Connect with us

    FILM

    ಇಂಡೊನೇಷಿಯಾದಲ್ಲಿ ತುಳು ಮಾತನಾಡಿದ ಡಾ ಬ್ರೋ..! ಸಖತ್ ವೈರಲ್ ಆಯ್ತು ವೀಡಿಯೋ

    Published

    on

    ಮಂಗಳೂರು: ಡಾ ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಯಾರಿಗೆ ಗೊತ್ತಿಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಡಾ ಬ್ರೋ ಅಂದ್ರೆ ಎಲ್ಲರಿಗೂ ಚಿರಪರಿಚಿತ. ಹೌದು, ಪ್ರಪಂಚದ ನಾನಾ ದೇಶಗಳಿಗೆ ಪ್ರವಾಸವನ್ನು ಕೈಗೊಂಡು ಅಲ್ಲಿನ ಆಚಾರ ವಿಚಾರ ಹಾಗೂ ಸ್ಥಳಗಳನ್ನು ಎಲ್ಲರಿಗೂ ಪರಿಚಯ ಮಾಡಿಸ್ತಾರೆ. ಇನ್ನು ಕನ್ನಡದಲ್ಲಿ ಅವರ ಭಾಷಾ ಹಿಡಿತ ಎಲ್ಲರಿಗೂ ಅಚ್ಚುಮೆಚ್ಚು. ಅವರದ್ದೇ ಆದ ಶೈಲಿಯಲ್ಲಿ ಮನಮುಟ್ಟುವಂತೆ ಸ್ಪಷ್ಟ ವಿವರಣೆ ನೀಡ್ತಾರೆ.

    ಇಂಡೋನೇಷ್ಯಾದಲ್ಲಿ ತುಳು ಮಾತಾನಾಡಿದ ಡಾ.ಬ್ರೋ:

    ಡಾ ಬ್ರೋ ಇಂಡೋನೇಷಿಯಾ ಪ್ರವಾಸ ಕೈಗೊಂಡಿರುವ ಸಮಯದಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ್ದಾರೆ. ಅಲ್ಲಿನ ಜನರಲ್ಲಿ ತುಳು ಭಾಷೆಯಲ್ಲಿ ‘ಹಾಯ್ ಎಂಚ ಉಲ್ಲರ್’ ಎಂದು ಕೇಳಿದ್ದು ಇದೀಗ  ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.   ಈ ಹಿಂದೆ ಡಾ. ಬ್ರೋ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ‘ಎಂಚ ಉಲ್ಲರ್’ ಎಂಬ ಪದವನ್ನು ತುಳು ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ಕಲಿಸಿಕೊಟ್ಟಿದ್ದರು.

    gagan

    ಇದೀಗ ಗಗನ್ ಶ್ರೀನಿವಾಸ್‌ರವರು ಇಂಡೋನಿಷಿಯಾದ ಜನರಿಗೆ ತುಳುವಿನಲ್ಲಿ ‘ಎಂಚ ಉಲ್ಲರ್’ ಎಂದು ಕೇಳಿದ್ದು ಇವರ ತುಳು ಭಾಷಾ ಪ್ರೇಮಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಯ್ ಹೆಲೋ..ಎಂದು ಹೇಳದೆ ತುಳುವಿನಲ್ಲಿ ಎಂಚ ಉಲ್ಲರ್ ಎಂದು ಕೇಳಿದ್ದು ಜನರಲ್ಲಿ ಸಂತಸ ವ್ಯಕ್ತವಾಗಿದೆ. ಇದೀಗ ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ವರ್ತೂರು ಸಂತೋಷ್​​ ತೋಟದಲ್ಲಿ ಮತ್ತೆ ಸೇರಿದ ಬಿಗ್​​ಬಾಸ್​ ಸ್ಪರ್ಧಿಗಳು

