Connect with us

    LATEST NEWS

    ಕುಗ್ರಾಮ ಯುವತಿಯ ಆಕಾಶದೆತ್ತರ ಹಾರುವ ಕನಸು ನನಸು;

    Published

    on

    ತಿರುವನಂತಪುರಂ:ಕೇರಳದ ತಿರುವನಂತಪುರಂನ ಕುಗ್ರಾಮದಿಂದ ಬಂದ 23 ವರ್ಷದ ಯುವತಿ ಜೆನಿ ಜೆರೋಮ್​​ ಏರ್​ ಅರೇಬಿಯಾದ ಜಿ 9 449 ವಿಮಾನದಲ್ಲಿ ಸಹ ಪೈಲಟ್​ ಆಗಿ ಕಾರ್ಯನಿರ್ವಹಿಸಿದ್ದಾರೆ.

    ಶಾರ್ಜಾದಿಂದ ತಿರುವನಂತಪುರಂ ಮಾರ್ಗದಲ್ಲಿ ಸಹ ಪೈಲೆಟ್​ ಆಗಿ ಕಾರ್ಯನಿರ್ವಹಿಸುವ ಮೂಲಕ ಕೇರಳದ ಮೊದಲ ಮಹಿಳಾ ವಾಣಿಜ್ಯ ಪೈಲಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ತನ್ನ ಪೋಷಕರೊಂದಿಗೆ ಅಜ್ಮಾನ್​ನಲ್ಲಿ ವಾಸವಿರುವ ಜೆನಿ ಬಾಲ್ಯದಿಂದಲೇ ಪೈಲಟ್​ ಆಗುವ ಕನಸನ್ನ ಹೊಂದಿದ್ದರು. ಇದೀಗ ತಮ್ಮ ತವರು ರಾಜ್ಯದಲ್ಲಿ ಕೋ ಪೈಲಟ್​ ಆಗಿ ಕಾರ್ಯನಿರ್ವಹಿಸುವ ಮೂಲಕ ಕನಸನ್ನ ನನಸು ಮಾಡಿಕೊಂಡಿದ್ದಾರೆ.ಜೆನಿಯ ಈ ಸಾಧನೆಗೆ ತಿರುವನಂತಪುರಂ ಸಂಸದ ಶಶಿ ತರೂರ್​ ಸೇರಿದಂತೆ ಸಾಕಷ್ಟು ಮಂದಿ ಸೋಶಿಯಲ್​ ಮೀಡಿಯಾದಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.

    ವಾಣಿಜ್ಯ ವಿಮಾನದಲ್ಲಿ ಮೊದಲ ಬಾರಿಗೆ ಸಹ ಪೈಲಟ್​ ಆಗಿ ಸೇವೆ ಸಲ್ಲಿಸಿದ ತಿರುವನಂತಪುರಂನ ಕೊಚಿತೊರಾ ಗ್ರಾಮದ ಜೆನಿ ಜೆರೋಮ್​ಗೆ ನನ್ನ ಅಭಿನಂದನೆಗಳು.

    ಮೀನುಗಾರಿಕೆಯನ್ನ ನೆಚ್ಚಿಕೊಂಡು ಬಂದ ಪುಟ್ಟ ಗ್ರಾಮಕ್ಕೆ ಸೇರಿದ ಈ ಹೆಣ್ಣುಮಗಳು ಇದೀಗ ಶಾರ್ಜಾದಿಂದ ತಿರುವನಂತಪುರಂವರೆಗೆ ಏರ್​ ಅರೇಬಿಯಾ ವಿಮಾನದಲ್ಲಿ ಸಹ ಪೈಲಟ್​ ಆಗಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಬಾಲ್ಯದ ಕನಸನ್ನ ನನಸು ಮಾಡಿಕೊಂಡಿದ್ದಾರೆ.

    ಈಕೆ ನಿಜಕ್ಕೂ ಹೆಣ್ಣುಮಕ್ಕಳಿಗೆ  ಒಂದು ಸ್ಪೂರ್ತಿ ಎಂದು ಶಶಿ ತರೂರ್​ ಟ್ವೀಟ್ ಮಾಡಿದ್ದಾರೆ .  ಈ ವಿಚಾರವಾಗಿ ಮಾತನಾಡಿರುವ ಜೆನಿ ಸೋದರ ಸಂಬಂಧಿ ಶೆರಿನ್​, ಜೆನಿಗೆ ಹಾರಾಟದ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು.

    ಪೈಲಟ್​ ಆಗೋದು ಆಕೆಯ ಬಾಲ್ಯದ ಕನಸು. ಕೇವಲ ಜೆನಿ ಮಾತ್ರವಲ್ಲದೇ ಆಕೆಯ ತಂದೆ ಜೆರೋಮ್​ ಸಹ ಮಗಳನ್ನ ಪೈಲಟ್​ ಮಾಡಬೇಕೆಂಬ ಕನಸನ್ನ ಹೊಂದಿದ್ದರು ಎಂದು ಹೇಳಿದ್ದಾರೆ.

    FILM

    ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ರಹಸ್ಯ ಬಯಲು !

    Published

    on

    ಮಂಗಳೂರು/ಬೆಂಗಳೂರು: ಸರಿಯಾಗಿ ಒಂದು ತಿಂಗಳ ಬಳಿಕ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ಹಿಂದಿನ ರಹಸ್ಯ ಬಹಿರಂಗಗೊಂಡಿದೆ.


    ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆಯಿಂದ ಹಲವು ಸಂಗತಿಗಳು ಬಯಲಿಗೆ ಬಂದಿವೆ. ಅವರು ಹಣ ಇಲ್ಲದೇ ಸಾಲ ಮಾಡಿಕೊಂಡಿದ್ದರು. ಸ್ನೇಹಿತರು, ಸಂಬಂಧಿಕರು ಸೇರಿ ಹಲವರ ಬಳಿ ಕೋಟ್ಯಂತರ ರೂ. ಸಾಲ ಮಾಡಿದ್ದಾರೆ.

    ಇದನ್ನೂ ಓದಿ: ತಾಯಿಯ ಆಸೆ ಈಡೇರಿಸಲು ಹೋಗಿ ಕಂಬಿ ಎಣಿಸುತ್ತಿರುವ ಮಗ !

    ಸಾಲದಿಂದ ರೋಸಿ ಹೋಗಿದ್ದ ಗುರುಪ್ರಸಾದ್, ಆನ್ ಲೈನ್ ಜೂಜಿನ ಚಟಕ್ಕೆ ಸಿಲುಕಿರುವ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಸಾಲ ಹೆಚ್ಚಾದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಾಲ ಕೇಳುವಾಗ ‘ಫಿಲ್ಮ್ ಮಾಡ್ತಿದ್ದೀನಿ, ಸಿನಿಮಾದಿಂದ ಖಂಡಿತ ಹಣ ಬರುತ್ತೆ, ಆಗ ಹಣ ವಾಪಸ್ ಕೊಡುತ್ತೀನಿ ಎಂದು ಹೇಳುತ್ತಿದ್ದರಂತೆ. ಹೀಗಾಗಿ ಆನ್ ಲೈನ್ ಗೇಮ್ ಗಳಲ್ಲಿ ಬೆಟ್ಟಿಂಗ್ ಆಡುತ್ತಿದ್ದರು ಎಂದು ತಿಳಿದುಬಂದಿದೆ. ಅದರಲ್ಲೂ ಗುರುಪ್ರಸಾದ್ ರಮ್ಮಿ ಸರ್ಕಲ್ ಸುಳಿಗೆ ಸಿಲುಕ್ಕಿದ್ದರು. ಸಾಲ ಹೆಚ್ಚಾದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    Continue Reading

    LATEST NEWS

    ದೇಶದ ಅತಿ ಕಿರಿಯ, ಕರ್ನಾಟಕ ಮೂಲದ ಈ ಪೈಲಟ್ ಯಾರು ಗೊತ್ತಾ ??

    Published

    on

    ಮಂಗಳೂರು/ವಿಜಯಪುರ: 18 ವರ್ಷದ ಸಮೈರಾ ಹುಲ್ಲೂರ್ ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್) ಪಡೆಯುವ ಮೂಲಕ ಬಾರತದ ಅಯಿ ಕಿರಿಯ ಪೈಲಟ್ ಎಂದು ಗುರುತಿಸಿಕೊಂಡಿದ್ದಾರೆ. ಈಕೆ ವಿಜನಗರ ಮೂಲದವಳಾಗಿದ್ದು, ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದ ಭಾರತದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

    ಸಮೈರಾ ಆರು ತಿಂಗಳ ಕಾಲ ವಾಯುಯಾನ ತರಬೇತಿಯನ್ನು ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಪಡೆದರು. ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮೊದಲ ಪ್ರಯತ್ನದಲ್ಲೇ ಎಲ್ಲ ಸಿಪಿಎಲ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ‘ತರಬೇತಿ ಕಠಿಣವಾಗಿತ್ತು. ಆದರೆ, ಭೋದಕರ ನಿರಂತರ ಬೆಂಬಲದಿಂದ ಅದು ಸುಲಭವಾಯಿತು. ನನ್ನ ಸಾಧನೆಯ ಎಲ್ಲಾ ಶ್ರೇಯಸ್ಸು ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾದವ್ ಅವರಿಗೆ ಸಲ್ಲುತ್ತದೆ’ ಎಂದು ಸಮೈರಾ ಹೇಳಿದರು.

