Connect with us

LATEST NEWS

ಮುಗಿಯಲಿವೆ ಕನ್ನಡದ 3 ಜನಪ್ರಿಯ ಧಾರಾವಾಹಿಗಳು; ಯಾವುವು ಗೊತ್ತಾ?

Published

on

ಕನ್ನಡ ವಾಹಿನಿಗಳಲ್ಲಿ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಬಹುತೇಕ ಧಾರಾವಾಹಿಗಳು ಜನಪ್ರಿಯವಾಗಿವೆ. ಈ ನಡುವೆ ಪ್ರಸಿದ್ಧ 3 ಧಾರಾವಾಹಿಗಳು ಅಂತ್ಯವಾಗಲಿವೆ ಎಂದು ಹೇಳಲಾಗುತ್ತಿದೆ.ಈಗಾಗಲೇ ಹಳೆಯ ಧಾರಾವಾಹಿಗಳು, ರಿಯಾಲಿಟಿ ಶೋ ಅಂತ್ಯ ಕಂಡಿದ್ದವು. ಕನ್ನಡದಲ್ಲಿ ಹೊಸ ಧಾರವಾಹಿಗಳು ಇತ್ತೀಚೆಗೆ ಆರಂಭಗೊಂಡಿದ್ದವು. ಶ್ರೀಗೌರಿ, ಕರಿಮಣಿ, ಆಸೆ, ಲಕ್ಷ್ಮೀ ನಿವಾಸ ಧಾರಾವಾಹಿಗಳು ಹೊಸದಾಗಿ ಆರಂಭಗೊಂಡಿದ್ದು, ಸದ್ಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಮತ್ತೆ ಹಳೆಯ ಜನಪ್ರಿಯ ಧಾರಾವಾಹಿಗಳು ಮುಗಿಯಲಿವೆ ಎಂದು ಹೇಳಲಾಗಿದೆ.

ಯಾವೆಲ್ಲಾ ಧಾರಾವಾಹಿಗಳು ಮುಗಿಯಲಿವೆ?

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಮೂರು ಧಾರಾವಾಹಿಗಳು ಅಂತ್ಯವಾಗಲಿವೆ. ಕಲರ್ಸ್ ಕನ್ನಡ ವಾಹಿನಿಯ ಗೀತಾ, ಝೀ ಕನ್ನಡದ ಹಿಟ್ಲರ್ ಕಲ್ಯಾಣ, ಸ್ಟಾರ್ ಸುವರ್ಣ ವಾಹಿನಿಯ ಕಥೆಯೊಂದು ಶುರುವಾಗಿದೆ ಧಾರಾವಾಹಿಗಳು ಮುಗಿಯಲಿವೆ ಎಂದು ಹೇಳಲಾಗಿದೆ.

‘ಗೀತಾ’ ಮುಕ್ತಾಯ :


ಧನುಷ್ ಗೌಡ, ಭವ್ಯಾ ಗೌಡ ನಾಯಕ – ನಾಯಕಿಯಾಗಿ ಕಾಣಿಸಿಕೊಂಡಿರುವ ಗೀತಾ ಸೀರಿಯಲ್ ಮುಗಿಯಲಿದೆ ಎಂದು ಹೇಳಲಾಗಿದೆ. ಜ. 6,2020 ರಂದು ಗೀತಾ ಧಾರಾವಾಹಿ ಆರಂಭಗೊಂಡಿತ್ತು. ಲವ್ ಸ್ಟೋರಿ, ದ್ವೇಷ, ರಾಜಕಾರಣ, ಕೌಟುಂಬಿಕ ಕಥೆಯನ್ನೊಳಗೊಂಡಿದ್ದ ಈ ಧಾರಾವಾಹಿ ಭಾರೀ ಜನಮನ್ನಣೆ ದೊರಕಿತ್ತು.

ಮುಗಿಯಲಿದೆ ‘ಹಿಟ್ಲರ್ ಕಲ್ಯಾಣ’ :

 

ಆರಂಭದಲ್ಲಿ ಭಾರೀ ಸದ್ದು ಮಾಡಿದ್ದ, ದಿಲೀಪ್ ರಾಜ್ ನಟನೆಯ ಹಿಟ್ಲರ್ ಕಲ್ಯಾಣ ತನ್ನ ಅಂತಿಮ ಹಂತದ ಶೂಟಿಂಗ್ ನಲ್ಲಿದೆ. ಮಲ್ಐಕಾ ಟಿ ವಸುಪಾಲ್ ನಾಯಕಿಯಾಗಿದ್ದ ಈ ಧಾರಾವಾಹಿಯಲ್ಲಿ ನೇಹಾ ಪಾಟೀಲ್, ರವಿ ಭಟ್, ವಾಣಿಶ್ರೀ, ವಿದ್ಯಾಮೂರ್ತಿ, ರಜನಿ ಪಾತ್ರವಾಗಿದ್ದಾರೆ.

