Connect with us

DAKSHINA KANNADA

ಮಾ.15 ರಿಂದ ಸುರತ್ಕಲ್ ಟೋಲ್ ತೆರವಿಗಾಗಿ ಹೋರಾಟ ತೀವ್ರಗೊಳಿಸಲು ನಿರ್ಧಾರ

Published

on

ಉಡುಪಿ: ಹೆಜಮಾಡಿ ಟೋಲ್ ಪ್ಲಾಜಾ ಆರಂಭಗೊಂಡ ತಕ್ಷಣ ತೆರವುಗೊಳಿಸುವ ಭರವಸೆ ನೀಡಿ ತಾತ್ಕಾಲಿಕ ನೆಲೆಯಲ್ಲಿ ಆರಂಭಿಸಿರುವ ಸುರತ್ಕಲ್ (ಎನ್ಐಟಿಕೆ) ಟೋಲ್ ಗೇಟ್ ಹಲವು ಭರವಸೆಗಳ ಹೊರತಾಗಿಯೂ ಕಳೆದ ಆರು ವರ್ಷ ಟೋಲ್ ಸಂಗ್ರಹವನ್ನು ನಡೆಸುತ್ತಾ ಬಂದಿದೆ.


ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸುರತ್ಕಲ್ ಟೋಲ್ ಕೇಂದ್ರ ತೆರವಿಗಾಗಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿವೆ.

ಮಾರ್ಚ್ 15 ರಂದು ಬೆಳಿಗ್ಗೆ ಹೆಜಮಾಡಿ ಟೋಲ್ ಕೇಂದ್ರದ ಸಮೀಪ ಪಾದಯಾತ್ರೆ ಚಾಲನೆಗೊಳ್ಳಲಿದ್ದು, ಮಧ್ಯಾಹ್ನ ಎನ್ಐಟಿಕೆ ಮುಂಭಾಗದಲ್ಲಿರುವ ಸುರತ್ಕಲ್ ಟೋಲ್ ಕೇಂದ್ರದ ಮುಂಭಾಗ ಸಮಾರೋಪಗೊಳ್ಳಲಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅರವತ್ತಕ್ಕೂ ಹೆಚ್ಚು ಸಾಮಾಜಿಕ ಸಂಘ ಸಂಸ್ಥೆಗಳು, ಸಾರಿಗೆ ರಂಗದ ಯೂನಿಯನ್ ಗಳು ಈ ಪಾದಯಾತ್ರೆಯಲ್ಲಿ ಕೈ ಜೋಡಿಸಿದ್ದು,

ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮನವಿ ಮಾಡಿದೆ.

ಈ ಪಾದಯಾತ್ರೆಯು ಸುರತ್ಕಲ್ ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರಕಾರಗಳು ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆಯಾಗಿದ್ದು, ತೆರವು ಬೇಡಿಕೆ ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಕ್ಕೆ ಮತ್ತಷ್ಟು ತೀವ್ರತರದ ಹೋರಾಟ ನಡೆಸಲಿದ್ದೇವೆ ಎಂದು ಸಮಿತಿ ಎಚ್ಚರಿಸಿದೆ.

ಒಂಭತ್ತು ಕಿ.ಮೀ ಅಂತರದಲ್ಲಿ ಎರಡೆರಡು ಟೋಲ್ ಕೇಂದ್ರಗಳಲ್ಲಿ ಸುಂಕ ಪಾವತಿಸುವುದು ಪ್ರಯಾಣಿಕರಿಗೆ ದೊಡ್ಡ ಹೊರೆಯಾಗಿದ್ದು, ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ

ಮಾರ್ಚ್ 15 ರಂದು ಹೆಜಮಾಡಿ ಟೋಲ್ ಕೇಂದ್ರದಿಂದ ಸುರತ್ಕಲ್ ಟೋಲ್ ಗೇಟ್ ವರಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳು “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ”ಯ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆಯನ್ನು ಹಮ್ಮಿ ಕೊಂಡಿವೆ.

ಆರು ವರ್ಷಗಳ ಹಿಂದೆ ಆರು ತಿಂಗಳ ತಾತ್ಕಾಲಿಕ ಅವಧಿಗೆ ಎಂದು ಜನತೆಗೆ ಭರವಸೆ ನೀಡಿ ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿತ್ತು.

ಹೆಜಮಾಡಿ ಟೋಲ್ ಕೇಂದ್ರ ಆರಂಭಗೊಂಡ ನಂತರವೂ ಸುರತ್ಕಲ್ ಟೋಲ್ ಕೇಂದ್ರ ಮುಚ್ಚದಿರುವುದನ್ನು ವಿರೋಧಿಸಿ ಕಳೆದ ಐದು ವರ್ಷಗಳಲ್ಲಿ ಹಲವು ಹಂತದ ಹೋರಾಟಗಳನ್ನು ನಡೆಸಲಾಗಿದೆ.

2018 ರಲ್ಲಿ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರ ಜಂಟಿ ಸಭೆ ನಡೆಸಿ ಸುರತ್ಕಲ್ ಟೋಲ್ ಕೇಂದ್ರ ಹಾಗೂ ಹೆಜಮಾಡಿ ಟೋಲ್ ಕೇಂದ್ರಗಳನ್ನು‌ ವಿಲೀನಗೊಳಿಸಿ ಒಂದು ಟೋಲ್ ಗೇಟ್ ಮಾತ್ರ ಉಳಿಸಿಕೊಳ್ಳುವ ನಿರ್ಣಯ ತೆಗೆದುಕೊಂಡಿದ್ದರೂ ಕುಂಟು ನೆಪಗಳನ್ನು ಮುಂದಿಟ್ಟು ನಿರ್ಣಯವನ್ನು ಜಾರಿಗೊಳಿಸದೆ ಕಾದಿರಿಸಲಾಗಿದೆ.

ಈ ನಡುವೆ ಬಿಸಿ ರೋಡ್, ಸುರತ್ಕಲ್ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯನ್ನಾಗಿಸುವ ಹಲವು ಭರವಸೆ ನೀಡಲಾಗಿದೆ.

ಎರಡು ವರ್ಷಗಳ ಹಿಂದೆ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕುರಿತು ವಿಶೇಷ ಸಭೆ ನಡೆಸುವ ಪ್ರಕಟನೆ ನೀಡಿದ್ದರೂ ಅದು ಭರವಸೆಯಾಗಿಯಷ್ಟೆ ಉಳಿದಿದೆ.

ಕಳೆದ ತಿಂಗಳು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಸಚಿವರು ಅದೇ ಮಾತನ್ನು ಪುನರುಚ್ಚಿಸಿದ್ದಾರೆ.

ಆದರೆ ದಿನವೊಂದಕ್ಕೆ 16 ಲಕ್ಷ ಸುಂಕವನ್ನು ಪ್ರಯಾಣಿಕರಿಂದ ಸಂಗ್ರಹಿಸುವ ಸುರತ್ಕಲ್ ಟೋಲ್ ಕೇಂದ್ರ ಮುಚ್ಚಲು ನಿರ್ಣಾಯಕ ಕ್ರಮಗಳು ನಡೆಯುತ್ತಿಲ್ಲ.

ಅದರ ಬದಲಿಗೆ ತಾತ್ಕಾಲಿಕ ಟೋಲ್ ಕೇಂದ್ರವನ್ನು ಶಾಶ್ವತ ಟೋಲ್ ಕೇಂದ್ರವಾಗಿ ಪರಿವರ್ತಿಸುವ ಕೆಲಸಗಳು ತೆರೆಯ ಮರೆಯಲ್ಲಿ ನಡೆಯುತ್ತಿದೆ.

ಜನರಿಂದ ಎರಡು ಕಡೆ ಬಲವಂತದಿಂದ ದುಬಾರಿ ಟೋಲ್ ವಸೂಲಿ ಮಾಡುವುದನ್ನು ನಾಗರಿಕ ಸಮಾಜ ಮೌನವಾಗಿ ವೀಕ್ಷಿಸಲು ಸಾಧ್ಯವಿಲ್ಲ.

ಈ ಎಲ್ಲಾ ಕಾರಣಗಳಿಂದಾಗಿ ನ್ಯಾಯ ಒದಗಿಸುವಂತೆ ಮತ್ತೊಮ್ಮೆ ಹೋರಾಟಕ್ಕಿಳಿಯುವುದು ಎಂದು ಸಮಿತಿ ನಿರ್ಧರಿಸಿದೆ ಎಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಹಾಗೂ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

 

BELTHANGADY

ಕಾಂಗ್ರೆಸ್ ಹಿರಿಯ ಮುಖಂಡ ವಸಂತ ಬಂಗೇರ ವಿಧಿವಶ

Published

on

ಬೆಳ್ತಂಗಡಿ: ಕಾಂಗ್ರೆಸ್ ಹಿರಿಯ ಮುಖಂಡ ಬೆಳ್ತಂಗಡಿ ಮಾಜಿ ಶಾಸಕ, ಸಚಿವ ವಸಂತ ಬಂಗೇರ(79 ವ) ಇಂದು(ಮೇ.8) ಸಂಜೆ 4 ಗಂಟೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಇವರು ಬೆಳ್ತಂಗಡಿಯಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

vasanth bangera

ಮುಂದೆ ಓದಿ..; ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

1946 ಜನವರಿ 15 ರಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದಲ್ಲಿ ಜನಿಸಿದ ಇವರು ದಿ. ಕೇದೆ ಸುಬ್ಬ ಪೂಜಾರಿ ಹಾಗೂ ದಿ. ದೇವಕಿ ದಂಪತಿ ಪುತ್ರ. 1972 ರಲ್ಲಿ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. 1983 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, 1985 ರಲ್ಲಿ ಮತ್ತೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1989 ರಲ್ಲಿ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಮತ್ತೆ 1994 ರಲ್ಲಿ  ಜೆಡಿಎಸ್‌ನಿಂದ ಸ್ಪರ್ಧಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸುಮಾರು 52 ವರ್ಷಗಳ ಕಾಲ ರಾಜಕೀಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿ ಕೊಡುಗೈ ದಾನಿಯಾಗಿಯಾಗಿದ್ದರು. ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂಧು ವರ್ಗದವರನ್ನು ಅಗಲಿದ್ದಾರೆ.

