International news
ಟೀಮ್ ಇಂಡಿಯಾದ ವಿರುದ್ದ ಶತಕ ಸಿಡಿಸಿದ ಎಲ್ಲಿಸ್ ಪರ್ರಿ
Published
4 days agoon
By
NEWS DESK3ಮಂಗಳೂರು/ಬ್ರಿಸ್ಠೇನ್: ಭಾರತ ಮಹಿಳಾ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ನಡುವೆ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿನ ಆಸ್ಟ್ರೇಲಿಯಾ ಪರ ಎಲ್ಲಿಸ್ ಪೆರ್ರಿ ಭರ್ಜರಿ ಶತಕ ಸಿಡಿಸಿದ್ದಾರೆ.
ಬ್ರಿಸ್ಟೇನ್ ನಲ್ಲಿ ನಡೆಯುತ್ತಿರುವ ಭಾರತ ಮಹಿಳಾ ತಂಡದ ವಿರುದ್ದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಜಾರ್ಜಿಯಾ ವೊಲ್ ಮತ್ತು ಎಲ್ಲಿಸ್ ಪೆರ್ರಿ ಆಕರ್ಷಕ ಶತಕ ಬಾರಿಸಿದ್ದು, ಈ ಎರಡು ಶತಕಗಳ ನೆರವಿನಿಂದ ಟೀಮ್ ಇಂಡಿಯಾಗೆ 372 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಫೋಬೆ ಲಿಚ್ಫೀಲ್ಡ್ ಹಾಗೂ ಜಾರ್ಜಿಯಾ ವೊಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 130 ರನ್ಗಳ ಜೊತೆಯಾಟವಾಡಿದ ಬಳಿಕ ಫೋಬೆ ಲಿಚ್ಫೀಲ್ಡ್ (60) ಔಟಾದರು.
ಇದನ್ನೂ ಓದಿ: ರಾಜ್ಯದ ಜನತೆಗೆ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಏರಿಕೆ ಶಾಕ್ !
ಇದಾಗ್ಯೂ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಜಾರ್ಜಿಯಾ ವೊಲ್ 87 ಎಸೆತಗಳಲ್ಲಿ 12 ಫೋರ್ಗಳೊಂದಿಗೆ 101 ರನ್ ಬಾರಿಸಿದರು. ಈ ಶತಕದ ಬೆನ್ನಲ್ಲೇ ಜಾರ್ಜಿಯಾ ಸೈಮಾ ಠಾಕೂರ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಜಾರ್ಜಿಯಾ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಇತ್ತ ಎಲ್ಲಿಸ್ ಪೆರ್ರಿ ಆರ್ಭಟ ಶುರುವಾಯಿತು. ಟೀಮ್ ಇಂಡಿಯಾ ಬೌಲರ್ ಗಳನ್ನ ಇನ್ನಿಲ್ಲದಂತೆ ಕಾಡಿದ ಪೆರ್ರಿ ಸಿಕ್ಸ್-ಫೋರ್ ಗಳ ಸುರಿಮಳೆಗೈದರು. ಈ ಸ್ಪೋಟಕ ಬೌಲಿಂಗ್ ನೆರವಿನಿಂದ ಕೇವಲ 72 ಎಸೆತಗಳಲ್ಲಿ ಶತಕ ಪೂರೈಸಿದರು.
ಹೀಗಾಗಿ 75 ಎಸೆತಗಳನ್ನು ಎದುರಿಸಿದ ಎಲ್ಲಿಸ್ ಪೆರ್ರಿ 6 ಭರ್ಜರಿ ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ 105 ರನ್ ಬಾರಿಸಿದರು. ಆಕರ್ಷಕದ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 371 ರನ್ ಕಲೆಹಾಕಿದೆ.
ಬೃಹತ್ ಗುರಿ ಬೆನ್ನಟ್ಟುತ್ತಿರುವ ಟೀಂ ಇಂಡಿಯಾ ಆರಂಭದಲ್ಲೇ ಸ್ಮೃತಿ ಮಂಧಾನಾ ವಿಕೆಟ್ ಕಳೆದುಕೊಂಡರು. ಭಾರತ 1 ವಿಕೆಟ್ ನಷ್ಟಕ್ಕೆ 51 ರನ್ ಕಲೆ ಹಾಕಿದೆ.
International news
ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಇಸ್ರೇಲ್ ಪ್ರಧಾನಿ
Published
18 hours agoon
11/12/2024By
NEWS DESK3ಮಂಗಳೂರು/ಟೆಲ್ ಅವೀವ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮೊದಲ ಬಾರಿಗೆ ಟೆಲ್ ಅವೀವ್ ನ ನ್ಯಾಯಾಲಯವೊಂದರಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು.
ಈ ಮೂಲಕ ಅಧಿಕಾರದಲ್ಲಿರುವಾಗಲೇ ಅಪರಾಧ ಪ್ರಕರಣ ಎದುರಿಸುತ್ತಿರುವ ಮೊದಲ ಪ್ರಧಾನಿ ಎಂದೆನಿಸಿದ್ದಾರೆ.ನ್ಯಾಯಧೀಶರಲ್ಲೊಬ್ಬರು ನೆತನ್ಯಾಹು ಅವರಿಗೆ ಕಟಕಟೆಯೊಳಗೆ ಕುಳಿತುಕೊಳ್ಳುವ ಇಲ್ಲವೇ ನಿಲ್ಲಲು ಅವಕಾಶವಿರುವುದಾಗಿ ತಿಳಿಸಿದರು. ನೆತನ್ಯಾಹು ಪದೇಪದೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ವಂಚನೆ, ಭ್ರಷ್ಟಾಚಾರ ಮತ್ತು ನಂಬಿಕೆ ದ್ರೋಹ ಆರೋಪಗಳಿಗೆ ಸಂಬಂಧಿಸಿದಂತೆ ಅವರ ವಿರುದ್ದ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ:ದಂಡ ತಪ್ಪಿಸಿಕೊಳ್ಳಲು ವಾಹನ ಸವಾರರ ಹೊಸ ಪ್ಲಾನ್: ಸ್ಪೂನ್ ಅಸ್ತ್ರ !
ಇದು ಅಲ್ಲದೆ ತನ್ನ ಹಾಗೂ ಕುಟುಂಬವನ್ನು ಓಲೈಸುವಂತೆ ವರದಿಗಳನ್ನು ಪ್ರಕಟಿಸುವುದಕ್ಕೆ ಪ್ರತಿಫಲವಾಗಿ ಮಾಧ್ಯಮ ಮಾಲಕರಿಗೆ ಅನುಕೂಲಕರವಾಗುವಂತಹ ಕಾನೂನು, ನಿಯಮಗಳನ್ನು ಜಾರಿಗೊಳಿಸಿದ ಆರೋಪವನ್ನು ಕೂಡಾ ಅವರು ಎದುರಿಸುತ್ತಿದ್ದಾರೆ.
ರಾಜಕೀಯ ಲಾಭ ಮಾಡಿಕೊಟ್ಟಿರುವುದಕ್ಕೆ ಪ್ರತಿಯಾಗಿ ಶ್ರೀಮಂತರಿಂದ ಬೆಲೆಬಾಳುವ ವಸ್ತುಗಳನ್ನು ಪಡೆದಿರುವ ಪ್ರಕರಣದಲ್ಲಿ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಆರೋಪಿಗಳಾಗಿದ್ದಾರೆ.
2020 ಮೇ ನಲ್ಲಿ ಆರಂಭವಾಗಿದ್ದ ವಿಚಾರಣೆಯು ಪದೇ ಪದೇ ಮುಂದೂಡಲ್ಪಟ್ಟಿತ್ತು. ಮೇಲ್ಮನವಿ ಪ್ರಕ್ರಿಯೆಯ ಕಾರಣದಿಂದ ವಿಚಾರಣೆ ವಿಳಂಬವಾಗಿತ್ತು. ಗಾಜಾ ಮತ್ತು ಲೆಬೆನಾನ್ ಜೊತೆಗಿನ ಯುದ್ದದ ಕಾರಣಕ್ಕೆ ವಿಚಾರಣೆ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ನೆತಾನ್ಯಾಹು ಹಲವಾರು ಬಾರಿ ಮನವಿ ಮಾಡಿದ್ದರು.
