Connect with us

    DAKSHINA KANNADA

    ನೈರುತ್ಯ ಪದವೀಧರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಗೆ ಭಾರೀ ಮುನ್ನಡೆ

    Published

    on

    • ಕಾಂಗ್ರೆಸ್‌ನ ಆಯನೂರು ಮಂಜುನಾಥ, ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಗೆ ಹಿನ್ನಡೆ

    ಮಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯಗಳು ನಡೆಯುತ್ತಿದ್ದು, ಎರಡನೇ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

    ಒಟ್ಟು 28000 ಮತಗಳ ಪೈಕಿ ಡಾ.ಧನಂಜಯ ಸರ್ಜಿ ಅವರು 14,054 ಮತಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್‌ನ ಆಯನೂರು ಮಂಜುನಾಥ 4,872 ಹಾಗೂ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ 4,557 ಮತಗಳನ್ನು ಪಡೆದುಕೊಂಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ಯತೀಶ್ ಎನ್ ನೇಮಕ

    Published

    on

    ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಜುಲೈ 2 ಮಂಗಳವಾರ ತಡರಾತ್ರಿ ಈ ಆದೇಶವನ್ನು ಹೊರಡಿಸಿದ್ದಾರೆ. ಈ ವರ್ಗಾವಣೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿ ಬಿ ರಿಷ್ಯಂತ್ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವರು ಈಗ ವೈರ್‌ಲೆಸ್ ವಿಭಾಗಕ್ಕೆ ಎಸ್‌ಪಿಯಾಗಿ ಸೇವೆ ಸಲ್ಲಿಸಲಿದ್ದಾರೆ.

    ಮೇ 2023 ರಲ್ಲಿ ರಿಷ್ಯಂತ್ ಅವರು ದ.ಕ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ರಿಶ್ಯಾಂತ್‌ ಅವರಿಂದ ಅಧಿಕಾರ ವಹಿಸಿಕೊಂಡವರು ಈ ಹಿಂದೆ ಮಂಡ್ಯ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಯತೀಶ್ ಎನ್. ಇವರು 2016 ರ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದರು.

    Continue Reading

    DAKSHINA KANNADA

    ಅಕ್ಷರ ದಾಸೋಹದ ಅನ್ನ ಚರಂಡಿಗೆ ಎಸೆದು ಬೇಜವಾಬ್ದಾರಿ..! ಎಸ್‌ಡಿಎಂಸಿ, ಶಿಕ್ಷಕರ ವಿರುದ್ಧ ಪೋಷಕರ ಆಕ್ರೋಶ

    Published

    on

    ಉಪ್ಪಿನಂಗಡಿ: ಅಕ್ಷರ ದಾಸೋಹದ ಅನ್ನವನ್ನು ಚರಂಡಿಗೆ ಎಸೆದು ಬೇಜವಾಬ್ದಾರಿ ಪ್ರದರ್ಶಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಶಿಕ್ಷಣ ಶಾಲೆಯ ಶಿಕ್ಷಕರ ಮತ್ತು ಎಸ್‌.ಡಿ.ಎಂ.ಸಿ. ಸದಸ್ಯರ ವಿರುದ್ಧ ಪೋಷಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶಾಲೆಯಲ್ಲಿ  ಪ್ರತಿನಿತ್ಯ ಅನ್ನವನ್ನು ರಸ್ತೆ ಬದಿಯ ಚರಂಡಿಗೆ ಎಸೆಯುತ್ತಿರುವುದು ಬೆಳಕಿಗೆ ಬಂದಿದ್ದು, ಸರಕಾರ ಮಕ್ಕಳಿಗೆ ನೀಡುವ ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಊಟದ ಯೋಜನೆಗೆ ಎಳ್ಳುನೀರು ಬಿಡಲಾಗುತ್ತಿದೆ ಎಂದು ಊರಿನ ಜನರು ಆರೋಪಿಸುತ್ತಿದ್ದಾರೆ.

