Connect with us

    LATEST NEWS

    ಬಿಸಿಸಿಐ ಹಂಗಾಮಿ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ

    Published

    on

    ಮಂಗಳೂರು/ಮುಂಬೈ: ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ ಅವರು ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (iCC)ಅಧ್ಯಕ್ಷರಾಗಿ ನಿಯೋಜನೆಗೊಂಡರು. ಶಾ ಅವರಿಂದ ತೆರವಾದ ಸ್ಥಾನಕ್ಕೆ ಕಾರ್ಯದರ್ಶಿ ಸ್ಥಾನಕ್ಕೆ ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

    ಬಿಸಿಸಿಐನ ಅಧ್ಯಕ್ಷ ರೋಜರ್ ಬಿನ್ನಿ ಅವರು ಜಂಟಿ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಅವರನ್ನು ಬಿಸಿಸಿಐ ಅಧ್ಯಕ್ಷರು ತಮ್ಮ ವಿಶೇಷ ಅಧಿಕಾರವನ್ನು ಬಳಸಿ ಈ ನೇಮಕ ಮಾಡಿದ್ದಾರೆ.

    ಇದನ್ನೂ ಓದಿ: ಇವರೇ ರೈಲು ನಿಲ್ದಾಣದ ಹೆಣ್ಣಿನ ಧ್ವನಿ ಹಿಂದಿರುವ ಯುವಕ !

    ಸೈಕಿಯಾಗೆ ಕಾರ್ಯದರ್ಶಿಯ ಕಾರ್ಯಗಳನ್ನು ನಿಯೋಜಿಸುವ ಬಿನ್ನಿ ಅವರ ಅಧಿಕೃತ ಮೇಲ್ ಯಾವುದೇ ರಾಜ್ಯ ಸಂಘಕ್ಕೆ ಹೋಗಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಸಹಿ ಮಾಡುವ ಅಧಿಕಾರವನ್ನು ಹೊಂದಿರುವ, ಮಧ್ಯಂತರ ಆಧಾರದ ಮೇಲೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಸೈಕಿಯಾ ಅವರಿಗೆ ಮಾತ್ರ ತೀಳಿಸಲಾಗಿದೆ.

    ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ಸ್ವತಂತ್ರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರಿಂದ ಹಂಗಾಮಿ ಕಾರ್ಯದರ್ಶಿಯನ್ನು ನೇಮಿಸುವ ಅಗತ್ಯವಿತ್ತು. ಐಸಿಸಿಯ ಸ್ವತಂತ್ರ ಅಧ್ಯಕ್ಷರಾಗಿರುವವರು ಮತ್ತೊಂದು ಸದಸ್ಯ ಮಂಡಳಿಯೊಂದಿಗೆ ಸಂಬಂಧ ಹೊಂದುವಂತಿಲ್ಲ.

    DAKSHINA KANNADA

    ಮಂಗಳೂರು-ಸಿಂಗಾಪುರ ನೇರ ವಿಮಾನ ಯಾನ; ಬಹುಕಾಲದ ಬೇಡಿಕೆ ಈಡೇರಿಕೆ

    Published

    on

    ಮಂಗಳೂರು : ಹೊಸ ವರ್ಷದ ಕೊಡುಗೆ ಎಂಬಂತೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಯಾನ 2025ರ ಜನವರಿ 21 ರಿಂದ ಶುರುವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪೆನಿ ಈ ವಿಮಾನ ಹಾರಾಟ ಆರಂಭಿಸಲು ಮುಂದೆ ಬಂದಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ.

    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಎಕ್ಸ್ 862 ವಿಮಾನ 5.55 ಕ್ಕೆ ಹೊರಟು 13.25 ಕ್ಕೆ ಸಿಂಗಾಪುರ ತಲಪುತ್ತದೆ. ಮರು ಪ್ರಯಾಣದಲ್ಲಿ ಐಎಕ್ಸ್ 861 ವಿಮಾನ ಸಿಂಗಾಪುರದಿಂದ 14.25 ಕ್ಕೆ ಹೊರಟು 16.55 ಕ್ಕೆ ಮಂಗಳೂರು ತಲಪುವುದು.

    2025ರ ಜ.21ರಿಂದ ಸಿಂಗಾಪುರಕ್ಕೆ ವಿಮಾನ :

    ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು 2024 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮಂಗಳೂರು ಮತ್ತು ಸಿಂಗಾಪುರ ನೇರ ವಿಮಾನ ಸಂಪರ್ಕ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದ್ದರು. ಫೆ.1 ರಿಂದ ದಿಲ್ಲಿಗೆ ದಿನನಿತ್ಯ ವಿಮಾನ ಸೌಲಭ್ಯಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1, 2025 ರಿಂದ ಮಂಗಳೂರು ಮತ್ತು ರಾಜಧಾನಿ ದಿಲ್ಲಿ ನಡುವೆ ದೈನಂದಿನ ತಡೆರಹಿತ ವಿಮಾನ ಹಾರಾಟ ಸೌಲಭ್ಯವನ್ನು ಆರಂಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

    Continue Reading

    Ancient Mangaluru

    ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಭೀಕರ ಅಪ*ಘಾತ !

    Published

    on

    ಪುತ್ತೂರು: ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ನಡೆದಿದೆ.

     

    ಕಾರಿನಲ್ಲಿದ್ದವರಿಗೆ ಗಂ*ಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಗೊಂಡವರನ್ನು ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇದನ್ನೂ ಓದಿ: ಎಸ್ಎಂ ಕೃಷ್ಣಗೆ ‘ಕರ್ನಾಟಕ ರತ್ನ’ ನೀಡುವಂತೆ ಮನವಿ ಮಾಡಿದ ವಿಪಕ್ಷ ನಾಯಕ

    ಕಾರಿನಲ್ಲಿದ್ದವರು ಉಡುಪಿ ಮೂಲದವರೆಂದು ಮಾಹಿತಿ ತಿಳಿದು ಬಂದಿದೆ. ಕಾರಿನಲ್ಲಿ ಕೆಲ ಪೂಜಾ ಸಾಮಾಗ್ರಿಗಳು ಸೇರಿದಂತೆ ಕುಂಕುಮ ಪ್ರಸಾದಗಳು ಕಂಡುಬಂದಿದೆ.

    Continue Reading

    DAKSHINA KANNADA

    ಉತ್ತಮ ಜನಸ್ಪಂದನೆಯೊಂದಿಗೆ ಮಂಗಳೂರು-ಕಾರ್ಕಳ KSRTC ಸಂಚಾರ ಆರಂಭ

    Published

    on

    ಮಂಗಳೂರು: ಮಂಗಳೂರು ಕಾರ್ಕಳ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಾಯೋಗಿಕ ಸಂಚಾರ ಗುರುವಾರ(ಡಿ.12) ದಿಂದ ಆರಂಭವಾಗಿದೆ.

    ಬೆಳಗ್ಗೆ 6-45 ಕ್ಕೆ ಮೊದಲ ಬಸ್ ಹೊರಟಿದ್ದು, ಎರಡನೇ ಬಸ್ 7-15ಕ್ಕೆ ಮಂಗಳೂರಿನಿಂದ ಹೊರಟಿದೆ. ಇದೇ ವೇಳೆ ಕಾರ್ಕಳದಿಂದಲೂ ಎರಡು ಬಸ್ ಮಂಗಳೂರಿಗೆ ಪ್ರಯಾಣ ಆರಂಭಿಸಿದೆ.

     

    ಕೆ.ಎಸ್‌.ಆರ್‌.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌, ‘ಮಂಗಳೂರು-ಕಾರ್ಕಳ ಮಧ್ಯೆ 8 ಟ್ರಿಪ್‌ಗಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಅವಕಾಶ ನೀಡಿದೆ. ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮ ಪ್ರಕಾರ ಹಾಗೂ ಚಾಪ್ಟರ್‌ -5ರಂತೆ ಹೊಸ ರೂಟ್‌ಗೆ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ’ ಎಂದು ವಾದ ಮಂಡಿಸಿದರು. ‘ಮುಂದಿನ ದಿನಗಳಲ್ಲಿ ಅಗತ್ಯ ಇರುವ ಇತರ ಪ್ರದೇಶಗಳಲ್ಲಿ ಸರಕಾರಿ ಬಸ್‌ ಸಂಚಾರ ಆರಂಭಿಸಲು ಸರಕಾರ ವನ್ನು ಕೇಳಿಕೊಂಡಿದ್ದೇವೆ’ ಎಂದು ಸದಸ್ಯ ಐವನ್‌ ಡಿ’ ಸೋಜಾ ತಿಳಿಸಿದರು.

    ಇದನ್ನೂ ಓದಿ : ಮಂಗಳೂರು-ಕಾರ್ಕಳ ಕೆ.ಎಸ್‌.ಆರ್‌.ಟಿ.ಸಿ ಪ್ರಾಯೋಗಿಕ ಸಂಚಾರಕ್ಕೆ ನಾಳೆ ಚಾಲನೆ !!

     

    ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ನಂತೂರು, ಗುರುಪುರ, ಕೈಕಂಬ, ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಬಸ್ ಸಂಚರಿಸಲಿದೆ. ಈ ಬಸ್ ಗಳಿಗೆ ನಾಲ್ಕು ತಿಂಗಳ ತಾತ್ಕಾಲಿಕ‌ ಪರವಾನಗಿ‌ ಲಭಿಸಿದ್ದು, ಮೊದಲ ದಿನವೇ ಬಸ್ ಗಳಿಗೆ ಉತ್ತಮ ಜನ‌ಸ್ಪಂದನೆ ಲಭಿಸಿದೆ.

    Continue Reading

    LATEST NEWS

    Trending