Connect with us

    LATEST NEWS

    ಬಾಡಿಗೆ ಗೆಳತಿ ಜೊತೆ ಡೇಟಿಂಗ್..! ದುಬಾರಿ ಬಿಲ್‌ ನೋಡಿ ಯುವಕ ಶಾ*ಕ್‌..!

    Published

    on

    ಮಂಗಳೂರು : ಡೇಟಿಂಗ್ ಅನ್ನೋದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗ್ತಾ ಇದ್ದು, ಒಂದು ರೀತಿಯ ಟ್ರೆಂಡಿಂಗ್ ಕೂಡಾ ಆಗಿದೆ. ಹಾಗಂತ ಡೇಟಿಂಗ್ ಮಾಡಲು ಜೊತೆ ಇಲ್ಲಾ ಅಂದ್ರೆ, ಬಾಡಿಗೆ ಜೊತೆಗಾರ ಅಥವಾ ಜೊತೆಗಾತಿಯನ್ನು ನೀಡುವ ಅ್ಯಪ್‌ಗಳೂ ಕೂಡಾ ಬಂದಿವೆ. ಇದರ ಮೂಲಕ ತಮಗೆ ಇಷ್ಟವಾದವರ ಜೊತೆ ಡೇಟಿಂಗ್ ನಡೆಸೋದು ಕೂಡಾ ಈಗ ಜೋರಾಗಿ ನಡಿತಾ ಇದೆ. ಹೀಗೆ ಅ್ಯಪ್ ಮೂಲಕ ಜೊತೆಗಾತಿಯನ್ನು ಸಂಪಾದಿಸಿದ ಯುವಕ ಆಕೆಯ ಜೊತೆ ಡೇಟಿಂಗ್ ಮಾಡಿ ಪೇಚಿಗೆ ಸಿಲುಕಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಶಾ*ಕ್ ಕೊಟ್ಟ ಬಿಲ್ :

    ಟಿಂಡರ್ ಅ್ಯಪ್‌ ಅನ್ನೋ ಆನ್‌ಲೈನ್ ಜಾಲದ ಮೂಲಕ ಬಾಡಿಗೆ ಗೆಳತಿಯನ್ನು ಸಂಪಾದಿಸಿಕೊಂಡ ಯುವಕ ಆಕೆಯ ಜೊತೆ ಡೇಟಿಂಗ್ ಹೋಗಿದ್ದಾನೆ. ಹೊಟೇಲ್ ಒಂದರಲ್ಲಿ ಫುಡ್ ಆರ್ಡರ್ ಮಾಡಿ ತಿಂದ ಮೇಲೆ ಬಿಲ್ ನೋಡಿದ ಯುವಕ ಶಾ*ಕ್‌ ಆಗಿದ್ದಾನೆ. ಇಬ್ಬರು ತಿಂದ ಫುಡ್ ಹಾಗೂ ಡ್ರಿಂಕ್ಸ್ ಬಿಲ್ ರೂ 44000.00 ಆಗಿದ್ದೇ ಯುವಕ ಶಾ*ಕ್ ಆಗಲು ಕಾರಣ.

    ಇದನ್ನೂ ಓದಿ : ಫ್ರಿಡ್ಜ್​​​ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ಸಾವು

    ಯುವತಿಯ ಜೊತೆ ಡೇಟಿಂಗ್ ಹೋಗಿದ್ದ ಯುವಕ 30 ಎಮ್‌ಎಲ್‌ನ 18 ಜಾಗರ್ ಬಾಂಬ್‌ ಅನ್ನೋ ಡ್ರಿಂಕ್ಸ್ ಹಾಗೂ ಎರಡು ರೆಡ್‌ ಬುಲ್, ಫ್ರೆಂಚ್ ಫ್ರೈಸ್‌ ಹಾಗೂ ಉಪ್ಪು ಸಹಿತ ಕಡಲೆಕಾಯಿ, ನಾಲ್ಕು ಚಾಕೋಲೇಟ್ ಟ್ರಫಲ್‌ ಕೇಕ್‌ ಆರ್ಡರ್‌ ಮಾಡಿದ್ದ. ಇದಿಷ್ಟಕ್ಕೇ ಹೊಟೇಲ್‌ನವರು ರೂ.44829.00 ಬಿಲ್‌ ನೀಡಿದ್ದಾರೆ.

