Connect with us

    DAKSHINA KANNADA

    ಕೋವಿಡ್ ಲಸಿಕೆ ಅಲಭ್ಯ ಹಿನ್ನೆಲೆ: ಶಾಸಕ ವೇದವ್ಯಾಸ ಕಾಮತ್ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ..

    Published

    on

    ಮಂಗಳೂರು: ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ವಿವಿಧ ನಗರ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಕುರಿತು ದೂರು ಕೇಳಿ ಬಂದಿದೆ.

    ಈ ಹಿನ್ನೆಲೆಯಲ್ಲಿ  ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಕಾಮತ್, ಲಸಿಕಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ.

    ಈಗಾಗಲೇ ಮೊದಲ ಹಂತದ ಡೋಸ್  ಪಡೆದಿರುವ 60 ವರ್ಷ, 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಎರಡನೇ ಹಂತದ ಲಸಿಕೆ ನೀಡಲು ಮೊದಲ ಆದ್ಯತೆ ನೀಡಬೇಕು.

    ಆನ್ಲೈನ್ ಮೂಲಕ ಎರಡನೇ ಹಂತದ ಲಸಿಕೆಗಾಗಿ ನೋಂದಾಯಿಸಿರುವ ನಾಗರಿಕರಿಗೆ ಪ್ರಥಮ ಆಧ್ಯತೆ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಲಸಿಕೆ ಪಡೆಯಲು ಬಂದಿರುವ ಸಾರ್ವಜನಿಕರ ಅಹವಾಲುಗಳನ್ನು ಕೇಳಿ ಸಂಬಂಧ ಪಟ್ಟ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಿದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಸಾಧನೆ ಮೆರೆದ ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು

    Published

    on

    ಮಂಗಳೂರು : ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ನೀಡಿದರು.

    20 ರಾಜ್ಯಗಳಲ್ಲಿರುವ 120 ಶಾಖೆಯಲ್ಲಿ ಏಕಕಾಲಕ್ಕೆ 10,000 ವಿದ್ಯಾರ್ಥಿಗಳು ನೂರು ದಿನ ವಿಶೇಷ ತರಬೇತಿ ಪಡೆದು, 600 ಸೂತ್ರಗಳನ್ನು ಹೇಳುವುದರ ಮುಖಾಂತರ ಮೂರನೇ ಬಾರಿಗೆ ಇಲ್ಲಿನ ವಿದ್ಯಾರ್ಥಿಗಳು ಐತಿಹಾಸಿಕ ದಾಖಲೆ ಸೃಷ್ಠಿಸಿದ್ದಾರೆ.

    ಇದನ್ನೂ ಓದಿ : ಕಾರ್ಕಳ: ಮಗುವಿನಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಮನನೊಂದು ತಾಯಿ ಆತ್ಮಹತ್ಯೆ

    ಅದರಲ್ಲಿ ವಿಶೇಷವಾಗಿ ಮಂಗಳೂರು ನಗರದಲ್ಲಿರುವ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ  118 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮವಾದ ಸಾಧನೆ ಮಾಡಿದ್ದಾರೆ. ಸಾಧನೆಗೆ ಪಾಲಕರ ಪ್ರೋತ್ಸಾಹ,  ಶಿಕ್ಷಕರ ನಿರಂತರ ತರಬೇತಿ ಮುಖ್ಯವಾಗಿದೆ ಎಂದು ಶಾಲೆಯ ವ್ಯವಸ್ಥಾಪಕ ಕೆ. ಸುನಿಲ್ ಕುಮಾರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗಿಯಾದ ಎಲ್ಲಾ ಮಕ್ಕಳ ಪ್ರತಿಭೆ ಪ್ರಜ್ವಲಿಸುವಂತಾಗಲಿ ಎಂದು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಹಾರೈಸಿದೆ.

    Continue Reading

    DAKSHINA KANNADA

    ಮಂಗಳೂರು : ಜಾನುವಾರು ಕಳ್ಳತನ ; ಆರೋಪಿಗಳು ಬಂಧನ

    Published

    on

    ಮಂಗಳೂರು : ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕೊಳಂಬೆ ಕೊಂಚಾರು ಬದ್ರಿಯಾನಗರದ  ಪೈಜಲ್ ಕೊಂಚಾರ್ (40) ಮತ್ತು ಕೋಡಿಯ ಸುಹೈಬ್ ಅಕ್ತರ್ (24)  ಎಂಬವರನ್ನು ಕಾವೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

    ಆರೋಪಿಗಳಿಂದ   ಕಾರು  ಹಾಗೂ ಸ್ಕೂಟರ್‌ನ್ನು ವಶಪಡಿಸಿದ್ದಾರೆ.

    ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.   ಆರೋಪಿಗಳ ಪೈಕಿ  ಪೈಜಲ್ ವಿರುದ್ಧ  ಬಜ್ಪೆ ಪೊಲೀಸ್ ಠಾಣೆಯಲ್ಲಿ 1 ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ 2  ಪ್ರಕರಣಗಳು ದಾಖಲಾಗಿದೆ.

    ಪೈಜಲ್ ವಿರುದ್ಧ  ಒಟ್ಟು 12 ದನ ಕಳ್ಳತನ ಪ್ರಕರಣ ದಾಖಲಾಗಿದ್ದು ಅದರಲ್ಲಿ ಬಜ್ಜೆ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು, ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಮತ್ತು  ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

    ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಆರೋಪಿಗಳನ್ನು ಬಂಧಿಸಲಾಗಿದೆ.

    Continue Reading

    BANTWAL

    ಬಂಟ್ವಾಳ: ಟೆಂಪೋ ಡಿ*ಕ್ಕಿ ಹೊಡೆದು ಮೂರು ವರ್ಷದ ಮಗು ಸಾ*ವು

    Published

    on

    ಬಂಟ್ವಾಳ: ನಿಲ್ಲಿಸಿದ್ದ ಟೆಂಪೋವೊಂದು ಏಕಾಏಕಿ ಹಿಮ್ಮುಖವಾಗಿ ಚಲಿಸಿದ್ದು, ಆ ವೇಳೆ ಆಟವಾಡುತ್ತಿದ್ದ ಮುರು ವರ್ಷದ ಮಗು ಚಕ್ರದ*ಡಿಗೆ ಸಿಲುಕಿ ಮೃ*ತಪಟ್ಟ ಘಟನೆ ಬುಧವಾರ (ನ.6) ಬಂಟ್ವಾಳದ ಲೊರೆಟ್ಟೋಪದವಿನ ಟಿಪ್ಪುನಗರದಲ್ಲಿ ನಡೆದಿದೆ.

    ಫರಂಗಿಪೇಟೆ ಸಮೀಪದ ಪತ್ತನಬೈಲು ನಿವಾಸಿ ಆಶೀಕಾ (3) ಮೃ*ತ ಮಗು.

    ಮಗು ತನ್ನ ಅಜ್ಜಿ ಮನೆಯಲ್ಲಿದ್ದು, ಮನೆಯ ಹೊರಗೆ ಮಗು ಆಡುತ್ತಿದ್ದ ವೇಳೆ ಅಂಗಳದಲ್ಲಿ ನಿಲ್ಲಿಸಿದ್ದ ಟೆಂಪೋ ಒಮ್ಮೆಯೇ ಹಿಂದೆ ಬಂದ ಕಾರಣ ದುರ್ಘಟನೆ ಸಂಭವಿಸಿದೆ.

    ಘಟನೆಯಲ್ಲಿ ಗಂಭೀರ ಗಾ*ಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending