Thursday, December 1, 2022

ಮಂಗಳೂರು: ಮಾರ್ನಮಿಕಟ್ಟೆ ದೇವಿ ಪ್ರತ್ಯಂಗಿರಾ ಕ್ಷೇತ್ರದಲ್ಲಿ ಶರನ್ನವರಾತ್ರಿ ಸಂಭ್ರಮ, ದುರ್ಗಾ ನಮಸ್ಕಾರ ಪೂಜೆ

ಮಂಗಳೂರು: ಕರಾವಳಿಯಲ್ಲೀಗ ನವರಾತ್ರಿ ಸಂಭ್ರಮ. ದೇವಿ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ.

ಕಾರಣಿಕದ ಶಕ್ತಿಗೆ ಮನೆಮತಾಗಿರುವ ಹಾಗೂ ದೇವಿಯ ಸನ್ನಿಧಾನಕ್ಕೆ ಬಂದು ಪ್ರಾರ್ಥಿಸಿ ಹರಕೆ ಹೇಳಿದವರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವಂತಹ ಮಂಗಳೂರು ಮಾರ್ನಮಿಕಟ್ಟೆಯ ತಾಯಿ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ಕ್ಷೇತ್ರದಲ್ಲಿ ದೇವಿಯ ಅನುಷ್ಟಾನಕರ್ತರಾದ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಕರಣ್ ಜ್ಯೋತಿಷಿಯವರ ನೇತೃತ್ವದಲ್ಲಿ ನವರಾತ್ರಿಯ 9 ದಿನಗಳ ಕಾಲ ನಡೆಯುವ ಸಾರ್ವಜನಿಕ ದುರ್ಗಾ ನಮಸ್ಕಾರ ಪೂಜೆಯು ವೈಭವದಿಂದ ನಡೆಯಿತು.

ಸಹಸ್ರಾರ್ಚನೆಯು ಭಜನೆ, ಯಕ್ಷಗಾನ, ನೃತ್ಯ ಸೇವೆಗಳೊಂದಿಗೆ ಕಾರ್ಯಕ್ರಮ ನಡೆಯಿತು. ಶಾಸಕ ವೇದವ್ಯಾಸ್ ಕಾಮತ್, ಶರಣ್ ಪಂಪ್ವೆಲ್, ಕಂಕನಾಡಿ ಪೋಲಿಸ್ ಠಾಣಾಧಿಕಾರಿ ಸಿದ್ದೇಗೌಡ , ಕಾರ್ಪೋರೇಟರ್ ಭರತ್‌, ಶೈಲೇಶ್ ಶೆಟ್ಟಿ, ಡಾ. ಈಶ್ವರ್ ಕೀರ್ತಿ, ಉದ್ಯಮಿ ದಿವಾಕರ ದಾಸ್ ನೆರ್ಲಾಜೆ , ಭುಜಂಗ ಕುಲಾಲ್ ಮೊದಲಾದವರು ಭಾಗವಹಿಸಿದ್ದರು.

ನೂರಾರು ಮಂದಿ ಭಕ್ತರು ಪೂಜೆಯಲ್ಲಿ ಉಪಸ್ಥಿತರಿದ್ದು ಶ್ರೀ ದುರ್ಗಾ ದೇವಿಯ ಪ್ರಸಾದ ಸ್ವೀಕರಿಸಿ ಧನ್ಯರಾದರು.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಅಡಿಕೆ ಮರ ಕಡಿಯುತ್ತಿದ್ದಾಗ ತಲೆಗೆ ಬಿದ್ದು ವೃದ್ಧ ಸಾವು

ಬೆಳ್ತಂಗಡಿ: ಹಳೆ ಅಡಕೆ ಮರ ಕಡಿಯುತ್ತಿರುವಾಗ ಆಕಸ್ಮಿಕವಾಗಿ ವೃದ್ಧನ ತಲೆ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಇಂದಬೆಟ್ಟುವಿನಲ್ಲಿ ನಡೆದಿದೆ.ಮುಂಡಾಜೆ ಗ್ರಾಮದ ಮಂಜು ಶ್ರೀ ನಗರದ ಕುಂಟಾಲಪಲ್ಕೆ ನಿವಾಸಿ ಅಣ್ಣು ನಾಲ್ಕೆ(66) ಮೃತ...

ಲವ್ ಜಿಹಾದ್ ವಿರುದ್ಧ ಎಚ್ಚರಿಕೆ ನೀಡಿದ ಹಿಂದೂ ಮುಖಂಡ..! ಪುನೀತ್ ಅತ್ತಾವರ ಪೋಸ್ಟರ್ ವೈರಲ್..

ಮಂಗಳೂರು: ಲವ್ ಜಿಹಾದ್ ವಿರುದ್ದ ರಕ್ತಪಾತದ ಎಚ್ಚರಿಕೆ ನೀಡಿದ ಹಿಂದೂ ಮುಖಂಡನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ.ಮಂಗಳೂರು ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಈ ಪೋಸ್ಟರನ್ನು ತನ್ನ...