Connect with us

    DAKSHINA KANNADA

    ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಡಾ. ಶಿವಾನಂದ ನಾಯಕ್‌ಗೆ ಡಿ.ಎಸ್ಸಿ ಪದವಿ ಪ್ರದಾನ

    Published

    on

    ಮಂಗಳೂರು: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ 14 ವರ್ಷಗಳ ಕಾಲ ಬಯೋಕೆಮಿಸ್ಸಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ, ಬೋಧನಾ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸುಮಾರು 30 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಶಿವಾನಂದ ನಾಯಕ್ ಬಿ ಅವರಿಗೆ ನಾಳೆ ನಡೆಯುವ 40ನೇ ಘಟಿಕೋತ್ಸವದಲ್ಲಿ ಡಾ. ಶಿವಾನಂದ ನಾಯಕ್ ಬಿ. ಅವರಿಗೆ ಡಿ.ಎಸ್ಸಿ. ಪದವಿ ಪ್ರದಾನ ಮಾಡಲಾಗುತ್ತದೆ.


    ಇವರು ಮೂಲತಃ ಉಡುಪಿಯವರಾಗಿದ್ದು ನಂತರ ವೆಸ್ಟ್ ಇಂಡೀಸ್ ವಿಶ್ವವಿದ್ಯಾನಿಲಯದ ಮೆಡಿಕಲ್ ಸೈನ್ಸ್ ವಿಭಾಗದಲ್ಲಿ 16 ವರ್ಷಗಳ ಕಾಲ ಪ್ರೊಫೆಸರ್ ಮತ್ತು ಡೆಪ್ಯುಟಿ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ ಚೆನ್ನೈನ ಶ್ರೀ ರಾಮಚಂದ್ರ ವಿಶ್ವವಿದ್ಯಾನಿಲಯದ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿಯೂ ಮತ್ತು ಶಿವಾನಿ ಡೈನಾಗ್ನಿಸ್ಟಿಕ್ ಮತ್ತು ಸೆಂಟರ್‌ನ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    2002ರಲ್ಲಿ ಮಣಿಪಾಲ್ ವಿಶ್ವವಿದ್ಯಾಲಯದ ಅಲೈಡ್ ಹೆಲ್ತ್ ಸೈನ್ಸ್‌ನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ. 2013ರ ಅವಧಿಯಲ್ಲಿ ತಮ್ಮ ಉತ್ತಮ ಬೋಧನೆಗಾಗಿ ವೈಸ್ ಚಾನ್ಸಲರ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಹಾಗೂ 2010ರಲ್ಲಿ ಯುಡಬ್ಲೂಐ/ಗಾರ್ಡಿಯನ್ ಲೈಫ್ ಪ್ರೀಮಿಯರ್ ಪಡೆದಿದ್ದಾರೆ.

    2013, 2014 ಹಾಗೂ 2015 ನೇ ಸಾಲಿನಲ್ಲಿ ಟ್ರಿನಿಡಾಡ್ ಆ್ಯಂಡ್ ಟೊಬ್ಯಾಗೋ ಮೆಡಿಕಲ್ ಸ್ಟುಡೆಂಟ್ಸ್ ಅಸೋಸಿಯೇಷನ್‌ನ ಔಟ್ ಸ್ಟ್ಯಾಂಡಿಂಗ್ ಪ್ರೀಕ್ಲಿನಿಕಲ್ ಲೆಕ್ಟರ್ ಅವಾರ್ಡ್ ಪಡೆದಿರುತ್ತಾರೆ.

    2011 ಹಾಗೂ 2012ನೇ ಸಾಲಿನ ದಿ ಮೂವ್‌ಮೆಂಟ್ ಫಾರ್ ದಿ ಎಂಕರೇಜ್‌ಮೆಂಟ್ ಆಫ್ ಧಾರ್ಮಿಕ್ ಸರ್ವಿಸ್‌ನ ಔಟ್‌ಸ್ಟ್ಯಾಂಡಿಂಗ್ ಪ್ರೀಕ್ಲಿನಿಕಲ್ ಲೆಕ್ಟರ್ ಅವಾರ್ಡ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ಫೆಲೋಶಿಪ್ ಪಡೆದಿರುವ ಇವರು ನ್ಯಾಷನಲ್ ರೆಜಿಸ್ಟ್ ಫಾರ್ ಸರ್ಟಿಫೈಡ್ ಕೆಮಿಸ್ಟ್ & ಕ್ಲಿನಿಕಲ್ ಕೆಮಿಸ್ಟ್ರಿಯ ಅರ್ಹತೆ ಪಡೆದಿದ್ದಾರೆ.

    ಇವರು ಮೆಡಿಕಲ್‌, ಡೆಂಟಲ್, ಅಲೈಡ್ ಹೆಲ್ತ್ ಹಾಗೂ ಫಾರ್ಮಸಿ ವಿದ್ಯಾರ್ಥಿಗಳಿಗೆ 9 ಪುಸ್ತಕಗಳನ್ನು ಬರೆದಿದ್ದು, ಭಾರತ, ಟ್ರಿನಿಡಾಡ್ ಹಾಗೂ ಇತರ ದೇಶದ ವಿದ್ಯಾರ್ಥಿ ಸಮುದಾಯದಲ್ಲಿ ಇದು ಪ್ರಸಿದ್ಧಿಯನ್ನು ಪಡೆದಿದೆ.

