ಮಂಗಳೂರು: ಕರಾವಳಿಯ ಪುರಾಣ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ರಥೋತ್ಸವದ ಮೂಲಕ ಶುಕ್ರವಾರ ರಾತ್ರಿ ಸಂಪನ್ನಗೊಂಡಿತು.
ಸರಕಾರ ಕೊರೋನಾ ಗೈಡ್‌ಲೈನ್ ಮಾಡಿಕೊಂಡು ಸರಳವಾಗಿ ರಥೋತ್ಸವ ಆಚರಣೆ ಮಾಡುವ ಮೂಲಕ ಸಂಪನ್ನಗೊಂಡಿತು.
ದೇವಸ್ಥಾನದ ಪರಂಪರೆಯಂತೆ ಜೋಗಿ ಮಠದ ನಿರ್ಮಲಾನಂದ ಸ್ವಾಮೀಜಿ ಉತ್ಸವದ ನೇತೃತ್ವ ವಹಿಸಿದ್ದರು.
ಮಂಜುನಾಥ ದೇವರನ್ನು ರಥದಲ್ಲಿ ಕುಳ್ಳಿರಿಸಿ ಶ್ರೀಗಳು ರಥೋತ್ಸವ ವೀಕ್ಷಣೆ ಮಾಡಿದರು.
ಹಲವಾರು ಮಂದಿ ಭಕ್ತಾದಿಗಳು ತೇರು ಎಳೆದು ಸಂಭ್ರಮಿಸಿದರು.