    LATEST NEWS

    ಇರಾನ್‌ ಅಧ್ಯಕ್ಷೀಯ ಚುನಾವಣೆ..! ಹಿಜಾಬ್‌ ವಿರೋಧಿ ನಾಯಕನಿಗೆ ಗೆಲುವು..!

    Published

    on

    ಮಂಗಳೂರು ( ಇರಾನ್‌ )  :  ಇರಾನ್‌ನ ಉದಾರವಾದಿ ನಾಯಕ ಮಸೌದ್ ಪೆಜೆಶ್ಕಿಯಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ಮೂಲಭೂತವಾದಿ ನಾಯಕ ಸಯೀದ್ ಜಲಿಲಿ ಅವರನ್ನು 30 ಲಕ್ಷ ಮತಗಳಿಂದ ಸೋಲಿಸಿದ್ದಾರೆ. ಇಬ್ರಾಹಿಂ ರೈಸಿ ಅವರ ನಿಧನದಿಂದ ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿತ್ತು.

    ಪಜಾಶ್ಕಿಯಾನ್ 1.64 ಕೋಟಿ ಮತಗಳನ್ನು ಪಡೆದರೆ, ಜಲಿಲಿಗೆ 1.36 ಕೋಟಿ ಮತಗಳು ಬಂದಿವೆ. ಈ ವರ್ಷದ ಫೆಬ್ರವರಿಯಲ್ಲಿ ಇರಾನ್‌ನಲ್ಲಿ ಚುನಾವಣೆ ನಡೆದು ಇಬ್ರಾಹಿಂ ರೈಸಿ ದೇಶದ ಅಧ್ಯಕ್ಷಾಗಿದ್ದರು. ಮೇ 19 ರಂದು ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ರೈಸಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮತ್ತೆ ಚುನಾವಣೆ ನಡೆಸಲಾಗಿದೆ. ಈ ಚುನಾವಣೆಯಲ್ಲಿ ಮಸೌದ್ ಪೆಜೆಶ್ಕಿಯಾನ್ ಇರಾನ್ ದೇಶದ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಚುನಾವಣೆಯ ವಿಷಯವಾಗಿದ್ದ ಹಿಜಾಬ್‌..! ಕೈ ಹಿಡಿದ ಮತದಾರರು..!

    1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ದೇಶದಲ್ಲಿ ಹಿಜಾಬ್ ಕಾನೂನು ಜಾರಿ ಮಾಡಲಾಗಿತ್ತು. ಹಿಜಾಬ್ ವಿಚಾರವಾಗಿ ಇರಾನ್‌ ಮಹಿಳೆಯರು ಸಾಕಷ್ಟು ಪ್ರತಿಭಟನೆ ನಡೆಸಿದ್ದು 22 ವರ್ಷದ ಮಹ್ಸಾ ಅಮಿನಿಯ ಸಾವಿನ ಬಳಿಕ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಇರಾನ್ ದೇಶದ ಆರೋಗ್ಯ ಸಚಿವರಾಗಿದ್ದ ಮಸೌದ್ ಪಜಾಶ್ಕಿಯಾನ್ ವೈದ್ಯರಾಗಿದ್ದು, ಶಸ್ತ್ರಚಿಕಿತ್ಸಕರಾಗಿದ್ದಾರೆ. ಚುನಾವಣೆಯ ರಾಜಕೀಯ ಭಾಷಣದಲ್ಲಿ ಹಿಜಾಬ್ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಹಿಜಾಬ್ ವಿರೋಧಿಯಾದ ಅವರು ನೈತಿಕ ಪೊಲೀಸ್ ಗಿರಿಯ ವಿರುದ್ಧ ಕ್ರಮ ಜರುಗಿಸುವುದಾಗಿ ಭಾಷಣದಲ್ಲಿ ಹೇಳಿದ್ದರು. ಇದೇ ಕಾರಣದಿಂದ ಉದಾರವಾದಿ ನಾಯಕ ಮಸೌದ್ ಪೆಜಶ್ಕಿಯಾನ್ ಇರಾನ್‌ ದೇಶದ ಅಧ್ಯಕ್ಷಗಾದಿ ಏರಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

    Continue Reading

    LATEST NEWS

    ಗುಜರಾತ್‌ನಲ್ಲಿ ಆರು ಅಂತಸ್ಥಿನ ಕಟ್ಟಡ ಕುಸಿತ..!

    Published

    on

    ಗುಜರಾತ್‌ : ಗುಜಾರತ್‌ನಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿತವಾಗಿದೆ. ಗುಜಾರತ್‌ನ ಸೂರತ್‌ನ ಸಚಿನ್ ಪಾಲಿ ಎಂಬ ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 15 ಜನ ಗಾಯಗೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಅಗ್ನಿಶಾಮಕ ಮತ್ತು ಪೊಲೀಸ್ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಬಿದ್ದ ಕಟ್ಟಡದ ಅಡಿಯಲ್ಲಿ ಜನರು ಸಿಲುಕಿರುವ ಶಂಕೆ ಇದ್ದು ಅವಶೇಷಗಳನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. ಕಟ್ಟಡ ಹಳೆಯದಾಗಿದ್ದು, ಶಿಥಿಲಾವಸ್ಥೆ ತಲುಪಿತ್ತು ಎನ್ನಲಾಗಿದೆ. ಶಿಥಿಲಗೊಂಡಿದ್ದ ಈ ಕಟ್ಟಡದಲ್ಲಿ ಹಲವರು ಬಾಡಿಗೆದಾರರಾಗಿ ವಾಸ ಮಾಡುತ್ತಿದ್ದು, ಅವಶೇಷದ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    ಜುಲೈ 22 ಬಜೆಟ್ ಅಧಿವೇಶನ ಆರಂಭ..! 23 ಕ್ಕೆ ಬಜೆಟ್ ಮಂಡನೆ.

    Published

    on

    ನವದೆಹಲಿ : ಸಂಸತ್ತಿನಲ್ಲಿ ಬಜೆಟ್ ಅಧಿವೇಶ ಕರೆಯಲು ರಾಷ್ಟ್ರಪತಿಗಳ ಅನುಮೋದನೆ ನೀಡಿದ್ದು, ಬಜೆಟ್ ಅಧಿವೇಶನ ಜುಲೈ 22 ರಂದು ಆರಂಭವಾಗಲಿದೆ. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್‌ 12ರ ವರೆಗೆ ಅಧಿವೇಶನ ನಡೆಯಲಿದ್ದು, ಜುಲೈ 23 ಲೋಕಸಭೆಯಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

    ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್‌ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ ತಮ್ಮ 7ನೇ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಏಳು ಬಾರಿ ಬಜೆಟ್ ಮಂಡಿಸಿದ ಮೊದಲ ವಿತ್ತ ಸಚಿವರಾಗಿ ನಿರ್ಮಲಾ ಸೀತಾರಾಮನ್‌ ಇತಿಹಾಸದ ದಾಖಲೆ ನಿರ್ಮಿಸಿದ್ದಾರೆ. ಮೋದಿ 3.O ಸರ್ಕಾರದಲ್ಲಿ ಅಭಿವೃದ್ದಿ ಹೊಂದಿದ ಭಾರತವನ್ನು ಕೇಂದ್ರೀಕರಿಸಿ ನಿರ್ಮಲಾ ಸೀತಾರಾಮನ್‌ 2025 ರ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಲಿದ್ದಾರೆ.

    Continue Reading

    LATEST NEWS

    Trending