 30 ಸಾವಿರ ಯಾತ್ರಿಗಳಿಗೆ ತಲಾ ರೂ.5 ಸಾವಿರ ಸಹಾಯಧನ ನೀಡಲಾಗುತ್ತದೆ.
    ಕೇವಲ ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳು ಮಾತ್ರ ಈ ಸಹಾಯಧನ ಪಡೆಯಲು ಅರ್ಹರಾಗಿದ್ದಾರೆ. ಈಗಾಗಲೇ ಈ ತೀರ್ಥ ಕ್ಷೇತ್ರಗಳಿಗೆ ಹೋಗಿ ಬಂದಿರುವವರು ಸಹಾಯಧನವನ್ನು ಪಡೆಯಲು ಅರ್ಹರಾಗಿದ್ದಾರೆ. ಇದಕ್ಕಾಗಿ ರೂ.25 ಪಾವತಿಸಿ ಸಂಬಂಧಿಸಿದ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

    ಚಾರ್‌ಧಾಮ್ ಯಾತ್ರೆಯ ಮಾರ್ಗಸೂಚಿಗಳು

    • ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅನ್ನು ಅಪ್‌ಲೋಡ್ ಮಾಡುವುದು.
    • 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಈ ಯೋಜನೆಯಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕೆ ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಅಪ್‌ಲೋಡ್ ಮಾಡಬೇಕು.
    • ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಮತ್ತೊಮ್ಮೆ ಅನುದಾನ ನೀಡಲಾಗುವುದಿಲ್ಲ.

    ಕಾಶಿ ಯಾತ್ರೆಯ ಮಾರ್ಗಸೂಚಿಗಳು

    • ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್ 1ಕ್ಕೆ 18 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು.
    • 18 ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸಬೇಕು.

     

    ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಾರ್ಗಸೂಚಿಯನ್ನು ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ

    Continue Reading

    LATEST NEWS

    Trending