ಕೊರೊನಾ ಲಸಿಕೆ ಈ ವರ್ಷ ಲಭ್ಯವಾಗಲ್ಲ : ಕೇಂದ್ರ ಸಚಿವ ಹರ್ಷವರ್ಧನ್ ಸ್ಪಷ್ಟನೆ.!
ನವದೆಹಲಿ : ಭಾರತದಲ್ಲಿ ಕೊರೋನಾ ಲಸಿಕೆ ಈ ವರ್ಷ ಲಭ್ಯವಾಗುವುದು ಅನುಮಾನ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಕೋವಿಡ್ ಲಸಿಕೆಯನ್ನು ಪ್ರಯೋಗಿಸುವುದರ ಬಗ್ಗೆ ನಮ್ಮಲ್ಲಿ ಇದುವರೆಗೆ ಯಾವುದೇ ನಿರ್ದಿಷ್ಟ ದಿನಾಂಕ ಪ್ರಕಟವಾಗಿಲ್ಲ. 2021 ರ ಮಾರ್ಚ್ ತಿಂಗಳೊಳಗೆ ಲಸಿಕೆಯನ್ನು ಪ್ರಯೋಗಿಸುವುದರ ಸಾದ್ಯತೆಯಿದೆ ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ.
‘ಸಂಡೇ ಸಂವಾದ್ ‘ ಕಾರ್ಯಕ್ರಮದ ಮೊದಲ ಕಂತಿನಲ್ಲಿ ಮಾತಾನಾಡಿದ ಅವರು ಕೋವಿಡ್ ಲಸಿಕೆಯ ಅಬಿವೃದ್ಧಿಯ ಕುರಿತು ಹೇಳಿದ್ದಾರೆ. ಭಾರತದಲ್ಲಿ ಕೋವಿಡ್ ಲಸಿಕೆಯನ್ನು ಪ್ರಯೋಗ ಮಾಡುವುದರ ಕುರಿತು ಇದುವರಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ,
2021 ರ ಮಾರ್ಚ್ ವೇಳೆಗೆ ಲಸಿಕೆಯನ್ನು ಪ್ರಯೋಗಿಸುವ ಸಾದ್ಯತೆಯನ್ನು ಅವರು ಅಂದಾಜಿಸಿದ್ದಾರೆ.
ಲಸಿಕೆಯನ್ನು ಪ್ರಯೋಗಿಸುವಾಗ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.ಲಸಿಕೆ ಲಭ್ಯವಾಧ ಕೊಡಲೇ ತೀರಾ ಅಗತ್ಯವಿದ್ದವವರಿಗೆ ಮೊದಲು ನೀಡಲಾಗುತ್ತದೆ ಎಂದಿದ್ದಾರೆ.