Connect with us

    DAKSHINA KANNADA

    ದೇರಳಕಟ್ಟೆ: ಮೆಡಿಕಲ್‌ ಅಂಗಡಿ ಮಾಲಕನಿಗೆ ಹ*ಲ್ಲೆ

    Published

    on

    ಉಳ್ಳಾಲ: ಯುವಕನೊಬ್ಬ ಆ*ತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿ ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಮಾಡಿದ್ದಕ್ಕಾಗಿ ಮೆಡಿಕಲ್ ಶಾಪ್‌ವೊಂದರ ಮಾಲಕ ಅಬ್ದುಲ್ ಜಲೀಲ್‌ ಎಂಬಾತನಿಗೆ ತಂಡವೊಂದು ತೀವ್ರವಾಗಿ ಹ*ಲ್ಲೆ ನಡೆಸಿದ ಘಟನೆ ದೇರಳಕಟ್ಟೆಯಲ್ಲಿ ರವಿವಾರ ನಡೆದಿದೆ.

    ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕನೊಬ್ಬ ಇತ್ತೀಚೆಗೆ ಮಂಗಳೂರಿನ ಬಂದರ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೈದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಅಬ್ದುಲ್ ಜಲೀಲ್ ವಾಟ್ಸ್‌ಆ್ಯಪ್‌ನಲ್ಲಿ ವೈಯಕ್ತಿಕವಾಗಿ ಮೆಸೇಜ್ ಕಳುಹಿಸಿದ್ದನ್ನು ಆಕ್ಷೇಪಿಸಿ ಮೃತ ಯುವಕನ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

    ಆರಂಭದಲ್ಲಿ ಯುವಕನ ಕಡೆಯವರು ಜಲೀಲ್‌ಗೆ ಕರೆ ಮಾಡಿ ತರಾಟೆಗೈದಿದ್ದಾರೆ. ಈ ವೇಳೆ ಅಬ್ದುಲ್ ಜಲೀಲ್ ಕ್ಷಮೆ ಯಾಚಿಸಿದ್ದರು ಎನ್ನಲಾಗಿದೆ. ಆದಾಗ್ಯೂ ಯುವಕನ ಕಡೆಯವರೆನ್ನಲಾದ 11 ಮಂದಿಯ ತಂಡ ರವಿವಾರ ಬೆಳಗ್ಗೆ ಮೂರು ಕಾರುಗಳಲ್ಲಿ ದೇರಳಕಟ್ಟೆಗೆ ಆಗಮಿಸಿ ಜಲೀಲ್‌ಗೆ ಹಲ್ಲೆಗೈದಿದ್ದಾರೆ. ಬಳಿಕ ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ದಾರಿ ಮಧ್ಯೆ ಇನ್ನೊಂದು ಕಾರಿನಲ್ಲಿ ಕರೆದೊಯ್ದು ಅಲ್ಲೂ ಹ*ಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿದ್ದಾರೆ.

    ಮುಜೀಬ್ ಎಂಬಾತ ಸೇರಿದಂತೆ ಏಳು ಮಂದಿ ಹ*ಲ್ಲೆ ನಡೆಸಿದ್ದು, ತನ್ನ ಬಳಿಯಿದ್ದ 23,800 ರೂ. ನಗದು ಲಪಟಾಯಿಸಿದ್ದಾರೆ ಎಂದು ಜಲೀಲ್ ದೂರಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಡಬ: ಅಲಂಕಾರಿನಲ್ಲಿ ಹುಲಿ ಹೆಜ್ಜೆ

    Published

    on

    ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಪರಿಸರದಲ್ಲಿ ಮಂಗಳವಾರ (ಅ.22) ಬೆಳಗ್ಗೆ ಹುಲಿಯೊಂದು ಕಂಡುಬಂದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

    ಅಲಂಕಾರು ಗ್ರಾಮದ ನೆಕ್ಕಿಲಾಡಿ ಬೈಲು ನೈಯಲ್ಗ ನಿವಾಸಿ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪ ಹುಲಿ ಕಂಡುಬಂದಿದೆ ಎನ್ನಲಾಗಿದೆ.

    ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸ್ಥಳ ಪರಿಶೀಲನೆ ವೇಳೆ ಸ್ಥಳದಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದ್ದು ಅದು ಚಿರತೆಯದ್ದೋ ಅಥವಾ ಹುಲಿಯದ್ದೋ ಅನ್ನುವುದು ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Continue Reading

    DAKSHINA KANNADA

    ಪಟ್ಲ ಯಕ್ಷಾಶ್ರಯ ಯೋಜನೆ : ಫಲಾನುಭವಿಗಳಿಗೆ ಚೆಕ್ ವಿತರಣೆ

    Published

    on

    ಮಂಗಳೂರು : ಪಟ್ಲ ಸತೀಶ್ ಶೆಟ್ಟಿ ಅವರು ‘ಪಟ್ಲ ಯಕ್ಷಾಶ್ರಯ’ ಯೋಜನೆಯ ಅಡಿಯಲ್ಲಿ ಆಯ್ಕೆ ಮಾಡಿದ ಯಕ್ಷಗಾನ ಕಲಾವಿದರು ಹಾಗೂ ದೈವಾರಾಧನೆ ಕ್ಷೇತ್ರದ ದೈವ ನರ್ತಕರಿಗಾಗಿ ಗೃಹ ನಿರ್ಮಾಣ  ಕಾರ್ಯವನ್ನು ಈಗಾಗಲೇ ಮಾಡುತ್ತಿದ್ದಾರೆ.

    ಈ ನಿರ್ಮಾಣಕ್ಕಾಗಿ ಫೌಂಡೇಶನ್ ನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು, ದಾನಿಗಳು ನೀಡಿದ ಸುಮಾರು 15 ಲಕ್ಷ ಮೊತ್ತವನ್ನು ಫಲಾನುಭವಿಗಳಿಗೆ ಸೋಮವಾರ(ಅ.21) ಸಂಜೆ ಫೌಂಡೇಶನ್ ನ ಆಫೀಸಿನಲ್ಲಿ ವಿತರಿಸಲಾಯಿತು.

    Continue Reading

    BANTWAL

    ಬಂಟ್ವಾಳ: ಜಯರಾಮ ಆಚಾರ್ಯರ ಅಂತಿಮ ದರ್ಶನ

    Published

    on

    ಬಂಟ್ವಾಳ:  ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಯಕ್ಷಗಾನದ ಖ್ಯಾತ ಹಿರಿಯ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ಅವರ ಪಾರ್ಥಿವ ಶರೀರ ಬಂಟ್ವಾಳದ ನಿವಾಸಕ್ಕೆ ತರಲಾಗಿದೆ.

    ಅಕ್ಟೋಬರ್ 21 ರಿಂದ ಬೆಂಗಳೂರಿನಲ್ಲಿ ನಡೆಯಲಿದ್ದ ಯಕ್ಷಗಾನ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದ ಅವರಿಗೆ ಹೃದಯಾಘಾತವಾಗಿತ್ತು.

    67 ವರ್ಷದ ಜಯರಾಮ ಆಚಾರ್ಯ ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದರಾಗಿ ವಿವಿಧ ಮೇಳಗಳಲ್ಲೂ ಸೇವೆ ಸಲ್ಲಿಸಿದ್ದರು. ಅವರ ಪಾರ್ಥಿವ ಶರೀರ ಬಂಟ್ವಾಳ ನಿವಾಸಕ್ಕೆ ಆಗಮಿಸಿದ ವೇಳೆ ನೂರಾರು ಅಭಿಮಾನಿಗಳು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

    ಯಕ್ಷಗಾನ ಕಲಾವಿದರು, ಯಕ್ಷಗಾನ ಅಭಿಮಾನಿಗಳು ಹಾಗೂ ಊರ ಗಣ್ಯರು ಆಗಮಿಸಿ ಮೃತರಿಗೆ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸಿದ್ದಾರೆ. ನಮ್ಮಕುಡ್ಲ ವಾಹಿನಿ ಯಕ್ಷ ತೆಲಿಕೆ ತಂಡದ ದಿನೇಶ್ ಕೊಡಪದವು ತಂಡ ಕೂಡಾ ಜಯರಾಮ ಆಚಾರ್ಯ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡದುಕೊಂಡಿದ್ದಾರೆ. ಒಬ್ಬ ಮೇರು ಮಟ್ಟದ ಯಕ್ಷಗಾನದ ಕಲಾವಿದನನ್ನು ಕಳೆದುಕೊಂಡಿರುವುದಕ್ಕೆ ದಿನೇಶ್ ಕೊಡಪದವು ಅವರು ಸಂತಾಪ ಸೂಚಿಸಿದ್ದಾರೆ

    Continue Reading

    LATEST NEWS

    Trending