Friday, July 1, 2022

ಜೂ.26 ರಂದು DYFI ಮುಖಂಡ ಶ್ರೀನಿವಾಸ್ ಬಜಾಲ್ ಹುತಾತ್ಮ ದಿನ

ಮಂಗಳೂರು: ಬಜಾಲ್ ಪ್ರದೇಶದ ಡಿವೈಎಫ್ಐ ಮುಖಂಡ ಶ್ರೀನಿವಾಸ್ ಬಜಾಲ್ ಹುತಾತ್ಮ ದಿನದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಸಾಮರಸ್ಯ ಸಭೆ ನಡೆಸಲು ಡಿವೈಎಫ್ಐ ಸಂಘಟನೆ ನಿರ್ಧರಿಸಿದೆ ಎಂದು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಧೀರಜ್ ಹೇಳಿದ್ದಾರೆ.

ಶ್ರೀನಿವಾಸ್ ಬಜಾಲ್‌ನ ಹಿನ್ನೆಲೆ ಬಗ್ಗೆ ಮಾತಾಡಿದ ಅವರು ‘ಜೂನ್ 24 ಕ್ಕೆ 20 ವರುಷಗಳಾಗುತ್ತಿದೆ. ನಾಯಕತ್ವದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್ ಬಜಾಲ್ ಪ್ರದೇಶದ ಜನರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಾ, ಕೋಮು ಸೌಹಾರ್ದತೆಯ ಉಳಿವಿಗಾಗಿ ಶ್ರಮಿಸುತ್ತಾ, ಸಂಘಟನೆಯ ತತ್ವ ಸಿದ್ದಾಂತಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ಹಗಲಿರುಳು ಎನ್ನದೆ ದುಡಿಯುತ್ತಿದ್ದರು.

ತಾನು ರೋಗಿಯೊಬ್ಬರಿಗೆ ರಕ್ತದಾನ ಮಾಡಲೆಂದು ಹೊರಟ ವೇಳೆ ಹೊಂಚು ಹಾಕಿ ಕುಳಿತಿದ್ದ ಹಿಂದೂ ಯುವ ಸೇನೆ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ಹತ್ಯೆಯಾದ ದಿನದಿಂದ ಕಳೆದ 19 ವರುಷಗಳಿಂದ ಬಜಾಲ್ ಪ್ರದೇಶದ ಡಿವೈಎಫ್ಐ ಕಾರ್ಯಕರ್ತರು ಶ್ರೀನಿವಾಸ್ ಬಜಾಲ್ ಹುತಾತ್ಮ ದಿನದಂದು ರಕ್ತದಾನ ಶಿಬಿರ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಬಜಾಲ್ ವಿಭಾಗ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಮೂಲಕ ಅವರ ತ್ಯಾಗ ಬಲಿದಾನವನ್ನು ನೆನಪಿಸುತ್ತಾ ಬಂದಿದ್ದಾರೆ’ ಎಂದು ಹೇಳಿದರು.

ಇನ್ನು ಹುತಾತ್ಮದಿನದ ಆಚರಣೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಅವರು ‘ಈ ವರುಷವೂ ಶ್ರೀನಿವಾಸ್ ಬಜಾಲ್ ಅವರ ಹುತಾತ್ಮ ದಿನದ ಅಂಗವಾಗಿ ಇದೇ ಬರುವ ತಾರೀಕು 26-06-2022 ರ ಆದಿತ್ಯವಾರದಂದು ಸಾಮೂಹಿಕ ರಕ್ತದಾನ ಶಿಬಿರವು ಬೆಳಗ್ಗೆ 9 ರಿಂದ ಮದ್ಯಾಹ್ನ 1ರವರೆಗೆ ಭಗತ್ ಸಿಂಗ್ ಭವನದಲ್ಲಿ ನಡೆಯಲಿದೆ.

ಅದೇ ದಿನ ಸಂಜೆ 4 ಗಂಟೆಗೆ ಪಕ್ಕಲಡ್ಕ ಮೈದಾನದಲ್ಲಿ ಕೋಮುವಾದಿ ವಿರೋಧಿ ಅಭಿಯಾನ ಸಾಮರಸ್ಯ ಸಭೆಯು ನಡೆಯಲಿದೆ.

ಈ ಸಭೆಯಲ್ಲಿ ಪ್ರಮುಖ ಭಾಷಣಗಾರರಾಗಿ ಪ್ರೋ. ಕೆ.ಫಣಿರಾಜ್ (ಚಿಂತಕರು, ಬರಹಗಾರರು)ಭಾಗವಹಿಸಲಿದ್ದಾರೆ.

ಈ ವೇಳೆ ಮುಖ್ಯ ಅತಿಥಿಗಳಾಗಿ ಸುನೀಲ್ ಕುಮಾರ್ ಬಜಾಲ್ (ಡಿವೈಎಫ್ಐ ಮಾಜಿ ಮುಖಂಡರು), ಬಿ.ಕೆ ಇಮ್ತಿಯಾಜ್ ಡಿವೈಎಫ್ಐ (ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರು), ಸಂತೋಷ್ ಬಜಾಲ್ (ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ) ಇವರುಗಳು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here

Hot Topics

ರಾಜಸ್ಥಾನ್ ಟೈಲರ್ ಹತ್ಯೆ ಖಂಡಿಸಿ ಬಂಟ್ವಾಳದಲ್ಲಿ ಪ್ರತಿಭಟನೆ

ಬಂಟ್ವಾಳ: ರಾಜಸ್ತಾನದ ಉದಯಪುರದಲ್ಲಿ ಭಯೋತ್ಪಾದಕರಿಂದ ಹಿಂಸಾತ್ಮಕ ರೀತಿಯಲ್ಲಿ ಹತ್ಯೆಯಾದ ಟೈಲರ್ ಕನ್ಹಯ್ಯಲಾಲ್ ಅವರ ಸಾವಿಗೆ ನ್ಯಾಯ ಸಿಗಬೇಕು ಹಾಗೂ ಹತ್ಯೆ ಮಾಡಿದ ಭಯೋತ್ಪಾದಕ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್...

ಮಂಗಳೂರಿನಲ್ಲಿ ಅಗ್ನಿವೀರ್ ಪ್ರವೇಶ ಪರೀಕ್ಷೆ: ಅವಿವಾಹಿತ ಪುರುಷರಿಂದ ಅರ್ಜಿ ಆಹ್ವಾನ

ಮಂಗಳೂರು: ಭಾರತೀಯ ವಾಯುಪಡೆಯಿಂದ ಅಗ್ನಿಪತ್ ಯೋಜನೆಯಡಿ ಅಗ್ನಿವೀರ್ ವಾಯು ಪ್ರವೇಶ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಶೇ.50ರಷ್ಟು ಅಂಕ ಮತ್ತು...

ಬೆಳ್ತಂಗಡಿ: ಬೀದಿ ಬದಿ ಅಂಗಡಿ ತೆರವು ಪ್ರಕರಣದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಪಾರ್ಪಿಕಲ್‌ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ...