Connect with us

LATEST NEWS

ತಂದೆಯ ಕೊಲೆ ಮಾಡಿಸಿ ಹೆಣದ ಎದುರು ಗೋಳಾಟ- ತನಿಖೆ ವೇಳೆ ಭಯಾನಕ ಸತ್ಯ ಬಹಿರಂಗ..!

Published

on

ತುಮಕೂರು: ಕೊಲೆಯಾದ ತಂದೆಯ ಕೊಲೆಗಾರರನ್ನು ಪತ್ತೆ ಹಚ್ಚಿಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದ ಮಗಳನ್ನೇ ಕೊಲೆ ಆರೋಪದಲ್ಲಿ ಪೊಲೀಸರು ಬಂಧಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ಕೊಲೆಗಾರರ ಬೆನ್ನು ಬಿದ್ದಿದ್ದ ಪೊಲೀಸರು ತನಿಕೆ ನಡೆಸಿದಾಗ ಈ ಭಯಾನಕ ಸತ್ಯ ಬಹಿರಂಗವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕುಳಿನಂಜಯ್ಯನ ಪಾಳ್ಯ ಎಂಬಲ್ಲಿ ಶುಕ್ರವಾರ ಅತಿಥಿ ಶಿಕ್ಷಕರೊಬ್ಬರ ಕೊಲೆ ನಡೆದಿತ್ತು. ಅಮಾವಾಸ್ಯೆಯ ಪೂಜೆ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ಶಿಕ್ಷಕ ಮರಿಯಪ್ಪ ಎಂಬವರು ದಾರಿ ಮದ್ಯದಲ್ಲೇ ಕೊಲೆಯಾಗಿ ಹೋಗಿದ್ದರು. ಮರುದಿನ ಮರಿಯಪ್ಪ ಅವರ ಮೃತದೇಹ ಗದ್ದೆಯೊಂದರಲ್ಲಿ ಪತ್ತೆಯಾಗಿದ್ದು, ಸ್ವತಃ ಮಗಳೇ ಆರೋಪಿಗಳನ್ನು ಬಂಧಿಸಿ ನ್ಯಾಯಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆದರೆ ತನಿಕೆ ನಡೆಸಿದ ಪೊಲೀಸರು ತಾಯಿ ಮಗಳು ಹಾಗೂ ಮಗಳ ಪ್ರಿಯಕರ ಹಾಗೂ ಮೂವರು ಅಪ್ರಾಪ್ತ ಬಾಲಕರ ಸಹಿತ ಎಂಟು ಜನರನ್ನು ಬಂಧಿಸಿದ್ದಾರೆ. ಶಿಕ್ಷಕ ಮರಿಯಪ್ಪ ಮಗಳು ಹೇಮಲತಾ ಮರಿಯಪ್ಪನ ತಂಗಿ ಮಗ ಶಾಂತ ಕುಮಾರ್ ಎಂಬಾತನನ್ನು ಪ್ರೀತಿಸಿದ್ದಳು. ಆದರೆ ಈ ವಿಚಾರ ತಿಳಿದ ಮರಿಯಪ್ಪ ಶಾಂತಕುಮಾರ್‌ಗೆ ಥಳಿಸಿದ್ದು, ಮಗಳ ಜೊತೆಗಿನ ಪ್ರೀತಿ ಮುಂದುವರೆಸದಂತೆ ಎಚ್ಚರಿಸಿದ್ದ. ಇದರಿಂದ ಆಕ್ರೋಶಗೊಂಡಿದ್ದ ಶಾಂತಕುಮಾರ್ ಹೇಮಲತಾ ಹಾಗೂ ಆಕೆಯ ತಾಯಿ ಶೋಭಾ ಜೊತೆ ಸೇರಿ ಮರಿಯಪ್ಪನನ್ನು ಮುಗಿಸುವ ಪ್ಲಾನ್ ಮಾಡಿದ್ದ. ಅಮಾವಾಸ್ಯೆಯ ಪೂಜೆಗೆ ಹೋಗಿ ಬರುವ ಮಾಹಿತಿ ನೀಡಿದ್ದ ತಾಯಿ ಮಗಳು ಮರಿಯಪ್ಪನನ್ನು ಅಲ್ಲೇ ಮಗಿಸುವ ಪ್ಲಾನ್ ರೂಪಿಸಿದ್ದರು. ಹೀಗಾಗಿ ಬೆಂಗಳೂರಿನ ಸ್ನೇಹಿತರಿಗೇ ಸುಪಾರಿ ನೀಡಿದ್ದ ಶಾಂತಕುಮಾರ್ ಪೂಜೆ ಮುಗಿಸಿ ಬರುತ್ತಿದ್ದ ಮರಿಯಪ್ಪಾ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಕಿ ಹತ್ಯೆ ಮಾಡಿದ್ದಾರೆ. ಮರುದಿನ ಕೊಲೆ ನಡೆದ ಸ್ಥಳಕ್ಕೆ ಬಂದು ಮೂವರೂ ಗೋಳಾಡಿದ್ದು ಮಗಳು ಹೇಮಲತಾ ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಳು. ಆದರೆ ಇದೀಗ ಹೇಮಲತಾ, ತಾಯಿ ಶೋಭಾ, ಶಾಂತಕುಮಾರ್, ಸಂತು,ಹೇಮಂತ್ ಸಹಿತ ಮೂವರು ಬಾಲ ಅಪರಾಧಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

