Tuesday, October 19, 2021

‘ಸನಾತನ ಧರ್ಮದಲ್ಲಿ ಅತೀ ಹೆಚ್ಚು ಗೌರವಿಸುವ ವ್ಯಕ್ತಿ ಎಂದರೆ ಸ್ತ್ರೀ’: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ

ಮಂಗಳೂರು: ‘ಎಲ್ಲರಿಗೂ ವಿದ್ಯೆಯ ಜೊತೆಗೆ ಸಂಸ್ಕಾರ ಬೇಕು. ವಿದ್ಯೆ ಜತೆಗೆ ಸಂಸ್ಕಾರ ನೀಡುವುದು ತಾಯಂದಿರಾದ ನಮ್ಮ ಕರ್ತವ್ಯ. ನವದುರ್ಗೆಯರ ನವಭಾವವು ಮಹಿಳೆಯರಲ್ಲಿದೆ. ಸನಾತನ ಧರ್ಮದಲ್ಲಿ ಅತೀ ಹೆಚ್ಚು ಗೌರವಿಸುವ ವ್ಯಕ್ತಿ ಎಂದರೆ ಸ್ತ್ರೀ. ನಾವು ಸಾಧಿಸಲ್ಲಿಕ್ಕೆ ತಯಾರಾಗಬೇಕು ಎಂದು ಮಾಜಿ ಶಾಸಕಿ ಶಂಕುಂತಳಾ ಶೆಟ್ಟಿ ಅಭಿಪ್ರಾಯಪಟ್ಟರು.

ನಮ್ಮ ಕುಡ್ಲ ವಾಹಿನಿಯ ದಸರಾ ಸಂಭ್ರಮ-2021ರ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕುಂತಳಾ ಶೆಟ್ಟಿ ಮಾತನಾಡಿ, ನಮ್ಮೊಳಗಿನ ತಾಮಸ ಗುಣವನ್ನು ಮೊದಲು ತೆಗೆಯಬೇಕು.

ರಾಜಕೀಯದಲ್ಲಿ ಮಹಿಳೆಯ ಪ್ರವೇಶ ಗಂಧದ ಮರದಂತೆ ಆಗಬೇಕು. ನಾವು ಸರಿಯಾಗಿದ್ದರೆ ರಾಜಕೀಯದಷ್ಟು ಒಳ್ಳೆಯ ರಂಗ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟರು.

ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಉದ್ಘಾಟಿಸಿದರು. ನಂತರ ಮಾತನಾಡಿ, ನವರಾತ್ರಿಯ ಪರ್ವ ಕಾಲ ದುರ್ಗೆ ಆರಾಧನೆ. ಅವಳಲ್ಲಿ ದುಷ್ಟ ಸಂಹಾರದ ಶಕ್ತಿಯೂ ಇದೆ. ಅನುಗ್ರಹವನ್ನೂ ಮಾಡುತ್ತಾಳೆ.

ಆದರೆ ನಾವು ಅನುಗ್ರಹ ಪಡೆಯಬೇಕಾದರೆ ನಮ್ಮ ಒಳ್ಳೆಯತನ ರೂಢಿಸಿಕೊಂಡರೆ ಮಾತ್ರ ನಮಗೆ ಅದು ದೇವರಿಂದ ನಮಗೆ ಸಿಗಲು ಸಾಧ್ಯ ಎಂದರು.

ಎಕ್ಸ್‌ಪರ್ಟ್‌ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಡಾ.ಉಷಾ ಪ್ರಭಾ ನಾಯಕ್‌ ಸಾಂಸ್ಕೃತಿಕ ಕಾರ್ಯಕ್ರಮಗಳ ಮುನ್ನೋಟವನ್ನು ಬಿಡುಗಡೆ ಮಾಡಿದರು.

ಎಂಆರ್‌ಪಿಎಲ್‌ ಪ್ರಶಿಕ್ಷಣ ವಿಭಾಗದ ಉಪಮಹಾಪ್ರಬಂಧಕಿ ವೀಣಾ ಟಿ ಶೆಟ್ಟಿ ನಾಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೋಮೋ ರಿಲೀಸ್ ಮಾಡಿದರು.


ಯೆನಪೋಯ ಡೀಮ್ಡ್‌ ಯೂನಿವರ್ಸಿಟಿಯ ಮೆಡಿಸಿನ್‌ ವಿಭಾಗದ ಮುಖ್ಯಸ್ಥೆ ಪ್ರೊಫೆಸರ್ ಡಾ.ಪ್ರಭಾ ಅಧಿಕಾರಿ, ಜರ್ಮನ್ ತುಳುವೆರ್ ಸಂಚಾಲಕಿ ಭಾನುಮತಿ ಶೆಟ್ಟಿ, ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾ ಮಣಿ ಶೇಖರ್‌, ವಾತಿಕ ಇಂಟರ್‌ ನ್ಯಾಷನಲ್‌ ಟ್ರಾವೆಲ್ಸ್‌ನ ಮಾಲಕಿ ವಾತಿಕಾ ಪೈ, ಅಮೇರಿಕಾದ ಪ್ಲೋರಿಡಾದಿಂದ ಶ್ರೀವಳ್ಳಿ ರೈ ಮಾರ್ಟೆಲ್, ನಮ್ಮ ಕುಡ್ಲ ನಿರ್ದೇಶಕಿ ಸೌಮ್ಯ ಎಲ್‌ ಕರ್ಕೇರ ಇದ್ದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...