ಈ ಬಗ್ಗೆ ಮಾತನಾಡಿರುವ ನೆತನ್ಯಾಹು ‘ಈ ದಿನಕ್ಕಾಗಿ ನಾನು ಎಂಟು ವರ್ಷಗಳಿಂದ ಕಾಯುತ್ತಿದ್ದೆ. ನನ್ನ ವಿರುದ್ದದ ಆಧಾರರಹಿತ ಮತ್ತು ಸುಳ್ಳು ಆರೋಪಗಳಿಗೆ ಉತ್ತರ ನೀಡಲು ಮತ್ತು ಸತ್ಯವನ್ನು ಹೇಳಲು ಕಾತರನಾಗಿದ್ದೆ’ ಎಂದು ಹೇಳಿದ್ದಾರೆ.
International news
ಕಂಬ್ಯಾಕ್ ಮಾಡುವ ಒತ್ತಡದಲ್ಲಿ ಟೀಂ ಇಂಡಿಯಾ: ಹಳೆ ಪ್ರಯೋಗವನ್ನು ಮತ್ತೆ ಬಳಸುತ್ತಾರಾ ಆಸ್ಟ್ರೇಲಿಯಾ ನಾಯಕ !
Published
23 hours agoon
11/12/2024By
NEWS DESK3ಮಂಗಳೂರು/ಬ್ರಿಸ್ಟೇನ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ ಗಳ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಅಡಿಲೇಡ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 10 ವಿಕೆಟ್ ಗಳಿಂದ ಸೋಲಿಸಿದೆ. ಇದೀಗ ಎರಡು ತಂಡಗಳು ಮೂರನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ.
ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಗೆ ನೇರವಾಗಿ ಪ್ರವೇಶಿಸಬೇಕ್ಕಿದ್ದರೆ, ಆಸ್ಟ್ರೇಲಿಯಾ ವಿರುದ್ದ ಮುಂದಿನ ಮೂರು ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಹೀಗಾಗಿ ಟಿಮ್ ಇಂಡಿಯಾ ಪಾಲಿಗೆ ಮುಂದಿನ ಮೂರು ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ ಎಂದು ಹೇಳಬಹುದು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯವು ಡಿಸೆಂಬರ್ 14 ರಿಂದ ಶುರುವಾಗಲಿದೆ. ಬ್ರಿಸ್ಟೇನ್ ನ ಗಾಬ್ಬಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಇನ್ನೂ ಐದು ಟೆಸ್ಟ್ ಪಂದ್ಯಗಳಿವೆ. ಇಲ್ಲಿ ಟೀಮ್ ಇಂಡಿಯಾ ವಿರುದ್ದ 3 ಮ್ಯಾಚ್ ಗೆದ್ದರೆ ಫೈನಲ್ ಗೆ ಪ್ರವೇಶಿಸುವುದು ಖಚಿತ. ಒಂದು ವೇಳೆ ಭಾರತದ ವಿರುದ್ದ 2 ಮ್ಯಾಚ್ ಗಳಲ್ಲಿ ಸೋತರೆ, ಶ್ರೀಲಂಕಾ ವಿರುದ್ದದ 2 ಪಂದ್ಯಗಳ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರಲು ಉತ್ತಮ ಅವಕಾಶವಿದೆ.
ಇದನ್ನೂ ಓದಿ: ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !
ಈ ಎಲ್ಲಾ ಕಾರಣಗಳಿಂದಾಗಿ ಭಾರತಕ್ಕೆ ಇನ್ನೂ ಮೂರು ಪಂದ್ಯಗಳು ಕಂಬ್ಯಾಕ್ ಮಾಡುವ ಒತ್ತಡದಲ್ಲಿದೆ. ಆದರೆ ಭಾರತ ತಂಡದ ಒತ್ತಡದ ಲಾಭ ಪಡೆಯುವುದರಲ್ಲಿ ಆಸ್ಟ್ರೇಲಿಯನ್ನರು ನಿಸ್ಸೀಮರು.