    ಕಂದಮ್ಮನನ್ನು ತಬ್ಬಲಿ ಮಾಡಿ ನೇ*ಣಿಗೆ ಶರಣಾದ ತಾಯಿ..! ಕಾರಣ ಇನ್ನೂ ನಿಗೂಢ

    ಅನ್ನವನ್ನು ಚರಂಡಿಗೆ ಎಸೆಯುತ್ತಿರುವುದರಿಂದ ಚರಂಡಿ ಬ್ಲಾಕ್ ಆಗಿ ಗಬ್ಬು ನಾರುತ್ತಿದೆ. ಚರಂಡಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಶಾಲೆಯ ಮಕ್ಕಳಿಗೆ ಮತ್ತು ಸುತ್ತಮುತ್ತಲ ಜನರಿಗೆ  ರೋಗ ಹರಡುವ ಭೀತಿ ಎದುರಾಗಿದೆ.  ಈ ಶಾಲೆಯಲ್ಲಿ ಸಿದ್ಧಪಡಿಸಿದ ಊಟವನ್ನು ಮಕ್ಕಳು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಶಾಲೆಯ ಊಟ ಸೇವನೆಯಿಂದ ಹೊಟ್ಟೆ ನೋವು ಆಗುತ್ತದೆ ಎಂಬ ಕಾರಣ ನೀಡಿ ಹಲವಾರು ಮಂದಿ ವಿದ್ಯಾರ್ಥಿಗಳು ಊಟವನ್ನು ನಿರಾಕರಿಸುತ್ತಿದ್ದಾರೆ. ಮತ್ತು ಅಂತಹ ಮಕ್ಕಳು ಮನೆಯಿಂದಲೇ ಬುತ್ತಿ ಊಟ ತರುತ್ತಿರುವುದು ಬೆಳಕಿಗೆ ಬಂದಿದೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕುಚಲಕ್ಕಿ ಉಪಯೋಗ ಮಾಡುತ್ತಾರೆ. ಆದರೆ ಶಾಲೆಯಲ್ಲಿ ಬಿಳಿ ಅಕ್ಕಿ ಊಟ ನೀಡಲಾಗುತ್ತಿದ್ದು, ಇದರಿಂದ ಹಲವು ಮಕ್ಕಳ  ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಹಾಗಾಗಿ ಶಾಲೆಯಲ್ಲಿ ತಯಾರಿಸುವ ಅನ್ನದ ಊಟವನ್ನು ವಿದ್ಯಾರ್ಥಿಗಳು ಸೇವಿಸುತ್ತಿಲ್ಲ ಎನ್ನಲಾಗಿದೆ. ಇವೆಲ್ಲದರ ನಡುವೆ ಅಕ್ಷರ ದಾಸೋಹದ ಅನ್ನವನ್ನು ಶಾಲೆಯ ಶಿಕ್ಷಕ ವರ್ಗ ಚರಂಡಿಗೆ ಎಸೆದು ವ್ಯರ್ಥಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಉಪ್ಪಿನಂಗಡಿ ಪಂಚಾಯತ್ ಸದಸ್ಯ ಧನಂಜಯ ಕುಮಾರ್ ಅವರು ಶಾಲಾ ಆಡಳಿತ ಮತ್ತು ಶಿಕ್ಷಕರು ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

     

     

    Continue Reading

    DAKSHINA KANNADA

    ಕಂದಮ್ಮನನ್ನು ತಬ್ಬಲಿ ಮಾಡಿ ನೇ*ಣಿಗೆ ಶರಣಾದ ತಾಯಿ..! ಕಾರಣ ಇನ್ನೂ ನಿಗೂಢ

    Published

    on

    ಬೆಳ್ತಂಗಡಿ: ಮಹಿಳೆಯೋರ್ವರು ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳದ ಜೋಡುಸ್ಥಾನದಲ್ಲಿ ನಡೆದಿದೆ. ಇಲ್ಲಿನ ನಿತ್ಯ ನೂತನ ಭಜನ ಮಂದಿರದ ಬಳಿಯ ನಿವಾಸಿ ರಕ್ಷಿತಾ ಜೈನ್(26 ವ) ಆತ್ಮಹ*ತ್ಯೆ ಮಾಡಿಕೊಂಡವರಾಗಿದ್ದಾರೆ. ರಕ್ಷಿತಾ ಜೈನ್‌ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೋಣೆಯಲ್ಲಿ ಆತ್ಮಹ*ತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಘಟನೆ ಮನೆಯಲ್ಲಿ ನಡೆದಿಲ್ಲ ಅನ್ನೋದು ಇವರ ಆತ್ಮಹ*ತ್ಯೆಯ ನಿಗೂಢತೆಗೆ ಕಾರಣವಾಗಿದೆ.

    ಉತ್ತರ ಪ್ರದೇಶದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತು*ಳಿತ; ಮಕ್ಕಳು ಸೇರಿ 27 ಜನ ಬ*ಲಿ

    ಇದುವರೆಗೂ ಯಾವುದೇ ಡೆತ್ ನೋಟ್ ಕೂಡಾ ಸಿಗದ ಕಾರಣ ಆತ್ಮಹತ್ಯೆಗೆ ಕಾರಣ ಏನು ಎಂಬುವುದರ ಬಗ್ಗೆ ಮನೆಯವರು ಕೂಡಾ ಚಿಂತಿತರಾಗಿದ್ದಾರೆ. ವಿಪರ್ಯಾಸ ಅಂದ್ರೆ ರಕ್ಷಿತಾ ಜೈನ್‌ ಅವರಿಗೆ 2 ವರ್ಷದ ಮುದ್ದಾದ ಹೆಣ್ಣು ಮಗುವಿದ್ದು ಮಗು ತಾಯಿಗಾಗಿ ಅತ್ತುಕರೆಯುತ್ತಿದೆ. ರಕ್ಷಿತಾ ತಂದೆ, ತಾಯಿ ಹಾಗೂ ಪತಿ ಈ ಆತ್ಮಹತ್ಯೆಯ ಕಾರಣ ತಿಳಿಯದಂತಾಗಿದ್ದಾರೆ.

    Continue Reading

    LATEST NEWS

    Trending