Connect with us

LATEST NEWS

ಬೈಕ್‌ನಲ್ಲಿ ರೊಮ್ಯಾನ್ಸ್‌ ಪ್ರಕರಣ: ಆರೋಪಿ ಬಂಧನ

Published

on

ಚಾಮರಾಜನಗರ: ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಮುದ್ದಾಡುತ್ತಾ ಬೈಕ್‌ ಚಲಾಯಿಸಿದ ಬೈಕ್‌ ಸವಾರ ಚಾಮರಾಜನಗರ ಸಂಚಾರಿ ಪೊಲೀಸರ ಅತಿಥಿಯಾಗಿದ್ದಾನೆ.


ಎಚ್.ಡಿ.ಕೋಟೆ ತಾಲ್ಲೂಕಿನ ಶಿವಪುರ ಗ್ರಾಮದ ಸ್ವಾಮಿ.ಎಸ್.ಸಿ ಬಂಧಿತ ಆರೋಪಿ. ಬೈಕ್‌ ಅನ್ನೂ ವಶಕ್ಕೆ ಪಡೆಯಲಾಗಿದೆ. ಚಾಮರಾಜನಗರ ಗುಂಡ್ಲುಪೇಟೆ ರಸ್ತೆಯಲ್ಲಿ ಯಡಬೆಟ್ಟದ ಬಳಿ ಆರೋಪಿಯು

ಬೈಕ್‌ನ ಟ್ಯಾಂಕ್‌ ಮೇಲೆ ಕೂರಿಸಿಕೊಂಡು ಹುಡುಗಿಯನ್ನು ಕೂರಿಸಿಕೊಂಡು ಅಪಾಯಕಾರಿಯಾಗಿ ಬೈಕ್‌ ಚಲಾಯಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಹುಡುಗಿಯು ಸವಾರನಿಗೆ ಎದುರಾಗಿ ಕುಳಿತು, ಸವಾರನನ್ನು ತಬ್ಬಿಕೊಂಡಿರುವ, ಇಬ್ಬರೂ ಚುಂಬಿಸುವ ದೃಶ್ಯಗಳ ತುಣುಕುಗಳು ವೈರಲ್‌ ಆಗಿತ್ತು.
ಬೈಕ್‌ನ ಹಿಂಭಾಗದಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದವರು ಈ ದೃಶ್ಯವನ್ನು ಚಿತ್ರೀಕರಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಸಾರ್ವಜನಿಕರಿಂದ ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಗರ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಶುಕ್ರವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಬೈಕ್‌ನ ನೋಂದಣಿ ಸಂಖ್ಯೆಯನ್ನು ಆಧರಿಸಿ, ಅದರ ಮಾಲೀಕನನ್ನು ಪತ್ತೆ ಹಚ್ಚಿ, ಸವಾರನನ್ನು ಕಂಡು ಹಿಡಿದು ಬಂಧಿಸಿದ್ದಾರೆ. ಆರೋಪಿ ಸ್ವಾಮಿ ಚಲಾಯಿಸುತ್ತಿದ್ದ ಪಲ್ಸರ್‌ ಬೈಕ್‌, ಆತನ ಸಂಬಂಧಿಕನದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಚೈತ್ರಾ ಹೆಬ್ಬಾರ್ ನಾಪತ್ತೆ ಹಿಂದೆ ಅನ್ಯಕೋಮಿನ ಯುವಕನ ಕೈವಾಡ ಶಂಕೆ- ಆರೋಪಿಯ ಬಂಧಿಸಲು ಹಿಂದೂ‌ ಸಂಘಟನೆ ಒತ್ತಾಯ

Published

on

ಪುತ್ತೂರು: ಮಾಡೂರು ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾ, ಲವ್ ಜಿಹಾದ್ ಶಂಕೆಯನ್ನು ವ್ಯಕ್ತಪಡಿಸಿದ ಹಿಂದೂ‌ ಸಂಘಟನೆ ಮುಖಂಡರು, ಇದೀಗ ಬಂಟ್ವಾಳದ ಅನ್ಯಕೋಮಿನ ಯುವಕನ ಕೈವಾಡ ಆಕೆ ನಾಪತ್ತೆ ಪ್ರಕರಣದ ಹಿಂದೆ ಇದ್ದು, ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಪುತ್ತೂರಿನ ಕೂರ್ನಡ್ಕದಲ್ಲಿ ವಾಸವಿದ್ದ ಶಾರೂಕ್ ಶೇಖ್ ಮೂಲತಃ ಬಂಟ್ವಾಳದ ನೇರಳಕಟ್ಟೆಯ ನಿವಾಸಿಯಾಗಿದ್ದಾನೆ. ಚೈತ್ರಾ ತಂಗಿದ್ದ ಪಿಜಿಗೆ ಬರುತ್ತಿದ್ದ ಶಂಕಿತ ಬರುತ್ತಿದ್ದ. ಚೈತ್ರಾ ಪೋಷಕರಿಗೆ ಮಾಡೂರು ಬಜರಂಗದಳ ಮುಖಂಡರು ಮಾಹಿತಿಯನ್ನೂ ನೀಡಿದ್ದರು. ಇದೀಗ ಮಾಹಿತಿ ನೀಡಿದ ಬಳಿಕ ನಾಪತ್ತೆಯಾದ ಚೈತ್ರಾ ಹೆಬ್ಬಾರ್‌ ಹಿಂದೆ ಈ ಆರೋಪಿ ಇರುವುದು ದೃಢಪಡುತ್ತಿರುವುದರಿಂದ ಎರಡು ದಿನದಲ್ಲಿ ಚೈತ್ರಾಳನ್ನು ಪೊಲೀಸರು ಕರೆ ತರಬೇಕು. ಇಲ್ಲದೇ ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಪ್ರಾಂತ ಸಂಚಾಲಕ ಮುರಳಿ ಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

