Thursday, October 21, 2021

ದುಬೈ: ಅಕ್ಟೋಬರ್ 8 ಕ್ಕೆ ಎಲಿಗೆಂಟ್ ಟ್ರೋಫಿ -2021 ರ ಮ್ಯಾಚ್ ಗೆ ಮುಹೂರ್ತ ಫಿಕ್ಸ್..

ದುಬೈ : ಎಲಿಗೆಂಟ್ ಟ್ರೋಫಿ ಸೀಸನ್-1 ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟವು ಟೀಮ್ ಎಲಿಗೆಂಟ್ ದುಬೈ ಇದರ ಪ್ರಾಯೋಜಕತ್ವದಲ್ಲಿ ಇದೇ ಬರುವ ಅಕ್ಟೋಬರ್ 8 ರಂದು ಶಾರ್ಜಾದ ಮದಮ್ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಈ ಪಂದ್ಯಾಕೂಟವು ಲೀಗ್ ಹಾಗೂ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದ್ದು, ರಾಜ್ಯದ ಪ್ರತಿಷ್ಠಿತ 10 ತಂಡಗಳು ಎಲಿಗೆಂಟ್ ಟ್ರೋಫಿಗಾಗಿ ಪೈಪೋಟಿ ನಡೆಸಲಿದೆ.

ಪಂದ್ಯಾಕೂಟದಲ್ಲಿ ಭಾಗವಹಿಸುತ್ತಿರುವ 10 ತಂಡಗಳ ವಿವರ ಹೀಗಿದೆ. ಟೀಮ್ ಎಲಿಗೆಂಟ್ ದುಬೈ,  ಅಟೋಡೀಲ್ಸ್ ಮೂಡುಬಿದಿರೆ, ವರಹರೂಪ ಕಟೀಲ್, ಉಡುಪಿ ಫ್ರೆಂಡ್ಸ್, ಟೀಮ್ ಎಕ್ಸ್ಪರ್ಟ್ಸ್ ದಫ್ಝ, ಟೀಮ್ ಎಲಿಗೆಂಟ್ ಮಂಗಳೂರು,  ಡಿಎಫ್ಎಮ್ ಕಟೀಲ್, ಕುಡ್ಲ ಫ್ರೆಂಡ್ಸ್, ಕಟೀಲ್ ವರಹರೂಪ, ಅರಬಿಯನ್ ಸ್ಟ್ರೈಕರ್ಸ್ ತಂಡಗಳು ಭಾಗವಹಿಸಲಿದೆ.

ಕ್ರಿಕೆಟ್ ರಸಿಕರಿಗೆ ಈ ಪಂದ್ಯಾವಳಿಯನ್ನು ನಮ್ಮ ಕುಡ್ಲ ಟೀವಿ ಚಾನೆಲ್ ಮತ್ತು ಯೂಟ್ಯೂಬ್ ಮುಖಾಂತರ ವೀಕ್ಷಿಸಬಹುದಾಗಿದ್ದು, ಪಂದ್ಯಾಕೂಟವು ಅಕ್ಟೋಬರ್ 8 ರಂದು ಬೆಳಗ್ಗೆ 6:30 ಕ್ಕೆ ಸರಿಯಾಗಿ ಪ್ರಾರಂಭವಾಗಲಿದೆ.

ಎಲ್ಲಾ ಕ್ರೀಡಾಭಿಮಾನಿಗಳಿಗೂ ಟೀಮ್ ಎಲಿಗೆಂಟ್  ಸ್ಪೋರ್ಟ್ಸ್ ಕ್ಲಬ್ ದುಬೈ  ಆದರದ ಸ್ವಾಗತವನ್ನು ಬಯಸುತ್ತಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...