Friday, July 1, 2022

ಕಾಡಾನೆ ದಾಳಿ: ಒಬ್ಬನ ಸಾವು-ಮನೆ ಜಖಂ

ಮೈಸೂರು: ಹಸುಗಳಿಗೆ ಮೇವು ತರಲು ಹೋಗಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವೀರನಹೊಸಹಳ್ಳಿಯ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮ ಕೊಳವಿಗೆಯಲ್ಲಿ ನಡೆದಿದೆ.

ಎರಡು ಪ್ರತ್ಯೇಕ ಕಾಡಾನೆ ದಾಳಿ ಪ್ರಕರಣದಲ್ಲಿ, ಓರ್ವ ಸಾವನ್ನಪ್ಪಿದ್ದರೆ, ಮನೆಯೊಂದರ ಮುಂಭಾಗ ಜಖಂಗೊಂಡಿದೆ.
ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಕೊಳವಿಗೆಯಲ್ಲಿ ಈ ಘಟನೆ ನಡೆದಿದೆ.

ರೈತ ರಾಜೇಶ್ ಎಂಬುವವರು ಕಳೆದ ರಾತ್ರಿ ಸುಮಾರು 10:30ರ ಸಮಯದಲ್ಲಿ ಹಸುವಿಗೆ ಹಿಂಭಾಗದ ಹಿತ್ತಲಿನಿಂದ ಹುಲ್ಲು ತರಲು ಹೋದಾಗ ಕಾಡಾನೆ ದಾಳಿ ಮಾಡಿದ್ದು, ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಬೆಳಗಿನ ಜಾವ ವೀರನಹೊಸಹಳ್ಳಿ ವ್ಯಾಪ್ತಿಯ ಕಾಡಂಚಿನ ಗ್ರಾಮ ನಾಗಪುರ ಹಾಡಿಯಲ್ಲಿ ಒಂಟಿ ಸಲಗವೊಂದು ರಾಜು ಎಂಬುವವರ ಮನೆಯ ಮುಂಭಾಗವನ್ನು ಜಖಂ ಮಾಡಿದ್ದು, ಮನೆಯೊಳಗೆ ಇದ್ದ ಕುಟುಂಬ ಭಯಭೀತವಾಗಿದೆ.

ದಾಳಿ ಮಾಡಿದ ಒಂಟಿ ಸಲಗ ಜಮೀನಿನಲ್ಲಿ ಬೆಳೆದ ಫಲಸನ್ನು ಸಹ ನಾಶ ಮಾಡಿದೆ. ಕಾಡು ಪ್ರಾಣಿಗಳು ಬರದಂತೆ ಗೇಟ್ ಅಳವಡಿಸಿದ್ದರೂ,

ಅವುಗಳ ನಿರ್ವಹಣೆ ಸರಿಯಾಗಿ ಮಾಡದೇ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ರಸ್ತೆ ಬದಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

ಬಂಟ್ವಾಳ : ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯ ಬದಿಯಲ್ಲಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೆ ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರ,...

ಮಂಗಳೂರು: ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೊಗ್ಲಿಂಗ್ ಸ್ಮರಣೆ

ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮ ಇಂದು ಮಂಗಳೂರು ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಯಿತು.ಕನ್ನಡದ ಪ್ರಥಮ ಪತ್ರಿಕೆ...

ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ: ನಟಿ ಪವಿತ್ರ ಲೋಕೇಶ್‌

ಬೆಂಗಳೂರು: ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ. ಮದುವೆಯೇ ಆಗದಿದ್ದರೆ ನಾನು ಯಾಕೆ ಡಿವೋರ್ಸ್‌ ಕೊಡಬೇಕು ಎಂದು ಕನ್ನಡ ಚಿತ್ರನಟಿ ಪವಿತ್ರ ಲೋಕೇಶ್‌ ಹೇಳಿಕೆ ನೀಡಿದ್ದಾರೆ.ಕೆಲದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ...