Connect with us

    BELTHANGADY

    ಕರ್ನಾಟಕ ರತ್ನ ಮರಣೋತ್ತರ ಪ್ರಶಸ್ತಿಗೆ ಭಾಜನರಾದ ನಟ ಪುನೀತ್‌ನನ್ನು ಶ್ಲಾಘಿಸಿದ ಡಾ.ಡಿ ವೀರೇಂದ್ರ ಹೆಗ್ಗಡೆ

    Published

    on

    ಧರ್ಮಸ್ಥಳ: ಕರ್ನಾಟಕ ರತ್ನ ಮರಣೋತ್ತರ ಪ್ರಶಸ್ತಿಗೆ ಭಾಜನರಾದ ನಟ ಪುನೀತ್ ರಾಜ್ ಕುಮಾರ್ ಅವರನ್ನು ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶ್ಲಾಘಸಿದ್ದಾರೆ.


    ಧರ್ಮಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಂದು ಪುನೀತ್ ರಾಜ್ ಕುಮಾರ್ ಅವರನ್ನು ನಾನು ಸ್ಮರಿಸುತ್ತೇನೆ.

    ಯಾಕಂದ್ರೆ ಅವರ ತಂದೆ ಡಾ. ರಾಜ್ ಕುಮಾರ್ ಅವರು ನನಗೆ ಅತ್ಯಂತ ಪ್ರೀತಿ ಪಾತ್ರರಾದವರು. ಕ್ಷೇತ್ರದ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದರು.

    ಅವರ ಪುತ್ರನಾಗಿರುವ ಪುನೀತ್ ರಾಜುಕುಮಾರ್ ಅವರು ವೈಯಕ್ತಿವಾಗಿ ವ್ಯಕ್ತಿತ್ವ, ನಟನೆ ಹಾಗು ಸ್ವಭಾವದಿಂದಾಗಿ ಎಲ್ಲರ ಪ್ರೀತಿ ಪಾತ್ರನಾಗಿ ಅಚ್ಚುಮೆಚ್ಚಿನ ವ್ಯಕ್ತಿಯಾಗಿ ಬೆಳೆದವರು.

    ಅವರ ಸಾವನ್ನು ಇಂದಿಗೂ ನಮಗೆ ಇನ್ನೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗ್ತ ಇಲ್ಲ. ಪುನೀತ್ ಅವರನ್ನು ಸ್ಮರಿಸುತ್ತ ಅವರಿಗೆ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದೇನೆ.

    ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಈ ವ್ಯಕ್ತಿಯ ಸಾಧನೆ ಮುಂದೆ ಬರುವ ಕಲಾವಿದರಿಗೆ ಮಾದರಿಯಾಗಲಿ ಎಂದರು.

    BELTHANGADY

    ಬೆಂಗಳೂರಿನಲ್ಲಿ ಬೈಕ್ ಅಪಘಾತ; ಬೆಳ್ತಂಗಡಿ ಮೂಲದ ವಿದ್ಯಾರ್ಥಿ ಸಾ*ವು

    Published

    on

    ಬೆಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಬೆಳ್ತಂಗಡಿ ಮೂಲದ ವಿದ್ಯಾರ್ಥಿಯೊಬ್ಬ ಮೃ*ತ ಪಟ್ಟಿದ್ದು ಮತ್ತೋರ್ವ ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೆಳ್ತಂಗಡಿ ತಾಲೂಕಿನ ಇಂದಬೆಟ್ಟ ಗ್ರಾಮದ ನಿವಾಸಿಯಾಗಿರುವ ತುಷಾರ್ ಮೃತ ವಿದ್ಯಾರ್ಥಿಯಾಗಿದ್ದಾರೆ. ಇವರು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಬಿಕಾಂ ಮುಗಿಸಿ ಉನ್ನತ ವ್ಯಾಸಾಂಗಕ್ಕಾಗಿ ಬೆಂಗಳೂರಿನ ರಾಮಯ್ಯ ಕಾಲೇಜಿಗೆ ಸೇರಿದ್ದರು. ಇಂದು ಮುಂಜಾನೆ ಬೈಕ್‌ನಲ್ಲಿ ಬೆಳ್ತಂಗಡಿಯ ಬೆಳಾಲ್‌ ನಿವಾಸಿಯಾಗಿರುವ ಇನ್ನೋರ್ವ ಯುವಕನ ಜೊತೆ ಕಾಲೇಜಿಗೆ ಹೋಗುತ್ತಿದ್ದಾಗ ದುರ್ಘಟನೆ ನಡೆದ ಬಗ್ಗೆ ವರದಿಯಾಗಿದೆ.

    ಅಪಘಾತದಲ್ಲಿ ತುಷಾರ್ ಮೃತ ಪಟ್ಟಿದ್ದರೆ ಮತ್ತೋರ್ವ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ತುಷಾರ್ ತಾಯಿ ಉಜಿರೆಯ ಅನುಗ್ರಹ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    Continue Reading

    BELTHANGADY

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

    Published

    on

    ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ಸೇವೆಯಾಟವು ಶ್ರೀ ಮಂಜುನಾಥ ಸ್ವಾಮಿ ಹಾಗೂ ಛತ್ರ ಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮೇಳದ ಯಜಮಾನ ಹರ್ಷೇಂದ್ರ ಕುಮಾರ್‌ ಅವರ ಶುಭಾಶೀರ್ವಾದಗಳೊಂದಿಗೆ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್‌ ಅವರು ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಶುಭಾರಂಭಗೊಂಡಿತು.

    ವ್ಯವಸ್ಥಾಪಕ ಗಿರೀಶ್‌ ಹೆಗ್ಡೆ ಮತ್ತು ಸಿಬಂದಿ ಉಪಸ್ಥಿತರಿದ್ದರು. ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ ತಿರುಗಾಟದ ಪ್ರಥಮ ಸೇವೆಯಾಟ ನಡೆಯಿತು.

    Continue Reading

    BELTHANGADY

    ಬೆಳ್ತಂಗಡಿ : ಯುವಕನೊಂದಿಗೆ ಯುವತಿ ಪರಾರಿ ಶಂಕೆ; ಪ್ರಕರಣ ದಾಖಲು 

    Published

    on

    ಬೆಳ್ತಂಗಡಿ: ಕೆಲಸಕ್ಕೆ ಹೋಗಿ ಬರುವೆನೆಂದು ಹೇಳಿ ಹೋದ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ವೇಣೂರು ಸಮೀಪ ಕರಿಮಣೇಲಿನಲ್ಲಿ ನಡಡೆದಿದೆ.

    ಸಂಧ್ಯಾ (22) ಕಾಣೆಯಾದ ಯವತಿ.

    ನ. 4ರಂದು  ಸಂಧ್ಯಾ ಮನೆಯಿಂದ ಕೆಲಸಕ್ಕೆ ಹೋದವಳು ಸಂಜೆ ತನ್ನ ಸಹೋದರಿಯ ಮೊಬೈಲ್‌ಗೆ ‘ನನಗೆ ಮದುವೆಯಾಗಿದೆ. ನನ್ನನ್ನು ಹುಡುಕಬೇಡಿ’ ಎಂಬುದಾಗಿ ವಾಟ್ಸಾಪ್‌ ಸಂದೇಶ ಕಳುಹಿಸಿದ್ದಾಳೆ. ಯುವಕನೊಬ್ಬನ ಜತೆ ತೆಗೆದಿರುವ ಭಾವಚಿತ್ರವನ್ನು ಸಹೋದರಿಗೆ ರವಾನಿಸಿದ್ದು, ಬಳಿಕ ಆಕೆಯ ಮೊಬೈಲ್‌ ಸ್ವಿಚ್ ಆಫ್‌ ಆಗಿದೆ.

    ಆಕೆ ಕೆಲಸ ಮಾಡುವ ಕಡೆ ವಿಚಾರಿಸಿದಾಗ ಆಕೆ ಅಂದು ಕೆಲಸಕ್ಕೆ ಬಂದಿರಲಿಲ್ಲ ಎಂಬುವುದು ತಿಳಿದಿತ್ತು. ವೇಣೂರು ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

    Continue Reading

    LATEST NEWS

    Trending