Connect with us

    LATEST NEWS

    ವಿರೋಧದ ನಡುವೆ ಮದುವೆಯಾದ ಜೋಡಿ: ಹುಡುಗನ ಮನೆಗೆ ಬೆಂಕಿ ಇಟ್ಟ ಯುವತಿ ಕುಟುಂಬಸ್ಥರು

    Published

    on

    ಕೋಲಾರ: ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಮನೆಯವರ ಒಪ್ಪಿಗೆ ಇಲ್ಲದೆ ಮದುವೆಯಾದ ಹಿನ್ನೆಲೆ ಹುಡುಗನ ಮನೆಗೆ ಯುವತಿಯ ಪೋಷಕರು ಬೆಂಕಿ ಇಟ್ಟ ಘಟನೆ ಕೋಲಾರದ ವೇಮಗಲ್‌ನಲ್ಲಿ ನಡೆದಿದೆ.

    ಮುನಿರಾಜು ಹಾಗೂ ಸಿಂಧು ಪ್ರೀತಿಸಿ ಮದುವೆಯಾದ ದಂಪತಿ.


    ಪ್ರೀತಿಯಿಂದ ಬೆಳೆಸಿ ಕಷ್ಟಪಟ್ಟು ವಿದ್ಯೆ ಕೊಡಿಸಿದ ಮಗಳನ್ನು ಯುವಕ ಬೇರೆ ಕಡೆ ಕರೆದುಕೊಂಡು ಹೋಗಿ ಮದುವೆಯಾದದಕ್ಕೆ ಆಕ್ರೋಶಗೊಂಡ ಹುಡುಗಿಯ ಹೆತ್ತವರು ಮುನಿರಾಜು ಮನೆಯನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ.

    ಪರಿಣಾಮ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಪಾರ ಮೌಲ್ಯದ ವಸ್ತು ಕೂಡಾ ಹಾನಿಯಾಗಿದೆ. ಅಷ್ಟೇ ಅಲ್ಲದೆ ಈತನ ತಂದೆ ಹಾಗೂ ಅತ್ತಿಗೆಯ ಮೇಲೆ ಕೂಡಾ ಹಲ್ಲೆ ಮಾಡಿದ್ದಾರೆ.


    ಈ ಜೋಡಿ ಒಂದೇ ಜಾತಿಯವರಾಗಿದ್ದರೂ ಪೋಷಕರನ್ನು ಒಪ್ಪಿಸುವಲ್ಲಿ ವಿಫಲರಾಗಿದ್ದು ಇದೀಗ ಯುವತಿ ಸಿಂಧು ರಕ್ಷಣೆ ಕೋರಿ ವಾಟ್ಸಾಪ್ ಮೂಲಕ ಪತ್ರ ರವಾನೆ ಮಾಡಿದ್ದಾಳೆ.

    Click to comment

    Leave a Reply

    Your email address will not be published. Required fields are marked *

    FILM

    ಚಾಲೆಂಜಿಂಗ್ ಸ್ಟಾರ್ ನ್ಯೂ ಪೋಸ್ಟ್; ದರ್ಶನ್ ಅಭಿಮಾನಿಗಳಿಗೆ ದಿಲ್‌ಖುಷ್

    Published

    on

    ಮಂಗಳೂರು/ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಬರೋಬ್ಬರಿ 7 ತಿಂಗಳ ನಂತರ ತಮ್ಮ ಅಭಿಮಾನಿಗಳಿಗೆ, ಜನತೆಗೆ ಜಾಲತಾಣದ ಮೂಲಕ ಸಂದೇಶವೊಂದನ್ನು ಹಂಚಿಕೊಂಡಿದ್ದು, ಫೋಟೊ ಫುಲ್ ವೈರಲ್ ಆಗುತ್ತಿದೆ.

    2024 ರ ಜೂನ್‌ ತಿಂಗಳಿನಿಂದ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ದರ್ಶನ್ ಕೊನೆಗೂ ತಮ್ಮ ಅಭಿಮಾನಿಗಳಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ‘ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು-ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿ ಯನ್ನು ಬರಮಾಡಿಕೊಳ್ಳೋಣ’ ಎಂದು ಬರೆದುಕೊಂಡಿದ್ದು, ಕುದುರೆಯೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಮಾಡಿದ ಕೆಲವೇ ಗಂಟೆಯಲ್ಲಿ 4.66 ಲಕ್ಷಕ್ಕೂ ಅಧಿಕ ಲೈಕ್‌, 27 ಸಾವಿರಕ್ಕೂ ಅಧಿಕ ಕಮೆಂಟ್ಸ್‌ ಪಡೆಯಿತು.