ಕಥೆಯೊಂದು ಶುರುವಾಗಿದೆ ಅಂತ್ಯ :


ಎರಡು ಮನೆತನಗಳ ನಡುವಿನ ಕಥಾಹಂದರ ಒಳಗೊಂಡಿದ್ದ ಕಥೆಯೊಂದು ಶುರುವಾಗಿದೆ ಅಂತ್ಯ ಕಾಣುವ ಹಂತದಲ್ಲಿದೆ. ಅಕ್ಷತಾ ದೇಶಪಾಂಡೆ, ಚಂದು ಬಿ.ಗೌಡ, ಸುಜಾತಾ ಅಕ್ಷಯ್, ಸುಂದರ ಶ್ರೀ, ಇಂಚರಾ ಜೋಶಿ ಮೊದಲಾದವರು ಧಾರವಾಹಿಗಾಗಿ ಬಣ್ಣ ಹಚ್ಚಿದ್ದಾರೆ.

ಹೊಸ ಧಾರಾವಾಹಿಗಳಾಗಮನ :


ಹಳೇ ಧಾರಾವಾಹಿಗಳು ಮುಗಿಯುತ್ತವೆ ಎಂದರೆ ಆ ಜಾಗಕ್ಕೆ ಹೊಸ ಧಾರಾವಾಹಿ ಅಥವಾ ರಿಯಾಲಿಟಿ ಶೋಗಳು ಆರಂಭವಾಗುತ್ತವೆ. ಅಂತೆಯೇ, ಈ ಬಾರಿ ಹೊಸ ಧಾರಾವಾಹಿಗಳು ಲಗ್ಗೆ ಇಡಲಿವೆ. ಕಥೆಯೊಂದು ಶುರುವಾಗಿದೆ ಧಾರಾವಾಹಿ ಜಾಗಕ್ಕೆ ಲಕ್ಷ್ಮೀ ನಿವಾಸ ಆಗಮನವಾಗಲಿದೆ.

ಅಲ್ಲದೇ ಕಲರ್ಸ್ ಕನ್ನಡ ಧಾರಾವಾಹಿ ಆರಂಭಗೊಳ್ಳಲಿದೆ. ‘ಚುಕ್ಕಿ ತಾರೆ’ ಎಂಬ ಧಾರಾವಾಹಿ ಪ್ರಾರಂಭವಾಗಲಿದೆ. ಈಗಾಗಲೇ ಪ್ರೋಮೋಗಳು ಗಮನ ಸೆಳೆದಿವೆ. ಅಲ್ಲದೇ, ನವೀನ್ ಸಜ್ಜು ನಟಿಸುತ್ತಿರೋದು ಹೆಚ್ಚು ವಿಶೇಷ.

Click to comment

Leave a Reply

Your email address will not be published. Required fields are marked *

LATEST NEWS

ಪಾಕ್ ನಿಂದ ಬಂದಿದ್ದ ಸೀಮಾ ಹೈದರ್ ಮೇಲೆ ಪತಿಯಿಂದ ಹ*ಲ್ಲೆ; ಸೀಮಾ ಹೇಳಿದ್ದೇನು?

Published

on

ನವದೆಹಲಿ : ಸೀಮಾ ಹೈದರ್ ಯಾರಿಗೆ ತಾನೇ ಗೊತ್ತಿಲ್ಲ. ದೂರದ ಪಾಕಿಸ್ತಾನದಿಂದ ಭಾರತಕ್ಕೆ ತನ್ನ ಪ್ರೇಮಿಗಾಗಿ ಬಂದ ಮಹಿಳೆ. ಈ ವಿಚಾರ ದೇಶದಾದ್ಯಂತ ದೊಡ್ಡ ಮಟ್ಟಿನ ಸುದ್ದಿಯಾಗಿತ್ತು. ಆದರೆ, ಈಗ ಆಕೆಯ ಕುರಿತು ಮತ್ತೊಂದು ಸುದ್ದಿ ವೈರಲ್ ಆಗಿದೆ. ಹೌದು, ಯಾರ ಪ್ರೀತಿ ಅರಸಿ ಬಂದು ಆತನನ್ನು ವಿವಾಹವಾಗಿದ್ದಳೋ ಆತನೇ ಆಕೆಯ ಮೇಲೆ ತೀವ್ರ ಹ*ಲ್ಲೆ ನಡೆಸಿದ್ದಾನೆ ಎಂಬುದಾಗಿ.

