Connect with us

    DAKSHINA KANNADA

    ಮನೆಯೊಳಗೆ ಈ ಪ್ರಾಣಿ ಪಕ್ಷಿಗಳು ಬರಬಾರದಂತೆ, ಯಾವುದು? ಯಾಕೆ ಗೊತ್ತಾ?

    Published

    on

    ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಎನ್ನುವ ಮಾತಿದೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಕಷ್ಟ ಸುಖ ಎರಡನ್ನು ಸಮಭಾಗವಾಗಿ ಸ್ವೀಕರಿಸಬೇಕು. ಆದರೆ ಜ್ಯೋತಿಷ್ಯದ ಪ್ರಕಾರ ಈ ಪ್ರಾಣಿ ಪಕ್ಷಿಗಳು ಮನೆಯೊಳಗೆ ಬಂದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ಕೆಲವು ಪ್ರಾಣಿ ಹಾಗೂ ಪಕ್ಷಿಗಳು ಮನೆಯನ್ನು ಪ್ರವೇಶಿಸಬಾರದು ಎಂದು ಹೇಳುತ್ತಾರೆ. ಆದರೆ ಇದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.

    ಏಡಿ : ಏಡಿಯು ಮನೆಯೊಳಗೆ ಪ್ರವೇಶಿಸಿದರೆ ಮನೆಗೆ ಮಾಟ ಮಾಡಿದ್ದಂತೆ ಎನ್ನಲಾಗುತ್ತದೆ. ಇದು ಪ್ರವೇಶಿಸಿದರೆ ಮನೆಯಲ್ಲಿ ಸಂಕಷ್ಟಗಳು ಎದುರಾಗಿ ಮನೆಯೇ ಸರ್ವನಾಶವಾಗುತ್ತದೆ ಎನ್ನಲಾಗುತ್ತದೆ.

    ಕಪ್ಪು ಬೆಕ್ಕು : ಕೆಲವೊಮ್ಮೆ ಬೇರೆಯವರ ಮನೆಯ ಬೆಕ್ಕು ಮನೆಗೆ ಬಂದು ಉಳಿಯುತ್ತವೆ. ಆದರೆ ಕಪ್ಪು ಬೆಕ್ಕು ಮನೆಯನ್ನು ಪ್ರವೇಶಿಸುವುದು ಒಳ್ಳೆಯದಲ್ಲ. ಈ ಬೆಕ್ಕು ಅಪಶಕುನವಂತೆ, ಮನೆಗೆ ಬಂದರೆ ಕೆಟ್ಟದಾಗುತ್ತದೆ ಎನ್ನಲಾಗುತ್ತದೆ.

    ಉಡ : ಅಪರೂಪವಾಗಿ ಕಾಣಸಿಗುವ ಉಡವನ್ನು ನೋಡುವುದೇ, ಅದರ ಬಗ್ಗೆ ಮಾತನಾದುವುದೇ ಕೆಟ್ಟದಂತೆ. ಈ ಪ್ರಾಣಿಯು ಅನಿಷ್ಟವಂತೆ, ಹೀಗಾಗಿ ಮನೆಗೆ ಬರುವುದು ಒಳ್ಳೆಯದಲ್ಲ. ಒಂದು ವೇಳೆ ಅಪ್ಪಿ ತಪ್ಪಿ ಮನೆಯನ್ನು ಪ್ರವೇಶಿಸಿದರೆ ಮನೆಗೆ ಮಾಟ ಮಾಡಿದ್ದಂತೆ. ಇದರಿಂದ ಮನೆಯೇ ನಾಶವಾಗುತ್ತದೆ ಎನ್ನಲಾಗುತ್ತದೆ.

    ಕಾಗೆ : ಕಾಗೆಯು ಮನೆಗೆ ಬಂದರೆ ಶನಿಯು ಮನೆಗೆ ಪ್ರವೇಶಿಸುತ್ತಿದ್ದಾನೆ ಎನ್ನುವುದರ ಸೂಚಕ. ಕಾಗೆಯೂ ಮನೆಯೊಳಗೆ ಬಂದರೆ ಸಂಕಷ್ಟಗಳು ಎದುರಾಗುತ್ತದೆ. ಆರ್ಥಿಕ ಧನನಷ್ಟ ಹಾಗೂ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.

    ಬಾವುಲಿ : ಬಾವಲಿಯು ಮನೆಗೆ ಪ್ರವೇಶಿಸುವುದರಿಂದ ಮನೆಯು ಹಾಳಾಗುತ್ತಿದೆ ಎಂದು ಸೂಚಿಸುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಉಳಿಯುತ್ತವೆ. ಅಷ್ಟೇ ಅಲ್ಲದೇ, ಮನೆಯಲ್ಲಿ ವಾಸಿಸುವ ಜನರ ಜೀವನದಲ್ಲಿ ಸಮಸ್ಯೆಗಳು ಆರಂಭವಾಗುತ್ತದೆಯಂತೆ.

