Connect with us

LATEST NEWS

ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಕೊವಿಡ್ ಗೆ ಬಲಿ..!

Published

on

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಕಲಬುರಗಿ ಆವೃತ್ತಿ ಯ ಸ್ಥಾನಿಕ ಸಂಪಾದಕ ಜಯತೀರ್ಥ ಕಾಗಲಕರ್ (53) ಕೊರೊನೊ ಸೊಂಕಿಗೆ ಬಲಿಯಾಗಿದ್ದಾರೆ.

ವಾರದ ಹಿಂದೆ ಕೊರೊನೊ ಸೊಂಕಿಗೆ ಒಳಗಾಗಿದ್ದ ಅವರನ್ನು ಚಿಕಿತ್ಸೆ ಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಗೆ ಸ್ಪಂದಿಸದೇ ಕೊನೆಯುಸಿರೆಳೆದರು.

ಕಳೆದ ಮೂರು ದಶಕದಿಂದ ಸಂಯುಕ್ತ ಕರ್ನಾಟಕದ ವರದಿಗಾರರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಇತ್ತೀಚಿಗೆ ಸ್ಥಾನಿಕ ಸಂಪಾದಕರಾಗಿ ಬಡ್ತಿ ಹೊಂದಿದ್ದರು.

ಮೂರು ದಶಕಗಳಿಂದ ಹಲವು ಜನಪರ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದ ಕಾಗಲಕರ್ ಅವರ ಅಗಲುವಿಕೆಗೆ ಸಂಸದರು, ಶಾಸಕರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.

LATEST NEWS

ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!

Published

on

ಆಂಧ್ರಪ್ರದೇಶ : ಆಲದ ಮರದ ಪೊಟರೆಯಲ್ಲಿ ಬರೋಬ್ಬರಿ 64 ಲಕ್ಷ ರೂ. ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇದು ಹೇಗೆ ಪತ್ತೆಯಾಯ್ತು? ಮಾಯಾಜಾಲನಾ? ಎಂಬ ಪ್ರನೆ ಮೂಡೋದು ಸಹಜ. ಆದ್ರೆ, ಇಲ್ಲಿ ಸಿಕ್ಕಿರೋದು ಮೇಲಿಂದ ಉದುರಿದ ದುಡ್ಡಲ್ಲ. ಬದಲಿಗೆ ಕಳವುಗೈದ ದುಡ್ಡು.

ಹೌದು, ಎಟಿಎಂಗೆ ಹಣ ತುಂಬಿಸಲು ಹೋದ ವಾಹನದಿಂದ ಹಣವನ್ನು ವ್ಯಕ್ತಿಯೊಬ್ಬ ಕಳವು ಮಾಡಿದ್ದಾನೆ.  ಬಳಿಕ ಆಲದ ಮರದ ಪೊಟರೆಯಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ.

ಏನಿದು ಘಟನೆ ?

ಸಿಎಂಎಸ್ ಭದ್ರತಾ ಸಂಸ್ಥೆಯ ಸಿಬ್ಬಂದಿ ಗುರುವಾರ ಮಧ್ಯಾಹ್ನ 68 ಲಕ್ಷ ರೂಪಾಯಿಯೊಂದಿಗೆ ಒಂಗೋಲ್ ನಿಂದ ತೆರಳಿದ್ದರು. ಚಿಮಕುರ್ತಿ, ಮರ್ರಿಚೆಟ್ಲಪಾಲೆಂ, ದೊಡ್ಡಾವರಂ, ಗುಂಡ್ಲಪಲ್ಲಿ, ಮಡ್ಡಿಪಾಡು ಪ್ರದೇಶಗಳಲ್ಲಿರುವ ವಿವಿಧ ಎಟಿಎಂ ಯಂತ್ರಗಳಿಗೆ ಹಣ ತುಂಬಿಸಬೇಕಾಗಿತ್ತು.

ಆದರೆ, ಅದೇ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಒಂಗೋಲ್‌ನ ಕರ್ನೂಲ್ ರಸ್ತೆಯಲ್ಲಿರುವ ಭಾರತೀಯ ಪೆಟ್ರೋಲ್ ಬಂಕ್‌ನಲ್ಲಿ ವಾಹನ ನಿಲ್ಲಿಸಿದ್ದಾರೆ. ಮಧ್ಯಾಹ್ನ ಆಗಿದ್ದರಿಂದ ತಾವು ತಂದಿದ್ದ ತಿಂಡಿ ತಿನ್ನಲು ಬಂಕ್ ರೂಮಿಗೆ ಹೋಗಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿದ್ದ ವಾಚ್ ಮನ್ ಬಂದು ವಾಹನದ ಬೀಗ ಮುರಿದು 64 ಲಕ್ಷ ರೂ.ಮೌಲ್ಯದ 500 ರೂ.ನೋಟುಗಳ ಬಂಡಲ್​ಗಳನ್ನು ಕಳ್ಳತನ ಮಾಡಿದ್ದ.

ಅಷ್ಟರಲ್ಲಿ ಊಟ ಮುಗಿಸಿ ಹಿಂದಿರುಗಿದ ಸಿಬ್ಬಂದಿಗೆ ವಾಹನದ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಒಳಗೆ ನೋಡಿದಾಗ 100 ರೂಪಾಯಿ ನೋಟುಗಳ ಬಂಡಲ್ ಗಳು ಮಾತ್ರ ಪತ್ತೆಯಾಗಿವೆ. 500 ರೂಪಾಯಿ ನೋಟುಗಳ ಬಂಡಲ್‌ಗಳು ಕಾಣಿಸಲಿಲ್ಲ.
ಅವರು ತಂದಿದ್ದ 68 ಲಕ್ಷ ರೂಪಾಯಿಯಲ್ಲಿ 64 ಲಕ್ಷ ರೂ. ಕಳ್ಳತನವಾಗಿರುವುದು ಗೊತ್ತಾಗಿದೆ.

ಕೂಡಲೇ ಪೊಲೀಸರಿಗೆ ದೂರು ನೀಡಿದ ನಂತರ ಹೆಚ್ಚುವರಿ ಎಸ್ಪಿ (ಅಪರಾಧ) ಎಸ್.ವಿ.ಶ್ರೀಧರ್ ರಾವ್ ಮತ್ತು ತಾಲೂಕು ಸಿಐ ಭಕ್ತವತ್ಸಲ ರೆಡ್ಡಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಹತ್ತಿರದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು. ಮುಸುಕುಧಾರಿಯೊಬ್ಬ ಬೈಕ್‌ನಲ್ಲಿ ಬಂದು ವಾಹನದಲ್ಲಿದ್ದ ನಗದು ದೋಚಿರುವುದು ಕಂಡುಬಂದಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ : ಹರ್ಷಿಕಾ ಪೂಣಚ್ಚ – ಭುವನ್ ಗೌಡ ದಂಪತಿ ಮೇಲೆ ಹ*ಲ್ಲೆ; ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ? ಏಂದು ಕೇಳಿದ ನಟಿ

ಆರೋಪಿ ಬಂಧನ :

ಬಂಧಿತ ಆರೋಪಿ ಮಹೇಶ್ ಎಂದು ಗುರುತಿಸಲಾಗಿದೆ. ಆತ ಈ ಹಿಂದೆ ಸಿಎಂಎಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನೋಟುಗಳ ಬಂಡಲ್‌ಗಳ ಜೊತೆಗೆ, ಅವನು ತನ್ನ ಸ್ವಗ್ರಾಮವಾದ ಸಂತನೂತಲಪಾಡು ಮಂಡಲದ ಕಾಮೆಪಲ್ಲಿವಾರಿಪಾಲೆಂನಲ್ಲಿರುವ ತನ್ನ ಮನೆಯ ಸಮೀಪವಿರುವ ಆಲದ ಮರದ ಕಾಂಡದಲ್ಲಿ ಹಣವನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.

