Connect with us

LATEST NEWS

ಎಲಾನ್​ ಮಸ್ಕ್ ಪಾಲಾದ ಟ್ವಿಟ್ಟರ್‌: 44 ಬಿಲಿಯನ್‌ ಡಾಲರ್‌ಗೆ ಮಾರಾಟ

Published

on

ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳಲ್ಲಿ ಒಂದಾದ ಟ್ವಿಟ್ಟರ್‌​ ಅನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್​ ಕಾರು ಕಂಪನಿಯ ಮುಖ್ಯಸ್ಥ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್​ ಮಸ್ಕ್​ ಖರೀದಿಸಿದ್ದಾರೆ.


ಪ್ರತಿ ಷೇರಿಗೆ 54.2 ಡಾಲರ್​ನಂತೆ ಸುಮಾರು 44 ಶತಕೋಟಿ​ ಡಾಲರ್​ ಅಂದರೆ ಕರ್ನಾಟಕ ಬಜೆಟ್‌ಗಿಂತ ಹೆಚ್ಚಿನ ಮೊತ್ತದೊಂದಿಗೆ ಟ್ವಿಟರ್​ನ ಸಂಪೂರ್ಣ 100 ರಷ್ಟು ಷೇರನ್ನು ಎಲಾನ್​ ಮಸ್ಕ್​ ಖರಿದೀಸಿದ್ದಾರೆ ಎಂದು ಟ್ವಿಟರ್​ ಅಧ್ಯಕ್ಷ ಬ್ರೈಟ್​ ಟೈಲರ್​ ತಿಳಿಸಿದ್ದಾರೆ. ಈವರೆಗೆ ಉದ್ಯಮ ಜಗತ್ತಿನಲ್ಲಿ ನಡೆದ ಬೃಹತ್‌ ಡೀಲ್‌ ಇದಾಗಲಿದೆ. ಮಸ್ಕ್​​ ಅವರು ಈ ಹಿಂದೆ ಟ್ವಿಟರ್​ನಲ್ಲಿ 9.2 ರಷ್ಟು ಷೇರನ್ನು ಹೊಂದಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಅಕ್ಷಯ್ ಕಲ್ಲೇಗ ಕೊಲೆ ಆರೋಪಿಯ ಸಹೋದರನಿಗೆ ಸ್ಕೆಚ್‌ ಹಾಕಿದ ನಾಲ್ವರು ಅರೆಸ್ಟ್..!

Published

on

ಪುತ್ತೂರು: ಸ್ನೇಹಿತನ ಹತ್ಯೆಗೆ ಪ್ರತಿಕಾರ ತೀರಿಸಲು ಸಂಚು ರೂಪಿಸಿದ್ದ ನಾಲ್ವರನ್ನು ಪುತ್ತೂರು ನಗರ ಪೊಲೀರು ಬಂಧಿಸಿದ್ದಾರೆ.