ಮೇ. 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

Continue Reading

DAKSHINA KANNADA

ಮೇ 9 ರಂದು SSLC ಫಲಿತಾಂಶ ಪ್ರಕಟ…!

Published

on

ಮಂಗಳೂರು : 2023-24 ರ SSLC ಪರೀಕ್ಷೆಯ ಫಲಿತಾಂಶ ಮೇ 9 ರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್‌ 25 ರಿಂದ ಎಪ್ರಿಲ್ 6 ರ ವರೆಗೆ ಪರೀಕ್ಷೆ ನಡೆಸಲಾಗಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ ಫಲಿತಾಂಶ ಬಿಡುಗಡೆಗೆ ವಿಳಂಭವಾಗಿದೆ ಎಂದು ಹೇಳಿದೆ


2023- 24ರ SSLC ಪರೀಕ್ಷೆಯಲ್ಲಿ ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ವಿದ್ಯಾರ್ಥಿಗಳು ರೀ ಎಕ್ಸಾಂ ಬರೆದಿದ್ದಾರೆ. ಇದರಲ್ಲಿ 4.41 ಲಕ್ಷ ಬಾಲಕರು ಮತ್ತು 4.28 ಲಕ್ಷ ಬಾಲಕಿಯರು ಇದ್ದಾರೆ.

ಫಲಿತಾಂಶವನ್ನು ನೋಡಲು ಈ ವೆಬ್‌ಸೈಟ್ ಬಳಸಿ..!

ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. kseab.karnataka.gov.in ಹಾಗೂ karresults.nic.in ವೆಬ್‌ಸೈಟ್‌ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.

Continue Reading

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆಯ ಕಲಾವೈವಿಧ್ಯತೆಗೆ ಮಾರುಹೋದ ವಿದೇಶಿಗರು

Published

on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯು ವಿವಿಧ ವೈವಿಧ್ಯಮಯ ಕ್ಷೇತ್ರವನ್ನು ಒಳಗೊಂಡಿರುವ ಕರಾವಳಿ ನಗರಿ. ಇಲ್ಲಿಗೆ ಬಂದ ವಿದೇಶಿ ಪ್ರಜೆಗಳು ಇಲ್ಲಿನ ವಿಶೇಷತೆಗಳನ್ನು ನೋಡಿ ಮನಸೋಲುತ್ತಾರೆ. ನವಮಂಗಳೂರು ಬಂದರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಹಲವು ವಿದೇಶಿ ಪ್ರವಾಸಿ ಹಡಗುಗಳು ಬಂದಿದ್ದು, ಇಲ್ಲಿನ ವಿಶೇಷ ತಾಣಗಳಿಗೆ ಭೇಟಿ ನೀಡಿ ಆನಂದ ಪಟ್ಟರು.


ವಿದೇಶಿ ಹಡಗಿನಲ್ಲಿ ಬಂದಿಳಿದ ಯುಎಸ್ಎ, ನೆದರ್ ಲ್ಯಾಂಡ್, ಉಕ್ರೇನ್, ಯುನೈಟೆಡ್ ಕಿಂಗ್‌ಡಂ, ಅಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಪಿಲಿಫೈನ್ಸ್ ದೇಶದ ಸುಮಾರು 120 ಜನ ವಿದೇಶಿಗಳು, ಜಗತ್ಪ್ರಸಿದ್ದ ಸಾವಿರ ಕಂಬ ಬಸದಿಗೆ ಭೇಟಿ ನೀಡಿ ಅಲ್ಲಿ ಕಲಾಸೌಂದರ್ಯಕ್ಕೆ ಮಾರು ಹೋದರು.

ಇದನ್ನೂ ಓದಿ : ಹರಕೆ ತೀರಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ; ಅಭಯವಿತ್ತ ದೈವ!


ಮಂಗಳೂರು ಮೂಲದ ಕ್ಯಾಲಿಫೋರ್ನಿಯ ಉದ್ಯೋಗಿ ಸಚಿನ್ ಪಡಿವಾಳ್ ಅವರನ್ನು ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದರು. ಈ ಸಂದರ್ಭ ಮಂಗಳೂರು ಟ್ರಾವೆಲ್ ಗೈಡ್ ರೋಹನ್, ರೋಷನ್, ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು.

Continue Reading

LATEST NEWS

Trending