ಆಸ್ಟ್ರೇಲಿಯನ್ನರು ಒತ್ತಡದ ಲಾಭ ಪಡೆಯುವುದರಲ್ಲಿ ನಿಸ್ಸೀಮರು ಎಂಬುದು ಈಗಾಗಲೇ 2023ರ ಏಕದಿನ ವಿಶ್ವಕಪ್ ನಲ್ಲಿ ಈಗಾಗಲೇ ನಿರುಪಿಸಿದ್ದಾರೆ. ಅದರಲ್ಲೂ ನಾಯಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾದ ಒತ್ತಡವನ್ನು ಹೆಚ್ಚಿಸುವಂತಹ ಮಾಸ್ಟರ್ ಪ್ಲಾನ್ ರೂಪಿಸುವುದರಲ್ಲಿ ನಿಪುಣರು.
ಕಳೆದ ಏಕದಿನ ವಿಶ್ವಕಪ್ ನ ಫೈನಲ್ ಪಂದ್ಯದವರೆಗೆ ಸೋಲಿಲ್ಲದ ಸರದಾರರಾಗಿ ಮುನ್ನುಗ್ಗಿದ್ದ ಟೀಮ್ ಇಂಡಿಯಾವನ್ನು ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯನ್ನರು ಮಣಿಸಿದ್ದರು. ಈ ಪಂದ್ಯಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಮಿನ್ಸ್, ”ಅಹಮದಾಬಾದ್ ಸ್ಟೇಡಿಯಂನಲ್ಲಿ ಭಾರತದ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ನಾವು ಮೌನವಾಗುವಂತೆ ಮಾಡುತ್ತೇವೆ” ಎಂದಿದ್ದರು.
ಹೀಗಾಗಿ, ಅಂದಿನ ಪ್ರಯೋಗ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಪ್ರಯೋಗಿಸಿದರೆ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಆಸೆ ನಿರಾಸೆಯಾಗಿಬಿಡುತ್ತದೆ. ಆದರೆ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಭಾರತ ಮೂರು ಟೆಸ್ಟ್ ಪಂದ್ಯಗಳಲ್ಲಿ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಸೆ ಜೀವಂತವಾಗಿರಲಿದೆ.
ಈ ಮೂಲಕ ಬ್ರಿಸ್ಬೇನ್ ನ ಗಾಬ್ಬಾ ಮೈದಾನದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ರಣರೋಚಕ ಹೋರಾಟಕ್ಕೆ ಮತ್ತೊಮ್ಮೆ ಸಾಕ್ಷಿಯಾಗಲಿದೆ.
International news
ಭಾರತದ ಯುದ್ದ ನೌಕೆ ಹಸ್ತಾಂತರ ವೇಳೆ ಒಗ್ಗೂಡಿದ ರಷ್ಯಾ- ಉಕ್ರೇನ್ !
Published
1 day agoon
11/12/2024By
NEWS DESK3ಮಂಗಳೂರು/ಮಾಸ್ಕೋ: ಸುಮಾರು ಎರಡು ವರ್ಷಗಳಿಂದ ರಷ್ಯಾ-ಉಕ್ರೇನ್ ನಡುವೆ ಭೀಕರ ಯದ್ದ ಚಾಲ್ತಿಯಲ್ಲಿರುವಂತೆಯೇ ಇಬ್ಬರೂ ಬದ್ದ ವೈರಿಗಳು ಭಾರತಕ್ಕಾಗಿ ಒಗ್ಗೂಡಿದ ಅಪರೂಪದ ಘಟನೆ ನಡೆದಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ವರ್ಷಗಳ ಸುದೀರ್ಘ ಯುದ್ಧದ ಹೊರತಾಗಿಯೂ, ಮಾಸ್ಕೋ ಮತ್ತು ಕೀವ್ ಭಾರತಕ್ಕಾಗಿ ಯುದ್ಧನೌಕೆ ನಿರ್ಮಾಣಕ್ಕಾಗಿ ಒಟ್ಟಾಗಿ ಸೇರಿವೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉನ್ನತ ಮಟ್ಟದ ಭೇಟಿಗಾಗಿ ಮಾಸ್ಕೋಗೆ ಆಗಮಿಸುತ್ತಿದ್ದಂತೆ ಸೋಮವಾರ ರಷ್ಯಾ-ಉಕ್ರೇನ್ ಜಂಟಿ ನಿರ್ಮಿತ ಯುದ್ಧ ನೌಕೆಯನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಸಂಸತ್ ಇತಿಹಾಸದಲ್ಲಿ ಇದೇ ಮೊದಲು; ರಾಜ್ಯ ಸಭೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ
ಯುದ್ಧನೌಕೆ INS ತುಶಿಲ್ ವಿತರಣೆ ಕಾರ್ಯಕ್ರಮದಲ್ಲಿ ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು ಹಾಜರಿದಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. 2016ರಲ್ಲಿ ಭಾರತ ಸರ್ಕಾರ 2 ಯುದ್ಧನೌಕೆಗಾಗಿ ಆರ್ಡರ್ ಮಾಡಿತ್ತು. ಇದು ರಷ್ಯಾ ನಿರ್ಮಿತ ಕ್ರಿವಾಕ್ III-ವರ್ಗದ ಯುದ್ಧನೌಕೆಯಾಗಿದ್ದು, ಇದು ಸುಧಾರಿತ ಸ್ಟೆಲ್ತ್ ಮಿಸೈಲ್ ಫ್ರಿಗೇಟ್ ಆಗಿದೆ. ಭಾರತವು ಪ್ರಸ್ತುತ ಇಂತಹ ಆರು ಯುದ್ಧನೌಕೆಗಳನ್ನು ನಿರ್ವಹಿಸುತ್ತಿದೆ.
ಅಲ್ಲದೆ ರಷ್ಯಾದಲ್ಲಿ ತಯಾರಾಗುತ್ತಿರುವ ಎರಡು ಹಡಗುಗಳು ಮಾತ್ರವಲ್ಲದೆ, ಇದೇ ರೀತಿಯ ಇನ್ನೂ ಎರಡು ಹಡಗುಗಳನ್ನು ಭಾರತದಲ್ಲಿ ಕೂಡ ತಯಾರಿಸಲು ಆದೇಶಿಸಲಾಗಿದೆ. ಭಾರತದ ಗೋವಾ ಶಿಪ್‌ಯಾರ್ಡ್‌ನಲ್ಲಿ ಈ ಹಡಗುಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ರಷ್ಯಾ-ಉಕ್ರೇನ್, ಭಾರತದ ಯುದ್ದ ನೌಕೆಗಾಗಿ ಒಂದಾಗಿದ್ದು ಹೇಗೆ ?
ಕುತೂಹಲಕಾರಿ ಸಂಗತಿಯೆಂದರೆ, ಈ ಯುದ್ಧ ನೌಕೆಯ ಪ್ರಾಥಮಿಕ ಇಂಜಿನ್‌ಗಳು ಈ ಫ್ರಿಗೇಟ್‌ಗಳ ಗ್ಯಾಸ್ ಟರ್ಬೈನ್‌ಗಳನ್ನು ಉಕ್ರೇನ್‌ನಲ್ಲಿ ತಯಾರಿಸಲಾಗುತ್ತದೆ. ಉಕ್ರೇನಿಯನ್ ಎಂಜಿನ್ ಹೊಂದಿರುವ ರಷ್ಯಾದ ಯುದ್ಧನೌಕೆ, ಭಾರತಕ್ಕಾಗಿ ತಯಾರಿಸಲ್ಪಟ್ಟಿದೆ. ಹೀಗಾಗಿ ಇದು ಎರಡೂ ದೇಶಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಭಾರತೀಯ ನೌಕಾಪಡೆಯ ಹೆಚ್ಚಿನ ಹಡಗುಗಳು ಉಕ್ರೇನಿಯನ್ ಕಂಪನಿ ಜೋರಿಯಾ-ಮ್ಯಾಶ್‌ಪ್ರೊಕ್ಟ್ ತಯಾರಿಸಿದ ಗ್ಯಾಸ್ ಟರ್ಬೈನ್‌ಗಳನ್ನು ಬಳಸುತ್ತವೆ. ಇದು ಅನಿಲ ಟರ್ಬೈನ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ.