ಪುತ್ತೂರಿನ ನೆಹರೂ ನಗರದಲ್ಲಿ 2023 ರ ನವೆಂಬರ್ 6 ರಂದು ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಕಲ್ಲೆಗ ಹುಲಿ ತಂಡದ ನಾಯಕ ಅಕ್ಷಯ್ ಹತ್ಯೆಗೆ ಪ್ರತಿಕಾರಕ್ಕೆ ಸಂಚು ರೂಪಿಸಲಾಗಿತ್ತು. ಅಕ್ಷಯ್ ಕೊಲೆ ಪ್ರಕರಣದ ಆರೋಪಿ ಮನೀಶ್ ಸಹೋದರ ಮನೋಜ್‌ಗೆ ಈಗಾಗಲೆ ಜೀವ ಬೆದರಿಕೆಯ ಕರೆಗಳು ಬಂದಿದ್ದು, ನಿನ್ನ ತಮ್ಮ ಜೈಲಿನಲ್ಲಿ ಇದ್ದಾನೆ ಹೀಗಾಗಿ ನಿನ್ನನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ಮನೋಜ್ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಕೇವಲ ಬೆದರಿಕೆ ಹಾಕಿದಷ್ಟೇ ಅಲ್ಲದೆ ಮನೋಜ್ ಚಲನವಲನ ಗಮನಿಸುತ್ತಿದ್ದ ನಾಲ್ವರು ದುಷ್ಕರ್ಮಿಗಳು ಮಂಗಳವಾರ ಮನೋಜ್ ಹತ್ಯೆಗೆ ಸ್ಕೆಚ್ ರೂಪಿಸಿದ್ದರು. ಪುತ್ತೂರಿನ ಮುಕ್ರುಂಪಾಡಿ ಎಂಬಲ್ಲಿ ಕಾರಿನಲ್ಲಿ ಮಾರಕಾಸ್ತ್ರಗಳ ಸಹಿತ ಅವಿತುಕೊಂಡು ಮನೋಜ್‌ನನ್ನು ಮುಗಿಸಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಪುತ್ತೂರು ನಗರ ಪೊಲೀಸರು ಮನೋಜ್ ಹತ್ಯೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿ ಬಳಿಕ ಬಂಧಿಸಿದ್ದಾರೆ. ಬಂಟ್ವಾಳದ ಕಿಶೋರ್ ಕಲ್ಲಡ್ಕ( 36) , ಪುತ್ತೂರಿನ ಮನೋಜ್ ( 23) , ಆಶಿಕ್ (28) ಹಾಗೂ ಸನತ್ ಕುಮಾರ್ (24) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಾರಿನಲ್ಲಿ ಅವಿಕೊಂಡು ಮನೋಜ್ ಬರುವುದನ್ನ ಕಾಯುತ್ತಿದ್ದರು ಹಾಗೂ ಕಾರಿನಲ್ಲಿ ಮನೋಜ್ ಹತ್ಯೆಗೆ ಬೇಕಾದ ಮಾರಕಾಸ್ತ್ರಗಳು ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಲ್ಲೆಗ ಟೈಗರ್ ಎಂದೇ ಖ್ಯಾತನಾಗಿದ್ದ ಅಕ್ಷಯ್‌:

19ನೇ ವಯಸ್ಸಿನಲ್ಲೇ ಪುತ್ತೂರಿನಲ್ಲಿ ಕಲ್ಲೆಗ ಟೈಗರ್ಸ್ ಎಂಬ ಹುಲಿವೇಶದ ತಂಡವನ್ನು ಹುಟ್ಟು ಹಾಕಿದ್ದ ಅಕ್ಷಯ್ ಬಳಿಕ ಕಲ್ಲೆಗ ಟೈಗರ್ ಎಂದೇ ಹೆಸರು ಮಾಡಿದ್ದ. ಜಿಲ್ಲೆಯಲ್ಲಿ ನಡೆಯುವ ಹಲವು ಹುಲಿ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡ ಬಹುಮಾನ ಕೂಡಾ ಪಡೆದುಕೊಂಡಿತ್ತು. ಈ ಮೂಲಕ ಪುತ್ತೂರಿನಲ್ಲಿ ಅಕ್ಷಯ್‌ ಒಂದು ರೀತಿಯಲ್ಲಿ ದೊಡ್ಡ ನಾಯಕನಾಗಿದ್ದು ಮಾತ್ರವಲ್ಲದೆ ತನ್ನನ್ನು ತಾನು ಡಾನ್‌ ಎಂಬಂತೆ ಬಿಂಬಿಸಿಕೊಂಡಿದ್ದ. ಸ್ಥಳಿಯ ಸಮಸ್ಯೆಗಳಿಗೆ ಮದ್ಯ ಪ್ರವೇಶ ಮಾಡಿ ಪಂಚಾಯಿತಿ ನಡೆಸುವಷ್ಟರ ಮಟ್ಟಿಗೆ ಅಕ್ಷಯ್ ಸ್ಥಳೀಯವಾಗಿ ತನ್ನ ಇಮೇಜ್ ಬೆಳೆಸಿಕೊಂಡಿದ್ದ. ಈ ನಡುವೆ ಬಸ್ ನಿರ್ವಾಹಕನ ಬೈಕ್‌ ಒಂದು ವಿದ್ಯಾರ್ಥಿಗೆ ತಾಗಿದ ಹಿನ್ನೆಲೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕನ ಜೊತೆ ಪರಿಹಾರದ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಬಸ್ ನಿರ್ವಾಹಕ ವಿದ್ಯಾರ್ಥಿಯ ಆಸ್ಪತ್ರೆಯ ಖರ್ಚು 2 ಸಾವಿರ ನೀಡುವಂತೆ ಅಕ್ಷಯ್‌ ಆದೇಶ ಮಾಡಿದ್ದ. ಇದೇ ವಿಚಾರಕ್ಕೆ ಸಂಜೆ ಬರುವುದಾಗಿ ಹೇಳಿದ್ದ ಬಸ್ ನಿರ್ವಾಹಕ ಹಾಗೂ ಚಾಲಕ ತಮ್ಮ ಸ್ನೇಹಿತರ ಜೊತೆ ಸೇರಿ ಅಕ್ಷಯ್ ಹತ್ಯೆ ಮಾಡಿದ್ದರು. ಹತ್ಯೆ ಬಳಿಕ ಮನೀಶ್ ಹಾಗೂ ಬಸ್ ಚಾಲಕ ಚೇತನ್ ಪೊಲೀಸರಿಗೆ ಶರಣಾಗಿದ್ದರು. ಬಳಿಕ ಇನ್ನಿಬ್ಬರು ಆರೋಪಿಗಳಾದ ಕೇಶವ ಪಡೀಲ್ ಮತ್ತು ಮಂಜುನಾಥ ಎಂಬವರನ್ನು ಪೊಲೀಸರು ಬಂಧಿಸಿದ್ದರು.

ಸ್ಥಳ ಮಹಜರು ವೇಳೆ ಅಕ್ಷಯ್ ಬೆಂಬಲಿಗರ ಬೆದರಿಕೆ:

ಅಕ್ಷಯ್ ಕೊಲೆ ಪ್ರಕರಣದ ಆರೋಪಿಗಳನ್ನು ಸ್ಥಳ ಮಹಜರಿಗೆ ತಂದ ವೇಳೆಯಲ್ಲೇ ಆರೋಪಿಗಳನ್ನು ಮುಗಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಸ್ಥಳ ಮಹಜರು ವೇಳೆ ಸಾವಿರಾರು ಜನ ಅಕ್ಷಯ್‌ ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿದ್ದು, ಬಿಗಿ ಭದ್ರತೆಯಲ್ಲಿ ಸ್ಥಳ ಮಹಜರು ನಡೆಸಲಾಗಿತ್ತು. ಈ ವೇಳೆ ಆರೋಪಿಗಳ ಮೇಲೆ ದಾಳಿ ಮಾಡುವ ಯತ್ನ ಕೂಡಾ ನಡೆದಿದ್ದು, ಪೊಲೀಸರು ಬಿಗಿ ಭದ್ರತೆಯ ಕಾರಣ ಪೊಲೀಸರು ಜನರನ್ನು ಸ್ಥಳದಿಂದ ಚದುರಿಸಿದ್ದರು. ಇದೀಗ ಆರೋಪಿಯ ಸಹೋದರನಿಗೆ ಸ್ಕೆಚ್‌ ಹಾಕಿರುವ ಅಕ್ಷಯ್‌ ಬೆಂಬಲಿಗರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ.

Continue Reading

DAKSHINA KANNADA

ಆರ್‌. ಅಶೋಕ್‌ ವಿರುದ್ಧ ಬಜರಂಗದಳ ಗರಂ – ಮಂಗಳೂರಿಗೆ ಬನ್ನಿ ಎಂದು ಸವಾಲ್

Published

on

ಮಂಗಳೂರು: ಪಬ್‌ ದಾಳಿ ವಿಚಾರದಲ್ಲಿ ನಾನು ಯಾವ ಒತ್ತಡಕ್ಕೂ ಒಳಗಾಗದೆ ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದ್ದು, ಇದೀಗ ಬಜರಂಗದಳದ ಆಕ್ರೋಶಕ್ಕೆ ಕಾರಣವಾಗಿದೆ.