    ವಿಮಾನ ಚಾಲನೆ ಒಳಗೊಂಡಂತೆ ಆರು ಕಡ್ಡಾಯ ಕೋರ್ಸ್‌ಗಳಿಗೆ ಸೇರಿಕೊಂಡ ಬಳಿಕ ಲಿಖಿತ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಕಾರ್ವರ್ ಏವಿಯೇಷನ್ ಅಕಾಡೆಮಿಯಲ್ಲಿ ಏಳು ತಿಂಗಳ ವಿಮಾನ ತರಬೇತಿಯನ್ನು ಪಡೆದಿದ್ದಳು. ವಾಯುಯಾನದಲ್ಲಿನ ಅನೇಕ ಸವಾಲುಗಳನ್ನು ಎದುರಿಸಿದ ಸಮೈರಾ ಕಾರ್ವರ್ ಏವಿಯೇಷನ್ ಅಕಾಡೆಮಿಯಲ್ಲಿ ತಾಂತ್ರಿಕ ಪರಿಣತಿಯನ್ನು ಪಡೆದಿದ್ದಾರೆ. “ಈ ಸಾಧನೆಗೆ ಸ್ಫೂರ್ತಿ ಕ್ಯಾಪ್ಟನ್ ತಪೇಶ್ ಕುಮಾರ್. ತಮ್ಮ 25ನೇ ವರ್ಷ ವಯಸ್ಸಿನಲ್ಲೇ ಪೈಲಟ್ ಆಗುವ ಮೂಲಕ ಸಾಧನೆ ಮಾಡಿದ್ದರು. ಈಗ, ನಾನು ದೇಶದ ಅತ್ಯಂತ ಕಿರಿಯ ಕಮರ್ಷಿಯಲ್ ಪೈಲಟ್” ಎಂದು ಸಮೈರಾ ಹೇಳಿಕೊಂಡಿದ್ದಾರೆ.

    “ನಮ್ಮ ಬಸವನಾಡು ಮತ್ತು ರಾಜ್ಯದ ಗೌರವವನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ದೇಶದ ಅತಿ ಕಿರಿಯ ವಯಸ್ಸಿನ ಪೈಲಟ್ ಸಮೈರಾ ಹುಲ್ಲೂರರಿಗೆ ಹಾರ್ದಿಕ ಅಭಿನಂದನೆಗಳು. ಕೇವಲ 18ನೇ ವಯಸ್ಸಿನಲ್ಲಿ ಇಂತಹ ಅಸಾಧಾರಣ ಸಾಧನೆ ಮಾಡುವ ಮೂಲಕ ಲಕ್ಷಾಂತರ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿರುವ ವಿಜಯಪುರದ ಈ ಯುವ ಪ್ರತಿಭೆಯ ಭವಿಷ್ಯ ಉಜ್ವಲವಾಗಿರಲಿ ಅಂತ ಹಾರೈಸುತ್ತೇನೆ” ಎಂದು ಟ್ವಿಟ್ ಮೂಲಕ ಎಂಬಿ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.

    Continue Reading

    LATEST NEWS

    ಡಿ.7 ರಂದು ಕುಡುಪು ಕ್ಷೇತ್ರದಲ್ಲಿ ಷಷ್ಠಿ ಬ್ರಹ್ಮ ರಥೋತ್ಸವ

    Published

    on

    ಮಂಗಳೂರು: ನಗರದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿ.7ರಂದು ಮಧ್ಯಾಹ್ನ 1ಕ್ಕೆ ಷಷ್ಠಿಯ ಬ್ರಹ್ಮ ರಥೋತ್ಸವ ನಡೆಯಲಿದೆ.

    ಡಿ. 4 ರಂದು ರಾತ್ರಿ ವಿಶೇಷವಾದ ಸರ್ಪ ವಾಹನೋತ್ಸವ, 5ರಂದು ಬೆಳಗ್ಗೆ ಗಣಹೋಮ, ರಾತ್ರಿ ಕಟ್ಟೆ ಪೂಜೆಗಳು, ಗಜವಾಹನೋತ್ಸವ, 6 ರಂದು ಪಂಚಮಿ, ಬೆಳಗ್ಗೆ, ಅಂಗಪ್ರದಕ್ಷಿಣೆ, ಮಹಾಪೂಜೆ, ಅಶ್ವವಾಹನದೊಂದಿಗೆ ರಾತ್ರಿ ಕಟ್ಟೆಪೂಜೆಗಳು, ಗರುಡ ವಾಹನೋತ್ಸವ ತೆಪ್ಪೋತ್ಸವ, ಎರಡನೇ ಬಲಿ, ಚಂದ್ರಮಂಡಲೋತ್ಸವ, ಪಾಲಕಿ ಉತ್ಸವ 7 ರಂದು ಷಷ್ಟಿ, ಬೆಳಿಗ್ಗೆ ರಥ ಕಲಶ, ಮಧ್ಯಾಹ್ನ 1ಕ್ಕೆ ಬ್ರಹ್ಮ ರಥೋತ್ಸವ, ಅನ್ನ ಸಂತರ್ಪಣೆ ಹಾಗೂ 8ರಂದು ಬೆಳಗ್ಗೆ 7ಕ್ಕೆ ಅತೀ ವಿಶಿಷ್ಟವಾದ ಜೋಡು ದೇವರ ಬಲಿ ಉತ್ಸವ, ಚಂದ್ರ ಮಂಡಲ ಉತ್ಸವ, ಪಲ್ಲಕ್ಕಿ ಉತ್ಸವ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    Continue Reading

    LATEST NEWS

    Trending