ಉಡುಪಿ:2020ರ ಕಳೆದ ವರ್ಷ ಮುಂಬೈನಲ್ಲಿ ನಡೆದ ಪ್ರತಿಷ್ಠಿತ ಮಿಸ್ ದಿವಾ ಯೂನಿವರ್ಸ್ 2020ರ ಕಿರೀಟವನ್ನು ಕರಾವಳಿಯ ಎಡ್ಲಿನ್ ಕ್ಯಾಸ್ಟಲಿನೋ ಮುಡಿಗೇರಿಸಿಕೊಂಡಿದ್ದರು.
ಇದೀಗ ಮತ್ತೆ ಈ ಬಳುಕೋ ಸುಂದರಿ ಮುಂಬರುವ ಮಿಸ್ ಯೂನಿವರ್ಸ್ ಇಂಟರ್ ನ್ಯಾಷನಲ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮುಂದಿನ ತಿಂಗಳು ಯು.ಎಸ್.ಎ ನಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಇವರು
ಮೂಲತಃ ಉಡುಪಿ ಜಿಲ್ಲೆಯ ಉದ್ಯಾವರದ ಕೊರಂಗ್ರಪಾಡಿಯವರು. ಪ್ರಸ್ತುತ ಕುವೈಟ್ ನ ವೈಟ್ ಸ್ಟೋರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪೋನ್ಸಸ್ ಕ್ಯಾಸ್ಟಲಿನೋ ಮತ್ತು ಕುವೈಟ್ ನ ಹೆಲ್ಮನ್ ವಲ್ಡ್ ವೈಟ್ ಲಾಜಿಸ್ಟಿಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀರಾ ಕ್ಯಾಸ್ಟಲಿನೋ ದಂಪತಿಗಳ ಪುತ್ರಿಯಾಗಿದ್ದಾರೆ.