ವಿಧಾನಸಭಾ ಅಧಿವೇಶನದಲ್ಲಿ ಮಂಗಳೂರಿನ ಜೆರೋಸಾ ಶಾಲೆಯ ವಿಚಾರದ ಚರ್ಚೆಯಲ್ಲಿ ವಿಪಕ್ಷ ನಾಯಕ ಆರ್‌ ಅಶೋಕ್ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಗೃಹ ಸಚಿವರು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂದು ಉದಾಹರಣೆ ನೀಡಿದ ಅಶೋಕ್ ಈ ವಿಚಾರ ಹೇಳಿದ್ದಾರೆ. ಆದ್ರೆ ಆರ್. ಅಶೋಕ್ ಅವರ ಹೇಳಿಕೆ ಈಗ ಜಿಲ್ಲೆಯ ಬಜರಂಗದಳದ ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿಸಿದೆ. ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ಬಗ್ಗೆ ಬರೆದಿರುವ ಬಜರಂಗಳದ ಜಿಲ್ಲಾ ಸಹಸಂಯೋಜಕ ಪುನೀತ್ ಅತ್ತಾವರ ಅಶೋಕ್ ವಿರುದ್ಧ ಕಿಡಿ ಕಾರಿದ್ದಾರೆ. ಆರ್,ಅಶೋಕ್ ಅವರ ಹೆಸರು ಉಲ್ಲೇಖಿಸಿ “ನಿಮ್ಮ ನಾಲಗೆಯನ್ನು ನಾಲಗೆ ರೀತಿಯಲ್ಲಿ ಉಪಯೋಗಿಸಿಕೊಳ್ಳಿ ಎಕ್ಕಡ ರೀತಿ ಬಳಸಬೇಡಿ” ಎಂದಿದ್ದಾರೆ. ಇನ್ನು ಮುಂದುವರೆದು “ಅಡ್ಜೆಸ್ಟ್‌ಮೆಂಟ್ ರಾಜಕಾರಣ ಎಂಬ ಕೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಬಜರಂದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆ ಇಲ್ಲಾ” ” ಪ್ರತಿಪಕ್ಷ ನಾಯಕನಾಗಿರುವ ನೀವು ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ” ” ಹಿಂದೂ ವಿರೋಧಿ ಕೃತ್ಯದ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನಿವೋಬ್ಬರು ಹೆಚ್ಚಾಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಆರ್‌ .ಅಶೋಕ್ ಬಜರಂಗದಳದ ವಿರುದ್ಧ ಆಡಿರುವ ಮಾತುಗಳನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಬಜರಂಗದಳದ ಕಾರ್ಯಕರ್ತರ ಪ್ರತಿರೋಧ ಎದುರಿಸಲು ಸಿದ್ಧರಾಗಬೇಕು ಎಂದು ಬರೆದುಕೊಂಡಿದ್ದಾರೆ. ಮಂಗಳೂರಿನ ವೆಲೆನ್ಸಿಯಾದ ಜೆರೋಸಾ ಶಾಲೆಯಲ್ಲಿ ನಡೆದ ಘಟನೆಯನ್ನು ಸರಿಯಾಗಿ ನಿಭಾಯಿಸಿ ಎಂದು ಗೃಹ ಸಚಿವರಿಗೆ ಸಲಹೆ ನೀಡಿದ್ದರು.

Continue Reading

BANTWAL

Bantwala:ನಿಯಂತ್ರಣ ತಪ್ಪಿ ಮೈಲು ಕಲ್ಲಿಗೆ ಕಾರು ಢಿಕ್ಕಿ..!

Published

on

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ಬದಿಯಲ್ಲಿ ಹಾಕಿದ ಮಣ್ಣಿನ ಮೇಲೆ ಹತ್ತಿ ಮೈಲು ಕಲ್ಲಿಗೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ಮಾಣಿ ಸಮೀಪದ ಪೆರಾಜೆ ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ಮಾಣಿ ಕಡೆಗೆ ಬರುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮಣ್ಣಿನ ರಾಶಿ ಮೇಲೆ ಏರಿತ್ತು. ಈ ವೇಳೆ ಕಾರನ್ನು ನಿಯಂತ್ರಣಕ್ಕೆ ತರುವಲ್ಲಿ ಚಾಲಕ ಯಶಸ್ವಿ ಆದ ಕಾರಣ ದೊಡ್ಡ ಅನಾಹುತ ತಪ್ಪಿತ್ತು. ಆದರೆ ರಸ್ತೆ ಬದಿಯಲ್ಲಿದ್ದ ಮೈಲು ಕಲ್ಲಿಗೆ ಢಿಕ್ಕಿ ಹೊಡೆದು ಕಾರು ನಿಂತ ಕಾರಣ ಕಾರಿಗೆ ಅಲ್ಪ ಸ್ವಲ್ಪ ಹಾನಿಯಾಗಿದ್ದು, ಕಾರು ಚಾಲಕನಿಗೂ ಸಣ್ಣ ಪುಟ್ಟ ಗಾಯವಾಗಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರಯಾಗಿದ್ದು, ಕಾರು ನಿಯಂತ್ರಣ ತಪ್ಪಿದ ದೃಶ್ಯ ಕಂಡು ಬಂದಿದೆ.

Continue Reading

LATEST NEWS

Trending