ಕಾಸರಗೋಡು: ವ್ಯಕ್ತಿಯೋರ್ವನನ್ನು ಚರಸ್ ಮಾದಕ ದ್ರವ್ಯ ಹೊಂದಿದ್ದ ಆರೋಪದಲ್ಲಿ ಕಾಸರಗೋಡು ಡಿ.ವೈ.ಎಸ್.ಪಿ ಬಾಲಕೃಷ್ಣನ್ ನಾಯರ್ ತಂಡ ಬಂಧಿಸಿದೆ.
ಚಟ್ಟುಂಗುಡಿ ಹಿದಾಯತ್ ನಗರದ ಅಬ್ದುಲ್ ರಹಮಾನ್ (34) ಬಂಧಿತ ಆರೋಪಿ.
ಈತನಿಂದ ಎರಡೂವರೆ ಗ್ರಾಂ ಎಂಡಿಎಂಎ ಚರಸ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.
ಖಚಿತ ಮಾಹಿತಿಯೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.