Connect with us

    LATEST NEWS

    ಏಲಿಯನ್‌ಗಳು ನಿಜಕ್ಕೂ ಇದೆಯಾ? ಡಾ.ಸೋಮನಾಥ್‌ರಿಂದ ಅಚ್ಚರಿಯ ಮಾಹಿತಿ !!

    Published

    on

    ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಈಗಾಗಲೇ ಏಲಿಯನ್ಸ್ ಬಗ್ಗೆ ಮಾಹಿತಿ ಇತ್ತು. ಆದರೆ ಏಲಿಯನ್​ಗಳ ಮಾಹಿತಿಗಳನ್ನು ಅಮರಿಕ ಮರೆಮಾಚುತ್ತಿದೆ ಎಂಬ ಗಂಭೀರ ಆರೋಪಗಳಿವೆ. ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರೊಂದಿಗಿನ ಸಂದರ್ಶನದಲ್ಲಿ ಸೋಮನಾಥ್‌ ಕೆಲವು ಕೌತುಕ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ನಂಬಲು ಅಸಾಧ್ಯವಾಗಿರುವ ಮಾಹಿತಿಗಳನ್ನು ನೀಡಿದ್ದಾರೆ.

    ಏಲಿಯನ್‌ಗಳು ಕಲ್ಪನೆಯೇ ಕುತೂಹಲವಾದದ್ದು.

    ಮನುಷ್ಯನ ಊಹೆಗೂ ನಿಲುಕದ ಅದೆಷ್ಟೋ ಪ್ರಕೃತಿ ವಿಸ್ಮಯಗಳು ನಡೆದಿರುತ್ತವೆ. ವಿಜ್ಞಾನ – ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಕೆಲವು ವಿಷಯಗಳು ಎಲ್ಲವನ್ನೂ ಮೀರಿದ್ದೇ ಆಗಿವೆ. ಅಂಥದ್ದರಲ್ಲಿ ಒಂದು ಈ ಏಲಿಯನ್‌. ಏಲಿಯನ್‌ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಇಂದು ನಿನ್ನೆಯದ್ದಲ್ಲ. ಎಷ್ಟೋ ದಶಕಗಳಿಂದ ಈ ಬಗ್ಗೆ ಅಧ್ಯಯನ ನಡೆಯುತ್ತಲೇ ಇದ್ದು ಪರ-ವಿರೋಧಗಳ ಚರ್ಚೆಗಳೂ ಆಗುತ್ತಿವೆ.

    “ಭೂಮಿಯ ಹೊರತಾಗಿಯೂ ಸಾವಿರ ವರ್ಷಗಳಷ್ಟು ಮುಂದಿರುವ ಯಾವುದಾದರೂ ನಾಗರಿಕತೆಯ ಗ್ರಹದ ಜೀವಿಗಳು, ಅಭಿವೃದ್ಧಿ ಹಾಗೂ ತಂತ್ರಜ್ಞಾನದಲ್ಲಿ ಮುಂದಿದ್ದು, ವಿಶ್ವದ ಯಾವುದಾದರೂ ಒಂದು ಮೂಲೆಯಿಂದ ಎಲ್ಲ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ನೋಡುತ್ತಿರುವ ಎಲ್ಲಾ ಸಾಧ್ಯತೆಗಳು ಇವೆ” ಎನ್ನುವುದು ಡಾ.ಸೋಮನಾಥ್‌ ಅವರ ಮಾತು.  “ಬ್ರಹ್ಮಾಂಡವು ಶತಕೋಟಿ ಆಕಾಶಕಾಯಗಳು, ನಕ್ಷತ್ರಗಳು ಮತ್ತು ಗ್ರಹಗಳಿಂದ ಹೋಗಿರುವಂಥದ್ದು. ಆದರೆ ಈ ವಿಶಾಲ ಜಗತ್ತಿನಲ್ಲಿ ಜೀವಿಗಳಿಗೆ ಆಶ್ರಯ ನೀಡುವ ಅಥವಾ ನಿಡಬಲ್ಲ ಏಕೈಕ ಗ್ರಹವೆಂದರೆ ಭೂಮಿ. ಮುಂದಿನ 1000 ವರ್ಷಗಳಲ್ಲಿ ತಂತ್ರಜ್ಞಾನವು ಜಾಗತಿಕವಾಗಿ ಹೆಚ್ಚಾಗುತ್ತದೆ ಎನ್ನುವುದು ನಿಜವಾದರೂ, ಭೂಮಿಯ ಹೊರತಾಗಿಯೂ ಬೇರೆ ಯಾವುದೋ ಗ್ರಹವು ಸಾವಿರಾರು ವರ್ಷಗಳಷ್ಟು ಮುಂದುವರಿದಿರಬಹುದು ಇಲ್ಲವೇ  200 ವರ್ಷಗಳಷ್ಟು ಹಿಂದಕ್ಕೆ ಇದ್ದಿರಲೂಬಹುದು. ಆದ್ದರಿಂದ ಯಾವುದೇ ಅನ್ಯಜೀವಿಯ ಅಸ್ತಿತ್ವದಲ್ಲಿ ಇಲ್ಲ ಎನ್ನಲು ಸಾಧ್ಯವಿಲ್ಲ” ಎಂದು ಅವರು ವಿಶ್ಲೇಷಿಸಿದ್ದಾರೆ.