    ಇವರ 160ಕ್ಕೂ ಹೆಚ್ಚು ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ ಪ್ರಕಟವಾಗಿದೆ.
    ಸಂಶೋಧನಾ ಕ್ಷೇತ್ರದ ಸಾಧನೆಗಾಗಿ 2020ರ ಇನ್ಸಿಟ್ಯೂಟ್ ಆಫ್ ಸ್ಕಾಲರ್ ಅವಾರ್ಡ್, ಎಡಿಜಿಓಡಿ ಸಂಸ್ಥೆಯು ನವಂಬರ್ 2020ರಲ್ಲಿ ಡಿಸ್ಟಿಂಗ್ವಿಫ್ಟ್ ಸೈಂಟಿಸ್ಟ್ ಅವಾರ್ಡ್ ನೀಡಿದೆ.

    ನವ್ಯಚೇತನ ಎಜುಕೇಶನ್, ರಿಸರ್ಚ್ ಹಾಗೂ ವೆಲ್‌ಫೇರ್‌ ಟ್ರಸ್ಟ್‌ನ ಅಧ್ಯಕ್ಷರಾಗಿ ಸಾಮಾಜಿಕ ಸೇವೆಯನ್ನೂ ಮಾಡುತ್ತಿದ್ದಾರೆ. ಪ್ರಸ್ತುತ ಶಿವಮೊಗ್ಗದ ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಪ್ರೊಫೆಸರ್ ಕಾರ್ಯನಿರ್ವಹಿಸುತ್ತಿದ್ದಾರೆ.

    DAKSHINA KANNADA

    WATCH: ಕೆಪಿಟಿ ಬಳಿ ಭೀಕರ ಅಪಘಾ*ತ: ಲಾರಿಯಡಿ ಬಿದ್ದ ಬೈಕ್ ಸವಾರ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Published

    on

    ಮಂಗಳೂರು : ಬೈಕ್ ಸವಾರನ ಮೇಲೆ ಲಾರಿ ಹರಿದು ಸವಾರ ಗಂಭೀ*ರವಾಗಿ ಗಾ*ಯಗೊಂಡಿರುವ ಘಟನೆ ಮಂಗಳೂರಿನ ಕೆಪಿಟಿ ಬಳಿ ನಡೆದಿದೆ. ತಲಪಾಡಿ ಕಿನ್ಯಾ ಮೂಲದ ಅಶೋಕ್(44) ಗಂಭೀ*ರವಾಗಿ ಗಾಯಗೊಂಡವರು.

    ಯೆಯ್ಯಾಡಿಯಿಂದ ಕೆ.ಪಿ.ಟಿ ಜಂಕ್ಷನ್​ ಬಳಿಯ ಪೆಟ್ರೋಲ್ ಪಂಪ್ ಕಡೆ ಬೈಕ್ ಸವಾರ ಬರುತ್ತಿದ್ದರು. ಅದೇ ವೇಳೆ ಪೆಟ್ರೋಲ್ ಪಂಪ್ ಕಡೆಗೆ ಇಂಡೇನ್ ಗ್ಯಾಸ್ ತುಂಬಿದ್ದ ಗೂಡ್ಸ್ ಲಾರಿ ಬರುತ್ತಿತ್ತು. ಗೂಡ್ಸ್ ಲಾರಿಯ ಚಾಲಕ ಏಕಾಏಕಿ ಎಡಬದಿಗೆ ತಿರುಗಿಸಿದ್ದರಿಂದ ಬೈಕ್‌ಗೆ ಡಿ*ಕ್ಕಿ ಹೊಡೆದಿದೆ.

    ಇದನ್ನೂ ಓದಿ : ಕಳ್ಳರ ಜೊತೆ ಕೈ ಜೋಡಿಸಿ ಲಕ್ಷಗಟ್ಟಲೆ ಕೊಳ್ಳೆ ಹೊಡೆದ ಪೊಲೀಸ್; ತಗಲಾಕ್ಕೊಂಡಿದ್ದು ಹೇಗೆ?

    ಪರಿಣಾಮ ಬೈಕ್ ಸವಾರ ಲಾರಿಯಡಿಗೆ ಸಿಲುಕಿ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.  ಅಪಘಾ*ತದ ದೃಶ್ಯ ಪೆಟ್ರೋಲ್‌ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Continue Reading

    DAKSHINA KANNADA

    ಮೂಡುಬಿದಿರೆ : ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರ ಬಂಧನ

    Published

    on

    ಮೂಡುಬಿದಿರೆ : ಆತ ಒಬ್ಬ ಖತರ್ನಾಕ್‌ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ಹಲವು ಪೊಲೀಸ್ ಠಾಣೆಯಲ್ಲಿ 42 ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿತ್ತು. ಹಲವು ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ವಾರೆಂಟ್ ಇದ್ರೂ ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್‌ ಆಗ್ತಾನೆ ಇದ್ದ. ಇತ್ತೀಚೆಗೆ ಆಗಸ್ಟ್‌ ತಿಂಗಳಲ್ಲಿ ಮೂಡುಬಿದ್ರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆತ ವೃದ್ಧ ಮಹಿಳೆಯರನ್ನು ಗುರಿಯಾಗಿಸಿ ಅವರ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದ.

