Connect with us

    LATEST NEWS

    ಗೂಗಲ್ ಮ್ಯಾಪ್ ನಂಬಿ ಸಂಕಷ್ಟ; ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿದ ಕಾರು!

    Published

    on

    ಮಂಗಳೂರು/ ಕೊಟ್ಟಾಯಂ : ಗೂಗಲ್ ಮ್ಯಾಪ್ ನಿಂದ ಜನರಿಗೆ ಬಹಳಷ್ಟು ಉಪಯೋಗ ಆಗುತ್ತದೆ. ಜನರು ಗೂಗಲ್ ಆ್ಯಪ್ ನಂಬಿ ಪ್ರಯಾಣ ಬೆಳೆಸುವುದಿದೆ. ಆದರೆ, ಇದರಿಂದ ಎಡವಟ್ಟು ಕೂಡಾ ಆಗಿದ್ದಿದೆ. ಗೂಗಲ್ ಮ್ಯಾಪ್ ನಂಬಿ ಪ್ರಾ*ಣಕ್ಕೆ ಕು*ತ್ತು ಬಂದ ಘಟನೆ ಕೇರಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.


    ಹೈದರಾಬಾದ್‌ನ ಪ್ರವಾಸಿಗರ ತಂಡವೊಂದು ಕೇರಳಕ್ಕೆ ಪ್ರವಾಸಕ್ಕೆಂದು ಕಾರಿನಲ್ಲಿ ಹೊರಟಿತ್ತು. ಶುಕ್ರವಾರ ತಡರಾತ್ರಿ ಮಹಿಳೆ ಸೇರಿದಂತೆ ನಾಲ್ವರ ಗುಂಪು ಅಲಪ್ಪುಳ ಕಡೆಗೆ ಹೋಗುತ್ತಿದ್ದರು. ಇವರು ಗೂಗಲ್ ಮ್ಯಾಪ್ ನಂಬಿದ್ದರು. ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗಿ ಸೀದಾ ಕಾರನ್ನು ಹಳ್ಳದೊಳಗೆ ಇಳಿಸಿದ್ದಾರೆ. ಪರಿಣಾಮ ಕಾರು ಸಂಪೂರ್ಣವಾಗಿ ಮುಳುಗಿ ಹೋಗಿದೆ. ಅದೃಷ್ಟವಶಾತ್ ಸ್ಥಳೀಯ ನಿವಾಸಿಗಳು ಕಾರಿನಲ್ಲಿದ್ದ ನೆರವಿಗೆ ಧಾವಿಸಿದ್ದು, ನಾಲ್ವರು ಪ್ರಾಣಾ*ಪಾಯದಿಂದ ಪಾರಾಗಿದ್ದಾರೆ.

    ಇದನ್ನೂ ಓದಿ : ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಡೆ*ತ್ ನೋಟ್ ನಲ್ಲಿತ್ತು ಸ್ಫೋಟಕ ಮಾಹಿತಿ

    ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯು ಭಾರಿ ಮಳೆಯಿಂದಾಗಿ ಹೊಳೆಯಿಂದ ತುಂಬಿ ಹರಿದು ನೀರಿನಿಂದ ಆವೃತವಾಗಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿಲ್ಲದ ಕಾರಣ, ಅವರು ಗೂಗಲ್ ಮ್ಯಾಪ್ ನಂಬಿ ಡ್ರೈವಿಂಗ್ ಮಾಡಿದ್ದಾರೆ. ಪರಿಣಾಮ ಕಾರು ನೇರವಾಗಿ ತುಂಬಿ ಹರಿಯುತ್ತಿದ್ದ ಹಳ್ಳದೊಳಗೆ ಮುಳುಗಿದೆ.

    ಮುಳುಗುತ್ತಿದ್ದ ಪ್ರವಾಸಿಗರ ಕೂಗು ಕೇಳುತ್ತಿದ್ದಂತೆ ಸ್ಥಳೀಯರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಕೇರಳದಲ್ಲಿ ಇಂತಹ ಘಟನೆ ಈ ಹಿಂದೆಯೂ ನಡೆದಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಇಬ್ಬರು ವೈದ್ಯರು ಗೂಗಲ್ ಮ್ಯಾಪ್ ನಂಬಿ ಪ್ರಯಾಣ ಮಾಡಿದ ಪರಿಣಾಮ ಕಾರು ಸಮೇತ ನದಿಗೆ ಬಿದ್ದು ಪ್ರಾ*ಣ ಕಳೆದುಕೊಂಡಿದ್ದರು.

     

    ವಿಡಿಯೋ ನೋಡಿ:

    LATEST NEWS

    ಸದನದಲ್ಲಿ ಪ್ಯಾಲೆಸ್ತೀನ್‌ ಪ್ರಸ್ತಾಪ..! ಓವೈಸಿ ವಿರುದ್ಧ ಎರಡು ದೂರು ದಾಖಲು..!

    Published

    on

    ನವದೆಹಲಿ : 18ನೇ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರದ ವೇಳೆ ಪ್ಯಾಲೆಸ್ತೀನ್ ಹೆಸರು ಪ್ರಸ್ತಾಪಿಸಿದ್ದಕ್ಕೆ ಅಸಾದುದ್ದಿನ್ ಓವೈಸಿ ಮೇಲೆ ಎರಡು ದೂರು ದಾಖಲಾಗಿದ್ದು, ಸದನದ ಕಡತದಿಂದಲೂ ಆ ಹೇಳಿಕೆಯನ್ನು ತೆಗೆದು ಹಾಕಲಾಗಿದೆ.


    ಸಮರ್ಥಿಸಿಕೊಂಡಿದ್ದ ಓವೈಸಿ :

    ಎಐಎಂಐಎಂ ನಾಯಕ ಅಸಾದುದ್ದಿನ್ ಓವೈಸಿ ಐದನೇ ಭಾರಿಗೆ ಹೈದ್ರಾಬಾದ್ ಲೋಕಸಭಾ ಕ್ಷೇತ್ರದಿಂದ ಗೆದ್ದು ಲೋಕಸಭೆ ಪ್ರವೇಶ ಮಾಡಿದ್ದಾರೆ. ಜೂನ್ 25 ರಂದು ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಓವೈಸಿ ಆರಂಭದಲ್ಲಿ ದೇವರ ನಾಮ ಸ್ಮರಣೆ ಮಾಡಿ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಪ್ರಮಾಣ ವಚನದ ಕೊನೆಯಲ್ಲಿ ಜೈ ಭೀಮ್‌ , ಜೈ ತೆಲಂಗಾಣ ಘೋಷಣೆಯೊಂದಿಗೆ ಪ್ಯಾಲೆಸ್ತೀನ್‌ ಹೆಸರನ್ನೂ ಬಳಕೆ ಮಾಡಿದ್ದಾರೆ. ಇದು ಟೀಕೆಗೆ ಕಾರಣವಾಗಿದ್ದು, ಸದನದ ಹೊರಗೆ ಈ ವಿಚಾರ ಚರ್ಚೆಗೆ ಬಂದಿತ್ತು.

    ಸದನದ ಹೊರಗೆ ಈ ಬಗ್ಗೆ ಮಾತನಾಡಿದ ಓವೈಸಿ, “ಹೀಗೆ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲಾ ಸದಸ್ಯರು ವಿಭಿನ್ನವಾಗಿ ಹೇಳಿದ್ದಾರೆ. ಹಾಗೇ ನಾನೂ ಕೂಡಾ ಹೇಳಿದ್ದೇನೆ. ಪ್ಯಾಲೆಸ್ತೀನಿಯರು ತುಳಿತಕ್ಕೆ ಒಳಗಾದ ಜನರು” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

    ಇದನ್ನೂ ಓದಿ : ಉಪಮುಖ್ಯಮಂತ್ರಿ ಕಚೇರಿ ಎದುರು ಆತ್ಮಹ*ತ್ಯೆಗೆ ಯತ್ನಿಸಿದ ಮಹಿಳೆ

    ದೂರು ದಾಖಲು :

    ಓವೈಸಿ ಅವರ ಈ ಹೇಳಿಕೆ ವಿರುದ್ಧ ವಕೀಲ ಹರಿಶಂಕರ್ ಜೈನ್ ಹಾಗೂ ವಕೀಲ್ ವಿನೀತ್ ಜಿಂದಾಲ್ ಅವರು ರಾಷ್ಟ್ರಪತಿಗಳಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜ್ ದೂರುಗಳು ಬಂದ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಈ ಬೆಳವಣಿಗೆಯ ಬಳಿಕ ಸಂಸತ್‌ನ ಕಡತದಲ್ಲಿ ಓವೈಸಿ ಹೇಳಿಕೆಯನ್ನು ತೆಗೆದು ಹಾಕಿದ್ದು, ಸಂಸತ್ ಟಿವಿಯಲ್ಲೂ ಓವೈಸಿ ಹೇಳಿಕೆಯ ಆ ಭಾಗವನ್ನು ತೆಗೆದು ಹಾಕಿದೆ.

    Continue Reading

    DAKSHINA KANNADA

    ಮುಳುಗಿದ ಪಡೀಲ್ ಅಂಡರ್ಪಾಸ್ – ಸಂಚಾರ ಸ್ಥಗಿತ

    Published

    on

    ಮಂಗಳೂರು: ಕರಾವಳಿಯಾದ್ಯಂತ ಸುರಿಯುತ್ತಿರುವ ಮಳೆ ಜನತೆಯನ್ನು ಚಂಡಿ ಹಿಡಿಸಿ ಬಿಟ್ಟಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಬಿರುಸು ಪಡೆದುಕೊಂಡಿದ್ದು ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

    ನಗರದ ಹಲವು ಕಡೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ಜನರು ಪರದಾಡುವಂತಾಗಿದೆ. ನಗರದ ಪಡೀಲ್ – ಬಜಾಲ್ ಸಂಪರ್ಕಿಸುವ ರಸ್ತೆಯ ಅಂಡರ್ಪಾಸ್‌ ನೀರಿನಿಂದ ತುಂಬಿ ಮುಳುಗಿ ಹೋಗಿದೆ. ಇಂದು ಬೆಳಿಗ್ಗೆ ಅಂಡರ್‌ಪಾಸ್‌ ಕೆಳಭಾಗದಲ್ಲಿ ನೀರು ತುಂಬಿಕೊಂಡಿದ್ದು ಜನ ಸಂಚರಿಸಲಾಗದೇ ತೊಂದರೆ ಅನುಭವಿಸಿದರು.

    ಕಾರೊಂದು ನೀರಿನಲ್ಲಿ ಬರಲಾಗದ ಸ್ಥಿತಿಯಲ್ಲಿದ್ದು ಬಳಿಕ ಸ್ಥಳೀಯರು ವಾಹನವನ್ನು ದೂಡಿಕೊಂಡು ಬಂದು ಮೇಲೆ ತಂದಿದ್ದಾರೆ. ಪಡೀಲ್‌ – ಬಜಾಲ್‌ ಸಂಪರ್ಕಿಸುವ ಈ ಅಂಡರ್ಪಾಸ್‌ ಪ್ರತೀ ಮಳೆಗಾಲದ ಸಂದರ್ಭದಲ್ಲೂ  ಜನ ಕಂಗೆಡುತ್ತಿದ್ದಾರೆ.

    Continue Reading

    LATEST NEWS

    ಉಪಮುಖ್ಯಮಂತ್ರಿ ಕಚೇರಿ ಎದುರು ಆತ್ಮಹ*ತ್ಯೆಗೆ ಯತ್ನಿಸಿದ ಮಹಿಳೆ

    Published

    on

    ಮಂಗಳೂರು/ಶ್ರೀಕಾಕುಳಂ : ಮಹಿಳೆಯೊಬ್ಬರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಕಚೇರಿ ಎದುರು ಆತ್ಮಹ*ತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಉಪಮುಖ್ಯಮಂತ್ರಿ ಪವನ್​ ಕಲ್ಯಾಣ್ ಅವರ ಕ್ಯಾಂಪ್ ಕಚೇರಿ ಬಳಿ ಮಹಿಳೆಯೊಬ್ಬರು ಜೀವಾಂತ್ಯಗೊಳಿಸಲು ನಿರ್ಧರಿಸಿದ್ದರು. ಈ ಸಂದರ್ಭ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸಿದ್ದಾರೆ.


    ಶ್ರೀಕಾಕುಳಂ ಜಿಲ್ಲೆಯ ನಿವಾಸಿ, ದುರ್ಗಾದೇವಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಆಕೆ ಕ್ಯಾಂಪ್ ಆಫೀಸ್ ಬಳಿಯಿರುವ ಕಟ್ಟಡವನ್ನು ಏರಿ ಅಲ್ಲಿಂದ ಹಾರಿ ಪ್ರಾ*ಣ ಕಳೆದುಕೊಳ್ಳಲು ಯತ್ನಿಸಿದ್ದಳು.

    ಕಾರಣ ಏನು ?
    ಶ್ರೀಕಾಕುಳಂನಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ನಾಯಕರ ಒತ್ತುವರಿಯಿಂದ ತನ್ನ ಭೂಮಿಯನ್ನು ಕಳೆದುಕೊಂಡಿದ್ದೇನೆ ಎಂದು ಅವರು ಮಹಿಳೆ ಆರೋಪಿಸಿದ್ದಾರೆ. ಪದೇ ಪದೇ ಮನವಿ ಮಾಡಿದರೂ ಪಕ್ಷದ ಮುಖಂಡರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
    ವೈಎಸ್‌ಆರ್‌ಸಿಪಿ ನಾಯಕರ ವಿರುದ್ಧ ಭೂಕಬಳಿಕೆ ಪ್ರಕರಣಗಳ ಆರೋಪಗಳ ಕುರಿತ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಇದೀಗ ಈ ಘಟನೆ ನಡೆದಿದೆ.

    ಇದನ್ನೂ ಓದಿ : ರಾಜ್ಯದಲ್ಲಿ ಐದು ದಿನಗಳ ಕಾಲ ಭರ್ಜರಿ ಮಳೆಯ ಎಚ್ಚರಿಕೆ

    ಇತ್ತೀಚೆಗೆ, ಗುಂಟೂರು ಜಿಲ್ಲೆಯಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ಕಚೇರಿಯನ್ನು ಕೆಡವಲಾಗಿತ್ತು. ವಿಶಾಖಪಟ್ಟಣಂನಲ್ಲಿ ಇನ್ನೂ ಎರಡು ಪಕ್ಷದ ಕಚೇರಿಗಳಿಗೆ ನೋಟಿಸ್ ನೀಡಲಾಗಿತ್ತು.

    Continue Reading

    LATEST NEWS

    Trending