ಆಕೆಯ ಪತಿ ಸಚಿನ್ ತೀವ್ರ ಹ*ಲ್ಲೆ ನಡೆಸಿದ್ದಾನೆ ಎಂಬ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವೀಡಿಯೋದಲ್ಲಿ ಸೀಮಾ ಕಣ್ಣುಗಳು ಊದಿಕೊಂಡಿವೆ. ಆಕೆಯ ಬಲಭಾಗದ ಕಣ್ಣಿನ ಕೆಳಭಾಗ ಊದಿಕೊಂಡಿದೆ. ಹೆಪ್ಪುಗಟ್ಟಿದಂತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಪತಿಯಿಂದ ಸೀಮಾ ತೀವ್ರ ಹ*ಲ್ಲೆಗೆ ಒಳಗಾಗಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ
ಸೀಮಾ ಹೈದರ್ ಹೇಳಿದ್ದೇನು?

ಈ ವೈರಲ್ ವೀಡಿಯೋ ಬಗ್ಗೆ ಸ್ವತಃ ಸೀಮಾ ಹೈದರ್ ವೀಡಿಯೋವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ. ಪತಿ-ಪತ್ನಿ ಜೊತೆಯಾಗಿ ಕುಳಿತು ಈ ವೀಡಿಯೋ ಮಾಡಿದ್ದಾರೆ. ‘ಈ ವೀಡಿಯೋ ಫೇಕ್ ಆಗಿದೆ. ನನ್ನ ಹಾಗೂ ನನ್ನ ಪತಿಯನ್ನು ಹೀಗೆ ತೋರಿಸಲು ಯಾವ ಕೀಳುಮಟ್ಟಕ್ಕೂ ಇಳಿಯಬಲ್ಲರು. ನಮ್ಮ ಪ್ರೇಮವನ್ನು ಬಲಹೀನಗೊಳಿಸಲು ಹೀಗೆ ಮಾಡಲಾಗಿದೆ. ನಿಮಗೆ ಗೊತ್ತಿರುವಂತೆ ದಯವಿಟ್ಟು ಇಂತಹ ಫೇಕ್ ವೀಡಿಯೋಗಳಿಂದ ಎಚ್ಚರವಾಗಿರಿ ಎಂದು ಸೀಮಾ ಹೈದರ್ ಹೇಳಿದ್ದಾರೆ.

Continue Reading

FILM

ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ

Published

on

ಚಂದನವನ : ಮೇಘಾ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ, ಇದೀಗ ಹಿರಿತೆರೆಗೆ ಲಗ್ಗೆ ಇಟ್ಟಿರುವ ಕಲಾವಿದೆ. ಇದೀಗ ಅವರು ಜಿಮ್ ವರ್ಕೌಟ್ ಮಾಡುವ ವೇಳೆ ಕ್ಲಿಕ್ಕಿಸಿದ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಶಾರ್ಟ್ಸ್ ತೊಟ್ಟು ಜಿಮ್ ನಲ್ಲಿ ಮೇಘಾ ಶೆಟ್ಟಿ ವರ್ಕೌಟ್ ಮಾಡಿದ್ದಾರೆ. ಮುದ್ದಾಗಿ, ಗ್ಲಾಮರಸ್ ಆಗಿ ಅವರು ಕಾಣಿಸುತ್ತಿದ್ದಾರೆ.

ಮೇಘಾ ಶೆಟ್ಟಿ ಅಂದ್ರೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗೋದು ಸಹಜ. ಈ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ನಟಿಸಿದ್ದರು. ನಟ ಅನಿರುದ್ಧ್ ಜೊತೆ ನಟಿಸಿದ್ದ ಮೇಘಾಗೆ ಈ ಧಾರಾವಾಹಿ ಜಪ್ರಿಯತೆಯ ಉತ್ತುಂಗಕ್ಕೇರಿಸಿತ್ತು.

ಈ ವೇಳೆ ಸಿನಿಮಾಗಳಿಂದಲೂ ಮೇಘಾ ಅವಕಾಶಗಳನ್ನು ಗಿಟ್ಟಿಸಿಕೊಂಡರು, ಅತ್ತ ಧಾರಾವಾಹಿ ಮುಕ್ತಾಯಗೊಂಡಿತ್ತು. ಇತ್ತು ಮೇಘಾ ಸಿನಿಮಾಗಳಲ್ಲಿ ಬಿಝಿ ಆದರು.ಮಂಗಳೂರು ಮೂಲದ ಈ ಬೆಡಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ತ್ರಿಬಲ್ ರೈಡಿಂಗ್’ ನಲ್ಲಿ ಕಾಣಿಸಿಕೊಂಡರು. ಡಾರ್ಲಿಂಗ್ ಕೃಷ್ಣ ಜೊತೆ ‘ದಿಲ್ ಪಸಂದ್’ನಲ್ಲಿ ನಟಿಸಿದ್ದಾರೆ. ಧನ್ವೀರ್ ಗೌಟ ಜೊತೆ ‘ಕೈವ’ ದಲ್ಲಿ ನಾಯಕಿಯಾಗಿದ್ದಾರೆ. ಸದ್ಯ ಮೇಘ, ಆಫ್ಟರ್ ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : ವಿಮಾನದಲ್ಲೇ ರೋಮ್ಯಾನ್ಸ್‌…ಜೋಡಿಗಳ ಫೋಟೋ ವೈರಲ್‌..!

ಇನ್ನು, ಜಿಮ್ ವರ್ಕೌಟ್ ಸಮಯದ ಫೋಟೋ ಹಂಚಿಕೊಂಡ ಮೇಘಾ ಶೆಟ್ಟಿ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಕೊಡುತ್ತಿದ್ದಾರೆ. ಬ್ಯೂಟಿಫುಲ್ ಎಂದು ಕಮೆಂಟ್ ಹಾಕುತ್ತಿದ್ದಾರೆ.

Continue Reading

DAKSHINA KANNADA

WATCH VIDEO : ದಪ್ಪು ಹಿಡಿದು ನೃತ್ಯ ಮಾಡಿದ ಯು.ಟಿ.ಖಾದರ್; ಹಬ್ಬದ ಸಂಭ್ರಮದ ವಿಡಿಯೋ ವೈರಲ್

Published

on

ಮಂಗಳೂರು : ವಿಧಾನ ಸಭಾ ಸ್ಪೀಕರ್ ಆಗಿದ್ರೂ ಸದಾ ಒಂದಿಲ್ಲ ಒಂದು ಕಾರಣದಿಂದ ಸ್ಪೀಕರ್ ಯು.ಟಿ ಖಾದರ್ ಅವರು ಸುದ್ದಿಯಾಗ್ತಾನೆ ಇರ್ತಾರೆ. ಅವರು ಎಲ್ಲೇ ಹೋದ್ರು ಅವರ ಅಭಿಮಾನಿಗಳು ಅವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡ್ತಾರೆ. ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದೆ.

ರಮ್ಜಾನ್ ಹಬ್ಬದಂದು ಈ ವಿಡಿಯೋ ಶೂಟ್ ಮಾಡಲಾಗಿದೆ ಎನ್ನಲಾಗಿದೆಯಾದ್ರೂ ಅದರ ಖಚಿತತೆ ಇಲ್ಲ. ಹಬ್ಬದ ಸಲುವಾಗಿ ನಡೆದಿದ್ದ ಮೆರವಣಿಗೆ ಒಂದರಲ್ಲಿ ಸ್ಪೀಕರ್ ಖಾದರ್ ಅವರು ದಪ್ಪು ಬಾರಿಸಿ ನೃತ್ಯ ಮಾಡಿದ್ದಾರೆ. ದಪ್ಪು ಅನ್ನೋದು ಮುಸ್ಲಿಂ ಸಮೂದಾಯದ ಸಾಂಪ್ರದಾಯಿಕ ನೃತ್ಯವಾಗಿದ್ದು, ಹೆಚ್ಚಾಗಿ ಇದನ್ನು ಮಕ್ಕಳು ಪ್ರದರ್ಶನ ಮಾಡುತ್ತಾರೆ.


ಇಲ್ಲಿ ಕೂಡಾ ಮೆರವಣಿಗೆಯಲ್ಲಿ ದಪ್ಪು ಪ್ರದರ್ಶನ ಮಾಡುತ್ತಿರುವ ಮಕ್ಕಳ ಜೊತೆ ಮಕ್ಕಳಾಗಿ ದಪ್ಪು ನೃತ್ಯಕ್ಕೆ ಖಾದರ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಖಾದರ್ ಅವರ ಅಭಿಮಾನಿಗಳು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವಿಡಿಯೋ ಯಾವಾಗಿನದ್ದು ಅನ್ನೋದು ಇನ್ನೂ ಗೊತ್ತಾಗಿಲ್ಲ.

ಇದನ್ನೂ ಓದಿ : WATCH VIDEO : ಪುತ್ರಿಯ ಜೊತೆ ಖಾದರ್ ರೌಂಡಪ್‌.. ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಜನನಾಯಕ

Continue Reading

LATEST NEWS

Trending