    ಜೇನುಗೂಡು ಅಥವಾ ಜೇನುಹುಳ: ಮನೆಯೊಳಗೆ ಜೇನುಹುಳಗಳು ಒಂದೆರಡು ಬಂದರೆ ಪರವಾಗಿಲ್ಲ. ಆದರೆ ಜೇನುಹುಳಗಳು ಮನೆಯೊಳಗೆ ಗೂಡು ಕಟ್ಟುವುದು ಒಳ್ಳೆಯದಲ್ಲ. ಇದರಿಂದ ಆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಸಂಕಷ್ಟ ಎದುರಾಗುತ್ತದೆ.

    ಗೂಬೆ : ಗೂಬೆಯು ಅನಿಷ್ಟ ವಾಗಿದ್ದು ಇದರ ಆಗಮನವು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಮನೆಗೆ ಗೂಬೆ ಬಂದರೆ ಮನೆಯ ಪ್ರಗತಿಯು ಕುಂಠಿತವಾಗುತ್ತದೆ. ಮನೆಯಲ್ಲಿ ವಾಸಿಸುವ ಸದಸ್ಯರ ನಡುವೆ ವೈಮನಸ್ಸು ಉಂಟಾಗಿ ಮನೆಯೇ ನಾಶವಾಗುವ ಸಾಧ್ಯತೆ ಇರುತ್ತದೆ.

    ರಣಹದ್ದುಗಳು : ರಣ ಹದ್ದುಗಳು ಮನೆಯೊಳಗೆ ಪ್ರವೇಶಿಸಿದರೆ ಯಜಮಾನನಿಗೆ ಸಮಸ್ಯೆಯಾಗುತ್ತದೆ. ಅದಲ್ಲದೇ, ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತದೆ ಎನ್ನಲಾಗಿದೆ.

    DAKSHINA KANNADA

    ಸರ್ಕಾರಕ್ಕೆ ತುಳು ಚಿತ್ರ ನಿರ್ಮಾಪಕರ ಮನವಿ: ಸಿಎಂ ಸ್ಪಂದನೆ…!

    Published

    on

    ಮಂಗಳೂರು : ತುಳು ಚಿತ್ರ ನಿರ್ಮಾಪಕರು ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಪ್ರಾದೇಶಿಕ ಚಲನಚಿತ್ರಗಳಿಗೆ ಸಬ್ಸಿಡಿ ಹಾಗೂ ನಿರ್ಮಾಕರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಮನವಿ ಸಲ್ಲಿಸಿದ್ದಾರೆ. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್ ಅವರು ಸಂಘದ ಪರವಾಗಿ ಮನವಿ ಸಲ್ಲಿಸಿದ್ದಾರೆ.

    ಪ್ರಾದೇಶಿಕ ಚಲನಚಿತ್ರವಾಗಿ ತುಳು ಭಾಷೆಯಲ್ಲಿ ವಾರ್ಷಿಕ 15 ರಿಂದ 20 ಸಿನೆಮಾಗಳು ನಿರ್ಮಾಣವಾಗುತ್ತಿದೆ. ಭಾಷೆಯ ಮೇಲಿನ ಅಭಿಮಾನದಿಂದ ನಿರ್ಮಾಪಕರು ಚಿತ್ರ ನಿರ್ಮಾಣಕ್ಕೆ ಕೈ ಹಾಕುತ್ತಿದ್ದಾರೆ. ಯಾವುದೇ ಪರಭಾಷೆಗೆ ಕಡಿಮೆ ಇಲ್ಲದಂತೆ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರ ಮೂರು ನಾಲ್ಕು ಸಿನೆಮಾಗಳಿಗೆ ಮಾತ್ರ ಸಬ್ಸಿಡಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಕನಿಷ್ಟ ಹದಿನೈದು ಸಿನೆಮಾಗಳಿಗೆ ಸಬ್ಸಿಡಿ ನೀಡುವಂತೆ ಮನವಿ ಸಲ್ಲಿಸಲಾಗಿದೆ.

    ಇನ್ಮುಂದೆ ಹಳದಿ ಹಕ್ಕಿಯ ಚಿಲಿಪಿಲಿ ಕೇಳಲ್ಲ – ಬಾಗಿಲು ಹಾಕಿತು ಕೂ ಆ್ಯಪ್

    ಇದೇ ವೇಳೆ ಮಂಗಳೂರಿನ ಕೊಡಿಯಾಲ್ ಬೈಲ್ ಎ ಗ್ರಾಮದ ಸರ್ವೆ ನಂಬ್ರ 1554 – 2 ಬಿ ಯಲ್ಲಿ ಸರ್ಕಾರದ ಖಾಲಿ ಜಮೀನಿನಲ್ಲಿ ಐದು ಸೆಂಟ್ಸ್ ಜಾಗವನ್ನು ತುಳು ಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡುವಂತೆಯೂ ಮನವಿಯಲ್ಲಿ ಕೊರಲಾಗಿದೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ ಸೂಕ್ತ ಭರವಸೆಯನ್ನು ನೀಡಿದ್ದಾರೆ.

