Connect with us

    LATEST NEWS

    ಕಮ್ಯುನಿಸ್ಟ್‌ ನಾಯಕ ಸಿತಾರಾಮ್‌ ಯೆಚೂರಿ ಇನ್ನಿಲ್ಲ..!

    Published

    on

    ನವದೆಹಲಿ : ಕಮ್ಯುನಿಸ್ಟ್‌ ನಾಯಕ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಅಲ್ಪಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದ್ದಾರೆ. 72 ವರ್ಷ ವಯಸ್ಸಾಗಿದ್ದ ಯೆಚೂರಿ ಅವರು ಉಸಿರಾಟದ ತೊಂದರೆಗಾಗಿ ಆಗಸ್ಟ್‌ 19 ರಂದು ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಎರಡು ದಿನಗಳಿಂದ ಶ್ವಾಸಕೋಶದ ಸೋಂಕು ಉಲ್ಭಣವಾಗಿದ್ದು ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.


    1952 ರಲ್ಲಿ ಚೆನೈನಲ್ಲಿ ಜನಿಸಿದ್ದ ಇವರು ಶಾಲಾ ಶಿಕ್ಷಣವನ್ನು ಹೈದರಾಬಾದ್‌ನಲ್ಲಿ ಪೂರೈಸಿದ್ದರು. 1969 ರಲ್ಲಿ ತೆಲಂಗಾಣ ಪ್ರತ್ಯೇಕತಾ ಹೋರಾಟ ಆರಂಭವಾದ ಬಳಿಕ ದೆಹಲಿಗೆ ತೆರಳಿದ್ದ ಯೆಚೂರಿ ದೆಹಲಿಯ ಜೆಎನ್‌ಯುನಲ್ಲಿ ಎಂಎ ಪದವಿ ಮುಗಿಸಿದ್ದರು. ಪಿಹೆಚ್‌ಡಿ ಆರಂಭಿಸಿದ್ದರಾದ್ರೂ ತುರ್ತು ಪರಿಸ್ಥಿತಿಯ ಕಾರಣದಿಂದ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. 1970 ರಿಂದ ಜೆಎನ್‌ಯುನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಮೂರು ಭಾರಿ ಆಯ್ಕೆಯಾಗಿದ್ದರು. ಬಳಿಕ 1984 ರಲ್ಲಿ ಸಿಪಿಐಎಂನ ಕೇಂದ್ರ ಸಮಿತಿಗೆ ಆಯ್ಕೆಯಾಗಿ ಪಕ್ಷದಲ್ಲಿ ಇದುವರೆಗೂ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ.

    LATEST NEWS

    ರಾಜ್ಯದ ‘KSRTC’ ಬಸ್ ಸೇರಿದಂತೆ 4 ಬಸ್‌ಗಳ ಮೇಲೆ ಕಲ್ಲು ತೂರಾಟ; ಕಿಡಿಗೇಡಿಗಳು ಪರಾರಿ

    Published

    on

    ಮಂಗಲುರು/ಹೈದ್ರಾಬಾದ್ : ಆಂಧ್ರಪ್ರದೇಶದ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್‌ಆರ್ಟಿಸಿ ಸಂಸ್ಥೆಯ ಐರಾವತ ಬಸ್ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಸಿರುವ ಘಟನೆ ಹೈದರಾಬಾದ್ ಸಮೀಪದ ಶಂಶಾಬಾದ್ ನಲ್ಲಿ ನಡೆದಿದೆ.

    ಗುರುವಾರ (ನ.7) ರಾತ್ರಿ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

    ಹೈದರಾಬಾದ್‌ನಿಂದ ಬೆಂಗಳೂರು ನಡುವೆ ಸಂಚರಿಸುವ ಸಾರಿಗೆ ಬಸ್‌ ರಾತ್ರಿ 10:45ರ ಸುಮಾರಿನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿನತ್ತ ಹೊರಟಿತ್ತು.

    ಕರ್ನಾಟಕದ ಕೆಎಸ್‌ಆರ್‌ಟಿಸಿ ಬಸ್ ಮಾತ್ರವಲ್ಲದೇ ತೆಲಂಗಾಣದ ಒಂದು ಸರ್ಕಾರಿ ಬಸ್, ಖಾಸಗಿ ಬಸ್ ಸೇರಿದಂತೆ ಒಟ್ಟು 4 ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಬಸ್ಸಿನ ಕಿಟಕಿಯ ಗಾಜುಗಳು ಮಾತ್ರ ಒಡೆದು ಹೋಗಿವೆ.

    ಈ ಪ್ರಕರಣದ ಸಂಬಂಧ ಶಂಶಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    BIG BOSS

    BBK 11: ಬಿಗ್‌ಬಾಸ್ ವಾರದ ಕತೆಯಲ್ಲಿ ಮೋಕ್ಷಿತಾಗೆ ಕ್ಲಾಸ್ ತಗೊಳ್ತಾರಾ ಕಿಚ್ಚ?

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 41ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್​ನ ಆಗಮನ ಆಗಿದೆ. ವೈಟ್​ ಅಂಡ್ ವೈಟ್​ನಲ್ಲಿ ವೇದಿಕೆಗೆ ಬಂದ ಕಿಚ್ಚ ಸುದೀಪ್ ಈ​ ಯುದ್ಧದಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ತನ್ನ ತನವನ್ನು ಕಳೆದುಕೊಂಡವರು ಯಾರು ಅಂತ ಪ್ರಶ್ನೆ ಮಾಡಿದ್ದಾರೆ.

    ಹೌದು, ಕಲರ್ಸ್​ ಕನ್ನಡದಲ್ಲಿ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಅವರು ಬಿಗ್​ಬಾಸ್​ ವೇದಿಕೆಗೆ ಬಂದಿದ್ದಾರೆ. ವಿಶೇಷ ಅಧಿಕಾರಗಳನ್ನು ಗೆಲ್ಲೋ ಉದ್ದೇಶವನ್ನು ಇಟ್ಟುಕೊಂಡಿತ್ತು ಇಡೀ ಮನೆ. ಈ​ ಯುದ್ಧದಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ತನ್ನ ತನವನ್ನು ಕಳೆದುಕೊಂಡವರು ಯಾರು ಅಂತ ಇಂದಿನ ಸಂಚಿಕೆಯಲ್ಲಿ ಚರ್ಚೆಯಾಗಲಿದೆ. ಸದ್ಯ ಇದೇ ಪ್ರೋಮೋ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಈ ವಾರ ಕಿಚ್ಚ ಮೋಕ್ಷಿತಾಗೆ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎಂದು ಕಾದುನೋಡಬೇಕಾಗಿದೆ.

    ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ನಾಳಿನ ಸಂಚಿಕೆಯಲ್ಲಿ ಓರ್ವ ಸ್ಪರ್ಧಿ ಬಿಗ್​ಬಾಸ್​ ಮನೆಗೆ ಗುಡ್​ಬೈ ಹೇಳಬೇಕು. ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಅಂತ ಕಾದು ನೋಡಬೇಕಿದೆ.

    Continue Reading

    LATEST NEWS

    ಚಾರ್ಮಾಡಿ ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು 343.74 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

    Published

    on

    ಮಂಗಳೂರು: ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

    ಮಂಗಳೂರಿನಿಂದ ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ 86.20 ಕಿ.ಮೀ. ಅಂತರದವರೆಗೆ ಅಭಿವೃದ್ದಿಯಾಗಲಿದೆ. ಆ ಮೂಲಕ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯು ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ. ಈ ಹೆದ್ದಾರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದು ಸಂಸದರು ಹೇಳಿದ್ದಾರೆ.

    ರಾಜ್ಯದ ಪ್ರಮುಖ ಹೆದ್ದಾರಿಯಾದ ಚಾರ್ಮಾಡಿ ಘಾಟ್‌ನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಸುಗಮ ಸರಕು ಸಾಗಾಣೆಯೊಂದಿಗೆ ಈ ಭಾಗದ ವ್ಯಾಪಾರ-ವಹಿವಾಟು ಕೂಡ ವೃದ್ಧಿಸಲಿದೆ. ಆ ಮೂಲಕ, ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲು ಎಂದು ಗುರುತಿಸಿಕೊಂಡಿರುವ ಕರಾವಳಿ ಮತ್ತಷ್ಟು ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದರು.

    ಹೀಗಾಗಿ, ಚಾರ್ಮಾಡಿ ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು 343,74,00,000 ರೂ. ಬಿಡುಗಡೆಗೊಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಇಲಾಖೆ ಅಧಿಕಾರಿಗಳಿಗೆ ಜಿಲ್ಲೆಯ ಜನತೆ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.

    Continue Reading

    LATEST NEWS

    Trending