LATEST NEWS

ಪಾಕ್ ನಿಂದ ಬಂದಿದ್ದ ಸೀಮಾ ಹೈದರ್ ಮೇಲೆ ಪತಿಯಿಂದ ಹ*ಲ್ಲೆ; ಸೀಮಾ ಹೇಳಿದ್ದೇನು?

Published

on

ನವದೆಹಲಿ : ಸೀಮಾ ಹೈದರ್ ಯಾರಿಗೆ ತಾನೇ ಗೊತ್ತಿಲ್ಲ. ದೂರದ ಪಾಕಿಸ್ತಾನದಿಂದ ಭಾರತಕ್ಕೆ ತನ್ನ ಪ್ರೇಮಿಗಾಗಿ ಬಂದ ಮಹಿಳೆ. ಈ ವಿಚಾರ ದೇಶದಾದ್ಯಂತ ದೊಡ್ಡ ಮಟ್ಟಿನ ಸುದ್ದಿಯಾಗಿತ್ತು. ಆದರೆ, ಈಗ ಆಕೆಯ ಕುರಿತು ಮತ್ತೊಂದು ಸುದ್ದಿ ವೈರಲ್ ಆಗಿದೆ. ಹೌದು, ಯಾರ ಪ್ರೀತಿ ಅರಸಿ ಬಂದು ಆತನನ್ನು ವಿವಾಹವಾಗಿದ್ದಳೋ ಆತನೇ ಆಕೆಯ ಮೇಲೆ ತೀವ್ರ ಹ*ಲ್ಲೆ ನಡೆಸಿದ್ದಾನೆ ಎಂಬುದಾಗಿ.

ಆಕೆಯ ಪತಿ ಸಚಿನ್ ತೀವ್ರ ಹ*ಲ್ಲೆ ನಡೆಸಿದ್ದಾನೆ ಎಂಬ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವೀಡಿಯೋದಲ್ಲಿ ಸೀಮಾ ಕಣ್ಣುಗಳು ಊದಿಕೊಂಡಿವೆ. ಆಕೆಯ ಬಲಭಾಗದ ಕಣ್ಣಿನ ಕೆಳಭಾಗ ಊದಿಕೊಂಡಿದೆ. ಹೆಪ್ಪುಗಟ್ಟಿದಂತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಪತಿಯಿಂದ ಸೀಮಾ ತೀವ್ರ ಹ*ಲ್ಲೆಗೆ ಒಳಗಾಗಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ
ಸೀಮಾ ಹೈದರ್ ಹೇಳಿದ್ದೇನು?

ಈ ವೈರಲ್ ವೀಡಿಯೋ ಬಗ್ಗೆ ಸ್ವತಃ ಸೀಮಾ ಹೈದರ್ ವೀಡಿಯೋವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ. ಪತಿ-ಪತ್ನಿ ಜೊತೆಯಾಗಿ ಕುಳಿತು ಈ ವೀಡಿಯೋ ಮಾಡಿದ್ದಾರೆ. ‘ಈ ವೀಡಿಯೋ ಫೇಕ್ ಆಗಿದೆ. ನನ್ನ ಹಾಗೂ ನನ್ನ ಪತಿಯನ್ನು ಹೀಗೆ ತೋರಿಸಲು ಯಾವ ಕೀಳುಮಟ್ಟಕ್ಕೂ ಇಳಿಯಬಲ್ಲರು. ನಮ್ಮ ಪ್ರೇಮವನ್ನು ಬಲಹೀನಗೊಳಿಸಲು ಹೀಗೆ ಮಾಡಲಾಗಿದೆ. ನಿಮಗೆ ಗೊತ್ತಿರುವಂತೆ ದಯವಿಟ್ಟು ಇಂತಹ ಫೇಕ್ ವೀಡಿಯೋಗಳಿಂದ ಎಚ್ಚರವಾಗಿರಿ ಎಂದು ಸೀಮಾ ಹೈದರ್ ಹೇಳಿದ್ದಾರೆ.

Continue Reading

FILM

ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ

Published

on

ಚಂದನವನ : ಮೇಘಾ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ, ಇದೀಗ ಹಿರಿತೆರೆಗೆ ಲಗ್ಗೆ ಇಟ್ಟಿರುವ ಕಲಾವಿದೆ. ಇದೀಗ ಅವರು ಜಿಮ್ ವರ್ಕೌಟ್ ಮಾಡುವ ವೇಳೆ ಕ್ಲಿಕ್ಕಿಸಿದ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಶಾರ್ಟ್ಸ್ ತೊಟ್ಟು ಜಿಮ್ ನಲ್ಲಿ ಮೇಘಾ ಶೆಟ್ಟಿ ವರ್ಕೌಟ್ ಮಾಡಿದ್ದಾರೆ. ಮುದ್ದಾಗಿ, ಗ್ಲಾಮರಸ್ ಆಗಿ ಅವರು ಕಾಣಿಸುತ್ತಿದ್ದಾರೆ.

ಮೇಘಾ ಶೆಟ್ಟಿ ಅಂದ್ರೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗೋದು ಸಹಜ. ಈ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ನಟಿಸಿದ್ದರು. ನಟ ಅನಿರುದ್ಧ್ ಜೊತೆ ನಟಿಸಿದ್ದ ಮೇಘಾಗೆ ಈ ಧಾರಾವಾಹಿ ಜಪ್ರಿಯತೆಯ ಉತ್ತುಂಗಕ್ಕೇರಿಸಿತ್ತು.

ಈ ವೇಳೆ ಸಿನಿಮಾಗಳಿಂದಲೂ ಮೇಘಾ ಅವಕಾಶಗಳನ್ನು ಗಿಟ್ಟಿಸಿಕೊಂಡರು, ಅತ್ತ ಧಾರಾವಾಹಿ ಮುಕ್ತಾಯಗೊಂಡಿತ್ತು. ಇತ್ತು ಮೇಘಾ ಸಿನಿಮಾಗಳಲ್ಲಿ ಬಿಝಿ ಆದರು.ಮಂಗಳೂರು ಮೂಲದ ಈ ಬೆಡಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ತ್ರಿಬಲ್ ರೈಡಿಂಗ್’ ನಲ್ಲಿ ಕಾಣಿಸಿಕೊಂಡರು. ಡಾರ್ಲಿಂಗ್ ಕೃಷ್ಣ ಜೊತೆ ‘ದಿಲ್ ಪಸಂದ್’ನಲ್ಲಿ ನಟಿಸಿದ್ದಾರೆ. ಧನ್ವೀರ್ ಗೌಟ ಜೊತೆ ‘ಕೈವ’ ದಲ್ಲಿ ನಾಯಕಿಯಾಗಿದ್ದಾರೆ. ಸದ್ಯ ಮೇಘ, ಆಫ್ಟರ್ ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : ವಿಮಾನದಲ್ಲೇ ರೋಮ್ಯಾನ್ಸ್‌…ಜೋಡಿಗಳ ಫೋಟೋ ವೈರಲ್‌..!