    ಮೂಡಬಿದ್ರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ನಿರ್ಮಲಾ ಪಂಡಿತ್ ಎಂಬ 70 ವರ್ಷದ ವೃದ್ದೆಯ 24 ಗ್ರಾಂ ಚಿನ್ನದ ಸರ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಾರ್ನಾಡು ಗ್ರಾಮದ ಬಸದಿ ಬಳಿ 82 ವರ್ಷ ಪ್ರಾಯದ ಪ್ರೇಮಾ ಎಂಬ ವೃದ್ಧೆಯ 24 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಈ ಎರಡೂ ಪ್ರಕರಣದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಈ ಕೃತ್ಯ ನಡೆಸಿದ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು.

    ಇದನ್ನೂ ಓದಿ :ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾ*ತ; ಸವಾರ ಸಾ*ವು

    ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿದಾಗ ಇದು ಖತರ್ನಾಕ್‌ ಖದೀಮ ಚೆಂಬುಗುಡ್ಡೆಯ ಹಬೀಬ್‌ ಹಸನ್‌ ಕೃತ್ಯ ಎಂಬುದು ಗೊತ್ತಾಗಿದೆ. ಈತನ ಮೇಲೆ ವಿವಿಧ ಠಾಣೆಯಲ್ಲಿ 15 ಕ್ಕೂ ಹೆಚ್ಚು ಬಂಧನದ ವಾರೆಂಟ್ ಇದ್ರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಇದೀಗ ಮೂಡುಬಿದ್ರೆಯಲ್ಲಿ ಕೊ*ಲೆ ಆರೋಪಿ ಬಂಟ್ವಾಳದ ಉಮ್ಮರ್ ಸಿಯಾಫ್ ಎಂಬಾತನ ಜೊತೆ ಸೇರಿ ಸರ ಕಳ್ಳತನಕ್ಕೆ ಇಳಿದಿದ್ದ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃ*ತ್ಯಕ್ಕೆ ಬಳಿಸಿದ್ದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.

    Continue Reading

    DAKSHINA KANNADA

    ಸೌದಿ ಅರೇಬಿಯಾದಲ್ಲಿ ಭೀಕರ ಕಾರು ಅ*ಪಘಾತ; ಉಳ್ಳಾಲದ ತಾಯಿ – ಮಗು ಮೃ*ತ್ಯು

    Published

    on

    ಉಳ್ಳಾಲ: ಸೌದಿ ಅರೇಬಿಯಾದ ಧಮಾಮ್ ಬಳಿ ಶುಕ್ರವಾರ(ಸೆ.20) ನಡೆದ ಭೀಕರ ರಸ್ತೆ ಅಪ*ಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ತಾಯಿ, ಮಗು ಸಾ*ವನ್ನಪ್ಪಿದ್ದಾರೆ.


    ಹೈದರ್ ಉಳ್ಳಾಲ್ ಅವರ ಪುತ್ರಿ ಸಫಾ ಫಾತಿಮಾ (30) ಹಾಗೂ ಎರಡೂವರೆ ವರ್ಷದ ಮೊಮ್ಮಗ ಮೃತ ದು*ರ್ದೈವಿಗಳು. ಶುಕ್ರವಾರ ಸಂಜೆ ವೇಳೆ ಮದೀನದಿಂದ ಕಾರಿನಲ್ಲಿ ಸಫಾ ಫಾತಿಮಾ ತನ್ನ ಪತಿ ಮಲಪುರಂ ಆರಿಕೋಡ್ನ ಸುಹೈಲ್ (35) ಮತ್ತು ಸಹೋದರ ಮುಹವಿಯ(23) ಜೊತೆಗೆ ದಮಾಮ್ ನಲ್ಲಿರುವ ಹೈದರ್ ಉಳ್ಳಾಲ್ ಅವರ ಮನೆಗೆ ತೆರಳುತ್ತಿದ್ದರು.
    ಈ ವೇಳೆ ಕಾರು ಅ*ಪಘಾತವಾಗಿದ್ದು, ಕಾರಿನಲ್ಲಿದ್ದ ಸುಹೈಲ್, ಮಕ್ಕಳಾದ ಅಬ್ದುಲ್ ಮಲಿಕ್ (7), ಅಬ್ದುಲ್ ರಹಿಮಾನ್ (6) ಹಾಗೂ ಅಹ್ಮದ್ (5) ತೀವ್ರ ಗಾ*ಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ

    Continue Reading

    LATEST NEWS

    Trending