    Continue Reading

    DAKSHINA KANNADA

    ಪತಿಯ ಹ*ತ್ಯೆ ಪ್ರಕರಣ; ಪತ್ನಿ ಸಹಿತ ಐವರಿಗೆ ಜೀವಾವಧಿ ಸಜೆ

    Published

    on

    ಮಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ತನ್ನ ಪತಿಯನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹಿಳೆ ಸಹಿತ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ಕಾಸರಗೋಡು: ಪುರುಷ ಹಾಗೂ ಮಹಿಳೆಯ ಮೃ*ತದೇಹ ವಸತಿಗೃಹದಲ್ಲಿ ಪತ್ತೆ

    8 ವರ್ಷಗಳ ಹಿಂದೆ ಅಂದರೆ 2016ರಲ್ಲಿ ಈ ಘಟನೆ ನಡೆದಿತ್ತು. ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪಾವೂರು ನಿವಾಸಿ ಇಸ್ಮಾಯಿಲ್‌ (59) ಕೊಲೆಯಾದವರು. ಅವರ ಪತ್ನಿ ನೆಬಿಸಾ(40), ಆಕೆಯ ಪ್ರಿಯಕರ ಕುತ್ತಾರುಪದವಿನ ಜಮಾಲ್‌ ಅಹಮ್ಮದ್‌ (38), ಉಳ್ಳಾಲದ ಅಬ್ದುಲ್‌ ಮುನಾಫ್ ಯಾನೆ ಮುನ್ನ (41), ಉಳ್ಳಾಲದ ಅಬ್ದುಲ್‌ ರೆಹಮಾನ್‌ (36) ಮತ್ತು ಬೋಳಿಯಾರ್‌ನ ಶಬೀರ್‌ (31) ಶಿಕ್ಷೆಗೊಳಗಾದವರು. ಇಸ್ಮಾಯಿಲ್‌ ಅವರು ನೆಬಿಸಾಳನ್ನು ಎರಡನೇ ವಿವಾಹವಾಗಿದ್ದು ಅವರು ನಾಲ್ವರು ಮಕ್ಕಳನ್ನು ಹೊಂದಿದ್ದರು. ನೆಬಿಸಾ ಮತ್ತು ಜಮಾಲ್‌ನಿಗೆ ಅನೈತಿಕ ಸಂಬಂಧವಿತ್ತು. ಇದು ಇಸ್ಮಾಯಿಲ್‌ಗೆ ಗೊತ್ತಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕೆ ಆಗಾಗ್ಗೆ ಪತಿ -ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ಹಿನ್ನೆಲೆಯಲ್ಲಿ ನೆಬಿಸಾ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ್ದಳು ಎಂದು ಆರೋಪಿಸಲಾಗಿತ್ತು. ಕೊಣಾಜೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಕಾಂತಜಾರು ಎಸ್‌.ವಿ. ಅವರು ಆರೋಪಿಗಳ ಅಪರಾಧ ಸಾಬೀತಾಗಿರುವುದರಿಂದ ಆರೋಪಿಗಳಿಗೆ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಕೊಲೆಯಾದ ಇಸ್ಮಾಯಿಲ್‌ ಅವರ ಮಕ್ಕಳಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ಮಾಡಿದ್ದಾರೆ.

     

     

    Continue Reading

    DAKSHINA KANNADA

    ಕಾಸರಗೋಡು: ಪುರುಷ ಹಾಗೂ ಮಹಿಳೆಯ ಮೃ*ತದೇಹ ವಸತಿಗೃಹದಲ್ಲಿ ಪತ್ತೆ

    Published

    on

    ಕಾಸರಗೋಡು: ಪುರುಷ ಮತ್ತು ಮಹಿಳೆಯ ಮೃ*ತದೇಹ ವಸತಿಗೃಹದಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮಹಿಳೆಯನ್ನು ಕೊ*ಲೆಗೈದು ಈತ ಆತ್ಮಹ*ತ್ಯೆ ಗೈದಿರಬಹುದು ಎಂದು ಶಂಕಿಸಲಾಗಿದೆ.

    ನೆಲ್ಲಿಕಟ್ಟೆಯ ಫಾತಿಮಾ (42) ಹಾಗೂ ಚೆಂಗಳ ರಹಮತ್ ನಗರದ ಕೆ. ಹುಸೈನಾರ್ (33) ಮೃ*ತಪಟ್ಟವರು. ಕಾಸರಗೋಡು ನಗರದ ವಸತಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಮೃ*ತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ.

    ಕಾಸರಗೋಡು ಹಾಗೂ ಹೊಸದುರ್ಗ ಠಾಣಾ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಮರ*ಣೋತ್ತರ ಪರೀಕ್ಷೆಗಾಗಿ ಮೃ*ತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶ*ವಗರದಲ್ಲಿರಿಸಲಾಗಿದೆ.

    ಫಾತಿಮಾಳು ಪತಿ ಮತ್ತು ಮಕ್ಕಳನ್ನು ತೊರೆದು ಕಳೆದ ನಾಲ್ಕು ವರ್ಷಗಳಿಂದ ಹುಸೈನಾರ್ ಜತೆ ವಾಸವಾಗಿದ್ದಳು ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending