ಮಂಗಳೂರು: ನಗರದ ಕುದ್ರೋಳಿಯ ಶ್ರೀ ಗೋಕರ್ಣಾನಾಥ ಕ್ಷೇತ್ರದ ಮುಂಭಾಗ ಗುರುಬೆಳದಿಂಗಳು ಸಮಿತಿಯ ಮೂವತ್ತು ಸದಸ್ಯರು ಸೇರಿ 900 ಕೆ.ಜಿ ಧಾನ್ಯಗಳನ್ನು ಬಳಸಿ ರಚಿಸಿದ ತ್ರಿವರ್ಣ ಆಕಾರ ಎಲ್ಲರ ಗಮನ ಸೆಳೆದಿತ್ತು.
ಇಂದು ದೇಗುಲಕ್ಕೆ ಭೇಟಿ ನೀಡಿದ ದ.ಕ ಜಿಲ್ಲಾಧಿಕಾರಿ ಡಾ. ರಾಜೆಂದ್ರ ಕೆವಿ ತ್ರಿವರ್ಣ ಧ್ವಜ ರಚಿಸಿದ ಗುರುಬೆಳದಿಂಗಳು ಸಮಿತಿ ಹಾಗು ದೇಗಲದ ಆಡಳಿತ ಸಮಿತಿಯ ಸದಸ್ಯರ ವಿನೂತನವಾದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ,
ಎಲ್ಲಾ ಸದಸ್ಯರಿಗೆ ಜಿಲ್ಲಾಡಳಿತದ ವತಿಯಿಂದ ಅಭಿನಂದನೆಗಳನ್ನು ತಿಳಿಸಿದ್ರು. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಧಾನ್ಯಗಳಿಂದ ರಚಿಸಲ್ಪಟ್ಟ ಚಿತ್ರಾಕೃತಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಈ ಬಾರಿ 5 ಲಕ್ಷಕ್ಕಿಂತ ಹೆಚ್ಚು ಜನ ತಮ್ಮ ಮನೆ-ಕಛೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ದಕ್ಷಿಣ ಕನ್ನಡ ಜನತೆ ದೇಶಾಭಿಮಾನವನ್ನು ತೋರಿಸಿದ್ದಾರೆ. ಎಲ್ಲರಿಗೂ 75ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯಗಳು ಎಂದರು.
ಈ ವೇಳೆ ಗುರುಬೆಳದಿಂಗಳು ಫೌಂಡೇಶನ್‌ನ ಅಧ್ಯಕ್ಷ ಹಾಗೂ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಉಪಸ್ಥಿತರಿದ್ದರು.
Super, great work