ಗುದದ್ವಾರದಲ್ಲಿ ಚಿನ್ನ ಅಡಗಿಸಿಟ್ಟ ಆರೋಪಿ;664ಗ್ರಾಂ ಚಿನ್ನ ಕಸ್ಟಮ್ ಅಧಿಕಾರಿಗಳ ವಶ..!
“Customs officials seize gold worth Rs31,73,920
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಶರೀರದೊಳಗೆ ಚಿನ್ನವನ್ನು ಅಡಗಿಸಿಟ್ಟು ಪ್ರಯಾಣಿಸುತ್ತಿದ್ದ ಕಸ್ಬಾ ಬೆಂಗ್ರೆಯ ಮೊಹಮ್ಮದ್ ಹರ್ಷದ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ 31,73,920 ರೂ ಬೆಲೆ ಬಾಳುವ 664 ಗ್ರಾಂ ಮೌಲ್ಯದ ಚಿನ್ನವನ್ನ ವಶಪಡಿಸಿಕೊಳ್ಳಲಾಗಿದೆ.
ಪ್ರವೀಣ್ ಕಂಡಿ ಐ.ಆರ್.ಎಸ್, ಉಪ ಆಯುಕ್ತರಾದ ನರೇಶ್ ಕುಮಾರ್ ಬಿ.ಎಮ್, ಪೊಲೀಸ್ ಅಧೀಕ್ಷಕರಾದ ಬಿಕ್ರಂ ಚಕ್ರವರ್ತಿ ತಂಡವಿರುವ ಕಸ್ಟಮ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.