    ನಟ ದರ್ಶನ್ ಪ್ರತಿ ವರ್ಷವೂ ಕೂಡ ಫಾರಂ ಹೌಸ್‌ನಲ್ಲಿ ತನ್ನ ಸಾಕು ಪ್ರಾಣಿಗಳೊಂದಿಗೆ ಸಂಕ್ರಾತಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ನೆಚ್ಚಿನ ಸ್ಥಳದಲ್ಲೇ ಸಂಕ್ರಾಂತಿ ಆಚರಿಸಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನೆಚ್ಚಿನ ನಟನ ಪೋಸ್ಟ್ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ದರ್ಶನ್ ಪೋಸ್ಟ್ ಮಾಡುತ್ತಿದ್ದಂತೆ, ಅಭಿಮಾನಿಗಳು ‘ಜೈ ಡಿ ಬಾಸ್’ ಎಂದು ಕಮೆಂಟ್ ಮಾಡಿದ್ದಾರೆ.

    Continue Reading

    LATEST NEWS

    ಮಹಾಕುಂಭ ಮೇಳ 2025: ಗಮನ ಸೆಳೆಯುತ್ತಿರುವ ನಾಗಾ ಸಾಧ್ವಿಗಳು

    Published

    on

    ಮಂಗಳೂರು/ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ-2025 ಜನವರಿ 13 ಕ್ಕೆ ಆರಂಭವಾಗಿದ್ದು, ಫೆಬ್ರುವರಿ 26ರ ತನಕ ನಡೆಯಲಿದೆ. ಮಹಾ ಕುಂಭಮೇಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು, ಅಪಾರವಾದ ನಂಬಿಕೆ, ಶ್ರದ್ಧೆಯು ಸಂಕೇತವಾಗಿದೆ. ಉತ್ತರ ಪ್ರದೇಶ ಸರ್ಕಾರ ಮಹಾ ಕುಂಭಮೇಳಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದೆ. ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾ ಕುಂಭಮೇಳ ಬಹಳ ವಿಶೇಷವಾಗಿದ್ದು, 114 ವರ್ಷಗಳ ಬಳಿಕ ಈ ಮಹಾ ಕುಂಭಮೇಳ ನಡೆಯುತ್ತಿದೆ. ಇಲ್ಲಿ ದೇಶದ ನಾಗಾಸಾಧುಗಳು ಆಗಮಿಸಿದ್ದು, ಇದೀಗ ಮಹಿಳಾ ನಾಗಾಸಾಧುಗಳು ಬಹಳ ವಿಶೇಷವಾಗಿ ಆಕರ್ಷಣೀಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

    ಪುರುಷ ನಾಗಾ ಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದು, ಅವರು ಕುಟುಂಬ ಮತ್ತು ಭೌತಿಕ ಆಸ್ತಿಗಳ ಜೊತೆಗೆ ತಮ್ಮ ಎಲ್ಲಾ ಬಾಂಧವ್ಯಗಳನ್ನು ಕಡಿದು, ತಪಸ್ಸಿನ ಜೀವನವನ್ನು ಸ್ವೀಕರಿಸುತ್ತಾರೆ. ನಾಗಾ ಸಾಧ್ವಿಗಳಿಗೆ ನೀಡುವ ದೀಕ್ಷಾ ಪ್ರಕ್ರಿಯೆಯೂ ಪುರುಷರಿಗೆ ನೀಡುವುದರಷ್ಟೇ ಕಠಿಣವಾಗಿದೆ. ಅವರು ತಮ್ಮ ಗುರುಗಳಿಗೆ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಬೇಕು. ಗುರು ಆಕೆಯನ್ನು ಒಪ್ಪಿಕೊಳ್ಳುವ ಮೊದಲು ತೀವ್ರವಾದ ಆಧ್ಯಾತ್ಮಿಕ ಪರೀಕ್ಷೆಗಳು ಮತ್ತು ತರಬೇತಿಗಳಿಗೆ ಒಳಗಾಗಬೇಕು. ಆಧ್ಯಾತ್ಮಿಕ ಅನ್ವೇಷಣೆಗಾಗಿ ತಮ್ಮ ಲೌಕಿಕ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿರುತ್ತಾರೆ. ಅವರು ತಮ್ಮ ಹಿಂದಿನ ಜೀವನದಿಂದ ಎಲ್ಲವನ್ನೂ ಬಿಟ್ಟು ಆಧ್ಯಾತ್ಮಿಕ ಮಾರ್ಗಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸ್ತ್ರೀ ನಾಗಾಸಾಧುಗಳು ವಿರಕ್ತ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಸಂಸಾರ, ದಾಂಪತ್ಯದ ಕಡೆಗೆ ಇವರು ಹೊರಳುವಂತಿಲ್ಲ. ಹಾಗೆ ಹೋದರೆ ಅವರನ್ನು ನಾಗಾ ಪಂಥದಿಂದ ತೆಗೆಯುಲಾಗುತ್ತದೆ.

    ನಾಗಾ ಸಾಧ್ವಿಗಳು ಆಂತರಿಕವಾಗಿ ಹೆಚ್ಚಿನ ಸಾಧನೆ ಮಾಡುತ್ತಾರೆ. ಯಾಕೆಂದರೆ ಪುರುಷರಿಗಿಂತ ಇವರ ಹಾರ್ಮೋನುಗಳು ದೇಹದಲ್ಲಿ ಈ ಕಠಿಣ ವ್ರತಗಳ ಸಂದರ್ಭದಲ್ಲಿ ಯದ್ವಾತದ್ವಾ ವರ್ತಿಸುತ್ತವೆ. ಜೊತೆಗೆ, ಇವರು ಆಕರ್ಷಕವಾಗಿದ್ದರೆ, ಇತರ ಪುರುಷರ ಅಥವಾ ನಾಗಾ ಸಾಧುಗಳ ವೇಷದಲ್ಲಿರುವ ದುರುಳರ ಕಣ್ಣು ಕೂಡ ಇವರ ಮೇಲೆ ಬಿದ್ದು ಅನಾಹುತ ಆಗುವ ಸಾಧ್ಯತೆಗಳಿರುತ್ತವೆ. ಆದರೆ ಪರಿಪಕ್ವ ನಾಗಾ ಸಾಧ್ವಿಗಳು ತಮ್ಮ ಕಠೋರವಾದ ದೃಷ್ಟಿ ಮಾತ್ರದಿಂದಲೇ ದುಷ್ಟರನ್ನು ಹಿಮ್ಮೆಟ್ಟಿಸಬಲ್ಲರು. ದೀಕ್ಷೆಗೆ ಮುನ್ನ ನಾಗಾ ಸಾಧ್ವಿಗಳು ಆರರಿಂದ ಹನ್ನೆರಡು ವರ್ಷಗಳ ಕಾಲ ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಪಾಲಿಸಬೇಕಾಗುತ್ತದೆ. ಅವರು ತಮ್ಮ ಸಾಧನೆ ಅಥವಾ ತೀವ್ರವಾದ ತಪಸ್ಸಿನ ಸಮಯದಲ್ಲಿ ಸಾಮಾನ್ಯವಾಗಿ ಗುಹೆಗಳು, ಕಾಡುಗಳು ಅಥವಾ ಪರ್ವತಗಳಂತಹ ಪ್ರತ್ಯೇಕ ಸ್ಥಳಗಳಲ್ಲಿ ವಾಸವಿರಬೇಕಾಗುತ್ತದೆ. ಸಾಮಾನ್ಯವಾಗಿ ನಾಗಾ ಸಾಧ್ವಿಗಳು ಅಖಾಡಗಳು ಅಥವಾ ಸನ್ಯಾಸಿಗಳಿರುವ ಆಶ್ರಮಗಳಲ್ಲಿ ವಾಸಿಸುತ್ತಾರೆ. ಪುರುಷ ನಾಗಾ ಸಾಧುಗಳು ಮೈಮೇಲೆ ಒಂದೆಳೆ ಬಟ್ಟೆಯಿಲ್ಲದೆ ಓಡಾಡಬಲ್ಲರು. ಆದರೆ ಸಾಧ್ವಿಗಳು ಹಾಗೆ ಮಾಡಲಾರರು. ಯಾಕೆಂದರೆ ಸಮಾಜ ಅವರನ್ನು ಹಾಗೆ ಒಪ್ಪಿಕೊಳ್ಳಲಾರದು. ಬದಲಾಗಿ ಅವರು “ಗಂಟಿ” ಎಂದು ಕರೆಯಲ್ಪಡುವ ಕುಂಕುಮ ಬಣ್ಣದ ಬಟ್ಟೆಯನ್ನು ಧರಿಸಬೇಕು. ತಲೆಕೂದಲು ಕತ್ತರಿಸದೆ ಜಟೆ ಬಿಟ್ಟಿರಬೇಕು. ಹಣೆಯ ಮೇಲಿನ ವಿಶಿಷ್ಟ ತಿಲಕದಿಂದ ಸಾಧ್ವಿಗಳೆಂದು ಗುರುತಿಸಲ್ಪಡುತ್ತಾರೆ.

    ಮಹಿಳೆಯರು ಸನ್ಯಾಸ ಸ್ವೀಕಾರ ಆಚರಣೆಯ ಭಾಗವಾಗಿ ತಮ್ಮದೇ ‘ಪಿಂಡದಾನ’ವನ್ನು ಮಾಡಬೇಕು. ಸಾಮಾನ್ಯವಾಗಿ ಇದು ಮರಣದ ನಂತರ ನಡೆಸಲಾಗುವ ಸಾಂಪ್ರದಾಯಿಕ ಆಚರಣೆ. ಇದು ಅವರ ಹಿಂದಿನ ಜೀವನದ ಅಂತ್ಯ ಮತ್ತು ಸನ್ಯಾಸಿಗಳಾಗಿ ಅವರ ಪುನರ್ಜನ್ಮವನ್ನು ಸಂಕೇತಿಸುತ್ತದೆ. ನಾಗಾ ಸಾಧ್ವಿಗಳು ನಾಗಾ ಸಮುದಾಯದಲ್ಲಿ ಗೌರವಾನ್ವಿತ ಸ್ಥಾನ ಹೊಂದಿರುತ್ತಾರೆ. ಅವರನ್ನು “ಮಾತಾ” (ತಾಯಿ) ಎಂದು ಸಂಬೋಧಿಸಲಾಗುತ್ತದೆ. ನಾಗಾ ಸಾಧ್ವಿಗಳು ತಮ್ಮ ಅಸಾಧಾರಣ ಆಧ್ಯಾತ್ಮಿಕ ಶಕ್ತಿ ಮತ್ತು ಕಠಿಣವಾದ ವ್ರತಗಳಿಗಾಗಿ ಖ್ಯಾತರಾಗಿದ್ದಾರೆ. ಮಹಾ ಕುಂಭಮೇಳದಲ್ಲಿ ಅವರ ಉಪಸ್ಥಿತಿಯನ್ನು ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ಇವರು ಎಲ್ಲರ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸ್ವಯಂ-ಸಾಕ್ಷಾತ್ಕಾರದ ಪ್ರಾಮುಖ್ಯತೆಯನ್ನು ನೆನಪಿಸುವವರಂತೆ ಕಾರ್ಯನಿರ್ವಹಿಸುತ್ತಾರೆ.

    Continue Reading

    DAKSHINA KANNADA

    ರಾಜ್ಯದ 6 ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಎಲ್ಲೆಲ್ಲಿ?

    Published

    on

    ಮಂಗಳೂರು/ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ಕೆಲವೆಡೆ ಮಳೆಗಾಲದಂತೆ ಜೋರಾಗಿ ಮಳೆಯಾಗಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆ ಆಗಿದ್ದು, ಇನ್ನೂ ಮುಂದಿನ 2 ದಿನ ಮಳೆಯಾಗಲಿದೆ ಎಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಗಳಲ್ಲಿ ಚಂಡಮಾರುತದ ಪರಿಚಲನೆಯು ಈಗ ಅಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸಮಭಾಜಕ ವೃತ್ತದ ಹಿಂದೂ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿದೆ. ಇದರಿಂದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ

    ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ?
    ಹಾಸನ, ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಇನ್ನು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಂಜು ಬೀಳುವ ಸಾಧ್ಯತೆ ಇದೆ. ಜನವರಿ 20 ರವರೆಗೂ ಇದೇ ಹವಾಮಾನ ಮುಂದುವರಿಯಲಿದೆ.

    ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಡಿ.ಸೆ ಮತ್ತು 20 ಡಿ. ಸೆ ಇರುವ ಸಾಧ್ಯತೆ ಇದ್ದು, ನಾಳೆಯೂ ಹೀಗೆ ಇರಲಿದೆ.

    ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸೋಮವಾರ ಹಗುರ ಮಳೆಯಾಗಿದೆ. ವಿಜಯಪುರದಲ್ಲಿ ಕನಿಷ್ಠ ತಾಪಮಾನ 14.6 ಡಿ. ಸೆ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಗರಿಷ್ಠ ತಾಪಮಾನ 32.8 ಡಿ. ಸೆ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ ಇನ್ನೆರಡು ದಿನ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ.

    Continue Reading

    LATEST NEWS

    Trending