ಆದಾಗ್ಯೂ ವಿಶಿಷ್ಟವಾದ ಸಂಗತಿಯೆಂದರೆ, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವಾಗ ಭಾರತ ಈ ಹಡಗು ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಹೀಗಾಗಿ ಪರಸ್ಪರ ಸಂಘರ್ಷದ ನಡುವೆಯೂ ಎರಡೂ ದೇಶಗಳು ಭಾರತ ನೀಡಿದ್ದ ಆರ್ಡರ್ ಪೂರ್ಣಗೊಳಿಸಿ ಇದೀಗ ಭಾರತಕ್ಕೆ ಹಡಗನ್ನು ಹಸ್ತಾಂತರಿಸುತ್ತಿದೆ.
ಆದಾಗ್ಯೂ ಈ ಯುದ್ಧ ನೌಕೆ ಹಸ್ತಾಂತರ ಪ್ರಕ್ರಿಯೆ ಸ್ವಲ್ಪ ಸವಾಲು ಒಳಗೊಂಡಿತ್ತು. ಭಾರತವು ಉಕ್ರೇನ್‌ನಿಂದ ಈ ಎಂಜಿನ್‌ಗಳನ್ನು ಭೌತಿಕವಾಗಿ ಸಂಗ್ರಹಿಸಬೇಕಾಗಿತ್ತು ಮತ್ತು ಈ ಯುದ್ಧನೌಕೆಯಲ್ಲಿ ಅವುಗಳನ್ನು ಸ್ಥಾಪಿಸುವ ಮೊದಲು ಅವುಗಳನ್ನು ರಷ್ಯಾಕ್ಕೆ ತಲುಪಿಸಬೇಕಾಗಿತ್ತು, ಆದ್ದರಿಂದ ಈ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
LATEST NEWS
ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಭೀಕರ ಅಪ*ಘಾತ !
ಉತ್ತಮ ಜನಸ್ಪಂದನೆಯೊಂದಿಗೆ ಮಂಗಳೂರು-ಕಾರ್ಕಳ KSRTC ಸಂಚಾರ ಆರಂಭ
ಎಸ್ಎಂ ಕೃಷ್ಣಗೆ ‘ಕರ್ನಾಟಕ ರತ್ನ’ ನೀಡುವಂತೆ ಮನವಿ ಮಾಡಿದ ವಿಪಕ್ಷ ನಾಯಕ
ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಇಸ್ರೇಲ್ ಪ್ರಧಾನಿ
ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್ ಚಲನಚಿತ್ರ ತೆರೆಗೆ !!
ಆರ್ಬಿಐ ಹೊಸ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ !!
Trending
- BIG BOSS4 days ago
ಚೈತ್ರಾ ಕಣ್ಣೀರು, ಐಶ್ವರ್ಯ ಆಕ್ಟಿವಿಟಿ ರೂಮ್….ಎಲಿಮಿನೆಟ್ ಆಗಿದ್ದು ?
- BIG BOSS5 days ago
BBK11: ಈ ವಾರ ಬಿಗ್ಬಾಸ್ ಮನೆಯಲ್ಲಿ ಕಾದಿದ್ಯಾ ಬಿಗ್ ಟ್ವಿಸ್ಟ್; ಎಲಿಮಿನೇಷನ್ ಇರೋದು ಡೌಟ್
- BIG BOSS5 days ago
ಬಿಗ್ಬಾಸ್ ನಿರ್ಧಾರಗಳಿಗೆ ರೆಸ್ಪೆಕ್ಟೇ ಇಲ್ಲ -ಇಬ್ಬರು ಸ್ಪರ್ಧಿಗಳಿಗೆ ಕಿಚ್ಚ ಖಡಕ್ ಕ್ಲಾಸ್
- BANTWAL6 days ago
ಬಂಟ್ವಾಳ: ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕನಿಂದ ಹಲ್ಲೆ
Pingback: ಗ್ಯಾಸ್ ಸ್ಪೋಟ; ತಾಯಿ, ಮೂವರು ಮಕ್ಕಳಿಗೆ ಗಂಭೀರ ಗಾಯ ! - NAMMAKUDLA NEWS - ನಮ್ಮಕುಡ್ಲ ನ್ಯೂಸ್