Continue Reading

DAKSHINA KANNADA

Ullala: ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಸ್ಕೂಟರ್ ಪತ್ತೆ..!

Published

on

ಮಂಗಳೂರು: ಉಳ್ಳಾಲದ ಮಾಡೂರಿನ ಪಿಜಿಯಿಂದ ಫೆ.17 ರಂದು ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಚಲಾಯಿಸಿದ ಸ್ಕೂಟರ್ ಸುರತ್ಕಲ್ ಬಳಿ ಪತ್ತೆಯಾಗಿದೆ.

ಮಾಡೂರಿನ ಪಿಜಿ ಯಿಂದ ಫೆ.17 ರಂದು ಮುಂಜಾನೆ 9 ಗಂಟೆಗೆ ಚೈತ್ರಾ ಇದೇ ಸ್ಕೂಟರ್‌ನಲ್ಲಿ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದ ಚೈತ್ರಾ ಸುಳಿವು ಸಿಗದೆ ಹಿನ್ನೆಲಯಲ್ಲಿ ಚೈತ್ರಾ ದೊಡ್ಡಪ್ಪ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಹಿಂದೂ ಸಂಘಟನೆಗಳೂ ಇದೊಂದು ಲವ್‌ ಜಿಹಾದ್ ಪ್ರಕರಣವೆಂದು ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ತನಿಕೆ ಚುರುಕುಗೊಳಿಸಿ ಪೊಲೀಸರಿಗೆ ಇದೀಗ ಚೈತ್ರಾಳ ಸ್ಕೂಟರ್ ಪತ್ತೆಯಾಗಿದೆ. ಚೈತ್ರ ಪಿಜಿಯಿಂದ ಹೊರಟ ಬಳಿಕ ಪಂಪ್‌ವೆಲ್ ಬಳಿ ಮೊಬೈಲ್ ಆಫ್ ಮಾಡಿಕೊಂಡಿದ್ದು ಬಳಿಕ ಸುರತ್ಕಲ್‌ಗೆ ಬಂದು ಅಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು, ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿರುವ ಪೊಲೀಸರು ಶಂಕಿತ ಯುವಕನ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ. ಆದರೆ ಆತನ ಮೊಬೈಲ್ ಕೂಡಾ ಸ್ವಿಚ್‌ ಆಫ್ ಆಗಿರುವ ಕಾರಣ ಚೈತ್ರಾ ಆತನ ಜೊತೆಯಲ್ಲಿ ಹೋಗಿರುವ ಬಲವಾದ ಅನುಮಾನ ಮೂಡಿದೆ. ಕೇರಳ ಅಥವಾ ಬೆಂಗಳೂರಿಗೆ ಹೋಗಿರುವ ಸಾದ್ಯತೆ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Continue Reading

LATEST NEWS

ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಹೃದಯಘಾತಕ್ಕೆ ಬಲಿ..!

Published

on

ಯಾದಗಿರಿ: ಸುರಪುರ ಕಾಂಗ್ರೆಸ್ ಶಾಸಕರ ರಾಜಾ ವೆಂಕಟಪ್ಪ ನಾಯಕ ಅವರು ಫೆ.25 ರಂದು ಹೃದಯಘಾತದಿಂದ ನಿಧನ ಹೊಂದಿದರು.


ರಾಜಾ ವೆಂಕಟಪ್ಪ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯಘಾತಕ್ಕೆ ಬಲಿಯಾದ ರಾಜಾ ವೆಂಕಟಪ್ಪ ಅವರ ಸಾವು ಕಾಂಗ್ರೆಸ್ ಗರಿಗೆ ಶಾಕ್ ನೀಡಿದಂತಾಗಿದೆ. ಇವರ ಸಾವಿಗೆ ಹಲವು ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

Trending