ಇನ್ನು, ಜಿಮ್ ವರ್ಕೌಟ್ ಸಮಯದ ಫೋಟೋ ಹಂಚಿಕೊಂಡ ಮೇಘಾ ಶೆಟ್ಟಿ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಕೊಡುತ್ತಿದ್ದಾರೆ. ಬ್ಯೂಟಿಫುಲ್ ಎಂದು ಕಮೆಂಟ್ ಹಾಕುತ್ತಿದ್ದಾರೆ.

Continue Reading

DAKSHINA KANNADA

WATCH VIDEO : ದಪ್ಪು ಹಿಡಿದು ನೃತ್ಯ ಮಾಡಿದ ಯು.ಟಿ.ಖಾದರ್; ಹಬ್ಬದ ಸಂಭ್ರಮದ ವಿಡಿಯೋ ವೈರಲ್

Published

on

ಮಂಗಳೂರು : ವಿಧಾನ ಸಭಾ ಸ್ಪೀಕರ್ ಆಗಿದ್ರೂ ಸದಾ ಒಂದಿಲ್ಲ ಒಂದು ಕಾರಣದಿಂದ ಸ್ಪೀಕರ್ ಯು.ಟಿ ಖಾದರ್ ಅವರು ಸುದ್ದಿಯಾಗ್ತಾನೆ ಇರ್ತಾರೆ. ಅವರು ಎಲ್ಲೇ ಹೋದ್ರು ಅವರ ಅಭಿಮಾನಿಗಳು ಅವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡ್ತಾರೆ. ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದೆ.

ರಮ್ಜಾನ್ ಹಬ್ಬದಂದು ಈ ವಿಡಿಯೋ ಶೂಟ್ ಮಾಡಲಾಗಿದೆ ಎನ್ನಲಾಗಿದೆಯಾದ್ರೂ ಅದರ ಖಚಿತತೆ ಇಲ್ಲ. ಹಬ್ಬದ ಸಲುವಾಗಿ ನಡೆದಿದ್ದ ಮೆರವಣಿಗೆ ಒಂದರಲ್ಲಿ ಸ್ಪೀಕರ್ ಖಾದರ್ ಅವರು ದಪ್ಪು ಬಾರಿಸಿ ನೃತ್ಯ ಮಾಡಿದ್ದಾರೆ. ದಪ್ಪು ಅನ್ನೋದು ಮುಸ್ಲಿಂ ಸಮೂದಾಯದ ಸಾಂಪ್ರದಾಯಿಕ ನೃತ್ಯವಾಗಿದ್ದು, ಹೆಚ್ಚಾಗಿ ಇದನ್ನು ಮಕ್ಕಳು ಪ್ರದರ್ಶನ ಮಾಡುತ್ತಾರೆ.


ಇಲ್ಲಿ ಕೂಡಾ ಮೆರವಣಿಗೆಯಲ್ಲಿ ದಪ್ಪು ಪ್ರದರ್ಶನ ಮಾಡುತ್ತಿರುವ ಮಕ್ಕಳ ಜೊತೆ ಮಕ್ಕಳಾಗಿ ದಪ್ಪು ನೃತ್ಯಕ್ಕೆ ಖಾದರ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಖಾದರ್ ಅವರ ಅಭಿಮಾನಿಗಳು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವಿಡಿಯೋ ಯಾವಾಗಿನದ್ದು ಅನ್ನೋದು ಇನ್ನೂ ಗೊತ್ತಾಗಿಲ್ಲ.

ಇದನ್ನೂ ಓದಿ : WATCH VIDEO : ಪುತ್ರಿಯ ಜೊತೆ ಖಾದರ್ ರೌಂಡಪ್‌.. ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಜನನಾಯಕ

Continue Reading

LATEST NEWS

Trending