    “ಈಗ ಶತಮಾನದಷ್ಟು ಹಿಂದಕ್ಕೆ ಹೋಗಿ ನೋಡುವುದಾದರೆ, ಆಗಿನ  ತಂತ್ರಜ್ಞಾನಕ್ಕೆ ಹೋಲಿಸಿದರೆ ಭೂಮಿಯ ಮೇಲಿನ ತಂತ್ರಜ್ಞಾನ ಇಂದಿಗೆ ಅಗಾಧವಾಗಿ ಬೆಳೆದಿದೆ. ಈ ಕ್ಷಿಪ್ರ ಬೆಳವಣಿಗೆಯ ಜೊತೆಗೆ, ಅನ್ಯಗ್ರಹ ಜೀವಿಗಳ ಅಸ್ತಿತ್ವವೂ ಇದ್ದಿರುವ ಎಲ್ಲಾ ಸಾಧ್ಯತೆಗಳೂ ಇವೆ. ಏಕೆಂದರೆ, ಮನುಷ್ಯರು  ಸೇರಿದಂತೆ ವಿಶ್ವದಲ್ಲಿರುವ ಎಲ್ಲಾ ಜೀವಿಗಳು ಕಳೆದ ನೂರು ವರ್ಷಗಳಲ್ಲಿ ವಿಕಸನಗೊಳ್ಳುತ್ತಲೇ ಬಂದಿವೆ.  ಕೆಲವು ಜಾತಿಗಳು ತಂತ್ರಜ್ಞಾನದಲ್ಲಿ ಮನುಷ್ಯರಿಗಿಂತ ಮುಂದಿರಬಹುದು. ಇತರರು ಹಿಂದೆ ಇದ್ದಾರೆ. ಆದ್ದರಿಂದ ಭೂಮಿಯನ್ನಷ್ಟೇ ಅಲ್ಲದೇ, ಅನ್ಯಗ್ರಹಗಳ ಇರುವಿಕೆಯನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಅದು ಭೂಮಿಗಿಂತಲೂ ಸಾವಿರಾರು ವರ್ಷ  ಮುಂದುವರಿದಿರಬಹುದು” ಎನ್ನುವ ಮಾತು ಇಸ್ರೋ ಅಧ್ಯಕ್ಷರದ್ದು.

    ಇದೇ ವೇಳೆ ಸೋಮನಾಥ್ ಅವರು,”ಒಂದು ವೇಳೆ ಏಲಿಯನ್ಸ್‌ ಅಥವಾ  ಅನ್ಯಗ್ರಹ ಜೀವಿಗಳು ಭೂಮಿಗೆ ಬಂದು ಬಿಟ್ಟರೆ ಏನೆಲ್ಲಾ ಅಪಾಯ ಆಗಬಹುದು” ಎನ್ನುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. “ಅನ್ಯಗ್ರಹ ಜೀವಿಗಳು ಮತ್ತು ಭೂಮಿಯ ಮೇಲಿನ ಜೀವಿಗಳ ಜೀವನ ಕ್ರಮದಲ್ಲಿ ಸಂಪೂರ್ಣ ವ್ಯತ್ಯಾಸವಿದೆ. ಎರಡೂ ಜೀವನಶೈಲಿ ಸಂಪೂರ್ಣ ಭಿನ್ನವಾದಂಥದ್ದು. ಅನ್ಯಜೀವಿಗಳ ದೇಹವು ಬಹುಶಃ  ಜೀನೋಮಿಕ್ ಮತ್ತು ಪ್ರೊಟೀನ್ ಆಧರಿತವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಅವು ಏನಾದರೂ ಭೂಮಿಯ ಮೇಲೆ ಬಂದರೆ, ಮನುಷ್ಯ ಮತ್ತು ಅವುಗಳ  ನಡುವೆ ಸಂಘರ್ಷ ನಡೆಯುವ ಸಾಧ್ಯತೆ ಇದೆ. ಇದು ತುಂಬಾ ಅಪಾಯಕಾರಿ ಮಟ್ಟವನ್ನೂ ತಲುಪಬಹುದು” ಎಂದಿದ್ದಾರೆ.

    LATEST NEWS

    ಮೂರು ಪೂರಿಗಳನ್ನು ಒಟ್ಟಿಗೆ ತಿಂದು 6ನೇ ತರಗತಿ ವಿದ್ಯಾರ್ಥಿ ಸಾವು !

    Published

    on

    ಮಂಗಳೂರು/ಹೈದರಾಬಾದ್: 11 ವರ್ಷದ ಬಾಲಕನೊಬ್ಬ ಮೂರಕ್ಕಿಂತ ಹೆಚ್ಚು ಪೂರಿಗಳನ್ನು ಒಟ್ಟಾಗಿ ಬಾಯಿಗೆ ಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿರುವ ಅಘಾತಕಾರಿ ಘಟನೆ ಹೈದರಾಬಾದ್ ನ ಶಾಲೆಯೊಂದರಲ್ಲಿ ನಡೆದಿದೆ.


    6ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮನೆಯಿಂದ ತಂದಿದ್ದ ಪೂರಿಯನ್ನು, ಮಧ್ಯಾಹ್ನದ ಊಟಕ್ಕೆ ಕೂತಿದ್ದ ಸಮಯದಲ್ಲಿ ಒಂದೇ ಬಾರಿಗೆ ಮೂರಕ್ಕಿಂತ ಹೆಚ್ಚು ಪೂರಿಗಳನ್ನು ಬಾಯಿಗೆ ಹಾಕಿಕೊಂಡಿದ್ದ. ಈ ವೇಳೆ ಉಸಿರಾಡಲು ಸಾಧ್ಯವಾಗದೆ ವಿದ್ಯಾರ್ಥಿ ಸಾವನ್ನಪಿದ್ದಾನೆ.

    ಇದನ್ನೂ ಓದಿ: ಶಾಲೆಯಲ್ಲಿ ಅ*ಪ್ರಾಪ್ತೆಯರ ಜೊತೆ ಮೃ*ಗೀಯ ವರ್ತನೆ ತೋರಿದ ಶಿಕ್ಷಕ ಅರೆಸ್ಟ್!!
    ಶಾಲೆಯ ಸಿಬ್ಬಂದಿಗಳು ತಕ್ಷಣವೇ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿದಾಗ ಅದಗಾಲೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಗೊತ್ತಾಗಿದೆ.

    Continue Reading

    LATEST NEWS

    ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಪ್ರಕರಣ – 8 ಜನರ ಬಂಧನ

    Published

    on

    ಬೆಳಗಾವಿ: ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, ಫೋಟೊಗ್ರಾಫರ್ ಕಿಡ್ನ್ಯಾಪ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಫೋಟೋಗ್ರಾಫರ್ ಉಮೇಶ್ ಹೊಸೂರು ಎಂಬುವವರು ಅಪಹರಣವಾಗಿ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್ ಬೆಳಗಾವಿ ನಗರಕ್ಕೆ ಬಂದಿದ್ದರು. ಕಿಡ್ನಾಪ್‌ ಮಾಡಿ ಕಾರು ನಿಲ್ಲಿಸಿ ರಾಡ್​ನಿಂದ ಹಲ್ಲೆ ಮಾಡಿ ಬಿಟ್ಟು ಹೋಗಿದ್ದಾರೆ. ಬೈಲಹೊಂಗಲ ಖಾಸಗಿ ಆಸ್ಪತ್ರೆಯಲ್ಲಿ ಫೋಟೋಗ್ರಾಫರ್ ಉಮೇಶ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕೇಸ್ ದಾಖಲಾಗ್ತಿದ್ದಂತೆ ಇಬ್ಬರು ಮಹಿಳೆಯರು ಸೇರಿ ಎಂಟು ಜನರನ್ನು ಬಂಧಿಸಲಾಗಿದೆ. ವೃತ್ತಿ ವೈಷಮ್ಯದಿಂದ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಾದ ವಿಕ್ಕಿ, ಪ್ರವೀಣ್ ಉಮರಾಣಿ, ಬಸವರಾಜ ನರಟ್ಟಿ ಸೇರಿ ಎಂಟು ಜನರ ಬಂಧನವಾಗಿದೆ.

    Continue Reading

    FILM

    ಉಡುಪಿ: ಕಾಲಿವುಡ್ ಸ್ಟಾರ್ ನಟ ಸೂರ್ಯ ದಂಪತಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ

    Published

    on

    ಉಡುಪಿ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕೇವಲ ಸಾಮಾನ್ಯರು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಕೂಡ ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ. ಕಾಲಿವುಡ್ ನ ಸ್ಟಾರ್ ನಟ ಸೂರ್ಯ ದಂಪತಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

    ಬಳಿಕ ದೇವಾಲಯದಲ್ಲಿ ನಡೆದ ಚಂಡಿಕಾಯಾಗದಲ್ಲಿ ಪತ್ನಿ ನಟಿ ಜ್ಯೋತಿಕಾ ಜೊತೆ ಭಾಗಿಯಾದರು. ನಿನ್ನೆ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಕಾಲಿವುಡ್ ದಂಪತಿ ಇಂದು ಪೂರ್ಣಾಹುತಿಯಲ್ಲಿ ಭಾಗಿಯಾದರು.

     

    ನಟ ಸೂರ್ಯ ಹಾಗೂ ಜ್ಯೋತಿಕಾ ಸೆಲೆಬ್ರಿಟಿ ದಂಪತಿಯನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಕರ್ನಾಟಕದಲ್ಲೂ ಸಹ ಸೂರ್ಯ ಹಾಗೂ ಜ್ಯೋತಿಕಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

    Continue Reading

    LATEST NEWS

    Trending