ಮುಂಬೈ: ಕೋವಿಡ್-19 ಹೆಮ್ಮಾರಿಯ ಅಬ್ಬರ ಶುರುವಾಗಿ ಬರೋಬ್ಬರಿ ವರ್ಷ ಕಳೆದರೂ ನಿಯಂತ್ರಣಕ್ಕೆ ಬಾರದಿರುವುದು ಆತಂಕಕಾರಿ ವಿಷಯವೇ ಸರಿ.ಸ್ವಲ್ಪ ನಿಯಂತ್ರಣದಲ್ಲಿದೆ ಅಂದುಕೊಳ್ಳಲು ಶುರುವಾಗುತ್ತಿದ್ದಂತೆ ಮತ್ತೆ ಭಾರತದಲ್ಲಿ ಎರಡನೇ ಕೊರೊನಾ ಸೋಂಕಿನ ಅಲೆ ಎದ್ದಿದೆ.
ಕೊರೊನಾ ಜಾಗೃತಿ, ಕೊರೊನಾ ಲಸಿಕೆ ಅಭಿಯಾನ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದರೂ ಕೊರೊನಾ ಪಾಸಿಟಿವ್ ಸಂಖ್ಯೆ ಏರಿಕೆಯಾಗುತ್ತಲೆ ಇದೆ.
ಬಾಲಿವುಡ್ ನ ಖ್ಯಾತ ಖಳ ನಟ ಬಿಜೆಪಿ ನಾಯಕ ಪರೇಶ್ ರಾವಲ್ ಕೊರೊನಾ ಲಸಿಕೆ ಪಡೆದಿದ್ದ ಬಗ್ಗೆ ಬಹಳ ಸಂತೋಷದಿಂದ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಂಚಿಕೊಂಡಿದ್ದರು.
ಇದೀಗ ನಟ ಪರೇಶ್ ರಾವಲ್ಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಪರೇಶ್ ರಾವಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಅವರ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆಗೊಳಗಾಗುವಂತೆ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.