    ಗಗನ್ ಶ್ರೀನಿವಾಸ್ 2018 ರಲ್ಲಿ ಡಾ. ಬ್ರೋ ಎಂಬ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ಅನ್ನು
    ಪ್ರಾರಂಭ ಮಾಡ್ತಾರೆ. ಆರಂಭದ ದಿನಗಳಲ್ಲಿ ಹಾಸ್ಯ ವೀಡಿಯೊಗಳು ಮತ್ತು ಸಂದರ್ಶನ ವೀಡಿಯೊಗಳನ್ನು ಮಾಡುತ್ತಿದ್ದರು, ನಂತರ ಅವರು ಕರ್ನಾಟಕದಲ್ಲಿ ಮಾತ್ರ ವ್ಲಾಗ್ ಮಾಡಲು ಪ್ರಾರಂಭಿಸಿದರು. ನಿಧಾನವಾಗಿ ಭಾರತದೆಲ್ಲೆಡೆ ವ್ಲಾಗ್ ಮಾಡಲು ಪ್ರಾರಂಭಿಸಿದರು. ಇದೀಗ ಭಾರತವೂ ಸೇರಿ ಪ್ರಪಂಚದ ಮೂಲೆ ಮೂಲೆಗಳಿಗೆ ಸಂಚರಿಸಿ ವ್ಲಾಗ್ ಮಾಡುತ್ತಿದ್ದಾರೆ.

    1 Comment

    Leave a Reply

    Your email address will not be published. Required fields are marked *

    FILM

    ಗಣೇಶ ಹಬ್ಬದಂದು ದರ್ಶನ್‌ಗೆ ಭರ್ಜರಿ ಗಿಫ್ಟ್‌..! ಆದರೂ ಇಲ್ಲ ಗಣೇಶನ ದರ್ಶನ ಭಾಗ್ಯ..!!

    Published

    on

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಸಾಲು ಸಾಲು ಸಂಕಷ್ಟಗಳು ಎದುರಾಗಿದೆ. ಜೈಲಿನ ಸೌಲಭ್ಯ ದೊರಕಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿಯ ಕೇಂದ್ರ ಕಾರಾಗ್ರಹಕ್ಕೆ ದರ್ಶನ್‌ನನ್ನು ಸ್ಥಳಾಂತರಿಸಲಾಗಿದ್ದು, ದರ್ಶನ್‌ ಅಲ್ಲಿ ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದರು. ಮೊದಲು ಟಿವಿ ಬೇಡ ಎಂದು ಹೇಳಿದ್ದ ದರ್ಶನ್ ಚಾರ್ಜ್‌ ಶೀಟ್‌ ಸಲ್ಲಿಕೆಯಾಗುವ ಮೊದಲ ದಿನ ಪೊಲೀಸರ ಮುಂದೆ ಟಿವಿಯ ಬೇಡಿಕೆಯನ್ನು ಇಟ್ಟಿದ್ದಾರೆ. ಅದಲ್ಲದೇ ಬೆನ್ನು ನೋವಿನಿಂದಾಗಿ ಇಂಡಿಯನ್ ಟಾಯ್ಲೆಟ್ ಬಳಸಲು ಕಷ್ಟವಾಗುತ್ತದೆ. ಶೌಚ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವೆಸ್ಟರ್ನ್‌ ಟಾಯ್ಲೆಟ್‌ ಗೆ ಬೇಡಿಕೆ ಇಟ್ಟಿದ್ದರು. ಇದೀಗ ಪೊಲೀಸರು ದರ್ಶನ್‌ಗೆ ಟಿವಿಯನ್ನು ಒದಗಿಸಿಕೊಟ್ಟಿದ್ದು ಹಬ್ಬದ ದಿನದಂದು ಗಿಫ್ಟ್‌ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಅದಲ್ಲದೇ ವೆಸ್ಟರ್ನ್‌ ಕಮಾಡ್‌ಗೆ ಬೇಡಿಕೆಯನ್ನು ಕೂಡಾ ಪೊಲೀಸರು ಪೂರೈಸಿದ್ದಾರೆ.

    ಚಾರ್ಜ್‌ಶೀಟ್‌ ನ ಕುರಿತಾಗಿ ಹಾಗೂ ಜೈಲಿನ ಹೊರಗೆ ಏನೆಲ್ಲಾ ಬೆಳವಣಿಗೆಗಳು ಆಗುತ್ತಿದೆ ಎಂಬುದನ್ನು ತಿಳಿಯಲು ದರ್ಶನ್ ಟಿವಿಗಾಗಿ ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿ ನೀಡಿರುವ ಪೊಲೀಸ್‌ ಅಧಿಕಾರಿಗಳು ಹಬ್ಬದ ದಿನದಂದೇ ಅವರಿಗೆ ಗಿಫ್ಟ್‌ ನೀಡಿದ್ದಾರೆ. ಇದರ ಜೊತೆ ದರ್ಶನ್‌ಗೆ ಇಂದು ಸಹಿ ಊಟ ಕೂಡಾ ಮಾಡಲಿದ್ದಾರೆ. ಆದರೆ ದರ್ಶನ್‌ಗೆ ಗಣಪನ ದರ್ಶನ ಭಾಗ್ಯ ಇಲ್ಲ ಅನ್ನೋದು ಅವರ ಆಭಿಮಾನಿಗಳಿಗೆ ಬೇಸರ ತಂದಿದೆ.

    ಪ್ರತಿ ವರ್ಷದಂತೆ ಈ ವರ್ಷವು ಜೈಲಿನಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ಆದರೆ ಈ ಗಣೇಶನ ದರ್ಶನ ಭಾಗ್ಯ ದರ್ಶನ್ ಗೆ ಇಲ್ಲ. ಜೈಲಿನಲ್ಲಿ ಫುಲ್‌ ಟೈಟ್‌ ಸೆಕ್ಯೂರಿಟಿಯಲ್ಲಿರುವ ದರ್ಶನ್‌ ಭದ್ರತೆ ದೃಷ್ಟಿಯಿಂದ ಗಣೇಶನ ದರ್ಶನ ಭಾಗ್ಯ ಇಲ್ಲ ಎನ್ನಲಾಗಿದೆ.  ಈಗಾಗಲೇ ಜೈಲಿನಲ್ಲಿರುವ ಖೈದಿಗಳು ನಟನನ್ನು ನೋಡಲು ತುದಿಗಾಲಿನಲ್ಲಿದ್ದಾರೆ.

    ಇನ್ನು ದರ್ಶನ್‌ ನನ್ನು ಜೈಲಿನಲ್ಲಿ ಹೇಗೆ ನೋಡಿಕೊಳ್ಳಬೇಕು ಎಂದು ಜೈಲಿನ ಅಧಿಕಾರಿಗಳಿಗೆ ಕಾರಾಗೃಹದ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ದರ್ಶನ್‌ನನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದ್ದು, ಸೆಲ್‌ನೊಳಗೆ ಸಿಸಿಟಿವಿಯನ್ನು ಅಳವಡಿಸಲಾಗಿದೆ. 24 ಗಂಟೆಯೂ ಸಿಸಿಟಿವಿ ಕಣ್ಗಾವಲಿನಲ್ಲಿ ದರ್ಶನ್‌ನನ್ನು ಇರಿಸಲಾಗಿದೆ. ಇನ್ನು ಪ್ರತಿದಿನವೂ ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಸ್ಟೋರೇಜ್‌ ಮಾಡಿ ಇರಿಸಬೇಕೆಂದು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    Continue Reading

    FILM

    ನಿರ್ದೇಶಕ ಯೋಗರಾಜ್ ಭಟ್‌ ವಿರುದ್ಧ ಎಫ್‌ಐಆರ್‌..!

    Published

    on

    ಬೆಂಗಳೂರು: ಕನ್ನಡ ಚಿತ್ರರಂಗದ ಹಿಟ್‌ ಸಿನೆಮಾಗಳ ನಿರ್ದೇಶಕ ಯೋಗರಾಜ್‌ ಭಟ್‌ ರವರ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಯೋಗರಾಜ್‌ ನಿರ್ದೇಶನದ ಮನದ ಕಡಲು ಸಿನೆಮಾ ಶೂಟಿಂಗ್ ವೇಳೆ ಲೈಟ್‌ ಬಾಯ್‌ ಒಬ್ಬ 30 ಅಡಿ ಮೇಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಹಿನ್ನೆಲೆ ನಿರ್ದೇಶಕ ಯೋಗರಾಜ್ ಭಟ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

    ಬೆಂಗಳೂರು ಉತ್ತರ ಹೊರವಲಯದ ವಿಆರ್‌ಎಲ್‌ ಅರೆನಾ ಬಳಿ ಈ ದುರಂತ ಸಂಭವಿಸಿದ್ದು ಘಟನೆಯಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಶಿವರಾಜ್(30ವ ) ಮೃತಪಟ್ಟಿದ್ದಾರೆ. ಯೋಗರಾಜ್‌ ಭಟ್‌ ರವರು ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದು ಮುಂಗಾರು ಮಳೆ, ಗಾಳಿಪಟದಂತಹ ಹಿಟ್‌ ಸಿನೆಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದರು. ಇದೀಗ ಮಾದನಾಯಕನಹಳ್ಳಿ ಪೊಲೀಸರು ದಾಖಲಿಸಿರುವ ಎಫ್‌ಐಅರ್‌ ನಲ್ಲಿ ಯೋಗರಾಜ್‌ಭಟ್‌ ರವರು ಮೂರನೇ ಆರೋಪಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮ್ಯಾನೇಜರ್‌ ಸುರೇಶ್ ಅವರನ್ನು ಆರೋಪಿ ಸಂಖ್ಯೆ 1 ಎಂದು ನಮೂದಿಸಲಾಗಿದೆ.

    VIDEO: ತಮಿಳಿನ ಬಿಗ್‌ಬಾಸ್‌ಗೆ ಸಾರಥಿಯಾದ್ರು ವಿಜಯ್‌ ಸೇತುಪತಿ..!

    ಸಿನೆಮಾ ಚಿತ್ರೀಕರಣದ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೇ ಇರುವುದರಿಂದ ನಿರ್ಲಕ್ಷ್ಯದಿಂದ ಲೈಟ್ ಬಾಯ್‌ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಲೈಟ್‌ ಬಾಯ್ ಶಿವರಾಜ್ ತನ್ನ ಸಹೋದರನ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದ ಎಂದು ಹೇಳಲಾಗಿದೆ.

    Continue Reading

    FILM

    VIDEO: ತಮಿಳಿನ ಬಿಗ್‌ಬಾಸ್‌ಗೆ ಸಾರಥಿಯಾದ್ರು ವಿಜಯ್‌ ಸೇತುಪತಿ..!

    Published

    on

    ತಮಿಳುನಾಡು/ಮಂಗಳೂರು: ಬಿಗ್‌ಬಾಸ್ ತಮಿಳು ಸೀಸನ್‌ ಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಈ ಹಿಂದೆ ಬಿಗ್‌ಬಾಸ್ ಸೀಸನ್-7ರ ಶೋವನ್ನು ತಮಿಳು ನಟ ಕಮಲ್‌ ಹಾಸನ್‌ ರವರು ನಡೆಸಿಕೊಂಡು ಬಂದಿದ್ದರು. ಆದರೆ ಈ ಬಾರಿಯ ಬಿಗ್‌ಬಾಸ್‌ ಶೋನ ನಿರೂಪಣೆಯಿಂದ ಹೊರಗುಳಿಯುವತೆ ಕಮಲ್‌ ಹಾಸನ್ ಹೇಳಿದ್ದರು.  ಇದೀಗ ಹೊಸ ನಿರೂಪಕರ ಪರಿಚಯವನ್ನು ಅಯೋಜಕರು ರಿವೀಲ್‌ ಮಾಡಿದ್ದಾರೆ. ಅದು ಬೇರಾರು ಅಲ್ಲ ತಮಿಳಿನ ವಿಜಯ್‌ ಸೇತುಪತಿ…

    VIDEO: ಬಿಗ್‌ಬಾಸ್‌ ನಿರೂಪಣೆಯ ಬಗ್ಗೆ ಮೌನ ಮುರಿದ ಸುದೀಪ್..!’ಮೂ ಆನ್ ಅಗಲೇ ಬೇಕು’ ಅಂದಿದ್ಯಾಕೆ ಕಿಚ್ಚ.!?

    ಹೌದು, ತಮಿಳಿನ ಬಿಗ್‌ಬಾಸ್‌ ಸೀಸನ್ -8 ರ ನಿರೂಪಕರಾಗಿ ವಿಜಯ್‌ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ.  ಈ ಹಿಂದೆ ವಿಜಯ್‌ ಸೇತುಪತಿಯನ್ನು ಬಿಗ್‌ಬಾಸ್‌ ಗೆ ಕರೆತರಲು ಕಸರತ್ತು ನಡೆಯುತ್ತಿದೆ ಎಂಬುದಾಗಿ ವರದಿಯಾಗಿತ್ತು. ಇದೀಗ ಈ ಸುದ್ದಿ ಅಧಿಕೃತಗೊಂಡಿದೆ. ಕಮಲ್ ಹಾಸನ್‌ ಜಾಗದಲ್ಲಿ ವಿಜಯ್ ಸೇತುಪತಿ ನಿಂತು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇನ್ನು ವಿಜಯ್‌ ನಿರೂಪಣೆಯಲ್ಲಿ ಬಿಗ್‌ಬಾಸ್ ಹೇಗೆ ನಡೆಯಲಿದೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

    Continue Reading

    LATEST NEWS

    Trending