ಪೊಲೀಸರ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆಲದ ಮರದ ಬುಡದಲ್ಲಿ ಬಚ್ಚಿಟ್ಟಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Continue Reading

LATEST NEWS

ಮುಂದಿನ ಮೂರು ದಿನ ಈ ಭಾಗಗಳಲ್ಲಿ ಮಳೆಯಾಗಲಿದೆ : ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು : ಬಿಸಿಲಿನ ಬೇಗೆಯ ತಣಿಸಲು ಮಳೆರಾಯ ಆಗಮಿಸಿದ್ದಾನೆ. ರಾಜ್ಯದ ಹಲವೆಡೆ ಮಳೆಯಾಗಿದೆ. ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

ಗಾಳಿ, ಮಳೆ ಮುನ್ಸೂಚನೆ :

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿರುವ ಬಗ್ಗೆ ಹವಾಮಾನ ಇಲಾಖೆ ಶುಭ ಸುದ್ದಿ ಕೊಟ್ಟಿದೆ. ರಾಯಚೂರು, ವಿಜಯನಗರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹೇಳಿದೆ.

ಹವಾಮಾನ ಇಲಾಖೆಯ ಪ್ರಕಾರ ಗಂಟೆಗೆ 30ರಿಂದ 40 ಕಿಲೋ ಮೀಟರ್ ಗಾಳಿ ಬೀಸಲಿದ್ದು ಜನ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ತಂಪೆರೆದ ಮಳೆರಾಯ :

ಗುರುವಾರ ಧಾರವಾಡದಲ್ಲಿ ಆಲಿಕಲ್ ಸಮೇತ ಮಳೆ ಸುರಿದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು ಅಲ್ಲಲ್ಲಿ ಮರಗಳು ಉರುಳಿವೆ. ಮಾತ್ರವಲ್ಲದೆ ವಿಜಯನಗರದ ಹೊಸಪೇಟೆಯಲ್ಲೂ ಭಾರೀ ಮಳೆಯಾಗಿದೆ. ತೀರ್ಥಹಳ್ಳಿಯಲ್ಲೂ ಭಾರೀ ಗಾಳಿ ಮಳೆಯಾಗಿದೆ.

ಇದನ್ನೂ ಓದಿ : ಮುಂದಿನ ಮೂರು ದಿನ ಈ ಭಾಗಗಳಲ್ಲಿ ಮಳೆಯಾಗಲಿದೆ : ಹವಾಮಾನ ಇಲಾಖೆ ಮುನ್ಸೂಚನೆ

ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಕೊಪ್ಪಳ, ವಿಜಯನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಡಗು, ವಿಜಯಪುರದಲ್ಲಿ ಗಾಳಿ, ಸಿಡಿಲು-ಗುಡುಗು ಸಹಿತ ಉತ್ತಮ ಮಳೆಯಾಗಿದೆ.

Continue Reading

LATEST NEWS

ಉಡುಪಿ : ಅಂಬಾಗಿಲಿನಲ್ಲಿ ಬೈಕ್ – ಟಿಪ್ಪರ್ ನಡುವೆ ಭೀಕರ ಅಪಘಾ*ತ; ಬೈಕ್ ಸವಾರ ಸಾ*ವು

Published

on

ಉಡುಪಿ : ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ಉಡುಪಿಯ ಅಂಬಾಗಿಲಿನಲ್ಲಿ ನಡೆದಿದೆ. ಅಂಬಾಗಿಲು – ಉಡುಪಿ ಮುಖ್ಯ ರಸ್ತೆಯಲ್ಲಿ ಈ ದುರಂ*ತ ಸಂಭವಿಸಿದೆ.


ಬ್ರಹ್ಮಾವರ ಮಟಪಾಡಿ ಮೂಲದ ಪ್ರಭಾಕರ ಆಚಾರಿ ಮೃ*ತ ದುರ್ದೈವಿ. ಪ್ರಭಾಕರ ಅವರು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯರಸ್ತೆಗೆ ಬರುತ್ತಿದ್ದರು ಎನ್ನಲಾಗಿದೆ. ಅಪಘಾ*ತದ ರಭಸಕ್ಕೆ ಟಿಪ್ಪರ್ ನ ಅಡಿ ಭಾಗಕ್ಕೆ ಬೈಕ್ ಗುದ್ದಿದೆ.

ಇದನ್ನೂ ಓದಿ : ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು

ಸಹಸವಾರ ಗಂಭೀ*ರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Continue Reading

LATEST NEWS

Trending